ಭಾರತ vs ಇಂಗ್ಲೆಂಡ್ ಪ್ರಥಮ ಟೆಸ್ಟ್: ಮೂರನೇ ದಿನ ಮಳೆ ಇರುತ್ತಾ? ಇಲ್ಲಿದೆ ಹವಾಮಾನ ವರದಿ

ಬಹುನಿರೀಕ್ಷಿತ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲನೇ ಪಂದ್ಯ ಬುಧವಾರದಂದು (ಆಗಸ್ಟ್ 4) ಇಂಗ್ಲೆಂಡ್‌ನ ನಾಟಿಂಗ್ಹ್ಯಾಮ್ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ಆರಂಭವಾಗಿದೆ. ಸರಣಿ ಆರಂಭಕ್ಕೂ ಮುನ್ನವೇ ಕ್ರೀಡಾಭಿಮಾನಿಗಳು ಈ ಸರಣಿಗೂ ವರುಣ ಅಡ್ಡಿಯುಂಟು ಮಾಡಬಹುದು ಎಂಬ ಆತಂಕವನ್ನು ವ್ಯಕ್ತಪಡಿಸಿದ್ದರು. ಹೌದು ಸರಣಿ ಆರಂಭವಾಗುವ ಮುನ್ನವೇ ಕ್ರೀಡಾಭಿಮಾನಿಗಳು ಈ ಸಂಶಯ ವ್ಯಕ್ತ ಪಡಿಸಲು ಕಾರಣ ಇದೇ ಇಂಗ್ಲೆಂಡ್ ನೆಲದಲ್ಲಿ ಇತ್ತೀಚೆಗಷ್ಟೇ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ನಡೆದಿದ್ದ ಪ್ರತಿಷ್ಠಿತ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ಮಳೆಗೆ ಆಹುತಿಯಾಗಿದ್ದು.

ಭಾರತ vs ಇಂಗ್ಲೆಂಡ್: ಸಂಕಷ್ಟಕ್ಕೆ ಸಿಲುಕಿದ ಟೀಮ್ ಇಂಡಿಯಾಗೆ ಆಪತ್ಬಾಂಧವನಾದ ಕನ್ನಡಿಗ ಕೆಎಲ್ ರಾಹುಲ್ಭಾರತ vs ಇಂಗ್ಲೆಂಡ್: ಸಂಕಷ್ಟಕ್ಕೆ ಸಿಲುಕಿದ ಟೀಮ್ ಇಂಡಿಯಾಗೆ ಆಪತ್ಬಾಂಧವನಾದ ಕನ್ನಡಿಗ ಕೆಎಲ್ ರಾಹುಲ್

ಇಂಗ್ಲೆಂಡ್ ನೆಲದಲ್ಲಿ ನಡೆದಿದ್ದ ಈ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ಮಳೆಯ ಕಾರಣದಿಂದಾಗಿ ಕಡಿಮೆ ಅವಧಿಗೆ ಸೀಮಿತವಾಯಿತು. ಹೀಗಾಗಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಕೂಡ ಮಳೆಗೆ ಆಹುತಿಯಾಗಲಿದೆ ಎಂಬ ಸಂಶಯವನ್ನು ಈ ಹಿಂದೆ ಕ್ರೀಡಾಭಿಮಾನಿಗಳು ವ್ಯಕ್ತಪಡಿಸಿದ್ದರು. ಇದೀಗ ಈ ಸಂಶಯ ನಿಜವಾದಂತೆ ಕಾಣುತ್ತಿದೆ, ಏಕೆಂದರೆ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನವೇ ವರುಣ ತನ್ನ ಆಟವನ್ನು ಶುರು ಮಾಡಿದ್ದ. ಮೊದಲ ದಿನ ಯಾವುದೇ ಮಳೆಯ ಅಡ್ಡಿ ಇಲ್ಲದೆ ಆಟ ಸರಾಗವಾಗಿ ನಡೆದಿತ್ತು ಆದರೆ ಎರಡನೇ ದಿನ ಮಧ್ಯಾಹ್ನದ ವೇಳೆಗೆ ವರುಣನ ಆಗಮನವಾಗಿದ್ದರಿಂದ ಎರಡನೇ ದಿನ ಕೇವಲ 33.4 ಓವರ್‌ಗಳ ಆಟ ಮಾತ್ರ ನಡೆಯಿತು.

ಭಾರತ vs ಇಂಗ್ಲೆಂಡ್: ಈ ಕೆಟ್ಟ ದಾಖಲೆಯಲ್ಲಿ ಧೋನಿಯನ್ನೂ ಹಿಂದಿಕ್ಕಿದ ವಿರಾಟ್ ಕೊಹ್ಲಿ!ಭಾರತ vs ಇಂಗ್ಲೆಂಡ್: ಈ ಕೆಟ್ಟ ದಾಖಲೆಯಲ್ಲಿ ಧೋನಿಯನ್ನೂ ಹಿಂದಿಕ್ಕಿದ ವಿರಾಟ್ ಕೊಹ್ಲಿ!

ಇನ್ನು ಮೂರನೇ ದಿನವಾದ ಶುಕ್ರವಾರದಂದು (ಆಗಸ್ಟ್ 6) ಮಳೆಯ ಅಡ್ಡಿ ಇಲ್ಲದೆ ಪಂದ್ಯ ನಡೆದರೆ ಸಾಕು ಎಂದು ಕ್ರೀಡಾಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ. ಆದರೆ ಮೂರನೇ ದಿನ ಬಹುಶಃ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ವರುಣ ತನ್ನ ಆಟವನ್ನು ಮುಂದುವರೆಸಲು ನಿಶ್ಚಯಿಸಿದಂತೆ ಕಾಣುತ್ತಿದೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದ ಹವಾಮಾನ ವರದಿ ಮುಂದೆ ಇದೆ ಓದಿ..

ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ಮೋಡ ಕವಿದ ವಾತಾವರಣ

ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ಮೋಡ ಕವಿದ ವಾತಾವರಣ

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ನಡೆಯುತ್ತಿರುವ ನಾಟಿಂಗ್ ಹ್ಯಾಮ್ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ಇಂದು (ಆಗಸ್ಟ್ 6) ಮೋಡ ಕವಿದ ವಾತಾವರಣವಿದ್ದು ಯಾವುದೇ ರೀತಿಯ ಮಳೆಯಾಗುತ್ತಿಲ್ಲ. ಹೀಗಾಗಿ ಮೂರನೇ ದಿನದ ಪಂದ್ಯ ಆರಂಭವಾಗುವ ಸಂಭವವಿದ್ದು ಮೋಡಕವಿದ ವಾತಾವರಣದಲ್ಲಿಯೇ ಭಾರತೀಯ ಬ್ಯಾಟ್ಸ್‌ಮನ್‌ಗಳು ಬ್ಯಾಟ್ ಬೀಸಬೇಕಿದೆ. ಹೀಗೆ ಬೆಳಗಿನ ಜಾವವೇ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ಮೋಡ ಕವಿದ ವಾತಾವರಣವಿದ್ದು, ಎರಡನೇ ದಿನದ ಹಾಗೆಯೇ ಇಂದೂ (ಆಗಸ್ಟ್ 6) ಕೂಡ ಮಧ್ಯಾಹ್ನದ ನಂತರ ಮಳೆ ಸುರಿಯುವ ಸಾಧ್ಯತೆಯಿದೆ.

ಎರಡನೇ ದಿನ ಕೆಎಲ್ ರಾಹುಲ್ ಮಿಂಚು

ಎರಡನೇ ದಿನ ಕೆಎಲ್ ರಾಹುಲ್ ಮಿಂಚು

ಮೊದಲನೇ ದಿನ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ಭಾರತೀಯ ಬೌಲರ್‌ಗಳ ದಾಳಿಗೆ ತತ್ತರಿಸಿ 183 ರನ್‌ಗಳಿಗೆ ಆಲ್ಔಟ್ ಆದರು. ನಂತರ ಮೊದಲನೇ ದಿನವೇ ಭಾರತೀಯ ಬ್ಯಾಟ್ಸ್‌ಮನ್‌ಗಳು ಬ್ಯಾಟಿಂಗ್ ಆರಂಭಿಸಿದರು. ಭಾರತದ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಮೊದಲ ದಿನದಾಟದಂತ್ಯಕ್ಕೆ ವಿಕೆಟ್ ಒಪ್ಪಿಸದೆ ಉತ್ತಮ ಆಟವನ್ನಾಡಿದರು. ಮೊದಲ ದಿನ ಕಣಕ್ಕಿಳಿದಿದ್ದ ಕೆ ಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ತಲಾ 9 ರನ್ ಗಳಿಸಿದ್ದರು ಮತ್ತು ಟೀಮ್ ಇಂಡಿಯಾ ಯಾವುದೇ ವಿಕೆಟ್ ನಷ್ಟವಿಲ್ಲದೆ 21 ರನ್ ಗಳಿಸಿ ಮೊದಲ ದಿನದಾಟವನ್ನು ಮುಗಿಸಿತ್ತು. ನಂತರ ಎರಡನೇ ದಿನದಾಟವನ್ನು ಆರಂಭಿಸಿದ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಉತ್ತಮ ಆರಂಭವನ್ನೇ ಪಡೆದುಕೊಂಡರು. ರೋಹಿತ್ ಶರ್ಮಾ 36 ರನ್ ಗಳಿಸಿ ರಾಬಿನ್ ಸನ್ ಎಸೆತದಲ್ಲಿ ಕ್ಯಾಚ್ ಔಟ್ ಆಗುವುದರ ಮೂಲಕ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ಹೀಗಾಗಿ ಭಾರತ 97 ರನ್ ಆಗಿದ್ದಾಗ ತನ್ನ ಮೊದಲನೇ ವಿಕೆಟ್ ಕಳೆದುಕೊಂಡಿತು. ರೋಹಿತ್ ಶರ್ಮಾ ನಿರ್ಗಮನದ ನಂತರ ಬಂದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಕೇವಲ 4 ರನ್ ಗಳಿಸಿ ನಿರಾಸೆ ಮೂಡಿಸಿದರು, ನಂತರ ಬಂದ ವಿರಾಟ್ ಕೊಹ್ಲಿ ಜೇಮ್ಸ್ ಆ್ಯಂಡರ್ಸನ್ ಮೊದಲ ಎಸೆತದಲ್ಲಿಯೇ ಕ್ಯಾಚ್ ನೀಡುವುದರ ಮೂಲಕ ಗೋಲ್ಡನ್ ಡಕ್ ಆಗಿ ಪೆವಿಲಿಯನ್ ಸೇರಿಕೊಂಡರು. ಮತ್ತು ಅಜಿಂಕ್ಯ ರಹಾನೆ ಕೂಡ ನಿರೀಕ್ಷೆಯ ಮಟ್ಟವನ್ನು ತಲುಪುವಲ್ಲಿ ಸಫಲರಾಗಲಿಲ್ಲ, ಅಜಿಂಕ್ಯ ರಹಾನೆ 5 ರನ್ ಗಳಿಸಿ ರನ್ ಔಟ್ ಆಗುವುದರ ಮೂಲಕ ನಿರಾಸೆ ಮೂಡಿಸಿದರು. ಹೀಗೆ ಮಧ್ಯಮ ಕ್ರಮಾಂಕದ ಆಟಗಾರರೆಲ್ಲಾ ಪೆವಿಲಿಯನ್ ಪರೇಡ್ ನಡೆಸುತ್ತಿದ್ದರೆ ಕೆಎಲ್ ರಾಹುಲ್ ಮಾತ್ರ ಯಶಸ್ವಿ ಅರ್ಧಶತಕ ಸಿಡಿಸಿ ಭಾರತದ ಪಾಲಿಗೆ ಆಪದ್ಬಾಂಧವನಾದರು. ಮಳೆ ಬಂದು ಎರಡನೇ ದಿನದ ಪಂದ್ಯ ಸ್ಥಗಿತಗೊಂಡ ಸಮಯಕ್ಕೆ ಕೆಎಲ್ ರಾಹುಲ್ 151 ಎಸೆತಗಳಲ್ಲಿ 57 ರನ್ ಬಾರಿಸಿ ಅಜೇಯರಾಗಿ ಉಳಿದಿದ್ದಾರೆ ಮತ್ತು ರಿಷಭ್ ಪಂತ್ 7 ರನ್ ಬಾರಿಸಿ ಅಜೇಯರಾಗಿದ್ದಾರೆ.

ಸಂಕಷ್ಟದಲ್ಲಿ ಟೀಮ್ ಇಂಡಿಯಾದ ಗೋಡೆಯಾಗಿ ನಿಂತ ಕೆ ಎಲ್ ರಾಹುಲ್ | Oneindia Kannada
ಎರಡನೇ ದಿನ ವಿರಾಟ್ ಕೊಹ್ಲಿ ಕೆಟ್ಟ ದಾಖಲೆ

ಎರಡನೇ ದಿನ ವಿರಾಟ್ ಕೊಹ್ಲಿ ಕೆಟ್ಟ ದಾಖಲೆ

ಭಾರೀ ನಿರೀಕ್ಷೆಯನ್ನು ಹುಟ್ಟು ಹಾಕಿದ್ದ ವಿರಾಟ್ ಕೊಹ್ಲಿ ಉತ್ತಮ ಬ್ಯಾಟಿಂಗ್ ಮಾಡುವುದರ ಮೂಲಕ ಯಶಸ್ಸಿನ ಹಾದಿಗೆ ಬರಲಿದ್ದಾರೆ ಎಂಬ ನಂಬಿಕೆ ಎಲ್ಲರಲ್ಲಿಯೂ ಇತ್ತು. ಆದರೆ ವಿರಾಟ್ ಕೊಹ್ಲಿ ಈ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಜೇಮ್ಸ್ ಆ್ಯಂಡರ್ಸನ್ ಮೊದಲ ಎಸೆತದಲ್ಲಿಯೇ ಜೋಸ್ ಬಟ್ಲರ್‌ಗೆ ಕ್ಯಾಚ್ ನೀಡುವ ಮೂಲಕ ಗೋಲ್ಡನ್ ಡಕ್ ಔಟ್ ವಿರಾಟ್ ಕೊಹ್ಲಿ ಬೇಡವಾದ ಕೆಟ್ಟ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡರು. ಟೆಸ್ಟ್ ಇತಿಹಾಸದಲ್ಲಿಯೇ ಅತಿ ಹೆಚ್ಚು ಬಾರಿ ಡಕ್ ಔಟ್ ಆದ ಭಾರತ ತಂಡದ ನಾಯಕ ಎಂಬ ಕೆಟ್ಟ ದಾಖಲಿಗೆ ವಿರಾಟ್ ಕೊಹ್ಲಿ ಪಾತ್ರರಾದರು. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ವಿರಾಟ್ ಕೊಹ್ಲಿ ಒಟ್ಟು 9 ಬಾರಿ ಡಕ್ ಔಟ್ ಆಗಿದ್ದಾರೆ. ಕೊಹ್ಲಿಯನ್ನು ಹೊರತುಪಡಿಸಿದರೆ ಭಾರತದ ಮಾಜಿ ನಾಯಕ ಎಂಎಸ್ ಧೋನಿ 8 ಬಾರಿ ಡಕ್ ಔಟ್ ಆಗಿದ್ದಾರೆ ಮತ್ತು ಮನ್ಸೂರ್ ಅಲಿಖಾನ್ ಪಟೌಡಿ 7 ಬಾರಿ ಡಕ್ ಔಟ್ ಆಗಿದ್ದಾರೆ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 5 - October 19 2021, 03:30 PM
ಸ್ಕಾಟ್ಲೆಂಡ್
ಪಪುವಾ ನ್ಯೂ ಗಿನಿವಾ
Predict Now

For Quick Alerts
ALLOW NOTIFICATIONS
For Daily Alerts
Story first published: Friday, August 6, 2021, 14:34 [IST]
Other articles published on Aug 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X