ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಭಾರತದ ಆರಂಭಿಕರಾಗಿ ಇವರಿಬ್ಬರು ಕಣಕ್ಕಿಳಿಯಲಿ: ಮೊಹಮ್ಮದ್ ಕೈಫ್

Ind vs Zim ODI Series: Mohammed Kaif said Shubman Gill and Shikhar Dhawan should open in ODI series

ಭಾರತ ಹಾಗೂ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಗೆ ಕ್ಷಣಗಣನೆ ಆರಂಭವಾಗಿದೆ. ಕೆಎಲ್ ರಾಹುಲ್ ನೇತೃತ್ವದಲ್ಲಿ ಭಾರತ ತಂಡದ ಸವಾಲನ್ನು ಆತಿಥೇಯ ಜಿಂಬಾಬ್ವೆ ತಂಡ ಯಾವ ರೀತಿ ಎದುರಿಸಲಿದೆ ಎಂಬುದು ಕುತೂಹಲ ಮೂಡಿಸಿದೆ. ಪ್ರಮುಖ ಆಟಗಾರರಿಲ್ಲದ ಎರಡನೇ ದರ್ಜೆಯ ತಂಡದೊಂದಿಗೆ ಭಾರತ ಕಣಕ್ಕಿಳಿಯುತ್ತಿರುವ ಕಾರಣ ಯಾವ ಕ್ರಮಾಂಕದಲ್ಲಿ ಯಾವ ಆಟಗಾರರು ಕಣಕ್ಕಿಳಿಯಬಹುದು ಎಂಬುದು ಕೂಡ ಕುತೂಹಲಕ್ಕೆ ಕಾರಣವಾಗಿದೆ. ಈ ಸಂದರ್ಭದಲ್ಲಿ ಭಾರತದ ಆರಂಭಿಕರಾಗಿ ಯಾವ ಜೋಡಿ ಕಣಕ್ಕಿಳಿಯಬೇಕು ಎಂಬ ಅಭಿಪ್ರಾಯವನ್ನು ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ವ್ಯಕ್ತಪಡಿಸಿದ್ದಾರೆ.

ಮೊಹಮ್ಮದ್ ಕೈಫ್ ಪ್ರಕಾರ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಕೆಎಲ್ ರಾಹುಲ್ ಹಾಗೂ ಶಿಖರ್ ಧವನ್ ಈ ಇಬ್ಬರು ಆಟಗಾರರು ಇದ್ದರು ಕೂಡ ಈ ಜೋಡಿ ಆರಂಭಿಕರಾಗಿ ಕಣಕ್ಕಿಳಿಯುವುದು ಬೇಡ ಎಂದಿದ್ದಾರೆ. ಬದಲಾಗಿ ಶಿಖರ್ ಧವನ್ ಜೊತೆಗೆ ಯುವ ಆಟಗಾರ ಶುಬ್ಮನ್ ಗಿಲ್ ಆಡಲಿ ಎಂಬುದು ಕೈಫ್ ಅಭಿಪ್ರಾಯ.

IPL, BBL ಎಫೆಕ್ಟ್: ಟೆಸ್ಟ್, ಏಕದಿನ ಕ್ರಿಕೆಟ್ ರಕ್ಷಿಸಲು ಐಸಿಸಿಗೆ ಕಪಿಲ್ ದೇವ್ ಒತ್ತಾಯIPL, BBL ಎಫೆಕ್ಟ್: ಟೆಸ್ಟ್, ಏಕದಿನ ಕ್ರಿಕೆಟ್ ರಕ್ಷಿಸಲು ಐಸಿಸಿಗೆ ಕಪಿಲ್ ದೇವ್ ಒತ್ತಾಯ

ವಿಂಡೀಸ್ ವಿರುದ್ಧ ಮಿಂಚಿದ್ದ ಜೋಡಿ

ವಿಂಡೀಸ್ ವಿರುದ್ಧ ಮಿಂಚಿದ್ದ ಜೋಡಿ

ಇತ್ತೀಚೆಗಷ್ಟೇ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ತಂಡದ ಪರವಾಗಿ ಆರಂಭಿಕರಾಗಿ ಮೊದಲ ಬಾರಿಗೆ ಶಿಖರ್ ಧವನ್ ಹಾಗೂ ಶುಬ್ಮನ್ ಗಿಲ್ ಜೋಡಿ ಕಣಕ್ಕಿಳಿದಿದ್ದರು. ಈ ಸರಣಿಯಲ್ಲಿ ಈ ಜೋಡಿಯಿಂದ ಉತ್ತಮ ಪ್ರದರ್ಶನ ಬಂದಿರುವುದು ಗಮನಾರ್ಹ. ಮೂರು ಪಂದ್ಯಗಳ ಈ ಏಕದಿನ ಸರಣಿಯಲ್ಲಿ 22ರ ಹರೆಯದ ಯುವ ಆಟಗಾರ ಶುಬ್ಮನ್ ಗಿಲ್ ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿಗೂ ಭಾಜನವಾಗಿದ್ದರು.

ಕೆಎಲ್ ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ಆಡಲಿ

ಕೆಎಲ್ ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ಆಡಲಿ

ಇನ್ನು ನಾಯಕ ಕೆಎಲ್ ರಾಹುಲ್‌ ಮಧ್ಯಮ ಕ್ರಮಾಂಕದಲ್ಲಿ ಆಡಿರುವ ಅನುಭವವಿರುವ ಕಾರಣ ಮಧ್ಯಮ ಕ್ರಮಾಂಕದಲ್ಲಿಯೇ ಈ ಸರಣಿಯಲ್ಲಿ ಆಡಲಿ. ಶುಬ್ಮನ್ ಗಿಲ್ ಉತ್ತಮ ಫಾರ್ಮ್‌ನಲ್ಲಿದ್ದು ಅವರನ್ನು ಶಿಖರ್ ಧವನ್ ಜೊತೆಗೆ ಆರಂಭಿಕರಾಗಿ ಕಣಕ್ಕಿಳಿಸುವುದನ್ನು ಉತ್ತಮ ಎಂದಿದ್ದಾರೆ ಮೊಹಮ್ಮದ್ ಕೈಫ್.

"ಕೆಎಲ್ ರಾಹುಲ್ ಈ ಹಿಂದೆ ಐದನೇ ಕ್ರಮಾಂಕದಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಅವರು ಮ್ಯಾಚ್ ಪ್ರ್ಯಾಕ್ಟೀಸ್ ಅಗತ್ಯವಿದೆ ಎನಿಸಿದರೆ ಆರಂಭಿಕನಾಗಿ ಕಣಕ್ಕಿಳಿಯಬಹುದು. ಇನ್ನು ಗಿಲ್ ಆರಂಬಿಕನಾಗಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಅವರು ಶಿಖರ್ ಧವನ್ ಜೊತೆಗೆ ಉತ್ತಮ ಫಾರ್ಮ್ ಪ್ರದರ್ಶಿಸಿದ್ದರು" ಎಂದಿದ್ದಾರೆ ಮೊಹಮ್ಮದ್ ಕೈಫ್.

3ನೇ ಕ್ರಮಾಂಕದಲ್ಲೂ ಕೆಎಲ್ ಆಡಬಹುದು

3ನೇ ಕ್ರಮಾಂಕದಲ್ಲೂ ಕೆಎಲ್ ಆಡಬಹುದು

ಮುಂದುವರಿದು ಮಾತನಾಡಿದ ಮೊಹಮ್ಮದ್ ಕೈಫ್, "ಕೆಎಲ್ ರಾಹುಲ್ ಮೂರನೇ ಕ್ರಮಾಂಕದಲ್ಲಿಯೂ ಆಡಬಹುದು. ರಾಹುಲ್‌ಗೆ ಮ್ಯಾಚ್ ಪ್ರ್ಯಾಕ್ಟೀಸ್‌ನ ಅಗತ್ಯವಿದ್ದು ಗಾಯದಿಂದ ಅವರು ವಾಪಾಸಾಗಿದ್ದಾರೆ. ಈಗ ಈ ಎಲ್ಲದರ ನಿರ್ಧಾರವನ್ನು ಅವರೇ ಮಾಡಬೇಕಿದ್ದು ಅವರೇ ತಂಡದ ನಾಯಕನಾಗಿದ್ದಾರೆ. ಆದರೆ ನನ್ನ ಪ್ರಕಾರ ಶುಬ್ಮನ್ ಗಿಲ್ ಹಾಗೂ ಶಿಖರ್ ಧವನ್ ವೆಸ್ಟ್ ಇಂಡೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಕಾರಣ ಅವರನ್ನೇ ಆರಂಭಿಕರಾಗಿ ಕಣಕ್ಕಿಳಿಸುವುದು ಉತ್ತಮ" ಎಂದಿದ್ದಾರೆ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್.

PAK vs NED: ನೆದರ್ಲೆಂಡ್ಸ್‌ ವಿರುದ್ಧ ವಿಶ್ವದಾಖಲೆ ಮಾಡಿದ ಬಾಬರ್ ಅಜಮ್

ಜಿಂಬಾಬ್ವೆ ವಿರುದ್ಧದ ಸರಣಿಯಿಂದ ವಾಷಿಂಗ್ಟನ್ ಸುಂದರ್ ಔಟ್ | *Cricket | OneIndia Kannada
ಗುರುವಾರದಿಂದ ಸರಣಿ ಆರಂಭ

ಗುರುವಾರದಿಂದ ಸರಣಿ ಆರಂಭ

ಆಗಸ್ಟ್ 18 ಗುರುವಾರದಿಂದ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯ ಆರಂಭವಾಗಲಿದ್ದು ಕೆಎಲ್ ರಾಹುಲ್ ಭಾರತ ತಂಡದ ನೇತೃತ್ವ ವಹಿಸಿಕೊಳ್ಳಲಿದ್ದಾರೆ. ಕೆಎಲ್ ರಾಹುಲ್ ಕೂಡ ಗಾಯದಿಂದಾಗಿ ಕಳೆದ ಸುಮಾರು ಎರಡು ತಿಂಗಳಿನಿಂದ ಕ್ರಿಕೆಟ್‌ನಿಂದ ದೂರವಿದ್ದರು. ಈ ಸರಣಿಯ ಮೂಲಕ ರಾಹುಲ್ ಕಮ್‌ಬ್ಯಾಕ್‌ಗೆ ಸಜ್ಜಾಗಿದ್ದಾರೆ. ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸಹಿತ ಕೆಲ ಪ್ರಮುಖ ಆಟಗಾರರಿಗೆ ಈ ಸರಣಿಯಿಂದ ವಿಶ್ರಾಂತಿ ನೀಡಲಾಗಿದ್ದು ಆರಂಭದಲ್ಲಿ ಶಿಖರ ಧವನ್ ಅವರನ್ನು ನಾಯಕನನ್ನಾಗಿ ನೇಮಿಸಲಾಗಿತ್ತು. ಬಳಿಕ ರಾಹುಲ್‌ಗೆ ಈ ಜವಾಬ್ಧಾರಿ ನೀಡಲಾಗಿದೆ.

Story first published: Wednesday, August 17, 2022, 13:24 [IST]
Other articles published on Aug 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X