ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾ ಪ್ರವಾಸಕ್ಕೆ ಸದ್ಯದಲ್ಲೇ ಟೀಮ್ ಇಂಡಿಯಾ ಆಟಗಾರರ ಆಯ್ಕೆ

India Squad For Australia Tour To Be Announced This Week

ಐಪಿಎಲ್ ಮುಗಿದ ಬಳಿಕ ನಡೆಯಲಿರುವ ಭಾರತ-ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್‌ ಸರಣಿಗೆ ಇದೇ ವಾರದಲ್ಲಿ ಟೀಮ್ ಇಂಡಿಯಾ ಆಟಗಾರರ ಆಯ್ಕೆ ನಡೆಯಲಿದೆ ಎನ್ನಲಾಗಿದೆ.

ಹಿರಿಯ ಆಟಗಾರರ ಆಯ್ಕೆ ಸಮಿತಿ ಅಧ್ಯಕ್ಷ ಸುನಿಲ್ ಜೋಶಿ ನೇತೃತ್ವದ ರಾಷ್ಟ್ರೀಯ ಆಯ್ಕೆ ಮಂಡಳಿಯು ಈ ವಾರ ಸಭೆ ಸೇರಲಿದ್ದು ನಿರೀಕ್ಷಿತ ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ತಂಡವನ್ನು ಆಯ್ಕೆ ಮಾಡಲು ಸಜ್ಜಾಗಿದೆ.

ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ ಸಿಇಒ ''ಅಜ್ಞಾನಿ'' ಎಂದು ಕರೆದ ಬಿಸಿಸಿಐಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ ಸಿಇಒ ''ಅಜ್ಞಾನಿ'' ಎಂದು ಕರೆದ ಬಿಸಿಸಿಐ

ಭಾರತದ ಹಿರಿಯ ವೇಗದ ಬೌಲರ್‌ಗಳಾದ ಇಶಾಂತ್ ಶರ್ಮಾ ಮತ್ತು ಭುವನೇಶ್ವರ್ ಕುಮಾರ್ ಅವರು ಗಾಯಗೊಂಡು ಈಗಾಗಲೇ ಐಪಿಎಲ್ 2020 ರಿಂದ ಹೊರಗುಳಿದಿದ್ದಾರೆ. ಹೀಗಾಗಿ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಅವರು ಮೂರು ಫಾರ್ಮ್ಯಾಟ್‌ನಲ್ಲಿ ಸ್ಥಾನ ಪಡೆಯಲಿದ್ದಾರೆ. ಪಿಟಿಐ ವರದಿಯ ಪ್ರಕಾರ - ಮೊಹಮ್ಮದ್ ಸಿರಾಜ್ ಮತ್ತು ಶಾರ್ದುಲ್ ಠಾಕೂರ್ ಐದನೇ ವೇಗದ ಬೌಲರ್‌ ಸ್ಥಾನಕ್ಕಾಗಿ ಪೈಪೋಟಿ ನಡೆಸಲಿದ್ದಾರೆ.

ಪ್ರಸ್ತುತ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಉತ್ತಮ ಪ್ರದರ್ಶನ ತೋರುತ್ತಿರುವ ಸ್ಪಿನ್ನರ್ ಆಕ್ಸಾರ್ ಪಟೇಲ್ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವೈಟ್-ಬಾಲ್ ಸರಣಿಯು ನಾಲ್ಕು ಟೆಸ್ಟ್ ಸರಣಿಗೆ ಮುಂಚಿತವಾಗಿರಬಹುದು ಎಂದು ಆಸ್ಟ್ರೇಲಿಯಾ ವರದಿ ಮಾಡಿದೆ. ಟೆಸ್ಟ್ ಸರಣಿಗೆ ಅಂತಿಮವಾದ ನಾಲ್ಕು ಸ್ಥಳಗಳನ್ನು ವರದಿಯು ದೃಢಪಡಿಸಿದೆ.

"ನಾಲ್ಕು ಟೆಸ್ಟ್ ಸರಣಿಯ ಮೊದಲು ಈ ನಿಗದಿತ ಓವರ್‌ಗಳ ಕ್ರಿಕೆಟ್‌ನೊಂದಿಗೆ ಪ್ರವಾಸ ಪ್ರಾರಂಭವಾಗಲಿದೆ, ಈ ಹಂತವು ಮುಗಿದ ಬಳಿಕ ಅಡಿಲೇಡ್‌ನಲ್ಲಿ ಡಿಸೆಂಬರ್ 17-21 ರಂದು ಪ್ರಾರಂಭವಾಗುತ್ತದೆ. ಇತರ ಸ್ಥಳಗಳಲ್ಲಿ ಮೆಲ್ಬೋರ್ನ್ (ಡಿಸೆಂಬರ್ 26-30), ಸಿಡ್ನಿ (ಜನವರಿ 7-11) ಮತ್ತು ಬ್ರಿಸ್ಬೇನ್ (ಜನವರಿ 15-19) ಟೆಸ್ಟ್ ಪಂದ್ಯಗಳು ಸೇರಿವೆ "ಎಂದು ವರದಿ ತಿಳಿಸಿದೆ.

Story first published: Wednesday, October 21, 2020, 10:31 [IST]
Other articles published on Oct 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X