ಆಟದ ಮಧ್ಯೆ ಅಭಿಮಾನಿ ತಂದ ಕೇಕ್ ಕಟ್ ಮಾಡಿದ ಮೊಹಮ್ಮದ್ ಶಮಿ: ವಿಡಿಯೋ

ಲಂಡನ್: ಸೆಪ್ಟೆಂಬರ್‌ 3ರಂದು ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ 31ನೇ ಹರೆಯಕ್ಕೆ ಕಾಲಿರಿಸಿದ್ದಾರೆ. ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ತಂಡ ಆತಿಥೇಯರ ವಿರುದ್ಧ ಟೆಸ್ಟ್‌ ಸರಣಿ ಆಡುತ್ತಿದೆ. ಶಮಿ ಟೆಸ್ಟ್‌ ಪಂದ್ಯದ ಮಧ್ಯೆಯೇ ಅಭಿಮಾನಿಯೆದುರು ಕೇಕ್ ಕಟ್‌ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ವೇಗಿ ಉಮೇಶ್ ಯಾದವ್ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ವೇಗಿ ಉಮೇಶ್ ಯಾದವ್

ಲಂಡನ್‌ನ ಕೆನ್ನಿಂಗ್ಟನ್‌ ಓವಲ್‌ ಸ್ಟೇಡಿಯಂನಲ್ಲಿ ಭಾರತ ಮತ್ತು ಇಂಗ್ಲೆಂಡ್ ಮಧ್ಯೆ ನಾಲ್ಕನೇ ಟೆಸ್ಟ್‌ ಪಂದ್ಯ ನಡೆಯುತ್ತಿದೆ. ಮೊಹಮ್ಮದ್ ಶಮಿ ಹುಟ್ಟುಹಬ್ಬವಾದ ಶುಕ್ರವಾರ (ಸೆಪ್ಟೆಂಬರ್ 3) ಮೂರನೇ ದಿನದಾಟದ ವೇಳೆ ಅಭಿಮಾನಿಯೊಬ್ಬರು ಸ್ಟೇಡಿಯಂಗೇ ಕೇಕ್ ತಂದಿದ್ದರು. ಶಮಿ ಅವರಲ್ಲಿ ಕೇಕ್ ಕಟ್ ಮಾಡುವಂತೆ ವಿನಂತಿಸಿಕೊಂಡರು ಕೂಡ.

ಭಾರತ vs ಇಂಗ್ಲೆಂಡ್, 4ನೇ ಟೆಸ್ಟ್‌ ಪಂದ್ಯ, Live ಸ್ಕೋರ್‌ಕಾರ್ಡ್

1
49715

ಪ್ಲೇಯಿಂಗ್‌ XIನಲ್ಲಿ ಇರದ ಶಮಿ ಬಿಬ್‌ನಲ್ಲಿದ್ದರು. ಅಭಿಮಾನಿ ವಿನಂತಿಗೆ ಸ್ಪಂದಿಸಿದ ಶಮಿ ಸ್ಟೇಡಿಯಂನಲ್ಲಿ ಪ್ರೇಕ್ಷಕರಿದ್ದ ಬದಿಗೆ ಬಂದು ಅಭಿಮಾನಿ ತಂದಿದ್ದ ಕೇಕ್ ಕಟ್ ಮಾಡುವ ಮೂಲಕ ಆತನ ಖುಷಿಯಲ್ಲಿ ಭಾಗಿಯಾದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ. ಅಂದ್ಹಾಗೆ ಶಮಿ ಜನಿಸಿದ್ದು 1990ರಲ್ಲಿ ಬೆಂಗಾಲ್‌ನ ಜೋನಗರ್‌ನಲ್ಲಿ.

5ನೇ ಕ್ರಮಾಂಕದಲ್ಲಿ ಜಡೇಜಾ ಕಣಕ್ಕಿಳಿಯಲು ಕಾರಣ ತಿಳಿಸಿದ ಶಾರ್ದೂಲ್ ಠಾಕೂರ್5ನೇ ಕ್ರಮಾಂಕದಲ್ಲಿ ಜಡೇಜಾ ಕಣಕ್ಕಿಳಿಯಲು ಕಾರಣ ತಿಳಿಸಿದ ಶಾರ್ದೂಲ್ ಠಾಕೂರ್

ಐದು ಪಂದ್ಯಗಳ ಟೆಸ್ಟ್‌ ಸರಣಿ ಆರಂಭಿಕ ಮೂರು ಟೆಸ್ಟ್‌ ಪಂದ್ಯಗಳಲ್ಲಿ ಆಡಿದ್ದ ಮೊಹಮ್ಮದ್ ಶಮಿ ಒಟ್ಟು 11 ವಿಕೆಟ್ ಉರುಳಿಸಿದ್ದರು. ಅಷ್ಟೇ ಅಲ್ಲ, ಲಾರ್ಡ್ಸ್‌ ಸ್ಟೇಡಿಯಂನಲ್ಲಿ ನಡೆದಿದ್ದ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ಭಾರತದ ದ್ವಿತೀಯ ಇನ್ನಿಂಗ್ಸ್‌ ನಲ್ಲಿ ಅಜೇಯ 56 ರನ್ ಬಾರಿಸಿದ್ದರು. ಈ ಪಂದ್ಯದಲ್ಲಿ ಭಾರತದ ಗೆಲುವಿನಲ್ಲಿ ಶಮಿ ಪಾತ್ರ ಬಹಳವಿತ್ತು. ನಾಲ್ಕನೇ ಟೆಸ್ಟ್ ನಿಂದ ಶಮಿಗೆ ವಿಶ್ರಾಂತಿ ನೀಡಲಾಗಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ, ರೋಹಿತ್ ಶರ್ಮಾ 11, ಕೆಎಲ್ ರಾಹುಲ್ 17, ಚೇತೇಶ್ವರ ಪೂಜಾರ 4, ವಿರಾಟ್ ಕೊಹ್ಲಿ 50, ಅಜಿಂಕ್ಯ ರಹಾನೆ 14, ರಿಷಭ್ ಪಂತ್ 9, ರವೀಂದ್ರ ಜಡೇಜಾ 10, ಶಾರ್ದೂಲ್ ಠಾಕೂರ್ 57, ಉಮೇಶ್ ಯಾದವ್ 10, ಮೊಹಮ್ಮದ್ ಸಿರಾಜ್ 1 ರನ್‌ನೊಂದಿಗೆ 61.3 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 191 ರನ್ ಗಳಿಸಿತ್ತು.

ರೋಹಿತ್ ಶರ್ಮಾ ಅಪ್ಪಿ ಸಂಭ್ರಮಾಚರಿಸಿದ ವಿರಾಟ್ ಕೊಹ್ಲಿ: ವೈರಲ್ ವಿಡಿಯೋರೋಹಿತ್ ಶರ್ಮಾ ಅಪ್ಪಿ ಸಂಭ್ರಮಾಚರಿಸಿದ ವಿರಾಟ್ ಕೊಹ್ಲಿ: ವೈರಲ್ ವಿಡಿಯೋ

ಆಟದ ನಡುವೆ ಮೈದಾನಕ್ಕೆ ನುಗ್ಗುತ್ತಿದ್ದ ಜಾರ್ವೋಗೆ ಇಂಗ್ಲೆಂಡ್ ಪೊಲೀಸ್ ಮಾಡಿದ್ದೇನು? | Oneindia Kannada

ಮೊದಲ ಇನ್ನಿಂಗ್ಸ್‌ಗೆ ಇಳಿದ ಇಂಗ್ಲೆಂಡ್, ರೋರಿ ಬರ್ನ್ಸ್ 5, ಹಸೀಬ್ ಹಮೀದ್ 0, ಡೇವಿಡ್ ಮಲನ್ 31, ಜೋ ರೂಟ್ 21, ಆಲಿ ಪೋಪ್ 81, ಜಾನಿ ಬೈರ್‌ಸ್ಟೋ 37, ಮೊಯೀನ್ ಅಲಿ 35, ಕ್ರಿಸ್ ವೋಕ್ಸ್ 50, ಕ್ರೇಗ್ ಓವರ್‌ಟನ್ 1, ಆಲಿ ರಾಬಿನ್ಸನ್ 5, ಜೇಮ್ಸ್ ಆಂಡರ್ಸನ್ 1 ರನ್‌ನೊಂದಿಗೆ 84 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 290 ರನ್ ಗಳಿಸಿ 99 ರನ್ ಮುನ್ನಡೆ ಸಾಧಿಸಿತ್ತು.

For Quick Alerts
ALLOW NOTIFICATIONS
For Daily Alerts
Story first published: Friday, September 3, 2021, 23:06 [IST]
Other articles published on Sep 3, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X