ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದಕ್ಷಿಣ ಆಪ್ರಿಕಾ ಪ್ರವಾಸಕ್ಕೂ ಟೀಮ್ ಇಂಡಿಯಾದ ಪ್ರಮುಖ ಆಟಗಾರನಿಗೆ ಸ್ಥಾನ ಅನುಮಾನ

India tour of south Africa: All-Rounder Hardik Pandya doubtful for series against South Africa

ಭಾರತ ತಂಡದ ಪ್ರಮುಖ ಆಟಗಾರನಾಗಿರುವ ಹಾರ್ದಿಕ್ ಪಾಂಡ್ಯ ಟಿ20 ವಿಶ್ವಕಪ್‌ನಲ್ಲಿ ಬೌಲಿಂಗ್ ನಡೆಸಲು ಅಸಮರ್ಥನಾಗಿದ್ದರೂ ಆಯ್ಕೆ ಮಾಡಿದ ಬಗ್ಗೆ ಸಾಕಷ್ಟು ಟೀಕೆಗಳು ಎದುರಾಗಿತ್ತು. ಆದರೆ ನಂತರ ನ್ಯೂಜಿಲೆಂಡ್ ವಿರುದ್ಧದ ಸರಣಿಯಿಂದ ಹಾರ್ದಿಕ್ ಪಾಂಡ್ಯ ಅವರನ್ನು ಕೈಬಿಡುವ ಮೂಲಕ ಪ್ರಮುಖ ನಿರ್ಧಾರವೊಂದನ್ನು ತೆಗೆದುಕೊಳ್ಳಲಾಯಿತು. ಇದೀಗ ಹಾರ್ದಿಕ್ ಪಾಂಡ್ಯ ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಟೀಮ್ ಇಂಡಿಯಾ ಬಳಗಕ್ಕೆ ಆಯ್ಕೆಯಾಗುವುದು ಅನುಮಾನವಾಗಿದೆ.

ಮೂಲಗಳ ಮಾಹಿತಿಯ ಪ್ರಕಾರ ವಿರಾಮದ ಬಳಿಕ ಹಾರ್ದಿಕ್ ಪಾಂಡ್ಯ ಅವರನ್ನು ಎನ್‌ಸಿಎಗೆ ಹಾಜರಾಗಲು ಸೂಚಿಸಲಾಗಿದೆ. ಅಲ್ಲಿ ಹಾರ್ದಿಕ್ ಪಾಂಡ್ಯ ತಮ್ಮ ಫಿಟ್‌ನೆಸ್ ಸಾಬೀತುಪಡಿಸಬೇಕಿದೆ. ಇದರ ಆಧಾರದಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಆಯ್ಕೆ ಮಾಡುವ ಸಾಧ್ಯತೆಯಿದೆ. ಇದು ಹಾರ್ದಿಕ್ ಪಾಂಡ್ಯ ಅವರ ಕ್ರಿಕೆಟ್ ಭವಿಷ್ಯದ ಬಗ್ಗೆಯೂ ಪ್ರಶ್ನೆಗಳುಂಟು ಮಾಡುತ್ತಿದೆ.

SMAT 2021: ಫೈನಲ್‌ಗೆ ಲಗ್ಗೆಯಿಟ್ಟ ಕರ್ನಾಟಕ, ತಮಿಳುನಾಡು ವಿರುದ್ಧ ಅಂತಿಮ ಫೈಟ್SMAT 2021: ಫೈನಲ್‌ಗೆ ಲಗ್ಗೆಯಿಟ್ಟ ಕರ್ನಾಟಕ, ತಮಿಳುನಾಡು ವಿರುದ್ಧ ಅಂತಿಮ ಫೈಟ್

ಈ ಬಗ್ಗೆ ಬಿಸಿಸಿಐ ಮೂಲಗಳ ವರದಿಯ ಆಧಾರದಲ್ಲಿ ಇನ್‌ಸೈಡ್ ಸ್ಪೋರ್ಟ್ ವರದಿ ಮಾಡಿದೆ. "ಹಾರ್ದಿಕ್ ಪಾಂಡ್ಯ ಅವರ ಚೇತರಿಕೆ ವಿಶ್ರಾಂತಿಯನ್ನು ಆಧರಿಸಿರುತ್ತದೆ. ಆತ ಶೀಘ್ರವಾಗಿ ಎನ್‌ಸಿಎಗೆ ತೆರಳಬೇಕಿದೆ. ಆತನ ಫಿಟ್‌ನೆಸ್ ಸರದಿಯ ಆಧಾರದಲ್ಲಿ ನಾವು ಆತನನ್ನು ಮುಂದಿನ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಆಯ್ಕೆ ಮಾಡಬೇಕೋ ಬೇಡವೋ ಎಂಬ ಬಗ್ಗೆ ನಿರ್ಧಾರವನ್ನು ಕೈಗೊಳ್ಳಲಿದ್ದೇವೆ" ಎಂದಿದ್ದಾರೆ. ಹೀಗಾಗಿ ಹಾರ್ದಿಕ್ ಪಾಂಡ್ಯ ಮುಂದಿನ ಪ್ರವಾಸಕ್ಕೆ ಬಹುತೇಕ ಅನುಮಾನ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ RCBಯ ಪ್ರೀತಿಯ ಎಬಿಡಿ: 10 ವಿಶೇಷ ದಾಖಲೆಗಳು ಇಲ್ಲಿವೆಕ್ರಿಕೆಟ್‌ಗೆ ಗುಡ್‌ಬೈ ಹೇಳಿದ RCBಯ ಪ್ರೀತಿಯ ಎಬಿಡಿ: 10 ವಿಶೇಷ ದಾಖಲೆಗಳು ಇಲ್ಲಿವೆ

ಟೀಮ್ ಇಂಡಿಯಾದ ಪ್ರಮುಖ ಆಲ್‌ರೌಂಡರ್ ಆಗಿರುವ ಹಾರ್ದಿಕ್ ಪಾಂಡ್ಯ ಫಿಟ್‌ನೆಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಪರವಾಗಿ ಎಲ್ಲಾ ಪಂದ್ಯಗಳಲ್ಲಿ ಆಡಿದ್ದರೂ ಪಾಂಡ್ಯ ಯಶಸ್ಸು ಕಾಣಲಿಲ್ಲ. ಟಿ20 ವಿಶ್ವಕಪ್‌ನಲ್ಲಿ ಹಾರ್ದಿಕ್ ಪಾಂಡ್ಯ ಅವರ ಕಳಪೆ ಫಾರ್ಮ್ ಕೂಡ ಭಾರತದ ವೈಫಲ್ಯಕ್ಕೆ ಕಾರಣ ಎನ್ನಲಾಗುತ್ತಿದೆ. ಹೀಗಾಗಿ ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಹಾರ್ದಿಕ್ ಪಾಂಡ್ಯ ಅವರನ್ನು ಕೈಬಿಡಲಾಗಿದ್ದು ಫಿಟ್‌ನೆಸ್ ಮರಳಿ ಗಳಿಸಲು ಸೂಚಿಸಲಾಗಿದೆ.

ಭಾರತ-ನ್ಯೂಜಿಲೆಂಡ್ ಅಂತಿಮ ಟಿ20 ಪಂದ್ಯ: ಸಂಭಾವ್ಯ ಪ್ಲೇಯಿಂಗ್ 11, ಹವಾಮಾನ, ಪಿಚ್‌ ರಿಪೋರ್ಟ್ಭಾರತ-ನ್ಯೂಜಿಲೆಂಡ್ ಅಂತಿಮ ಟಿ20 ಪಂದ್ಯ: ಸಂಭಾವ್ಯ ಪ್ಲೇಯಿಂಗ್ 11, ಹವಾಮಾನ, ಪಿಚ್‌ ರಿಪೋರ್ಟ್

ಹಾಗಿದ್ದರೂ ಭಾರತೀಯ ಕ್ರಿಕೆಟ್ ತ,ಡದ ಆಯ್ಕೆ ಸಮಿತಿ, ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ಹಾಗೂ ತಮಡದ ನೂತನ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯಗೆ ಸಂಪೂರ್ಣ ಬಾಗಿಲು ಮುಚ್ಚಲು ಬಯಸುತ್ತಿಲ್ಲ. ಅವರನ್ನು ಭಾರತದ ಅತ್ಯುತ್ತಮ ಆಲ್‌ರೌಂಡರ್ ಎಂದೇ ಪರಿಗಣಿಸಲಾಗಿದೆ. ಹೀಗಾಗಿ ಸಂಪೂರ್ಣ ಚೇತರಿಕೆಗೆ ಸಮಯಾವಕಾಶ ನೀಡಲಾಗಿದ್ದು ಎನ್‌ಸಿಎಗೆ ತೆರಳಿ ಚೇತರಿಸಿಕೊಳ್ಳಲು ಸೂಚಿಸಲಾಗಿದೆ. ದಕ್ಷಿಣ ಆಪ್ರಿಕಾ ಸರಣಿಗೂ ಮುನ್ನವೇ ಹಾರ್ದಿಕ್ ಪಾಂಡ್ಯ ಫಿಟ್‌ನೆಸ್ ಪರೀಕ್ಷೆಯಲ್ಲಿ ತೇರ್ಗಡೆಯಾದರೆ ದಕ್ಷಿಣ ಆಫ್ರಿಕಾ ವಿರುದ್ಧಧ ಸೀಮಿತ ಓವರ್‌ಗಳ ಸರಣಿಯಲ್ಲಿ ಭಾಗಿಯಾಗುವ ಸಾಧ್ಯತೆಯಿದೆ. ಟೆಸ್ಟ್ ಸರಣಿಗೆ ಸದ್ಯ ಅವರನ್ನು ಪರಿಗಣಿಸಲಾಗುತ್ತಿಲ್ಲ.

ನಾನು ಯಾವಾಗಲೂ ನಿಮ್ಮ ನಂ.1 ಫ್ಯಾನ್: ABD ನಿವೃತ್ತಿ ಸುದ್ದಿ ಕೇಳಿ ತೀವ್ರ ನೊಂದುಕೊಂಡ ವಿರಾಟ್ ಕೊಹ್ಲಿನಾನು ಯಾವಾಗಲೂ ನಿಮ್ಮ ನಂ.1 ಫ್ಯಾನ್: ABD ನಿವೃತ್ತಿ ಸುದ್ದಿ ಕೇಳಿ ತೀವ್ರ ನೊಂದುಕೊಂಡ ವಿರಾಟ್ ಕೊಹ್ಲಿ

"ಈ ಸಂದರ್ಭದಲ್ಲಿ ಅವರು ಟೆಸ್ಟ್ ಕ್ರಿಕೆಟ್‌ಗೆ ಬೇಕಾದ ಫಿಟ್‌ನೆಸ್‌ನ ಸನಿಹದಲ್ಲಿ ಇಲ್ಲ. ಆತನಿಗೆ ಕಾಲಾವಕಾಶ ಬೇಕಿದೆ. ನಾವು ಟಿ20 ವಿಶ್ವಕಪ್‌ನಲ್ಲಿ ಮಾಡಿದಂತೆ ಅವಸರಿಸಲು ಇಷ್ಟಪಡುವುದಿಲ್ಲ. ಆತ ಆಡಲು ಸಿದ್ಧವಾಗಿದ್ದರೆ ಟಿ20 ಹಾಗೂ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ" ಎಂದು ಬಿಸಿಸಿಐನ ಮೂಲಗಳು ಮಾಹಿತಿ ನೀಡಿದ್ದಾರೆ.

ರಾಹುಲ್ ದ್ರಾವಿಡ್ ಪಂದ್ಯ ಮುಗಿದಾದ ನಂತರ ಹೇಳಿದ್ದೇನು | Oneindia Kannada

Story first published: Monday, November 22, 2021, 10:11 [IST]
Other articles published on Nov 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X