ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೆಹ್ವಾಗ್ ಶೈಲೀಲಿ ಸಿಕ್ಸ್ ಚಚ್ಚಿ ದ್ವಿಶತಕ ಬಾರಿಸಿ ದಾಖಲೆಗಳ ಬರೆದ ಮಯಾಂಕ್!

IND vs BAN 1st test :Mayank reminded Sehwag to all of us when he reached 200 mark | Oneindia Kannada
India vs Bangladesh: Mayank Agarwal double ton deflates Bangladesh

ಇಂದೋರ್, ನವೆಂಬರ್ 15: ಮಯಾಂಕ್ ಅವರ್ಗಾಲ್ ಮತ್ತು ರೋಹಿತ್ ಶರ್ಮಾ ಅವರ ಬ್ಯಾಟಿಂಗ್ ಶೈಲಿಯನ್ನು ಗಮನಿಸಿದರೆ ಹೆಚ್ಚಿನ ಸಾರಿ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಗ್ವಾಗ್ ನೆನಪಾಗುತ್ತಿರುತ್ತಾರೆ. ಯಾಕೆಂದರೆ ಅರ್ಧ ಶತಕ, ಶತಕ, ದ್ವಿಶತಕ ಹೀಗೆ ಯಾವುದೇ ನಿರ್ದಿಷ್ಟ ರನ್ ಪೂರೈಸುವಾಗಲೂ ಸೆಹ್ವಾಗ್ ಸಿಕ್ಸ್‌ ಬಾರಿಸಿ ಆಟಕ್ಕೆ ಮೆರಗು ತರುತ್ತಿದ್ದರು.

ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅಂಗಣಕ್ಕಿಳಿದು ಇಂದಿಗೆ 30 ವರ್ಷ!ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅಂಗಣಕ್ಕಿಳಿದು ಇಂದಿಗೆ 30 ವರ್ಷ!

ಈಚಿನ ದಿನಗಳಲ್ಲಿ ರೋಹಿತ್ ಶರ್ಮಾ ಮತ್ತು ಮಯಾಂಕ್ ಅಗರ್ವಾಲ್ ಕೂಡ ಸೆಹ್ವಾಗ್ ರೀತಿಯ ದಿಟ್ಟ ಬ್ಯಾಟಿಂಗ್‌ಗಾಗಿ ಗಮನ ಸೆಳೆಯುತ್ತಿದ್ದಾರೆ. ಅದರಲ್ಲೂ ಶುಕ್ರವಾರ (ನವೆಂಬರ್ 15) ನಡೆದ ಭಾರತ vs ಬಾಂಗ್ಲಾ, ಮೊದಲನೇ ಟೆಸ್ಟ್‌ನಲ್ಲಿ ಮಯಾಂಕ್ ಸಿಕ್ಸ್‌ ಮೂಲಕ ದ್ವಿಶತಕ ಪೂರೈಸಿ ಅಕ್ಷರಶಃ ಸೆಹ್ವಾಗ್ ಬ್ಯಾಟಿಂಗ್ ಶೈಲಿಯನ್ನು ನೆನಪಿಸಿದರು.

ಐಪಿಎಲ್ 2020: ತಂಡ ಬಿಟ್ಟು ಮತ್ತೊಂದು ತಂಡ ಸೇರಿದ ಎಲ್ಲಾ ಆಟಗಾರ ಪಟ್ಟಿ!ಐಪಿಎಲ್ 2020: ತಂಡ ಬಿಟ್ಟು ಮತ್ತೊಂದು ತಂಡ ಸೇರಿದ ಎಲ್ಲಾ ಆಟಗಾರ ಪಟ್ಟಿ!

ವೀರೇಂದ್ರ ಸೆಹ್ವಾಗ್ ನನ್ನ ಪಾಲಿನ ಗುರು ಎನ್ನುತ್ತಿರುವ ಮಯಾಂಕ್, ವೀರೂ ಹಾದಿಯಲ್ಲೇ ಸಾಗುತ್ತಿರುವಂತಿದೆ. ಇಂದೋರ್ ಪಂದ್ಯದಲ್ಲಿ ದ್ವಿಶತಕ ಬಾರಿಸಿದ ಮಯಾಂಕ್ ಹಲವಾರು ದಾಖಲೆಗಳನ್ನೂ ನಿರ್ಮಿಸಿದ್ದಾರೆ.

ಮಯಾಂಕ್ ಭರ್ಜರಿ ಬ್ಯಾಟಿಂಗ್

ಮಯಾಂಕ್ ಭರ್ಜರಿ ಬ್ಯಾಟಿಂಗ್

ಶುಕ್ರವಾರ ಭಾರತದ ಮೊದಲ ಇನ್ನಿಂಗ್ಸ್‌ನ 107.3ನೇ ಓವರ್‌ನಲ್ಲಿ ಮೆಹಿದಿ ಹಸನ್ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದ ಮಯಾಂಕ್, 28 ಫೋರ್ಸ್ ಮತ್ತು 8 ಸಿಕ್ಸ್ ಸೇರಿ ಒಟ್ಟಿಗೆ 243 ರನ್ ಬಾರಿಸಿದ್ದರು. ಮಯಾಂಕ್ ಅಗರ್ವಾಲ್ 12 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ ಬಾರಿಸಿದ 2ನೇ ದ್ವಿಶತಕವಿದು. ಈ 12 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 3 ಶತಕ, 3 ಅರ್ಧ ಶತಕಗಳೂ ಸೇರಿವೆ.

ಡಾನ್ ಬ್ರಾಡ್ಮನ್ ದಾಖಲೆ ಬದಿಗೆ

ಡಾನ್ ಬ್ರಾಡ್ಮನ್ ದಾಖಲೆ ಬದಿಗೆ

ಅತೀ ಕಡಿಮೆ ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 2 ದ್ವಿಶತಕಗಳನ್ನು ಬಾರಿಸಿದ ದಾಖಲೆಗಾಗಿ ಮಯಾಂಕ್ ಅಗರ್ವಾಲ್, ಆಸ್ಟ್ರೇಲಿಯಾದ ಕ್ರಿಕೆಟ್ ದಂತಕತೆ ಡಾನ್ ಬ್ರಾಡ್‌ಮನ್ ದಾಖಲೆ ಮೀರಿಸಿದ್ದಾರೆ. ಈ ದಾಖಲೆ ಪಟ್ಟಿಯಲ್ಲಿ ಭಾರತದ ವಿನೋದ್ ಕಾಂಬ್ಳಿ (5 ಇನ್ನಿಂಗ್ಸ್), ಮಯಾಂಕ್ ಅಗರ್ವಾಲ್ (12 ಇನ್ನಿಂಗ್ಸ್), ಆಸ್ಟ್ರೇಲಯಾದ ಡಾನ್ ಬ್ರಾಡ್ಮನ್ (13 ಇನ್ನಿಂಗ್ಸ್), ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ (15 ಇನ್ನಿಂಗ್ಸ್), ಇಂಗ್ಲೆಂಡ್‌ನ ವಾಲಿ ಹ್ಯಾಮಂಡ್ ಮತ್ತು ವೆಸ್ಟ್ ಇಂಡೀಸ್‌ನ ಲಾರೆನ್ಸ್ ರೋವ್ (18 ಇನ್ನಿಂಗ್ಸ್) ಮೊದಲ ಐದು ಸ್ಥಾನಗಳಲ್ಲಿದ್ದಾರೆ.

ಆರಂಭಿಕರಾಗಿ ಅತ್ಯಧಿಕ ದ್ವಿಶತಕ ದಾಖಲೆ

ಆರಂಭಿಕರಾಗಿ ಅತ್ಯಧಿಕ ದ್ವಿಶತಕ ದಾಖಲೆ

ಟೆಸ್ಟ್ ಕ್ರಿಕೆಟ್‌ನಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಮೈದಾನಕ್ಕಿಳಿದು ಅತ್ಯಧಿಕ ದ್ವಿಶತಕಗಳನ್ನು ಬಾರಿಸಿದ ಭಾರತದ ಆಟಗಾರರಲ್ಲಿ ಮಯಾಂಕ್ ಈಗ 3ನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. ಈ ದಾಖಲೆ ಸಾಲಿನಲ್ಲಿ ಮೊದಲ ಸ್ಥಾನದಲ್ಲಿ ವೀರೇಂದ್ರ ಸೆಹ್ವಾಗ್ (6 ದ್ವಿಶತಕಗಳು), ದ್ವಿತೀಯ ಸ್ಥಾನದಲ್ಲಿ ಸುನಿಲ್ ಗವಾಸ್ಕರ್ (3 ದ್ವಿಶತಕಗಳು), 3ನೇ ಸ್ಥಾನದಲ್ಲಿ ವಿನೋದ್ ಮಂಕದ್/ವಾಸಿಮ್ ಜಾಫರ್/ಮಯಾಂಕ್ ಅಗರ್ವಾಲ್ (2 ದ್ವಿಶತಕಗಳು) ಇದ್ದಾರೆ.

ಒಂದೇ ದಿನದಲ್ಲಿ ಅತ್ಯಧಿಕ ರನ್

ಒಂದೇ ದಿನದಲ್ಲಿ ಅತ್ಯಧಿಕ ರನ್

ಟೆಸ್ಟ್ ಕ್ರಿಕೆಟ್‌ನಲ್ಲಿ ಒಂದೇ ದಿನದಾಟದಲ್ಲಿ ಅತ್ಯಧಿಕ ರನ್ ದಾಖಲಿಸಿದ ಭಾರತದ ಆಟಗಾರರಲ್ಲಿ ಮಯಾಂಕ್ 6ನೇ ಸ್ಥಾನ ಪಡೆದುಕೊಂಡಿದ್ದಾರೆ. ಇಲ್ಲಿ ವೀರೇಂದ್ರ ಸೆಹ್ವಾಗ್ (284 ರನ್, ಶ್ರೀಲಂಕಾ ವಿರುದ್ಧ-2009/10), ವೀರೇಂದ್ರ ಸೆಹ್ವಾಗ್ (257 ರನ್, ದಕ್ಷಿಣ ಆಫ್ರಿಕಾ ವಿರುದ್ಧ-2007/08), ಕರುಣ್ ನಾಯರ್ (232 ರನ್, ಇಂಗ್ಲೆಂಡ್ ವಿರುದ್ಧ-2016/17), ವೀರೇಂದ್ರ ಸೆಹ್ವಾಗ್ (228 ರನ್, ಪಾಕಿಸ್ತಾನ ವಿರುದ್ಧ-2003/04), ಎಂಎಸ್ ಧೋನಿ (206 ರನ್, ಆಸ್ಟ್ರೇಲಿಯಾ ವಿರುದ್ಧ-2012/13) ಆರಂಭಿಕ ಐದು ಸ್ಥಾನಗಳಲ್ಲಿದ್ದಾರೆ.

Story first published: Friday, November 15, 2019, 17:11 [IST]
Other articles published on Nov 15, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X