ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಭ್ಯಾಸ ಪಂದ್ಯ: ಎಸೆಕ್ಸ್ ವಿರುದ್ಧ ಭಾರತದ ಗೌರವಾರ್ಹ ಮೊತ್ತ

india essex three day warm-up game 1st day report

ಚೆಲ್ಮ್ಸ್‌ಫೊರ್ಡ್, ಜುಲೈ 26: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ತಯಾರಿ ನಡೆಸಿರುವ ಭಾರತ ತಂಡ, ಇಲ್ಲಿ ನಡೆಯುತ್ತಿರುವ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ಗೌರವಾರ್ಹ ಮೊತ್ತ ದಾಖಲಿಸಿದೆ.

ಎಸೆಕ್ಸ್ ವಿರುದ್ಧದ ಪಂದ್ಯದಲ್ಲಿ ಮುರಳಿ ವಿಜಯ್, ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್ ಹಾಗೂ ದಿನೇಶ್ ಕಾರ್ತಿಕ್ ಅರ್ಧ ಶತಕ ದಾಖಲಿಸಿದ್ದಾರೆ.

ನಿಷೇಧಕ್ಕೊಳಗಾಗಿರುವ ಸ್ಮಿತ್ ಈಗಲೂ ಐಸಿಸಿ ವಿಶ್ವಶ್ರೇಷ್ಠ ಬ್ಯಾಟ್ಸ್ಮನ್!ನಿಷೇಧಕ್ಕೊಳಗಾಗಿರುವ ಸ್ಮಿತ್ ಈಗಲೂ ಐಸಿಸಿ ವಿಶ್ವಶ್ರೇಷ್ಠ ಬ್ಯಾಟ್ಸ್ಮನ್!

ಆದರೆ, ಮೇಲಿನ ಕ್ರಮಾಂಕದ ಆಟಗಾರರ ಜವಾಬ್ದಾರಿಯನ್ನು ಕೌಂಟಿ ಚಾಂಪಿಯನ್ ವಿರುದ್ಧದ ಪಂದ್ಯ ತೋರಿಸಿಕೊಟ್ಟಿದೆ.

ಆರಂಭಿಕ ಆಟಗಾರ ಶಿಖರ್ ಧವನ್, ಚೇತೇಶ್ವರ ಪೂಜಾರ ಹಾಗೂ ಅಜಿಂಕ್ಯ ರಹಾನೆ ಈ ಪಂದ್ಯದಲ್ಲಿ ವೈಫಲ್ಯ ಕಂಡರು.

india essex three day warm-up game 1st day report

ಶಿಖರ್ ಧವನ್ ತಾವು ಎದುರಿಸಿದ ಮೊದಲ ಎಸೆತದಲ್ಲಿಯೇ ಔಟಾದರೆ, ಇಂಗ್ಲೆಂಡ್ ನೆಲದಲ್ಲಿ ಅತಿ ಹೆಚ್ಚು ನಿರೀಕ್ಷೆ ಹೊಂದಿರುವ ಪೂಜಾರ ಕೇವಲ ಒಂದು ರನ್ ಗಳಿಸಿದರು. ರಹಾನೆ ಕೂಡ 17 ರನ್‌ ಮಾತ್ರ ಸಂಪಾದಿಸಿದರು.

5 ರನ್ ಆಗಿದ್ದಾಗ ಎರಡು ವಿಕೆಟ್ ಕಳೆದುಕೊಂಡಿದ್ದ ಭಾರತದ ಸ್ಕೋರ್ 44ಕ್ಕೆ ತಲುಪಿದ್ದಾಗ ರಹಾನೆ ಪೆವಿಲಿಯನ್ ಹಾದಿ ಹಿಡಿದರು. ಎಸೆಕ್ಸ್ ಫೀಲ್ಡರ್‌ಗಳು ಎರಡು ಕ್ಯಾಚ್‌ಗಳನ್ನು ಕೈಚೆಲ್ಲಿದ್ದರಿಂದ ಭಾರತ ಸುಧಾರಿಸಿಕೊಳ್ಳಲು ಸಾಧ್ಯವಾಯಿತು.

ಸಂಕಷ್ಟದಲ್ಲಿದ್ದ ತಂಡಕ್ಕೆ ವಿಜಯ್ ಮತ್ತು ಕೊಹ್ಲಿ ನೆರವಾದರು. ನಾಲ್ಕನೆ ವಿಕೆಟ್‌ಗೆ ಇಬ್ಬರೂ 90 ರನ್ ಸೇರಿಸಿದರು. ಮುರಳಿ ವಿಜಯ್ ತಾಳ್ಮೆಯ ಆಟಕ್ಕೆ ಮೊರೆ ಹೋದರೆ, ಕೊಹ್ಲಿ ಆಗಾಗ ಆಕ್ರಮಣಕಾರಿ ಹೊಡೆತಗಳನ್ನು ಬಾರಿಸಿದರು. ಕೊಹ್ಲಿ ಅರ್ಧಶತಕಕ್ಕೆ ಜೀವದಾನದ ಕೊಡುಗೆಯೂ ಸಿಕ್ಕಿತು.

ಏಷ್ಯಾ ಕಪ್ ವೇಳಾಪಟ್ಟಿ ಪ್ರಕಟ: ಸೆ.19ಕ್ಕೆ ಭಾರತ-ಪಾಕಿಸ್ತಾನ ಕದನಏಷ್ಯಾ ಕಪ್ ವೇಳಾಪಟ್ಟಿ ಪ್ರಕಟ: ಸೆ.19ಕ್ಕೆ ಭಾರತ-ಪಾಕಿಸ್ತಾನ ಕದನ

13 ರನ್ ಅಂತರದಲ್ಲಿ ಇಬ್ಬರೂ ಔಟಾದಾಗ ತಂಡ ಮತ್ತೆ ಕಷ್ಟಕ್ಕೆ ಸಿಲುಕಿತು. ಈ ವೇಳೆ ಕೆ.ಎಲ್. ರಾಹುಲ್ ಮತ್ತು ದಿನೇಶ್ ಕಾರ್ತಿಕ್ ಜೋಡಿ ಎಸೆಕ್ಸ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿ ಶತಕದ ಜತೆಯಾಟ (114) ನೀಡಿದರು.

ಕಾರ್ತಿಕ್ ವೇಗದ ಆಟಕ್ಕೆ ಒತ್ತು ನೀಡಿದರು. ರಾಹುಲ್ ಆಗಾಗ ಬೌಂಡರಿಗಳನ್ನು ಬಾರಿಸಿ ರನ್ ಗತಿ ಹೆಚ್ಚಿಸಿದರು.

ರಾಹುಲ್ ಔಟಾದ ಬಳಿಕ ಮುರಿಯದ ಏಳನೇ ವಿಕೆಟ್‌ಗೆ 51 ರನ್ ಪೇರಿಸಿರುವ ಕಾರ್ತಿಕ್ ಮತ್ತು ಹಾರ್ದಿಕ್ ಪಾಂಡ್ಯ ಜೋಡಿ ಗುರುವಾರ ಆಟ ಮುಂದುವರಿಸಲಿದೆ.

ಶತಕ ದಾಖಲಿಸಲು 18 ರನ್‌ಗಳ ಅವಶ್ಯಕತೆಯಿರುವ ದಿನೇಶ್ ಕಾರ್ತಿಕ್ ಆಟ ಗಮನ ಸೆಳೆದಿದ್ದು, ಟೆಸ್ಟ್ ತಂಡದಲ್ಲಿ ಅವರು ಅವಕಾಶ ಪಡೆಯುವ ಸಾಧ್ಯತೆ ಹೆಚ್ಚಾಗಿದೆ.

ನಾಲ್ಕು ದಿನ ನಡೆಯಬೇಕಿದ್ದ ಪಂದ್ಯವನ್ನು ಬಿಸಿ ಗಾಳಿಯ ಕಾರಣದಿಂದ ಮೂರು ದಿನಕ್ಕೆ ಇಳಿಸಲಾಗಿದೆ. ಜುಲೈ 27ರಂದು ಎಸೆಕ್ಸ್ ವಿರುದ್ಧದ ಪಂದ್ಯ ಮುಗಿದ ಬಳಿಕ ಭಾರತ ತಂಡವು ಬರ್ಮಿಂಗ್‌ಹ್ಯಾಮ್‌ಗೆ ತೆರಳಲಿದೆ.

ಸ್ಕೋರ್
ಭಾರತ: ಮುರಳಿ ವಿಜಯ್ 53, ಶಿಖರ್ ಧವನ್ 0, ಚೇತೇಶ್ವರ ಪೂಜಾರ 1, ಅಜಿಂಕ್ಯ ರಹಾನೆ 17, ವಿರಾಟ್ ಕೊಹ್ಲಿ 68, ಕೆ.ಎಲ್. ರಾಹುಲ್ 58, ದಿನೇಶ್ ಕಾರ್ತಿಕ್ 82*, ಹಾರ್ದಿಕ್ ಪಾಂಡ್ಯ 33*.
ಮ್ಯಾಟ್ ಕೋಲ್ಸ್ 31/2, ಪೌಲ್ ವಾಲ್ಟರ್ 90/2, ಮ್ಯಾಥ್ಯೂ ಕ್ವಿನ್ 27/1.

Story first published: Thursday, July 26, 2018, 9:57 [IST]
Other articles published on Jul 26, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X