ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ ಮತ್ತು ಸ್ಟೋಕ್ಸ್ ನಡುವೆ ಮಾತಿನ ಚಕಮಕಿ: ನಿಜಕ್ಕೂ ಆಗಿದ್ದೇನೆಂದು ವಿವರಿಸಿದ ಸಿರಾಜ್

India vs England: Siraj reveals what happend between virat kohli and ben stokes

ಟೀಮ್ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಅಂತಿಮ ಪಂದ್ಯದ ಆರಂಭಿಕ ದಿನ ಭಾರತದ ಬೌಲರ್‌ಗಳು ಯಶಸ್ಸು ಸಾಧಿಸಿದ್ದಾರೆ. ಭಾರತ ಟಾಸ್ ಸೋತರೂ ಮೊದಲ ದಿನದಾಟದಲ್ಲಿ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಇಂದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಇಂಗ್ಲೆಂಡ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ನಡುವಿನ ಬಿಸಿಬಿಸಿ ಮಾತುಕತೆ ಗಮನಸೆಳೆಯಿತು.

ಆದರೆ ಅಲ್ಲಿ ಆ ವಾಗ್ವಾದಕ್ಕೆ ನಿಜವಾದ ಕಾರಣವೇನು ಎಂಬುದು ಪಂದ್ಯವನ್ನು ವೀಕ್ಷಿಸುತ್ತಿದ್ದ ಅಭಿಮಾನಿಗಳಿಗೆ ಸ್ಪಷ್ಟವಾಗಿರಲಿಲ್ಲ. ಇದಕ್ಕೆ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಪ್ರತಿಕ್ರಿತೆ ನೀಡುತ್ತಾ ನಡೆದ ಘಟನೆಯನ್ನು ವಿವರಿಸಿದ್ದಾರೆ.

 ಐಪಿಎಲ್‌ ಕುರಿತ ಹೇಳಿಕೆಗೆ ಕ್ಷಮೆಯಾಚಿಸಿದ ವೇಗಿ ಡೇಲ್ ಸ್ಟೇನ್ ಐಪಿಎಲ್‌ ಕುರಿತ ಹೇಳಿಕೆಗೆ ಕ್ಷಮೆಯಾಚಿಸಿದ ವೇಗಿ ಡೇಲ್ ಸ್ಟೇನ್

ಕೊಹ್ಲಿ ಮಧ್ಯ ಪ್ರವೇಶ

ಕೊಹ್ಲಿ ಮಧ್ಯ ಪ್ರವೇಶ

"ನಾನು ಬೆನ್ ಸ್ಟೋಕ್ಸ್‌ಗೆ ಬೌನ್ಸರ್ ಎಸೆದಾಗ ಆತ ನನ್ನನ್ನು ನಿಂದನಾತ್ಮಕ ಭಾಷೆಯನ್ನು ಪ್ರಯೋಗಿಸಿದರು. ಆಗ ನಾನು ನಾಯಕ ವಿರಾಟ್ ಕೊಹ್ಲಿ ಬಳಿ ಆತನನ್ನು ಸಂಭಾಳಿಸುವಂತೆ ಕೇಳಿಕೊಂಡಿದ್ದೆ. ವಿರಾಟ್ ಕೊಹ್ಲಿ ಮಧ್ಯ ಪ್ರವೇಶದಿಂದಾಗಿ ಆ ವಿಚಾರ ಅಂತ್ಯಕಂಡಿತು" ಎಂದು ಸಿರಾಜ್ ಹೇಳಿದ್ದಾರೆ.

ಮುಂದುವರಿದ ತಿಕ್ಕಾಟ

ಮುಂದುವರಿದ ತಿಕ್ಕಾಟ

ಮೊಹಮ್ಮದ್ ಸಿರಾಜ್ ಹಾಗೂ ಇಂಗ್ಲೆಂಡ್ ವೇಗಿ ಬೆನ್ ಸ್ಟೋಕ್ಸ್ ನಡುವಿನ ತಿಕ್ಕಾಟ ಮುಂದಿನ ಓವರ್‌ನಲ್ಲೂ ಮುಂದುವರಿದಿತ್ತು. ಹೈದರಾಬಾದ್ ಮೂಲದ ವೇಗಿ ಮೊಹಮ್ಮದ್ ಸಿರಾಜ್ ಮುಂದಿನ ಓವರ್ ಎಸೆಯಲು ಬಂದಾಗ ಆ ಓವರ್‌ನಲ್ಲಿ ಬೆನ್ ಸ್ಟೋಕ್ಸ್ ಮೂರು ಬೌಂಡರಿಯನ್ನು ಸಿಡಿಸಿದರು.

ಸಿರಾಜ್ ಗಮನಾರ್ಹ ಪ್ರದರ್ಶನ

ಸಿರಾಜ್ ಗಮನಾರ್ಹ ಪ್ರದರ್ಶನ

ಇದಕ್ಕೂ ಮುನ್ನ ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಭಾರತ ತನ್ನ ಆಡುವ ಬಳಗದಲ್ಲಿ ಒಂದು ಬದಲಾವಣೆಯನ್ನು ಮಾಡಿಕೊಂಡಿತ್ತು. ವೈಯಕ್ತಿಕ ಕಾರಣಗಳಿಂದ ಅಂತಿಮ ಟೆಸ್ಟ್‌ನಿಂದ ಹೊರಗುಳಿದ ಜಸ್ಪ್ರೀತ್ ಬೂಮ್ರಾ ಬದಲಿಗೆ ಮೊಹಮ್ಮದ್ ಸಿರಾಜ್ ಆಡುವ ಬಳಗದಲ್ಲಿ ಅವಕಾಶವನ್ನು ಗಿಟ್ಟಿಸಿಕೊಂಡರು. ನಾಯಕ ಜೋ ರೂಟ್ ಹಾಗೂ ಬೈರ್‌ಸ್ಟೋವ್ ವಿಕೆಟ್ ಪಡೆದು ಸಿರಾಜ್ ಮಿಂಚಿದರು.

Story first published: Thursday, March 4, 2021, 18:43 [IST]
Other articles published on Mar 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X