ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಕದಿನ ವಿಶ್ವಕಪ್‌ ಹೊಸ್ತಿಲಲ್ಲೇ ಮಹಾ ಆಘಾತ: ಸತತ ಎರಡನೇ ಸರಣಿ ಸೋತ ಭಾರತ

India defeat in the second consecutive series was a major upset ahead of ODI World Cup next Year

ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ಹಂತಕ್ಕೇರಿ ಸೋಲು ಅನುಭವಿಸಿ ಹೊರಬಿದ್ದ ಭಾರತ ತಂಡದ ಮುಂದಿನ ಗುರಿ ಏಕದಿನ ವಿಶ್ವಕಪ್ ಎಂಬುದು ಸ್ಪಷ್ಟವಾಗಿತ್ತು. ಮುಂದಿನ ವರ್ಷ ಭಾರತದಲ್ಲಿಯೇ ಏಕದಿನ ವಿಶ್ವಕಪ್ ನಡೆಯಲಿರುವ ಕಾರಣದಿಂದಾಗಿ ಸುದೀರ್ಘ ಕಾಲದಿಂದ ಭಾರತದ ಐಸಿಸಿ ಟ್ರೋಫಿ ಗೆಲ್ಲುವ ಕನಸನ್ನು ನನಸು ಮಾಡಿಕೊಳ್ಳಲು ದೊಡ್ಡ ಅವಕಾಶ ಎಂದೇ ಬಣ್ಣಿಸಲಾಗುತ್ತಿದೆ. ಆದರೆ ಈ ಮಹತ್ವದ ಟೂರ್ನಿಗೆ ಇನ್ನು ಒಂದು ವರ್ಷಗಳ ಸಮಯವೂ ಇಲ್ಲ. ಇಂಥಾ ಸಂದರ್ಭದಲ್ಲಿ ಟೀಮ್ ಇಂಡಿಯಾ ನೀಡುತ್ತಿರುವ ಪ್ರದರ್ಶನ ಅಭಿಮಾನಿಗಳಿಗೆ ಆಘಾತ ಮೂಡಿಸುತ್ತಿದೆ.

ದ್ವಿಪಕ್ಷೀಯ ಸರಣಿಗಳಲ್ಲಿ ಮಾತ್ರವೇ ಟೀಮ್ ಇಂಡಿಯಾ ಗೆಲ್ಲುತ್ತದೆ, ಆದರೆ ಐಸಿಸಿ ಟೂರ್ನಿಗಳಲ್ಲಿ ಮಾತ್ರ ವಿಫಲವಾಗುತ್ತದೆ ಎಂಬ ಟೀಕೆಗಳು ಇತ್ತೀಚಿನ ವರ್ಷಗಳಲ್ಲಿ ಕೇಳಿ ಬರುತ್ತಿತ್ತು. ಆದರೆ ಈಗ ದ್ವಿಪಕ್ಷೀಯ ಸರಣಿಗಳಲ್ಲಿಯೂ ಭಾರತ ಅಭಿಮಾನಿಗಳಿಗೆ ನಿರಾಸೆ ಮುಡಿಸುತ್ತಿದೆ. ಅಲ್ಲದೆ ಇದು ಇದು ಮುಂದಿನ ವಿಶ್ವಕಪ್ ಸಿದ್ದತೆಯ ಮೇಲೂ ಪರಿಣಾಮ ಬೀರಲಿದೆ.

ಗಾಯದ ನಡುವೆಯೂ ಛಲ ಬಿಡದೆ ಸ್ಪರ್ಧಿಸಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಗೆದ್ದ ಮೀರಾಬಾಯಿ ಚಾನುಗಾಯದ ನಡುವೆಯೂ ಛಲ ಬಿಡದೆ ಸ್ಪರ್ಧಿಸಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಗೆದ್ದ ಮೀರಾಬಾಯಿ ಚಾನು

ಸತತ ಎರಡನೇ ಸರಣಿ ಸೋಲು

ಸತತ ಎರಡನೇ ಸರಣಿ ಸೋಲು

ಟೀಮ್ ಇಂಡಿಯಾ ಟಿ20 ವಿಶ್ವಕಪ್ ಟೂರ್ನಿಯ ಬಳಿಕ ಸತತ ಎರಡನೇ ಏಕದಿನ ಸರಣಿಯಲ್ಲಿ ಸೋಲು ಅನುಭವಿಸಿದೆ. ನ್ಯೂಜಿಲೆಂಡ ಪ್ರವಾಸ ಕೈಗೊಂಡಿದ್ದ ಭಾರತ ಮಳೆಯಿಂದ ಭಾದಿತವಾಗಿದ್ದ ಆ ಸರಣಿಯಲ್ಲಿ 1-0 ಅಂತರದಿಂದ ಮುಖಭಂಗವನ್ನು ಅನುಭವಿಸಿತ್ತು. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸಹಿತ ಕೆಲ ಪ್ರಮುಖ ಆಟಗಾರರು ಈ ಈ ಸರಣಿಯಿಂದ ಹೊರಗುಳಿದಿದ್ದರು ಕೂಡ ಸಾಕಷ್ಟು ಅನುಭವಿ ಆಟಗಾರರು ಈ ಸರಣಿಯಲ್ಲಿ ಭಾಗಿಯಾಗಿದ್ದರು. ಮೊದಲ ಪಂದ್ಯ ಸಂಪೂರ್ಣವಾಗಿ ಮಳೆಗೆ ಆಹುತಿಯಾಗಿದ್ದರೆ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಹೀನಾಯವಾಗಿ ಸೋಲು ಅನುಭವಿಸಿತ್ತು. ಅಂತಿಮ ಪಂದ್ಯದಲ್ಲಿ ಕುಡ ಭಾರತ ಕಳೆ ಪ್ರದರ್ಶನ ನೀಡಿತ್ತಾದರೂ ಪಂದ್ಯಕ್ಕೆ ಮಳೆ ಅಡ್ಡಿಯಾಗಿದ್ದ ಕಾರಣ ಆ ಪಂದ್ಯವೂ ರದ್ದಾಯಿತು. ಹೀಗಾಗಿ ಟೀಮ್ ಇಂಡಿಯಾ ಈ ಸರಣಿಯನ್ನು 1-0 ಅಂತರದಿಂದ ಸೋತಿತ್ತು.

ಬಾಂಗ್ಲಾದೇಶದ ವಿರುದ್ಧ ಮುಖಭಂಗ

ಬಾಂಗ್ಲಾದೇಶದ ವಿರುದ್ಧ ಮುಖಭಂಗ

ಇನ್ನು ಟೀಮ್ ಇಂಡಿಯಾ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿಯೂ ಸೋಲು ಅನುಭವಿಸಿದೆ. ಮೊದಲ ಪಂದ್ಯದಲ್ಲಿ ಅಲ್ಪ ಮೊತ್ತದ ಗುರಿಯನ್ನು ನೀಡಿದ ಹೊರತಾಗಿಯೂ ಭಾರತ ಗೆಲುವಿನ ಸನಿಹಕ್ಕೆ ತಲುಪಿದ್ದರೆ ಅಂತಿಮ ವಿಕೆಟ್ ಪಡೆಯಲು ಸಾಧ್ಯವಾಗದರೆ ನಿರಾಸೆಗೆ ಒಳಗಾಗಿತ್ತು. ಇನ್ನು ಎರಡನೇ ಪಂದ್ಯದಲ್ಲಿಯೂ ಬೌಲಿಂಗ್ ವಿಭಾಗ ಅಗ್ರ ಕ್ರಮಾಂಕ್ ಆಟಗಾರರನ್ನು ಬೇಗನೆ ಫೆವಿಲಿಯನ್‌ಗೆ ಕಳುಹಿಸಲು ಯಶಸ್ವಿಯಾಗಿತ್ತಾದರು ಕೆಳ ಕ್ರಮಾಂಕದ ಆಟಗಾರರ ವಿರುದ್ಧ ಮತ್ತೆ ಹಿನ್ನಡೆ ಅನುಭವಿಸಿತು. ಇನ್ನು ಬ್ಯಾಟಿಂಗ್‌ನಲ್ಲಿ ಶ್ರೇಯಸ್ ಐಯ್ಯರ್ ಹಾಗೂ ರೋಹಿತ್ ಶರ್ಮಾ ಹೋರಾಟ ನಡೆಸಿದ್ದು ಹೊರತುಪಡಿಸಿದರೆ ಉಳಿದವರಿಂದ ಮತ್ತೆ ನೀರಸ ಪ್ರದರ್ಶನ ಬಂದ ಕಾರಣ ಟೀಮ್ ಇಂಡಿಯಾ ಸೋಲು ಅನುಭವಿಸಿದ್ದು ಮಾತ್ರವಲ್ಲದೆ ಬಾಂಗ್ಲಾದೇಶದ ವಿರುದ್ಧ ಸರಣಿ ಸೋಲು ಕಂಡಿದೆ.

ಎಚ್ಚೆತ್ತುಕೊಳ್ಳಲು ಸೂಕ್ತ ಸಮಯ

ಎಚ್ಚೆತ್ತುಕೊಳ್ಳಲು ಸೂಕ್ತ ಸಮಯ

ಮುಂದಿನ ವಿಶ್ವಕಪ್‌ಗೆ ತಯಾರಿಯ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾಗೆ ಬಲಿಷ್ಠ ತಂಡವನ್ನು ಸಿದ್ಧಪಡಿಸಲು ಇನ್ನೂ ಸಮಯಾವಕಾಶವಿದೆ. ಉಳಿದಿರುವ 10-11 ತಿಂಗಳ ಅವಧಿಯನ್ನು ಬಿಸಿಸಿಐ, ಆಯ್ಕೆ ಸಮಿತಿ ಹಾಗೂ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ಅದ್ಬುತವಾಗಿ ಉಪಯೋಗಿಸಿಕೊಂಡರೆ ಭಾರತ ತಂಡಕ್ಕೆ ಉತ್ತಮ ಅವಕಾಶಗಳು ಇನ್ನೂ ಇದೆ. ಆಟಗಾರರ ಆಯ್ಕೆ ತಂಡದ ಸಂಯೋಜನೆ, ಹಾಗೂ ಆಟಗಾರರ ಮೇಲಿನ ಒತ್ತಡವನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಅವಧಿಯಲ್ಲಿ ಸೂಕ್ತವಾದ ನಿರ್ಧಾರಗಳನ್ನು ತೆಗೆದುಕೊಂಡರೆ ಭಾರತ ಈ ಕಠಿಣ ಸ್ಥಿತಿಯಿಂದ ಹೊರಬರಲು ಅವಕಾಶವಿದ್ದು ವಿಶ್ವಕಪ್ ಗೆಲ್ಲುವ ತಂಡವನ್ನು ಸಿದ್ಧಪಡಿಸಲು ಅವಕಾಶವಿದೆ. ಹೀಗಾಗಿ ಮುಂದಿನ ಪ್ರತಿಯೊಂದು ಸರಣಿ ಕೂಡ ಟೀಮ್ ಇಂಡಿಯಾ ಪಾಲಿಗೆ ಅತ್ಯಂತ ಮಹತ್ವದ್ದಾಗಿರಲಿದೆ.

ವೈಟ್‌ವಾಶ್ ಮುಖಭಂಗದಿಂದ ತಪ್ಪಿಸಿಕೊಳ್ಳುತ್ತಾ ಭಾರತ

ವೈಟ್‌ವಾಶ್ ಮುಖಭಂಗದಿಂದ ತಪ್ಪಿಸಿಕೊಳ್ಳುತ್ತಾ ಭಾರತ

ಬಾಂಗ್ಲಾದೇಶ ಪ್ರವಾಸ ಕೈಗೊಂಡಿರುವ ಟೀಮ್ ಇಂಡಿಯಾ ಮೊದಲ ಎರಡು ಪಂದ್ಯಗಳಲ್ಲಿ ಕೂಡ ಸೋಲು ಅನುಭವಿಸಿರುವ ಕಾರಣ ಈಗ ವೈಟ್‌ವಾಶ್ ಮುಖಭಂಗದ ಭೀತಿಯಲ್ಲಿದೆ. ಅಂತಿಮ ಪಂದ್ಯವನ್ನು ಗೆದ್ದು ಈ ಮುಖಭಂಗದಿಂದ ತಪ್ಪಿಸಿಕೊಳ್ಳಲು ಸರ್ವ ಪ್ರಯತ್ನವನ್ನು ಕೂಡ ನಡೆಸಲಿದೆ. ಅದಾದ ಬಳಿಕ ಬಾಂಗ್ಲಾದೇಶದ ವಿರುದ್ಧ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಭಾಗಿಯಾಗಲಿದ್ದು ಎರಡು ಪಂದ್ಯಗಳ ಟೆಸ್ಟ್ ಸರಣಿ ಟೀಮ್ ಇಂಡಿಯಾಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಹಂತಕ್ಕೇರಲು ಅತ್ಯಂತ ಮಹತ್ವದ್ದಾಗಿರಲಿದೆ.

Story first published: Wednesday, December 7, 2022, 21:32 [IST]
Other articles published on Dec 7, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X