ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs ENG 5ನೇ ಟೆಸ್ಟ್ ಸೋಲು: ಭಾರತದ ರಕ್ಷಣಾತ್ಮಕ, ಅಂಜಿಕೆಯುಳ್ಳ ಬ್ಯಾಟಿಂಗ್ ಬಗ್ಗೆ ಟೀಕಿಸಿದ ರವಿಶಾಸ್ತ್ರಿ

India Defeat 5th Test Against: Former Coach Ravi Shastri Criticizes Indias Defensive and Timid Batting

ಮಂಗಳವಾರ ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ಮರುನಿಗದಿಪಡಿಸಲಾದ 5ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಏಳು ವಿಕೆಟ್‌ಗಳಿಂದ ಭಾರತವನ್ನು ಸೋಲಿಸಿದೆ. ಜೋ ರೂಟ್ ಮತ್ತು ಜಾನಿ ಬೈರ್‌ಸ್ಟೋವ್ ಜೋಡಿಯು 5ನೇ ದಿನದಂದು ಇಂಗ್ಲೆಂಡ್‌ಗೆ ನಿಜವಾಗಿಯೂ ತ್ವರಿತ ಆರಂಭವನ್ನು ಒದಗಿಸಿದರು.

ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್‌ ಪಂದ್ಯದಲ್ಲಿ ಭಾರತವು ಹೀನಾಯವಾಗಿ ಸೋತಿದ್ದು, ಭಾರತೀಯ ಬೌಲರ್‌ಗಳ ಮೇಲೆ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ಸವಾರಿ ಮಾಡಿದರು. 378 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿ ಇಂಗ್ಲೆಂಡ್ ದಾಖಲೆ ಬರೆದಿದೆ.

ಸರಣಿ 2-2 ಅಂತರದಲ್ಲಿ ಸಮಬಲ

ಸರಣಿ 2-2 ಅಂತರದಲ್ಲಿ ಸಮಬಲ

ಐದನೇ ಟೆಸ್ಟ್‌ ಪಂದ್ಯವನ್ನು ಐತಿಹಾಸಿಕವಾಗಿ ಗೆದ್ದು, ಸರಣಿಯನ್ನು 2-2 ಅಂತರದಲ್ಲಿ ಸಮಬಲಗೊಳಿಸಿತು. ಇದೇ ವೇಳೆ ಭಾರತದ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಬಗ್ಗೆ ಮಾಜಿ ಆಟಗಾರರು ಟೀಕಿಸಿದ್ದಾರೆ.

ಭಾರತ ತಂಡವು 4ನೇ ದಿನದ ಎರಡನೇ ಇನ್ನಿಂಗ್ಸ್‌ನಲ್ಲಿ 'ಅಂಜಿಕೆಯುಳ್ಳ' ಮತ್ತು 'ರಕ್ಷಣಾತ್ಮಕ' ಬ್ಯಾಟಿಂಗ್ ವಿಧಾನವು ಇಂಗ್ಲೆಂಡ್‌ಗೆ ನಾಲ್ಕನೇ ದಿನದ ಅಂತ್ಯದಲ್ಲಿ ಮರುನಿಗದಿಪಡಿಸಲಾದ ಐದನೇ ಟೆಸ್ಟ್‌ನಲ್ಲಿ ಮೇಲುಗೈ ಸಾಧಿಸಲು ಅವಕಾಶ ಮಾಡಿಕೊಟ್ಟಿತು ಎಂದು ಭಾರತದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಟೀಕಿಸಿದರು.

ಕೇವಲ 245 ರನ್‌ಗಳಿಗೆ ಆಲೌಟ್

ಕೇವಲ 245 ರನ್‌ಗಳಿಗೆ ಆಲೌಟ್

ಮೊದಲ ಇನ್ನಿಂಗ್ಸ್‌ನಲ್ಲಿ 132 ರನ್‌ಗಳ ಮುನ್ನಡೆಯನ್ನು ಕಂಡುಕೊಂಡಿದ್ದರೂ, ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 245 ರನ್‌ಗಳಿಗೆ ಆಲೌಟ್ ಆಯಿತು. ನಾಲ್ಕನೇ ದಿನ 378 ರನ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ದಿನದಾಂತ್ಯಕ್ಕೆ ಕೇವಲ 119 ರನ್‌ಗಳ ಅಂತರದಲ್ಲಿತ್ತು. "ನಾನು ಭಾರತದ ಬ್ಯಾಟಿಂಗ್ ಅನ್ನು ನಿರಾಶಾದಾಯಕ ಎಂದು ಭಾವಿಸುತ್ತೇನೆ ಎಂದು ಎಡ್ಜ್‌ಬಾಸ್ಟನ್‌ನಲ್ಲಿ ಸ್ಕೈ ಸ್ಪೋರ್ಟ್ಸ್ ಕ್ರಿಕೆಟ್ ತಂಡದ ಭಾಗವಾಗಿರುವ ರವಿಶಾಸ್ತ್ರಿ ಹೇಳಿದರು.

"ಭಾರತದ ಬ್ಯಾಟ್ಸ್‌ಮನ್‌ಗಳು ಎರಡು ಸೆಷನ್‌ಗಳನ್ನು ಬ್ಯಾಟ್ ಮಾಡಬೇಕಾಗಿತ್ತು, ಆದರೆ ಅವರು ರಕ್ಷಣಾತ್ಮಕರಾಗಿ ಆಡಿದ್ದಾರೆಂದು ನಾನು ಭಾವಿಸುತ್ತೇನೆ. ನಾಲ್ಕನೇ ದಿನ ಭಾರತೀಯ ಬ್ಯಾಟ್ಸ್‌ಮನ್‌ಗಳು ಅಂಜುಬುರುಕರಾಗಿದ್ದರು, ವಿಶೇಷವಾಗಿ ಊಟದ ನಂತರ," ಎಂದು ಭಾರತದ ಬ್ಯಾಟಿಂಗ್ ಶೈಲಿಯ ಬಗ್ಗೆ ಕಿಡಿಕಾರಿದರು.

ಭಾರತದಿಂದ ಆಕ್ರಮಣಕಾರಿ ಆಟ ಬೇಕಿತ್ತು

ಭಾರತದಿಂದ ಆಕ್ರಮಣಕಾರಿ ಆಟ ಬೇಕಿತ್ತು

"ಭಾರತೀಯ ಬ್ಯಾಟ್ಸ್‌ಮನ್‌ಗಳು ಆರಂಭದಲ್ಲಿ ಕೆಲವು ವಿಕೆಟ್‌ಗಳನ್ನು ಕಳೆದುಕೊಂಡ ನಂತರವೂ ಆಕ್ರಮಣಕಾರಿ ಆಟ ಆಡಬಹುದಿತ್ತು. ಆಟದ ಆ ಹಂತದಲ್ಲಿ ರನ್‌ಗಳು ಮುಖ್ಯವಾಗಿದ್ದವು. ಈ ಹಂತದಲ್ಲಿ ಪ್ರಮುಖ ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡರು ಮತ್ತು ಸೋಮವಾರ ಇಂಗ್ಲೆಂಡ್‌ಗೆ ಬ್ಯಾಟಿಂಗ್ ಮಾಡಲು ಸಾಕಷ್ಟು ಸಮಯವನ್ನು ನೀಡಿದರು," ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟರು.

ರವಿಶಾಸ್ತ್ರಿ ಅವರು 2021ರಲ್ಲಿ ಭಾರತ ತಂಡದ ಮುಖ್ಯ ತರಬೇತುದಾರರಾಗಿದ್ದರು, ಆಗ ಇಂಗ್ಲೆಂಡ್ ವಿರುದ್ಧ 2-1 ಮುನ್ನಡೆ ಸಾಧಿಸಲಾಗಿತ್ತು. ಭಾರತೀಯ ಶಿಬಿರದಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡ ನಂತರ ಟೆಸ್ಟ್ ಸರಣಿ ಪ್ರವಾಸವನ್ನು ಮುಂದೂಡಲಾಗಿತ್ತು.

ಬುಮ್ರಾ ತಂತ್ರಗಳನ್ನು ಬಳಸಲಿಲ್ಲ ಎಂದ ಕೇವಿನ್ ಪೀಟರ್ಸನ್

ಬುಮ್ರಾ ತಂತ್ರಗಳನ್ನು ಬಳಸಲಿಲ್ಲ ಎಂದ ಕೇವಿನ್ ಪೀಟರ್ಸನ್

ಮಾಜಿ ಇಂಗ್ಲೆಂಡ್ ನಾಯಕ ಕೆವಿನ್ ಪೀಟರ್ಸನ್ ಅವರು ಭಾರತದ ಹಂಗಾಮಿ ನಾಯಕ ಜಸ್ಪ್ರೀತ್ ಬುಮ್ರಾ ಅವರ ತಂತ್ರಗಳನ್ನು ಪ್ರಶ್ನಿಸಿದ್ದು, ಅವರ ರಕ್ಷಣಾತ್ಮಕ ಮೈದಾನದ ನಿಯೋಜನೆಗಳು ಬ್ಯಾಟರ್‌ಗಳಿಗೆ ಸ್ಟ್ರೈಕ್ ತಿರುಗಿಸಲು ಸುಲಭವಾಯಿತು ಎಂದು ಹೇಳಿದರು.

"ಜಸ್ಪ್ರೀತ್ ಬುಮ್ರಾ ಸೋಮವಾರ ತಮ್ಮ ತಂತ್ರಗಳನ್ನು ಸರಿಯಾಗಿ ಪಡೆದಿದ್ದಾರೆ ಎಂದು ನಾನು ಭಾವಿಸುವುದಿಲ್ಲ ಮತ್ತು ನಾನು ಅದನ್ನು ಅತ್ಯಂತ ಗೌರವದಿಂದ ಹೇಳುತ್ತೇನೆ," ಎಂದು ಕೇವಿನ್ ಪೀಟರ್ಸನ್ ತಿಳಿಸಿದರು.

Story first published: Tuesday, July 5, 2022, 17:04 [IST]
Other articles published on Jul 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X