'ಆನಂದ್‌ ಮಹೀಂದ್ರ'ಗೆ ಧನ್ಯವಾದ ತಿಳಿಸಿದ ವೇಗಿ ಮೊಹಮ್ಮದ್ ಸಿರಾಜ್

ನವದೆಹಲಿ: ಭಾರತದ ವೇಗಿ ಮೊಹಮ್ಮದ್ ಸಿರಾಜ್, ಮಹೀಂದ್ರ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರ ಅವರಿಗೆ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದ್ದಾರೆ. ಆಸ್ಟ್ರೇಲಿಯಾ ಪ್ರವಾಸ ಸರಣಿಯ ವೇಳೆ ಅದ್ಭುತ ಪ್ರದರ್ಶನ ನೀಡಿದ್ದಕ್ಕಾಗಿ ಮಹೀಂದ್ರ ಅವರು ಸಿರಾಜ್‌ಗೂ ಸೇರಿ 6 ಪ್ರತಿಭಾನ್ವಿತ ಆಟಗಾರರಿಗೆ SUV ಜೀಪ್‌ ಉಡುಗೊರೆಯಾಗಿ ನೀಡಿದ್ದರು.

ಐಪಿಎಲ್: ಟ್ವಿಟರ್ ವಿರುದ್ಧ ಆರ್‌ಸಿಬಿ ಅಸಮಾಧಾನ, ಏನಿದು ವಿವಾದ!?

ಮಹೀಂದ್ರ ಥಾರ್, ನೂತನ SUV ಅನ್ನು ಆನಂದ್ ಮಹೀಂದ್ರ ಅವರು ಸಿರಾಜ್‌ಗೆ ಉಡುಗೊರೆಯಾಗಿ ನೀಡಿದ್ದರು. ಆದರೆ ಖುದ್ದಾಗಿ ತಾನೇ ಬಂದು ಗಿಫ್ಟ್‌ ಸ್ವೀಕರಿಸಲು ಮೊಹಮ್ಮದ್ ಸಿರಾಜ್‌ಗೆ ಸಾಧ್ಯವಾಗಿಲ್ಲ. ಹೀಗಾಗಿ ಸಿರಾಜ್ ಸಹೋದರ ಮತ್ತು ತಾಯಿ ಹೈದರಾಬಾದ್‌ನ ಮಹೀಂದ್ರ ಶೋ ರೂಮ್‌ನಿಂದ ಗಿಫ್ಟ್‌ ಸ್ವೀಕರಿಸಿದ್ದಾರೆ.

ಈ ಬಾರಿಯ ಎಲ್ಲಾ 8 ಫ್ರಾಂಚೈಸಿಗಳ ವಿನಾಶಕಾರಿ ಆರಂಭಿಕ ಬ್ಯಾಟ್ಸ್‌ಮನ್‌ಗಳಿವರು!

ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ಗಾಗಿ ಸಿರಾಜ್ ಸದ್ಯ ಚೆನ್ನೈಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಬಯೋ ಬಬಲ್‌ ಒಳಗಿರುವುದರಿಂದ ಅವರಿಗೆ ಖುದ್ದಾಗಿ ಬಂದು ಜೀಪ್‌ ಸ್ವೀಕರಿಸಲು ಸಾಧ್ಯವಾಗಿಲ್ಲ. ಆದರೆ ಮಹೀಂದ್ರಗೆ ಧನ್ಯವಾದ ಸಲ್ಲಿಸಿ ಸಿರಾಜ್ ಟ್ವೀಟ್ ಮಾಡಿದ್ದಾರೆ.

'ಈ ಕ್ಷಣದ ಖುಷಿ ವರ್ಣಿಸಲು ನನ್ನ ಪದಗಳು ಸೋಲುತ್ತಿವೆ. ನೀವು ನೀಡಿದ ಸೊಗಸಾದ ಥಾರ್ SUV ಗಿಫ್ಟ್‌ಗಾಗಿ ನಾನು ಏನೂ ಹೇಳಲು, ಮಾಡಲು ಆಗುತ್ತಿಲ್ಲ. ಆ ಭಾವನಗೆಗಳನ್ನು ವ್ಯಕ್ತಪಡಿಸಲು ಆಗುತ್ತಿಲ್ಲ. ಈ ಹೊತ್ತು ನಾನು ದೊಡ್ಡ ಧನ್ಯವಾದಗಳನ್ನಷ್ಟೇ ಹೇಳಬಲ್ಲೆ' ಎಂದು ಸಿರಾಜ್ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ. ಏಪ್ರಿಲ್ 9ರಂದು ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್ ಪಂದ್ಯ ಆಡಲಿವೆ.

For Quick Alerts
ALLOW NOTIFICATIONS
For Daily Alerts
Story first published: Monday, April 5, 2021, 9:12 [IST]
Other articles published on Apr 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X