ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2ನೇ ODI: ಆಂಗ್ಲರ ಎದುರು ಭಾರತಕ್ಕೆ 86 ರನ್ ಹೀನಾಯ ಸೋಲು

By Mahesh
 India Vs England, 2nd ODI, Live Cricket Updates: Team India look to claim series at Lords

ಲಂಡನ್, ಜುಲೈ 14: ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ಎರಡನೇ ಏಕದಿನ ಪಂದ್ಯದಲ್ಲಿ ಆಂಗ್ಲರ ವಿರುದ್ಧ ರನ್ 86 ಸೋಲು ಕಂಡಿದೆ. ಇಂಗ್ಲೆಂಡ್ ಆಟಗಾರರ ಎಚ್ಚರಿಕೆಯ ಆಟ ಮತ್ತು ಭಾರತೀಯ ಬ್ಯಾಟ್ಸ್ಮನ್ ಗಳ ಬೇಜಾವಾಬ್ದಾರಿಯ ಆಟ ಟೀಮ್ ಇಂಡಿಯಾಕ್ಕೆ ಸೋಲಿನ ಬೆಲೆ ಕೇಳಿತು.

ಜೋ ರೂಟ್ (ಅಜೇಯ 113/116) ಮತ್ತು ನಾಯಕ ಇಯಾನ್ ಮಾರ್ಗನ್ (53/51) ಭರ್ಜರಿ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ 50 ಓವರ್ ಮುಕ್ತಾಯಕ್ಕೆ 7 ವಿಕೆಟ್ ಕಳೆದು 322 ರನ್ ಪೇರಿಸಿ ಭಾರತಕ್ಕೆ ಗರಿಷ್ಠ 323 ರನ್ ಗುರಿ ನೀಡಿತ್ತು.

ಲಾರ್ಡ್ಸ್ ಅಂಗಳದಲ್ಲಿ ಆಡಿರುವ ಕಳೆದ ಆರು ಏಕದಿನ ಪಂದ್ಯಗಳಲ್ಲಿ ಒಂದು ಪಂದ್ಯ ಮಾತ್ರ ಭಾರತ ಸೋತಿದೆ. ನಾಲ್ಕು ಗೆಲುವು ಹಾಗೂ ಒಂದು ಪಂದ್ಯ ಟೈ ಮಾಡಿಕೊಂಡಿದೆ.

ಭಾರತ- ಇಂಗ್ಲೆಂಡ್ 2ನೇ ಏಕದಿನ ಪಂದ್ಯ: ಭಾರತ ಗೆದ್ದರೆ ಸರಣಿ ಕೈವಶ

ಕಳೆದ ಪಂದ್ಯದಲ್ಲಿ ಭಾರತದ ಚೈನಾಮನ್ ಕುಲದೀಪ್ ಯಾದವ್ ಅವರು 6/25 ಗಳಿಸಿ, ಇಂಗ್ಲೆಂಡ್ ಬ್ಯಾಟಿಂಗ್ ನ ಬೆನ್ನೆಲುಬು ಮುರಿದಿದ್ದರು. ಇಂಗ್ಲೆಂಡ್ ಉತ್ತಮ ಆರಂಭ ಪಡೆದುಕೊಳ್ಳುತ್ತಿದ್ದರೂ ಮಧ್ಯಮ ಕ್ರಮಾಂಕದಲ್ಲಿ ಸ್ಥಿರ ಪ್ರದರ್ಶನ ನೀಡಲು ಆಗುತ್ತಿಲ್ಲ.

1
42372

ಇನ್ನೊಂದೆಡೆ ಭಾರತದ ಬ್ಯಾಟಿಂಗ್ ಸದೃಢವಾಗಿದ್ದು, ರೋಹಿತ್ ಶರ್ಮ ಅವರು ಭರ್ಜರಿ ಶತಕ ಸಿಡಿಸಿ ಲಯದಲ್ಲಿದ್ದಾರೆ.

ಲಾರ್ಡ್ಸ್ ಅಂಗಳದ ಪಿಚ್ ಕೂಡ ಮ್ಯಾಂಚೆಸ್ಟರ್‌ನಲ್ಲಿದ್ದ ಪಿಚ್‌ನಂತೆಯೇ ಇರಲಿದೆ. ಮ್ಯಾಂಚೆಸ್ಟರ್‌ ಟಿ20 ಪಂದ್ಯದಲ್ಲಿ ಒಣ ಪಿಚ್‌ನಲ್ಲಿ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ಕುಲದೀಪ್ ಮಣಿಕಟ್ಟಿನ ಸ್ಪಿನ್ ದಾಳಿಗೆ ಕಂಗೆಟ್ಟಿದ್ದರು.

ಕೇವಲ ಒಂದು ದಿನದ ಅಂತರದಲ್ಲಿ ಎರಡನೆಯ ಪಂದ್ಯ ನಡೆಯುತ್ತಿರುವುದರಿಂದ ಇಂಗ್ಲೆಂಡ್ ತಂಡಕ್ಕೆ ಕುಲದೀಪ್ ಅವರನ್ನು ಎದುರಿಸಲು ಮೆರ್ಲಿನ್ ಸ್ಪಿನ್ ಬೌಲಿಂಗ್ ಯಂತ್ರದ ನೆರವು ಪಡೆದುಕೊಳ್ಳಲು ಸಾಧ್ಯವಾಗಿಲ್ಲ.

Jul 14, 2018, 11:02 pm IST

45ನೇ ಓವರ್ ಮುಕ್ತಾಯಕ್ಕೆ ಭಾರತ ಒಟ್ಟು 7 ವಿಕೆಟ್ ಕಳೆದು 213ರನ್ ಪೇರಿಸಿ ಆಂಗ್ಲರೆದುರು ಸೋಲಿನ ಭೀತಿಯಲ್ಲಿದೆ. ಎಂಎಸ್ ಧೋನಿ, ಕುಲದೀಪ್ ಕ್ರೀಸ್ ನಲ್ಲಿದ್ದಾರೆ.

Jul 14, 2018, 8:46 pm IST

ಚೇಸಿಂಗ್ ಗೆ ಇಳಿದಿರುವ ಭಾರತ 12 ಓವರ್ ಗೆ 3 ವಿಕೆಟ್ ಕಳೆದು 65 ರನ್ ಪೇರಿಸಿತು. ರೋಹಿತ್ ಶರ್ಮಾ 15, ಶಿಖರ್ ಧವನ್ 36, ಕೆಎಲ್ ರಾಹುಲ್ 0 ರನ್ ಬಾರಿಸಿ ಔಟಾಗಿದ್ದಾರೆ. ಕೊಹ್ಲಿ, ರೈನಾ ಕ್ರೀಸ್ ನಲ್ಲಿದ್ದಾರೆ.

Jul 14, 2018, 6:14 pm IST

36.3 ಓವರ್ ಗಳಲ್ಲಿ ಇಂಗ್ಲೆಂಡ್ ಸ್ಕೋರ್ 214/5, ಬಟ್ಲರ್ 4ರನ್ ಗಳಿಸಿ, ಉಮೇಶ್ ಯಾದವ್ ಗೆ ವಿಕೆಟ್ ಒಪ್ಪಿಸಿದರು.

Jul 14, 2018, 6:14 pm IST

35.1 ಓವರ್ ಗಳಲ್ಲಿ ಇಂಗ್ಲೆಂಡ್ ಸ್ಕೋರ್ 208/4, ಉತ್ತಮವಾಗಿ ಆಡುತ್ತಿರುವ ರೂಟ್ 68.

Jul 14, 2018, 5:53 pm IST

ಕುಲದೀಪ್ ಗೆ ಮತ್ತೊಂದು ವಿಕೆಟ್, ನಾಯಕ ಮಾರ್ಗನ್ 53 ರನ್ ಗಳಿಸಿ ಔಟ್

Jul 14, 2018, 5:52 pm IST

32.5 ಓವರ್ ಗಳಲ್ಲಿ 200ರನ್ ಪೂರೈಸಿದ ಇಂಗ್ಲೆಂಡ್, 33 ಓವರ್ ಗಳ ನಂತರ 200/3

Jul 14, 2018, 5:50 pm IST

ಇಂಗ್ಲೆಂಡ್ ಟೆಸ್ಟ್ ನಾಯಕ ಜೋ ರೂಟ್ ಅರ್ಧ ಶತಕ ಬಾರಿಸಿದ್ದಾರೆ , 29 ಓವರ್ ಗಳ ನಂತರ 181/2

Jul 14, 2018, 5:48 pm IST

25 ಓವರ್ ಗಳ ನಂತರ ಇಂಗ್ಲೆಂಡ್ 152/2, ಇಯಾನ್ ಮಾರ್ಗನ್ 29(32). ರೂಟ್ 41(46)

Jul 14, 2018, 4:18 pm IST

10 ಓವರ್ ಗಳ ನಂತರ ಇಂಗ್ಲೆಂಡ್ ತಂಡದ ಸ್ಕೋರ್ 69/0, ಜಾಸನ್ ರಾಯ್ 32, ಜೈ ಬೈರ್ಸ್ಟೋ 38

Jul 14, 2018, 4:05 pm IST

7.2 ಓವರ್ ಗಳಲ್ಲಿ 50ರನ್ ಪೂರೈಸಿದ ಇಂಗ್ಲೆಂಡ್, ರಾಯ್ 22, ಬೈರ್ಸ್ಟೋ 30

Jul 14, 2018, 3:52 pm IST

ಮೊದಲ 5 ಓವರ್ ಗಳ ನಂತರ ಇಂಗ್ಲೆಂಡ್ ಸ್ಕೋರ್ 27/0 ಜಾಸನ್ ರಾಯ್ 7 , ಜಾನಿ ಬೈರ್ಸೋ 20

Jul 14, 2018, 3:38 pm IST

ಉಮೇಶ್ ಯಾದವ್ ಹಾಗೂ ಸಿದ್ದಾರ್ಥ್ ಕೌಲ್ ಅವರಿಂದ ಓಪನಿಂಗ್ ಸ್ಪೆಲ್, ಜಾಸನ್ ರಾಯ್ ಜತೆ ಜಾನಿ ಬೈರ್ಸ್ಟೋ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ

Jul 14, 2018, 3:28 pm IST

ಭಾರತ ಆಡುವ XI : ರೋಹಿತ್ ಶರ್ಮ, ಶಿಖರ್ ಧವನ್, ವಿರಾಟ್ ಕೊಹ್ಲಿ (ನಾಯಕ), ಲೋಕೇಶ್ ರಾಹುಲ್, ಸುರೇಶ್ ರೈನಾ, ಎಂಎಸ್ ಧೋನಿ(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಉಮೇಶ್ ಯಾದವ್, ಸಿದ್ದಾರ್ಥ್ ಕೌಲ್, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್

Jul 14, 2018, 3:25 pm IST

ಇಂಗ್ಲೆಂಡ್ ಹಾಗೂ ವೇಲ್ಸ್ ನೆಲದಲ್ಲಿ 37ನೇ ಏಕದಿನ ಪಂದ್ಯದ ಗೆಲುವಿಗಾಗಿ ಭಾರತ ಹೋರಾಟ ನಡೆಸಲಿದೆ.

Jul 14, 2018, 3:25 pm IST

ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ಅವರು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಇಂಗ್ಲೆಂಡ್ ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ.

Jul 14, 2018, 3:23 pm IST

2016ರಲ್ಲಿ ಆಸ್ಟ್ರೇಲಿಯಾ ಪ್ರವಾಸದ ಬಳಿಕ ಸತತವಾಗಿ 9 ದ್ವಿರಾಷ್ಟ್ರೀಯ ಸರಣಿಗಳನ್ನು ಗೆದ್ದಿರುವ ಭಾರತ ಹತ್ತನೇ ಸರಣಿ ಮೇಲೆ ಕಣ್ಣಿಟ್ಟಿದೆ. 2017ರಲ್ಲಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಮಾತ್ರ ಟ್ರೋಫಿಯನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಭಾರತ ಎಡವಿದ್ದು.

Jul 14, 2018, 3:23 pm IST

ಪಕ್ಕೆಲುಬು ನೋವಿನಿಂದ ಬಳಲುತ್ತಿರುವ ಅಲೆಕ್ಸ್ ಹೇಲ್ಸ್, ಸರಣಿಯಿಂದ ಹೊರಗೆ ಹೋಗುವಂತಾಗಿದೆ. ಅವರ ಬದಲು ತಂಡವನ್ನು ಸೇರಿಕೊಂಡಿದ್ದ ಡೇವಿಡ್ ಮಲನ್ ಮುಂದಿನ ಎರಡೂ ಪಂದ್ಯಗಳಲ್ಲಿ ತಂಡದಲ್ಲಿ ಇರಲಿದ್ದಾರೆ.

Story first published: Saturday, July 14, 2018, 23:30 [IST]
Other articles published on Jul 14, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X