ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ ವಿರಾಟ್ ಕೊಹ್ಲಿ

India vs Netherlands: Virat Kohli Became The 2nd Highest Run Scorer In T20 World Cup History

ಗುರುವಾರ (ಅಕ್ಟೋಬರ್ 27) ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಐಸಿಸಿ ಪುರುಷರ ಟಿ20 ವಿಶ್ವಕಪ್ 2022ರ ತಮ್ಮ ಎರಡನೇ ಸೂಪರ್ 12 ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ನೆದರ್ಲ್ಯಾಂಡ್ಸ್ ತಂಡದ ವಿರುದ್ಧ 56 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು.

ಭಾರತ ನೀಡಿದ್ದ 180 ರನ್‌ಗಳ ಗುರಿ ಬೆನ್ನತ್ತಿದ ನೆದರ್ಲ್ಯಾಂಡ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 123 ರನ್ ಗಳಿಸಿ ಮಂಡಿಯೂರಿತು. ವಿರಾಟ್ ಕೊಹ್ಲಿ ಸತತ ಎರಡನೇ ಬಾರಿ ಅರ್ಧಶತಕ ಗಳಿಸಿದರೆ, ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಕೂಡ ಅಮೋಘ ಅರ್ಧಶತಕ ಬಾರಿಸಿದರು. ಹೀಗಾಗಿ ಭಾರತ ತಂಡವು 20 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 179 ರನ್ ಗಳಿಸಿ, ಎದುರಾಳಿ ತಂಡಕ್ಕೆ 180 ರನ್‌ಗಳ ಬೃಹತ್ ಗುರಿ ನೀಡಿತ್ತು.

PAK vs ZIM: ಸಿಕಂದರ್ ರಝಾ ಮ್ಯಾಜಿಕ್; ಜಿಂಬಾಬ್ವೆ ವಿರುದ್ಧ ಮುಖಭಂಗ ಅನುಭವಿಸಿದ ಪಾಕಿಸ್ತಾನPAK vs ZIM: ಸಿಕಂದರ್ ರಝಾ ಮ್ಯಾಜಿಕ್; ಜಿಂಬಾಬ್ವೆ ವಿರುದ್ಧ ಮುಖಭಂಗ ಅನುಭವಿಸಿದ ಪಾಕಿಸ್ತಾನ

ಇದೇ ವೇಳೆ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಗುರುವಾರ ಐಸಿಸಿ ಪುರುಷರ ಟಿ20 ವಿಶ್ವಕಪ್ ಇತಿಹಾಸದಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಸಿಡ್ನಿ ಕ್ರಿಕೆಟ್ ಗ್ರೌಂಡ್ (SCG) ನಲ್ಲಿ ನಡೆದ ಪಂದ್ಯಾವಳಿಯ ಗ್ರೂಪ್ 2, ಸೂಪರ್ 12 ಪಂದ್ಯದ ಸಮಯದಲ್ಲಿ ಅವರು ಈ ಹೆಗ್ಗುರುತನ್ನು ತಲುಪಿದರು.

21 ಇನ್ನಿಂಗ್ಸ್‌ಗಳಲ್ಲಿ 89.90 ಸರಾಸರಿಯಲ್ಲಿ ಒಟ್ಟು 989 ರನ್

21 ಇನ್ನಿಂಗ್ಸ್‌ಗಳಲ್ಲಿ 89.90 ಸರಾಸರಿಯಲ್ಲಿ ಒಟ್ಟು 989 ರನ್

ಈ ಪಂದ್ಯದಲ್ಲಿ 44 ಎಸೆತಗಳಲ್ಲಿ ಅಜೇಯ 62 ರನ್ ಬಾರಿಸಿದ ವಿರಾಟ್ ಕೊಹ್ಲಿ, ಅವರ ಇನ್ನಿಂಗ್ಸ್‌ನಲ್ಲಿ ಮೂರು ಬೌಂಡರಿಗಳು ಮತ್ತು ಎರಡು ಅದ್ಭುತ ಸಿಕ್ಸರ್‌ಗಳು ಸೇರಿದ್ದವು. ಇದೀಗ ವಿರಾಟ್ ಕೊಹ್ಲಿ 23 ಟಿ20 ವಿಶ್ವಕಪ್ ಪಂದ್ಯಗಳ 21 ಇನ್ನಿಂಗ್ಸ್‌ಗಳಲ್ಲಿ 89.90 ಸರಾಸರಿಯಲ್ಲಿ ಒಟ್ಟು 989 ರನ್ ಗಳಿಸಿದ್ದಾರೆ. ಅವರು ಟಿ20 ವಿಶ್ವಕಪ್ ಪಂದ್ಯಾವಳಿಗಳಲ್ಲಿ ಹನ್ನೆರಡು ಅರ್ಧ ಶತಕಗಳನ್ನು ಹೊಂದಿದ್ದಾರೆ, ಅಜೇಯ 89 ಅತ್ಯುತ್ತಮ ಸ್ಕೋರ್ ಆಗಿದೆ.

ಪ್ರಮುಖವಾಗಿ, ವಿರಾಟ್ ಕೊಹ್ಲಿ ಟೂರ್ನಿಯಲ್ಲಿ ಎರಡು ಬಾರಿ 'ಮ್ಯಾನ್ ಆಫ್ ದಿ ಟೂರ್ನಮೆಂಟ್' ಕೂಡ ಆಗಿದ್ದಾರೆ. ಅವರು 2014ರಲ್ಲಿ (319 ರನ್) ಮತ್ತು 2016ರಲ್ಲಿ (273 ರನ್) ಗಳಿಸುವ ಮೂಲಕ ಎರಡು ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದ ಏಕೈಕ ಆಟಗಾರರಾಗಿದ್ದಾರೆ.

ಕ್ರಿಸ್ ಗೇಲ್ ಅವರನ್ನು ಹಿಂದಿಕ್ಕಿದ ವಿರಾಟ್ ಕೊಹ್ಲಿ

ಕ್ರಿಸ್ ಗೇಲ್ ಅವರನ್ನು ಹಿಂದಿಕ್ಕಿದ ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ದಂತಕಥೆ ಕ್ರಿಸ್ ಗೇಲ್ ಅವರನ್ನು ಹಿಂದಿಕ್ಕಿ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಎರಡನೇ ಶ್ರೇಷ್ಠ ಬ್ಯಾಟರ್ ಎನಿಸಿಕೊಂಡರು. ಕ್ರಿಸ್ ಗೇಲ್ 33 ಪಂದ್ಯಗಳ 31 ಇನ್ನಿಂಗ್ಸ್‌ಗಳಲ್ಲಿ 34.46 ಸರಾಸರಿಯಲ್ಲಿ 965 ರನ್ ಗಳಿಸಿದ್ದಾರೆ. ಅವರ ಬ್ಯಾಟ್‌ನಿಂದ ಎರಡು ಶತಕಗಳು ಮತ್ತು ಏಳು ಅರ್ಧಶತಕಗಳು ಹೊರಬಂದಿವೆ ಮತ್ತು ಅವರ ಅತ್ಯುತ್ತಮ ಸ್ಕೋರ್ 117 ಆಗಿದೆ.

ಐಸಿಸಿ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಶ್ರೀಲಂಕಾದ ಮಹೇಲಾ ಜಯವರ್ಧನೆ. ಅವರು ಟಿ20 ಟಿ20 ವಿಶ್ವಕಪ್ ಪಂದ್ಯಗಳಲ್ಲಿ 39.07ರ ಸರಾಸರಿಯಲ್ಲಿ 1016 ರನ್ ಗಳಿಸಿದ್ದಾರೆ. ಜಯವರ್ಧನೆ ಬ್ಯಾಟ್‌ನಿಂದ ಒಂದು ಶತಕ ಮತ್ತು ಆರು ಅರ್ಧ ಶತಕಗಳು ಬಂದಿದ್ದು, ಅತ್ಯುತ್ತಮ 100 ರನ್ ಆಗಿದೆ.

ಮೂರನೇ ವಿಕೆಟ್‌ಗೆ 48 ಎಸೆತಗಳಲ್ಲಿ 95 ರನ್‌ಗಳ ಅಜೇಯ ಜೊತೆಯಾಟ

ಮೂರನೇ ವಿಕೆಟ್‌ಗೆ 48 ಎಸೆತಗಳಲ್ಲಿ 95 ರನ್‌ಗಳ ಅಜೇಯ ಜೊತೆಯಾಟ

ಭಾರತ ಮತ್ತು ನೆದರ್ಲ್ಯಾಂಡ್ಸ್ ಪಂದ್ಯಕ್ಕೆ ಬರುವುದಾರೆ, ಭಾರತ ತನ್ನ 20 ಓವರ್‌ಗಳಲ್ಲಿ 179/2 ಗಳಿಸಿತು. ವಿರಾಟ್ (62*), ಸೂರ್ಯಕುಮಾರ್ ಯಾದವ್ (51*), ಮತ್ತು ನಾಯಕ ರೋಹಿತ್ ಶರ್ಮಾ (53) ಅದ್ಭುತ ಅರ್ಧಶತಕಗಳೊಂದಿಗೆ ಮಿಂಚಿದರು. ರೋಹಿತ್ ಮತ್ತು ವಿರಾಟ್ ಎರಡನೇ ವಿಕೆಟ್‌ಗೆ 75 ರನ್‌ಗಳ ಜೊತೆಯಾಟ ನೀಡಿದರೆ, ಸೂರ್ಯಕುಮಾರ್ ಮತ್ತು ವಿರಾಟ್ ಮೂರನೇ ವಿಕೆಟ್‌ಗೆ 48 ಎಸೆತಗಳಲ್ಲಿ 95 ರನ್‌ಗಳ ಅಜೇಯ ಜೊತೆಯಾಟ ನಡೆಸಿದರು.

ಕೆಎಲ್ ರಾಹುಲ್ 9 ರನ್ ಗಳಿಸಿ ಮತ್ತೊಮ್ಮೆ ನಿರಾಸೆ ಮೂಡಿಸಿದರು. ನೆದರ್ಲ್ಯಾಂಡ್ಸ್ ಪರ ಫ್ರೆಡ್ ಕ್ಲಾಸೆನ್ ಮತ್ತು ಪಾಲ್ ವ್ಯಾನ್ ಮೀಕೆರನ್ ತಲಾ ಒಂದು ವಿಕೆಟ್ ಪಡೆದರು.

Story first published: Thursday, October 27, 2022, 21:35 [IST]
Other articles published on Oct 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X