ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೊದಲನೇ ಓವರ್ ದೇವ್ರಿಗೆ! ನಾವು 19 ಓವರ್ ಕ್ರಿಕೆಟ್ ಆಡುತ್ತಿದ್ದೇವೆ ಎಂದ ಆಕಾಶ್ ಚೋಪ್ರಾ

India Playing 19 Overs Game In T20 World Cup : Aakash Chopra Slams Rahul And Rohit For Slow Start

ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿ ಸೆಮಿಫೈನಲ್ ಪ್ರವೇಶಿಸಿದೆ. ಆದರೆ, ಪಂದ್ಯಾವಳಿಯಲ್ಲಿ ಭಾರತ ತಂಡದ ಆರಂಭಿಕ ಜೋಡಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದಾರೆ. ಹಲವು ಪಂದ್ಯಗಳಲ್ಲಿ ಭಾರತ ಮೇಡನ್‌ನೊಂದಿಗೆ ಇನ್ನಿಂಗ್ಸ್ ಆರಂಭಿಸಿದ್ದಾರೆ.

ಮೊದಲನೇ ಓವರ್ ಅನ್ನು ಮೇಡನ್‌ನೊಂದಿಗೆ ಇನ್ನಿಂಗ್ಸ್ ಆರಂಭಿಸುತ್ತಿದ್ದು, ಭಾರತ 19 ಓವರ್ ಗಳ ಪಂದ್ಯವನ್ನಾಡುತ್ತಿದೆ ಎಂದು ಆಕಾಶ್ ಚೋಪ್ರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಚೋಪ್ರಾ ಸೆಮಿ-ಫೈನಲ್‌ನಲ್ಲಿ ಪ್ರಾರಂಭದಿಂದಲೇ ಹೆಚ್ಚು ಆಕ್ರಮಣಕಾರಿ ವಿಧಾನವನ್ನು ಅಳವಡಿಸಿಕೊಳ್ಳುವಂತೆ ಭಾರತ ತಂಡಕ್ಕೆ ಒತ್ತಾಯಿಸಿದರು. ಇಂಗ್ಲೆಂಡ್‌ನಂತಹ ತಂಡದ ವಿರುದ್ಧ ನಿಧಾನಗತಿಯಲ್ಲಿ ಇನ್ನಿಂಗ್ಸ್ ಆರಂಭಿಸುವುದು ರೋಹಿತ್ ಶರ್ಮಾ ಮತ್ತು ತಂಡಕ್ಕೆ ದುಬಾರಿಯಾಗಿದೆ ಎಂದು ಅವರು ಸಲಹೆ ನೀಡಿದರು.

IPL 2023: ಆರ್‌ಸಿಬಿ ಈ ಸ್ಫೋಟಕ ಆಟಗಾರನನ್ನು ಖರೀದಿಸಬಹುದು ಎಂದ ಆಕಾಶ್ ಚೋಪ್ರಾIPL 2023: ಆರ್‌ಸಿಬಿ ಈ ಸ್ಫೋಟಕ ಆಟಗಾರನನ್ನು ಖರೀದಿಸಬಹುದು ಎಂದ ಆಕಾಶ್ ಚೋಪ್ರಾ

ಈ ನಿರ್ಣಾಯಕ ಪಂದ್ಯದಲ್ಲಿ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ರನ್ ಗಳಿಸಬೇಕಿದೆ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ. ಸೆಮಿಫೈನಲ್ ಪಂದ್ಯದಲ್ಲಿ ಅವರು ರನ್ ಗಳಿಸಲು ವಿಫಲರಾದರೆ ತಂಡದ ಮಧ್ಯಮ ಕ್ರಮಾಂಕದ ಮೇಲೆ ಹೆಚ್ಚಿನ ಒತ್ತಡ ಬೀಳಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

19 ಓವರ್ ಅಷ್ಟೇ ಆಡುತ್ತಿದ್ದೇವೆ

19 ಓವರ್ ಅಷ್ಟೇ ಆಡುತ್ತಿದ್ದೇವೆ

"ರೋಹಿತ್ ಶರ್ಮಾ ಇದುವರೆಗೆ ರನ್ ಗಳಿಸಿಲ್ಲ. ಸೆಮಿಫೈನಲ್‌ನಲ್ಲಿ ಅವರು ರನ್ ಗಳಿಸಿದರೆ ಒಳ್ಳೆಯದು. ಆದರೆ ಅವರು ಮತ್ತೆ ವಿಫಲರಾದರೆ ಹೇಗೆ? ನಾವು ಮೊದಲ ಓವರ್ ಅನ್ನು ಮೇಡನ್ ಆಗಿ ಆಡುತ್ತಿದ್ದೇವೆ. ಅಂದರೆ ನಾವು 19 ಓವರ್ ಮಾತ್ರ ಆಡುತ್ತಿದ್ದೇವೆ" ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.

"ಈ ಬಾರಿ ನಿಧಾನವಾಗಿ ಇನ್ನಿಂಗ್ಸ್ ಪ್ರಾರಂಭಿಸಲು ನೋಡಬಾರದು. ಇದು ಮತ್ತೆ 19 ಓವರ್ ಪಂದ್ಯವಾಗಬಾರದು, 20 ಓವರ್ ಗಳಲ್ಲಿ ಭಾರತ ರನ್ ಗಳಿಸಬೇಕು, ಇಲ್ಲದಿದ್ದರೆ, ಇಂಗ್ಲೆಂಡ್ ವಿರುದ್ಧ ಗೆಲ್ಲುವುದು ಕಷ್ಟವಾಗುತ್ತದೆ" ಎಂದು ಅವರು ಹೇಳಿದರು.

ಈ ತಂಡವೇ ವಿಶ್ವಕಪ್ ಗೆಲ್ಲಲಿದೆ: ಎಬಿ ಡಿವಿಲಿಯರ್ಸ್ ಭವಿಷ್ಯಕ್ಕೆ ಟೀಮ್ ಇಂಡಿಯಾ ಅಭಿಮಾನಿಗಳು ಹರ್ಷ!

ಜಿಂಬಾಬ್ವೆ, ದಕ್ಷಿಣ ಆಫ್ರಿಕಾ ವಿರುದ್ಧ ನೀರಸ ಆರಂಭ

ಜಿಂಬಾಬ್ವೆ, ದಕ್ಷಿಣ ಆಫ್ರಿಕಾ ವಿರುದ್ಧ ನೀರಸ ಆರಂಭ

ಸೂಪರ್ 12 ಹಂತದ ಪಂದ್ಯಗಳಲ್ಲಿ ಭಾರತ ತಂಡ ಜಿಂಬಾಬ್ವೆ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಓವರ್ ಮೇಡನ್ ಇಂದ ಆಡಂಭಿಸಿದರೆ. ಬಾಂಗ್ಲಾದೇಶದ ವಿರುದ್ಧ ಮೊದಲ ಓವರ್‌ನಲ್ಲಿ ಕೇವಲ ಒಂದು ರನ್ ಗಳಿಸಿದರು.

ಭಾರತ ತಂಡದ ಪವರ್‌ಪ್ಲೇ ಓವರ್‌ಗಳಲ್ಲಿ ಬಾಂಗ್ಲಾದೇಶದ ವಿರುದ್ಧ ಬಂದ 46 ರನ್‌ಗಳನ್ನು ಗಳಿಸಿದ್ದು ಅತ್ಯಧಿಕ ಸ್ಕೋರ್ ಆಗಿದೆ. ಇಂಗ್ಲೆಂಡ್‌ನ ಬಲಿಷ್ಠ ಬ್ಯಾಟಿಂಗ್ ಲೈನ್‌ಅಪ್ ಅನ್ನು ಗಮನಿಸಿದರೆ ಅವರು ಮೊದಲ ಆರು ಓವರ್ ಅಧಿಕ ರನ್ ಗಳಿಸುವ ಸಾಮರ್ಥ್ಯ ಹೊಂದಿದ್ದಾರೆ.

ಇಂಗ್ಲೆಂಡ್ ವಿರುದ್ಧ ಆಕ್ರಮಣಕಾರಿಯಾಗಿ ಆಡಬೇಕು

ಇಂಗ್ಲೆಂಡ್ ವಿರುದ್ಧ ಆಕ್ರಮಣಕಾರಿಯಾಗಿ ಆಡಬೇಕು

ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಗೆಲುವು ಸಾಧಿಸಬೇಕಾದರೆ ಟೀಂ ಇಂಡಿಯಾ ಆಕ್ರಮಣಕಾರಿ ಆಟಕ್ಕೆ ಮುಂದಾಗಬೇಕು ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ. ಭಾರತ ಇದುವರೆಗೂ ಪವರ್ ಪ್ಲೇಯಲ್ಲಿ ರಕ್ಷಣಾತ್ಮಕವಾಗಿ ಆಡಿದೆ, ಆದರೆ ಇಂಗ್ಲೆಂಡ್ ವಿರುದ್ಧ ಈ ತಂತ್ರ ಸಹಕಾರಿಯಾಗುವುದಿಲ್ಲ ಎಂದು ಹೇಳಿದ್ದಾರೆ.

ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ಇದುವರೆಗೂ ಬ್ಯಾಟಿಂಗ್‌ನಲ್ಲಿ ಹೇಳಿಕೊಳ್ಳುವಂತ ಪ್ರದರ್ಶನ ನೀಡಿಲ್ಲದ ಕಾರಣ, ರೋಹಿತ್ ಶರ್ಮಾ ಆರಂಭದಲ್ಲಿ ಜವಾಬ್ದಾರಿ ತೆಗೆದುಕೊಂಡು ರನ್ ಗಳಿಸಬೇಕು ಎಂದು ಅಭಿಪ್ರಾಯಪಟ್ಟರು.

ಬ್ಯಾಟಿಂಗ್‌ನಲ್ಲಿ ವಿಫಲರಾಗಿರುವ ರೋಹಿತ್

ಬ್ಯಾಟಿಂಗ್‌ನಲ್ಲಿ ವಿಫಲರಾಗಿರುವ ರೋಹಿತ್

ವಿರಾಟ್ ಕೊಹ್ಲಿ ವೇಗವಾಗಿ ಆಡುವ ಮುನ್ನ ನಿಧಾನವಾಗಿ ರನ್ ಗಳಿಸುತ್ತಾರೆ. ಆದ್ದರಿಂದ, ರೋಹಿತ್ ಶರ್ಮಾ ಆರಂಭದಲ್ಲಿ ವೇಗವಾಗಿ ರನ್ ಗಳಿಸಲು ನೋಡಬೇಕು ಎಂದು ಅವರು ಹೇಳಿದರು.

ನಾವು ಟೆಂಬಾ ಬವುಮಾ ಅಥವಾ ಆರನ್ ಫಿಂಚ್ ಬಗ್ಗೆ ಹೇಳುತ್ತೇವೆ. ಆದರೆ, ರೋಹಿತ್ ಶರ್ಮಾ ಅವರ ಫಾರ್ಮ್ ಕೊರತೆಯನ್ನು ಬಗ್ಗೆಯೂ ಮಾತನಾಡಬೇಕಿದೆ. ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.

ರೋಹಿತ್ ಶರ್ಮಾ ಟೂರ್ನಿಯಲ್ಲಿ ಇದುವರೆಗೆ ಐದು ಪಂದ್ಯಗಳಲ್ಲಿ 89 ರನ್ ಕಲೆಹಾಕಿದ್ದಾರೆ. ಅವರು ನೆದರ್ಲ್ಯಾಂಡ್ಸ್ ವಿರುದ್ಧ 53 ರನ್ ರನ್ ಹೊಡೆದದ್ದು ಬಿಟ್ಟರೆ ಉಳಿದ ಪಂದ್ಯಗಳಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದರು.

Story first published: Tuesday, November 8, 2022, 22:25 [IST]
Other articles published on Nov 8, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X