ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪ್ರತಿಭಟನೆಯ ಬೆದರಿಕೆ; ಭಾರತ vs ಬಾಂಗ್ಲಾದೇಶ ಏಕದಿನ ಪಂದ್ಯ ಢಾಕಾದಿಂದ ಸ್ಥಳಾಂತರ

India vs Bangladesh ODI Match Will Be Shifted From Dhaka To Chittagong After Protest Threat

ಭಾರತ ಮತ್ತು ಬಾಂಗ್ಲಾದೇಶ ನಡುವೆ ಏಕದಿನ ಪಂದ್ಯ ನಡೆಯುವ ದಿನವೇ ಬಾಂಗ್ಲಾದೇಶದಲ್ಲಿ ಪ್ರತಿಪಕ್ಷಗಳು ಪ್ರತಿಭಟನೆ ಹಮ್ಮಿಕೊಂಡಿದ್ದು, ಇದರಿಂದ ಪಂದ್ಯದ ಮೇಲೆ ಕರಿನೆರಳು ಬಿದ್ದಿದೆ.

ಬಾಂಗ್ಲಾದೇಶ ರಾಜಧಾನಿ ಢಾಕಾದಲ್ಲಿ ಡಿಸೆಂಬರ್ 10ರಂದು ಪ್ರತಿಭಟನೆಯನ್ನು ಘೋಷಿಸಿದ ನಂತರ, ಬಾಂಗ್ಲಾದೇಶದ ಕ್ರಿಕೆಟ್ ಮಂಡಳಿಯು ಭಾರತದ ವಿರುದ್ಧದ ಏಕದಿನ ಅಂತಾರಾಷ್ಟ್ರೀಯ ಪಂದ್ಯವನ್ನು ಢಾಕಾದಿಂದ ಸ್ಥಳಾಂತರಿಸಿದೆ.

ICC T20 Ranking: ವೃತ್ತಿಜೀವನದ ಅತ್ಯುತ್ತಮ ರೇಟಿಂಗ್ ಗಳಿಸಿದ ಸೂರ್ಯಕುಮಾರ್ ಯಾದವ್ICC T20 Ranking: ವೃತ್ತಿಜೀವನದ ಅತ್ಯುತ್ತಮ ರೇಟಿಂಗ್ ಗಳಿಸಿದ ಸೂರ್ಯಕುಮಾರ್ ಯಾದವ್

ಭಾರತ ಕ್ರಿಕೆಟ್ ತಂಡವು ಮುಂದಿನ ವಾರ 2015ರ ನಂತರ ಮೊದಲ ಬಾರಿಗೆ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿದ್ದು, ಡಿಸೆಂಬರ್ 4ರಿಂದ ಪ್ರಾರಂಭವಾಗುವ ದ್ವಿಪಕ್ಷೀಯ ಏಕದಿನ ಸರಣಿ ಪ್ರಾರಂಭವಾಗಲಿದೆ. ಎಲ್ಲಾ ಮೂರೂ ಪಂದ್ಯಗಳು ಢಾಕಾದಲ್ಲಿ ನಡೆಯಬೇಕಿತ್ತು.

ಡಿಸೆಂಬರ್ 10ರಂದು ನಡೆಯಲಿರುವ ಏಕದಿನ ಸರಣಿಯ ಮೂರನೇ ಪಂದ್ಯವನ್ನು ಇದೀಗ ಕರಾವಳಿ ನಗರಿ ಚಿತ್ತಗಾಂಗ್‌ಗೆ ಸ್ಥಳಾಂತರಿಸಲಾಗಿದೆ. ಇದು ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (ಬಿಎನ್‌ಪಿ) ಪ್ರತಿಭಟನಾ ಮೆರವಣಿಗೆಯಿಂದ ದೂರವಿದ್ದು, ಇದು ಸಾವಿರಾರು ಜನ ಢಾಕಾದಲ್ಲಿ ಬೀದಿಗಿಳಿಯುವ ನಿರೀಕ್ಷೆಯಿದೆ.

India vs Bangladesh ODI Match Will Be Shifted From Dhaka To Chittagong After Protest Threat

ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಅವರ ಸರ್ಕಾರಕ್ಕೆ ರಾಜೀನಾಮೆ ನೀಡುವಂತೆ ಬಿಎನ್‌ಪಿ ಕಳೆದ ತಿಂಗಳಿನಿಂದ ದೇಶಾದ್ಯಂತ ಹಲವಾರು ಬೃಹತ್ ಪ್ರತಿಭಟನೆಗಳನ್ನು ನಡೆಸಿದೆ.

"ಚಿತ್ತಗಾಂಗ್‌ನಲ್ಲಿ ಮೊದಲು ಒಂದು ಟೆಸ್ಟ್ ಪಂದ್ಯಕ್ಕೆ ಮಾತ್ರ ಆತಿಥ್ಯ ವಹಿಸಬೇಕಿತ್ತು. ಇದೀಗ ಇದೇ ಸ್ಥಳದಲ್ಲಿ ಒಂದು ಏಕದಿನ ಪಂದ್ಯವನ್ನು ನಡೆಸಲಾಗುತ್ತದೆ," ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಕಾರ್ಯಾಚರಣೆ ಮುಖ್ಯಸ್ಥ ಜಲಾಲ್ ಯೂನಸ್ ತಿಳಿಸಿದ್ದಾರೆ.

ಪ್ರತಿಭಟನೆಯಿಂದ ತಡವಾಗಿ ಪಂದ್ಯದ ಸ್ಥಳ ಬದಲಾವಣೆಗೆ ಕಾರಣವಾಯಿತು ಎಂಬುದರ ಕುರಿತು ಪ್ರತಿಕ್ರಿಯಿಸಲು ಜಲಾಲ್ ಯೂನಸ್ ನಿರಾಕರಿಸಿದರು. ಆದರೆ ಪ್ರತಿಭಟನಾ ಬಿಸಿಯನ್ನು ತಪ್ಪಿಸಲು ಮಂಡಳಿಯು ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಬಿಸಿಬಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಬಾಂಗ್ಲಾದೇಶವು ಏಕದಿನ ಸರಣಿ ನಂತರ ಡಿಸೆಂಬರ್ 14ರಿಂದ 18ರವರೆಗೆ ಚಿತ್ತಗಾಂಗ್‌ನಲ್ಲಿ ಮತ್ತು ಡಿಸೆಂಬರ್ 22ರಿಂದ 26ರವರೆಗೆ ಢಾಕಾದಲ್ಲಿ ಎರಡು ಟೆಸ್ಟ್‌ಗಳಿಗೆ ಭಾರತಕ್ಕೆ ಆತಿಥ್ಯ ವಹಿಸಲಿದೆ.

Story first published: Wednesday, November 23, 2022, 19:22 [IST]
Other articles published on Nov 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X