ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

"ನಾವು ಮೋಸ ಹೋದೆವು": ಎರಡನೇ ದಿನದಾಟದ ನಂತರ ಆಕಾಶ್ ಚೋಪ್ರ ಪ್ರತಿಕ್ರಿಯೆ

India and New Zealand: Aakash Chopra reaction on Day 2 perfomence of 1st test

ಕಾನ್ಪುರ ಟೆಸ್ಟ್‌ನ ಎರಡನೇ ದಿನ ಭಾರತ ತಂಡದ ಪ್ರದರ್ಶನ ನೀರಸವಾಗಿತ್ತು. ತಂಡದ ಪರವಾಗಿ ಶ್ರೇಯಸ್ ಶತಕ ಪೂರ್ಣಗೊಳಿಸಿದ್ದು ಬಿಟ್ಟರೆ ಉಳಿದಂತೆ ಸಂಪೂರ್ಣವಾಗಿ ನೀರಸವಾಗಿತ್ತು. 345 ರನ್‌ಗಳಿಗೆ ಆಲ್ಔಟ್ ಆದ ಟೀಮ್ ಇಂಡಿಯಾ ನಂತರ ಬೌಲಿಂಗ್‌ನಲ್ಲಿಯೂ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ನ್ಯೂಜಿಲೆಂಡ್ ತಂಡದ ಆರಂಭಿಕ ಆಟಗಾರರಿಬ್ಬರೂ ಅದ್ಭುತ ಪ್ರದರ್ಶನ ನಿಡುವ ಮೂಲಕ ಭಾರತದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸುತ್ತಿದ್ದಾರೆ. ನ್ಯೂಜಿಲೆಂಡ್ ಎರಡನೇ ದಿನ ಮೊದಲ ಇನ್ನಿಂಗ್ಸ್‌ನಲ್ಲಿ ಒಂದೂ ವಿಕೆಟ್ ಕಳೆದುಕೊಳ್ಳದೆ 129 ರನ್‌ಗಳಿಸಿದೆ.

ಭಾರತ ತಮಡದ ಈ ಪ್ರದರ್ಶನ ಎಲ್ಲಾ ಅಭಿಮಾನಿಗಳಂತೆ ಟೀಮ್ ಇಂಡಿಯಾದ ಮಾಜಿ ಆಟಗಾರ ಹಾಗೂ ಹಾಲಿ ಕಾಮೆಂಟೇಟರ್ ಆಕಾಶ್ ಚೋಪ್ರ ಅವರಿಗೂ ನಿರಾಸೆ ಮೂಡಿಸಿದೆ. ಇದಕ್ಕೆ ಆಕಾಶ್ ಚೋಪ್ರ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ಶ್ರೇಯಸ್ ಅಯ್ಯರ್ ತಂದೆ ವಾಟ್ಸಾಪ್ DPಯಲ್ಲಿ ಆ ಫೋಟೋವನ್ನ 4 ವರ್ಷ ಬದಲಿಸಿಲ್ಲವಂತೆ! ಏಕೆ?ಶ್ರೇಯಸ್ ಅಯ್ಯರ್ ತಂದೆ ವಾಟ್ಸಾಪ್ DPಯಲ್ಲಿ ಆ ಫೋಟೋವನ್ನ 4 ವರ್ಷ ಬದಲಿಸಿಲ್ಲವಂತೆ! ಏಕೆ?

258/4 ರನ್‌ಗಳಿಸಿದ ಟೀಮ್ ಇಂಡಿಯಾ ಎರಡನೇ ದಿನದಾಟವನ್ನು ಉತ್ತಮ ಸ್ಥಿತಿಯಿಂದಲೇ ಆರಂಭಿಸಿತ್ತು. ಆದರೆ ಮೊದಲ ದಿನದ ಮೊತ್ತಕ್ಕೆ ಕೇವಲ 87 ರನ್ ಸೇರಿಸಿ ಅಂತಿಮ ಆರು ವಿಕೆಟ್ ಕಳೆದುಕೊಂಡಿತು. ಅದಾದ ನಂತರ ಕಿವೀಸ್ ಆರಂಭಿಕ ಆಟಗಾರರ ಪ್ರದರ್ಶನ ಹಾಗೂ ಭಾರತೀಯ ಬೌಲರ್‌ಗಳ ನೀರಸ ಆಟದಿಂದ ಅಭಿಮಾನಿಗಳು ನಿರಾಸೆ ಅನುಭವಿಸಿದ್ದಾರೆ. ಈ ಪ್ರದರ್ಶನ ನೋಡಿದ ನಂತರ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಆಕಾಶ್ ಚೋಪ್ರ ನಾವು ಮೋಸ ಹೇಗಿದ್ದೇವೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

"ಶ್ರೇಯಸ್ ಐಯ್ಯರ್ ಅವರ ಶತಕವನ್ನು ಹೊರತುಪಡಿಸಿದರೆ ಇವತ್ತು ಉಳಿದ ಯಾವುದು ಕೂಡ ಖುಷಿ ನೀಡಲಿಲ್ಲ. ನನಗೆ ಟ್ಗಗುವಿನ ಲಡ್ಡು ನೆನಪಿಸಿತು. ಅದು ಕಾನ್ಪುರದಲ್ಲಿ ಬಹಳ ಖ್ಯಾತವಾಗಿದೆ. ಇಲ್ಲಿ ಮೊದಲಿಗೆ ಟಿಮ್ ಸೌಥಿ ಐದು ವಿಕೆಟ್ ಪಡೆದುಕೊಂಡರು. ಭಾರತ 345 ರನ್‌ಗಳಿಗೆ ಆಲೌಟ್ ಆಯಿತು. ಅದಾದ ಬಳಿಕ ನಾವು ಒಂಏ ಒಂದು ವಿಕೆಟ್ ಪಡೆಯಲು ಸಫಲವಾಗಿಲ್ಲ. ನಾವು ಮೋಸ ಹೋಗಿದ್ದೇವೆ" ಎಂದಿ ಆಕಾಶ್ ಚೋಪ್ರ ಪ್ರತಿಕ್ರಿಯಿಸಿದ್ದಾರೆ.

ನಾವು ನ್ಯೂಜಿಲೆಂಡ್ ತಂಡದ ವಿಕೆಟ್‌ಗಳನ್ನು ಶೀಘ್ರವಾಗಿ ಪಡೆಯಬಹುದು ಆಮೂಲಕ ಪಂದ್ಯವನ್ನು ನಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ಸುಲಭವಾಗಿ ಗೆಲ್ಲಬಹುದು ಎಂದುಕೊಂಡಿದ್ದೆವು. ಆದರೆ ಎದುರಾಳಿ ಚಾಂಪಿಯನ್ ತಂಡವಾಗಿದ್ದು ಚಾಂಪಿಯನ್ ರೀತಿಯಲ್ಲಿಯೇ ಆಡುತ್ತಿದೆ. ಮೊದಲ ದಿನದಾಟ ಭಾರತದ ಪರವಾಗಿದ್ದರೆ ಎರಡನೇ ದಿನವನ್ನು ನ್ಯೂಜಿಲೆಂಡ್ ತನ್ನ ಹೆಸರಿಗೆ ಬರೆದುಕೊಂಡಿದೆ" ಎಂದು ಆಕಾಶ್ ಚೋಪ್ರ ಪ್ರತಿಕ್ರಿಯಿಸಿದ್ದಾರೆ.

ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿದ ಶ್ರೇಯಸ್ ಅಯ್ಯರ್: ಈ ಸಾಧನೆ ಮಾಡಿದ ಭಾರತದ 16ನೇ ಪ್ಲೇಯರ್ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿದ ಶ್ರೇಯಸ್ ಅಯ್ಯರ್: ಈ ಸಾಧನೆ ಮಾಡಿದ ಭಾರತದ 16ನೇ ಪ್ಲೇಯರ್

ಟೀಮ್ ಇಂಡಿಯಾ ಪ್ಲೇಯಿಂಗ್ XI: ಶುಬ್ಮನ್ ಗಿಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ (ನಾಯಕ), ಶ್ರೇಯಸ್ ಅಯ್ಯರ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಉಮೇಶ್ ಯಾದವ್, ಇಶಾಂತ್ ಶರ್ಮಾ,
ಬೆಂಚ್: ಪ್ರಸಿದ್ ಕೃಷ್ಣ, ಸೂರ್ಯಕುಮಾರ್ ಯಾದವ್, ಶ್ರೀಕರ್ ಭರತ್, ಜಯಂತ್ ಯಾದವ್, ಮೊಹಮ್ಮದ್ ಸಿರಾಜ್

ನ್ಯೂಜಿಲೆಂಡ್ ಪ್ಲೇಯಿಂಗ್ XI: ಟಾಮ್ ಲ್ಯಾಥಮ್, ವಿಲ್ ಯಂಗ್, ಕೇನ್ ವಿಲಿಯಮ್ಸನ್ (ನಾಯಕ), ರಾಸ್ ಟೇಲರ್, ಹೆನ್ರಿ ನಿಕೋಲ್ಸ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ರಚಿನ್ ರವೀಂದ್ರ, ಕೈಲ್ ಜೇಮಿಸನ್, ಟಿಮ್ ಸೌಥಿ, ವಿಲಿಯಂ ಸೊಮರ್ವಿಲ್ಲೆ, ಅಜಾಜ್ ಪಟೇಲ್
ಬೆಂಚ್: ಮಿಚೆಲ್ ಸ್ಯಾಂಟ್ನರ್, ನೀಲ್ ವ್ಯಾಗ್ನರ್, ಗ್ಲೆನ್ ಫಿಲಿಪ್ಸ್, ಡೇರಿಲ್ ಮಿಚೆಲ್

ಈ 4 ಆಟಗಾರರು ಮಾತ್ರ RCBಯಲ್ಲಿ ಸೇಫ್ | Oneindia Kannada

Story first published: Saturday, November 27, 2021, 10:41 [IST]
Other articles published on Nov 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X