ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

90ರ ದಶಕದ ಜರ್ಸಿಯಲ್ಲಿ ಟೀಮ್ ಇಂಡಿಯಾ ಕಣಕ್ಕಿಳಿಯುವುದು ಖಚಿತ: ಬಹಿರಂಗಗೊಳಿಸಿದ ಶಿಖರ್ ಧವನ್

india in australia: Team Indias new jersey unveiled

ಆಸ್ಟ್ರೇಲಿಯಾ ವಿರುದ್ಧದ ಸೀಮಿತ ಓವರ್‌ಗಳ ಸರಣಿಗೆ ದಿನಗಣನೆ ಆರಂಭವಾಗಿದೆ. ನಾನಾ ಕಾರಣಗಳಿಂದಾಗಿ ಈ ಸರಣಿ ಭಾರೀ ವಿಶ್ವ ಕ್ರಿಕೆಟ್‌ನಲ್ಲಿ ಕೇಂದ್ರಬಿಂದುವಾಗಿದೆ. ಆಸಿಸ್ ವಿರುದ್ಧದ ಸೀಮಿತ ಓವರ್‌ಗಳ ಸರಣಿಯಲ್ಲಿ ಭಾರತ ವಿಶೇಷ ಜರ್ಸಿಯಲ್ಲಿ ಕಣಕ್ಕಿಳಿಯುವುದು ಖಚಿತವಾಗಿದೆ. ಶಿಖರ್ ಧವನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹೊಸ ಜರ್ಸಿಯನ್ನು ಬಹಿರಂಗಪಡಿಸಿದ್ದಾರೆ.

ಈ ಜರ್ಸಿ ಕ್ರಿಕೆಟ್ ಕುತೂಹಲವನ್ನು ಮೂಡಿಸಲು ಕಾರಣವೂ ಇದೆ. ಇದು ಭಾರತ ಕ್ರಿಕೆಟ್ ತಂಡ 1992ರ ವಿಶ್ವಕಪ್‌ನಲ್ಲಿ ಪಾಲ್ಗೊಂಡಿದ್ದಾಗ ಧರಿಸಿದ ಜರ್ಸಿಯ ಮಾದರಿಯಾಗಿದೆ. ಈ ಮಾದರಿಯ ಜರ್ಸಿಯಲ್ಲಿ ಕಪಿಲ್‌ದೇವ್, ಸಚಿನ್ ತೆಂಡೂಲ್ಕರ್ ಸಹಿತ ಭಾರತೀಯ ತಂಡ ಅಂದು ಕಣಕ್ಕಿಳಿದಿತ್ತು. 1992ರ ವಿಶ್ವಕಪ್‌ನಲ್ಲಿ ಎಲ್ಲಾ ಕ್ರಿಕೆಟ್ ತಂಡಗಳು ಒಂದೇ ಶೈಲಿಯ ಜರ್ಸಿಯನ್ನು ಧರಿಸಿದ್ದವು ಆದರೆ ಬಣ್ಣಗಳು ಮಾತ್ರವೇ ಭಿನ್ನವಾಗಿತ್ತು.

ಭಾರತ vs ಆಸ್ಟ್ರೇಲಿಯಾ: ರೋಹಿತ್ ಬದಲು ಶ್ರೇಯಸ್‌ಗೆ ಟೆಸ್ಟ್‌ನಲ್ಲಿ ಸ್ಥಾನ?!ಭಾರತ vs ಆಸ್ಟ್ರೇಲಿಯಾ: ರೋಹಿತ್ ಬದಲು ಶ್ರೇಯಸ್‌ಗೆ ಟೆಸ್ಟ್‌ನಲ್ಲಿ ಸ್ಥಾನ?!

ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧದ ಈ ಸರಣಿಯಲ್ಲಿ ತಮ್ಮ ಸಾಂಪ್ರದಾಯಿಕ ತಿಳಿ ನೀಲಿ ಬಣ್ಣದ ಜರ್ಸಿಯ ಬದಲು ಕಡು ನೀಲಿ ಬಣ್ಣದ ರೆಟ್ರೋ ಲುಕ್‌ನಲ್ಲಿ ಕಂಗೊಳಿಸಲಿದೆ. ಆಸ್ಟ್ರೇಲಿಯಾ ಕ್ರಿಕೆಟ್ ತಂಡವೂ ಕೂಡ ವಿಶೇಷವಾದ ಜರ್ಸಿಯಲ್ಲಿ ಕಣಕ್ಕಿಳಿಯಲಿದೆ.

ಟೀಮ್ ಇಂಡಿಯಾದ ಎಡಗೈ ಆಟಗಾರ ಶಿಖರ್ ಧವನ್ ಟ್ವಿಟ್ಟರ್‌ನಲ್ಲಿ ಸೆಲ್ಫಿ ಹಂಚಿಕೊಳ್ಳುವ ಮೂಲಕ ಜರ್ಸಿ ವಿಚಾರದ ಕುತೂಹಲಕ್ಕೆ ಉತ್ತರವನ್ನು ನೀಡಿದ್ದಾರೆ. ಟೀಮ್ ಇಂಡಿಯಾ ರೆಟ್ರೋ ಮಾದರಿಯ ಜರ್ಸಿಯಲ್ಲಿ ಕಣಕ್ಕಿಳಿಯಲಿದ ಎಂಬ ಸುದ್ದಿ ಈ ಹಿಂದೆಯೇ ಪ್ರಕಟವಾಗಿತ್ತು. ಆದರೆ ಬಿಸಿಸಿಐ ಈ ಬಗ್ಗೆ ಅಧಿಕೃತ್ವಾಗಿ ಯಾವುದೇ ಹೇಳಿಕೆ ನೀಡಿರಲಿಲ್ಲ. ಆದರೆ ಧವನ್ ಹಂಚಿಕೊಂಡ ಫೋಟೋ ಇದಕ್ಕೆ ಉತ್ತರ ನೀಡಿದೆ.

ಭಾರತ vs ಆಸ್ಟ್ರೇಲಿಯಾ: ವೇಳಾಪಟ್ಟಿ, ತಂಡಗಳು, ಸಂಪೂರ್ಣ ಮಾಹಿತಿಭಾರತ vs ಆಸ್ಟ್ರೇಲಿಯಾ: ವೇಳಾಪಟ್ಟಿ, ತಂಡಗಳು, ಸಂಪೂರ್ಣ ಮಾಹಿತಿ

ಇನ್ನು ಆಸ್ಟ್ರೇಲಿಯಾ ವಿರುದ್ಧದ ಈ ಸರಣಿಗೆ ಎಂಪಿಎಲ್ ಹೊಸ ಕಿಟ್ ಪ್ರಾಯೋಜಕರಾಗಿರಲಿದ್ದಾರೆ. ಮೂರು ವರ್ಷಗಳ ಈ ಒಪ್ಪಂದ ಈ ನವೆಂಬರ್‌ನಿಂದ ಆರಂಭವಾಗಿದೆ. ಈ ಪ್ರಾಯೋಜಕತ್ವ ಟೀಮ್ ಇಂಡಿಯಾ ಪುರುಷರ ಮಹಿಳೆಯ ಹಾಗೂ ಅಂಡರ್ 19 ಕ್ರಿಕೆಟ್ ತಂಡವನ್ನು ಒಳಗೊಂಡಿದೆ.

Story first published: Tuesday, November 24, 2020, 16:23 [IST]
Other articles published on Nov 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X