ಗಪ್ಟಿಲ್‌ರನ್ನು ಗುರಾಯಿಸಿದ ದೀಪಕ್ ಚಹರ್‌ಗೆ ಸಿಕ್ಕಿತು 1 ಲಕ್ಷ; ಕಾರಣವೇನು ಗೊತ್ತಾ?

ಕಳೆದೊಂದು ತಿಂಗಳಿನಿಂದ ಸಾಕಷ್ಟು ದೊಡ್ಡ ಮಟ್ಟದ ಸುದ್ದಿಗೆ ಕಾರಣವಾಗಿದ್ದ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ನವೆಂಬರ್‌ 17ರಂದು ನಡೆದ ಫೈನಲ್ ಪಂದ್ಯದ ಮೂಲಕ ತೆರೆಬಿದ್ದಿದೆ. ಈ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಸೆಣಸಾಟ ನಡೆಸಿದವು. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಆಸ್ಟ್ರೇಲಿಯಾ 8 ವಿಕೆಟ್‍ಗಳ ಜಯ ಸಾಧಿಸುವುದರ ಮೂಲಕ ಚೊಚ್ಚಲ ಬಾರಿಗೆ ಟಿ ಟ್ವೆಂಟಿ ವಿಶ್ವಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.

ಹೀಗೆ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ಪಂದ್ಯದಲ್ಲಿ ಸೋತು ರನ್ನರ್ ಅಪ್ ಆಗಿ ಹೊರಹೊಮ್ಮಿದ ನ್ಯೂಜಿಲೆಂಡ್ ಸದ್ಯ ಭಾರತ ಪ್ರವಾಸವನ್ನು ಕೈಗೊಂಡಿದ್ದು ಟೀಮ್ ಇಂಡಿಯಾ ವಿರುದ್ಧ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಮತ್ತು 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗವಹಿಸುತ್ತಿದೆ. ಈಗಾಗಲೇ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಟಿ ಟ್ವೆಂಟಿ ಸರಣಿಯ ಮೊದಲನೇ ಪಂದ್ಯ ನವೆಂಬರ್‌ 17ರಂದು ಜೈಪುರದಲ್ಲಿ ನಡೆದಿದ್ದು ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಜಯ ಸಾಧಿಸಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತು. ಇನ್ನು ನ್ಯೂಜಿಲೆಂಡ್ ತಂಡ ನೀಡಿದ 165 ರನ್‌ಗಳ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ 19.4 ಓವರ್‌ಗಳಲ್ಲಿ 166 ರನ್ ಗಳಿಸುವುದರ ಮೂಲಕ 5 ವಿಕೆಟ್‍ಗಳ ಜಯವನ್ನು ಸಾಧಿಸಿ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆಯನ್ನು ಸಾಧಿಸಿದೆ.

ಭಾರತ ಕೋಚ್‌ ಸ್ಥಾನಕ್ಕೆ ಮೊದಲ ಆಯ್ಕೆ ದ್ರಾವಿಡ್ ಅಲ್ಲ; ಅನುಮಾನ ಮೂಡಿಸಿದ ದಿಗ್ಗಜನ ಹೇಳಿಕೆ!ಭಾರತ ಕೋಚ್‌ ಸ್ಥಾನಕ್ಕೆ ಮೊದಲ ಆಯ್ಕೆ ದ್ರಾವಿಡ್ ಅಲ್ಲ; ಅನುಮಾನ ಮೂಡಿಸಿದ ದಿಗ್ಗಜನ ಹೇಳಿಕೆ!

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ ತಂಡದ ಪರ ಮಾರ್ಟಿನ್ ಗಪ್ಟಿಲ್ 42 ಎಸೆತಗಳಲ್ಲಿ 70 ರನ್ ಬಾರಿಸಿ ಅಬ್ಬರಿಸಿದರು. 3 ಬೌಂಡರಿ ಮತ್ತು 4 ಸಿಕ್ಸರ್ ಬಾರಿಸಿದ ಮಾರ್ಟಿನ್ ಗಪ್ಟಿಲ್ 18ನೇ ಓವರ್‌ನಲ್ಲಿ ದೀಪಕ್ ಚಹರ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ಹೌದು, 18ನೇ ಓವರ್

ಬೌಲಿಂಗ್ ಮಾಡಲು ಬಂದ ದೀಪಕ್ ಚಹರ್ ಎಸೆದ ಮೊದಲ ಎಸೆತಕ್ಕೆ ಗಪ್ಟಿಲ್ ಸಿಕ್ಸರ್ ಬಾರಿಸಿದರು. ಹೀಗೆ ದೀಪಕ್ ಚಹರ್ ಎಸೆತಕ್ಕೆ ಸಿಕ್ಸರ್ ಬಾರಿಸಿದ ಮಾರ್ಟಿನ್ ಗಪ್ಟಿಲ್ ದೀಪಕ್ ಚಹರ್ ಅವರನ್ನೇ ದಿಟ್ಟಿಸಿ ನೋಡುವುದರ ಮೂಲಕ ಕೆರಳಿಸಿದ್ದರು. ಹೀಗೆ ಮೊದಲನೇ ಎಸೆತವನ್ನು ಹಾಕಿ ಸಿಕ್ಸರ್ ಚಚ್ಚಿಸಿಕೊಂಡಿದ್ದ ದೀಪಕ್ ಚಹರ್ ದ್ವಿತೀಯ ಎಸೆತದಲ್ಲಿ ಗಪ್ಟಿಲ್ ವಿಕೆಟ್ ಪಡೆಯುವ ಮೂಲಕ ಪ್ರತೀಕಾರವನ್ನು ತೀರಿಸಿಕೊಂಡರು. ಹೌದು ವಿಕೆಟ್ ಪಡೆದ ನಂತರ ಮಾರ್ಟಿನ್ ಗಪ್ಟಿಲ್ ಅವರನ್ನು ದೀಪಕ್ ಚಹರ್ ದಿಟ್ಟಿಸಿ ನೋಡುವ ಮೂಲಕ ತಮ್ಮ ಸೇಡನ್ನು ತೀರಿಸಿಕೊಂಡರು.

ಹೀಗೆ ಜೈಪುರ ಕ್ರಿಕೆಟ್ ಕ್ರೀಡಾಂಗಣದ ಅಂಗಳದಲ್ಲಿ ಮಾರ್ಟಿನ್ ಗಪ್ಟಿಲ್ ಮತ್ತು ದೀಪಕ್ ಚಹರ್ ನಡುವೆ ನಡೆದ ದೃಷ್ಟಿಯುದ್ಧ ಮೈದಾನದಲ್ಲಿ ನೆರೆದಿದ್ದ ಅಭಿಮಾನಿಗಳಿಗೆ ದೊಡ್ಡ ಮಟ್ಟದ ಮನರಂಜನೆಯನ್ನು ನೀಡಿತು. ಪಂದ್ಯ ಮುಗಿದ ನಂತರ ದೀಪಕ್ ಚಹರ್ ಮಾರ್ಟಿನ್ ಗಪ್ಟಿಲ್ ಅವರನ್ನು ದಿಟ್ಟಿಸಿ ನೋಡಿದ ಕ್ಷಣವನ್ನು ಮೂಮೆಂಟ್ ಆಫ್ ದಿ ಮ್ಯಾಚ್ ಎಂದು ಗುರುತಿಸಿ 1 ಲಕ್ಷ ಬಹುಮಾನ ನೀಡಲಾಯಿತು.

ಮಯಾಂಕ್ ಹೆಗಲಿಗೆ ಬೀಳುತ್ತಾ ಪಂಜಾಬ್ ಕಿಂಗ್ಸ್ ನಾಯಕತ್ವ?: ಟ್ವಿಟ್ಟರ್‌ನಲ್ಲಿ ಫ್ರಾಂಚೈಸಿ ಕೊಟ್ಟ ಸುಳಿವೇನು?ಮಯಾಂಕ್ ಹೆಗಲಿಗೆ ಬೀಳುತ್ತಾ ಪಂಜಾಬ್ ಕಿಂಗ್ಸ್ ನಾಯಕತ್ವ?: ಟ್ವಿಟ್ಟರ್‌ನಲ್ಲಿ ಫ್ರಾಂಚೈಸಿ ಕೊಟ್ಟ ಸುಳಿವೇನು?

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮುಂದಿನ ಟಿ ಟ್ವೆಂಟಿ ಪಂದ್ಯ ಯಾವಾಗ ಮತ್ತು ಎಲ್ಲಿ?

ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ದ್ವಿತೀಯ ಟಿ ಟ್ವೆಂಟಿ ಪಂದ್ಯ ನವೆಂಬರ್ 19ರಂದು ರಾಂಚಿಯಲ್ಲಿ ನಡೆಯಲಿದ್ದು ಈ ಪಂದ್ಯ ಕೂಡ ಸಂಜೆ 7 ಗಂಟೆಗೆ ಶುರುವಾಗಲಿದೆ.

ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ತೃತೀಯ ಟಿ ಟ್ವೆಂಟಿ ಪಂದ್ಯ ನವೆಂಬರ್ 21ರಂದು ಕೋಲ್ಕತಾದಲ್ಲಿ ನಡೆಯಲಿದ್ದು ಈ ಪಂದ್ಯ ಸಹ ಸಂಜೆ 7 ಗಂಟೆಗೆ ಆರಂಭವಾಗಲಿದೆ.

ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಪ್ರಥಮ ಟೆಸ್ಟ್ ಪಂದ್ಯ ನವೆಂಬರ್‌ 25ರಿಂದ ನವೆಂಬರ್‌ 29ರವರೆಗೆ ಕಾನ್ಪುರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ದೀಪಕ್ ಚಹಾರ್ ಆಟದ ನಡುವೆ ಗೆಳತಿ ಬಗ್ಗೆ ವಿಚಾರಿಸಿದ್ದೇಕೆ | Oneindia Kannada

ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ದ್ವಿತೀಯ ಹಾಗೂ ಅಂತಿಮ ಟೆಸ್ಟ್ ಪಂದ್ಯ ಡಿಸೆಂಬರ್ 3ರಿಂದ ಡಿಸೆಂಬರ್ 7ರವರೆಗೆ ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.

For Quick Alerts
ALLOW NOTIFICATIONS
For Daily Alerts
Story first published: Thursday, November 18, 2021, 23:09 [IST]
Other articles published on Nov 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X