ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

25 ವರ್ಷಗಳ ಬರ ನೀಗಿತು, ದಕ್ಷಿಣ ಆಫ್ರಿಕಾದಲ್ಲಿ ಭಾರತಕ್ಕೆ ಸರಣಿ ಜಯ

By Mahesh
India end 25-year drought, Virat Kohli's side clinches first-ever series in South Africa -- See pics

ಪೋರ್ಟ್ ಏಲಿಜಬೆತ್, ಫೆಬ್ರವರಿ 14: ದಕ್ಷಿಣ ಆಫ್ರಿಕಾ ನೆಲದಲ್ಲಿ 25ಕ್ಕೂ ಅಧಿಕ ವರ್ಷಗಳ ನಂತರ ಭಾರತ ತಂಡವು ಏಕದಿನ ಅಂತಾರಾಷ್ಟ್ರೀಯ ಸರಣಿ ಗೆದ್ದು ದಾಖಲೆ ಬರೆದಿದೆ. ಅತಿಥೇಯ ತಂಡದ ವಿರುದ್ಧದ 6 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳ ಸರಣಿಯಲ್ಲಿ 4-1ರಲ್ಲಿ ಮುಂದಿರುವ ಕೊಹ್ಲಿ ಪಡೆ ಐತಿಹಾಸಿಕ ಸಾಧನೆ ಮಾಡಿದೆ.

ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಕೊನೆಗೂ ಆರಂಭಿಕ ಆಟಗಾರ ರೋಹಿತ್ ಶರ್ಮ ಅವರು ಲಯ ಕಂಡುಕೊಂಡರು 115 ರನ್(126 ಎಸೆತ, 11 ಬೌಂಡರಿ, 4 ಸಿಕ್ಸರ್) ಗಳಿಸಿದರು.

ಆದರೆ, ಶತಕ ಗಳಿಸುವಷ್ಟರಲ್ಲಿ ಇಬ್ಬರನ್ನು ರನ್ ಔಟ್ ಮಾಡಿಸಿದರು. ಒಂದೆರಡು ಜೀವದಾನ ಕೂಡಾ ಸಿಕ್ಕಿತ್ತು. ಆದರೆ, ರೋಹಿತ್ ಶತಕದ ಲಾಭ ಪಡೆಯದ ಭಾರತ ತಂಡ 7 ವಿಕೆಟ್​ಗೆ 274 ರನ್ ಗಳಿಸಿತು.

275ರನ್ ಗುರಿ ಬೆನ್ನು ಹತ್ತಿದ ದಕ್ಷಿಣ ಆಫ್ರಿಕಾ ತಂಡವು 42.2 ಓವರ್ ಗಳಲ್ಲಿ 201 ರನ್ನಿಗೆ ಆಲೌಟ್ ಆಗಿ ಸೋಲೋಪ್ಪಿಕೊಂಡಿತು. ದಕ್ಷಿಣ ಆಫ್ರಿಕಾ ಪರ ಹಶಿಂ ಆಮ್ಲ 71ರನ್(92 ಎಸೆತ, 5 ಬೌಂಡರಿ) ಹಾಗೂ ನಾಯಕ ಏಡೆನ್ ಮಾರ್ಕ್ರಮ್ (32) ಕೊಂಚ ಪ್ರತಿರೋಧ ತೋರಿದರು. ಭಾರತದ ಪರ ಸ್ಪಿನ್ನರ್ ಕುಲದೀಪ್ ಯಾದವ್ 57ಕ್ಕೆ4 ಗಳಿಸಿದರೆ, ಚಾಹಲ್ ಹಾಗೂ ಪಾಂಡ್ಯ ತಲಾ 2 ವಿಕೆಟ್ ಪಡೆದುಕೊಂಡರು.

Story first published: Wednesday, February 21, 2018, 12:38 [IST]
Other articles published on Feb 21, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X