ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಜಾಜ್ ಆಘಾತಕ್ಕೆ ಒಳಗಾದರೂ ಭಾರತ ಮುಂಬೈ ಟೆಸ್ಟ್‌ನಲ್ಲಿ ಭಾರೀ ಗೆಲುವು ಸಾಧಿಸಿದ್ದು ಹೇಗೆ?

India vs New Zealand: Four key reasons for Team India victory against New zealand

ಮುಂಬೈ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ಅಮೋಘ ಗೆಲುವು ಸಾಧಿಸಿದೆ. 372 ರನ್‌ಗಳ ಬೃಹತ್ ಅಂತರದಿಂದ ವಿರಾಟ್ ಕೊಹ್ಲಿ ಪಡೆ ನ್ಯೂಜಿಲೆಂಡ್ ತಂಡಕ್ಕೆ ಸೋಲಿನ ರುಚಿ ತೋರಿಸಿದೆ. ಮೊದಲ ಪಂದ್ಯ ರೋಚಕ ಡ್ರಾ ಫಲಿತಾಂಶ ಕಂಡ ನಂತರ ಸರಣಿ ಗೆಲುವು ಸಾಧಿಸಲು ಎರಡು ತಂಡಗಳಿಗೂ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿತ್ತು. ಇದರಲ್ಲಿ ವಿರಾಟ್ ಕೊಹ್ಲಿ ಪಡೆ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಟೀಮ್ ಇಂಡಿಯಾ ಟೆಸ್ಟ್ ಸರಣಿಯನ್ನು 1-0 ಅಂತರದಿಂದ ವಶಕ್ಕೆ ಪಡೆದುಕೊಂಡಿದೆ.

ಪಂದ್ಯದುದ್ದಕ್ಕೂ ಸಂಪೂರ್ಣವಾಗಿ ಸ್ಪಿನ್ನರ್‌ಗಳೇ ಮೇಲುಗೈ ಸಾಧಿಸಿದ ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಸ್ಪಿನ್ನರ್ ಅಜಾಜ್ ಪಟೇಲ್ ಟೆಸ್ಟ್ ಕ್ರಿಕೆಟ್‌ನಲ್ಲಿ ಪ್ರಮುಖ ದಾಖಲೆಯೊಂದನ್ನು ಬರೆದಿದ್ದಾರೆ. ಇನ್ನಿಂಗ್ಸ್‌ನ ಎಲ್ಲಾ ಹತ್ತು ವಿಕೆಟ್ ಪಡೆಯುವ ಮೂಲಕ ಟೆಸ್ಟ್ ಕ್ರಿಕೆಟ್‌ನ ಇತಿಹಾಸದಲ್ಲಿ ಅತ್ಯಂತ ಅಪರೂಪದ ಸಾಧನೆ ಮಾಡಿದ್ದಾರೆ. ಈ ಸಾಧನೆಯನ್ನು ಭಾರತದ ದಿಗ್ಗಜ ಸ್ಪಿನ್ನರ್ ಅನಿಲ್ ಕುಂಬ್ಳೆ ಸಹಿತ ಕೇವಲ ಮುವರು ಸ್ಪಿನ್ನರ್‌ಗಳು ಮಾತ್ರವೇ ಈವರೆಗೆ ಮಾಡಿದ್ದಾರೆ. ಅಜಾಜ್ ಪಟೇಲ್ ಎರಡನೇ ಇನ್ನಿಂಗ್ಸ್‌ನಲ್ಲಿಯೂ ಭಾರತದ 4 ವಿಕೆಟ್ ಕೀಳುವ ಮೂಲಕ ಆಘಾತ ನೀಡಿದ್ದಾರೆ. ಈ ಮೂಲಕ ಒಂದು ಪಂದ್ಯದಲ್ಲಿ ಬರೊಬ್ಬರಿ 14 ವಿಕೆಟ್ ಸಂಪಾದಿಸಿದ್ದಾರೆ ಕಿವೀಸ್ ಸ್ಪಿನ್ನರ್.

ಭಾರತ vs ನ್ಯೂಜಿಲೆಂಡ್: ಕಿವೀಸ್ ವಿರುದ್ಧ 372 ರನ್‌ಗಳ ಭಾರೀ ಅಂತರದಿಂದ ಗೆದ್ದು ಸರಣಿ ವಶಕ್ಕೆ ಪಡೆದ ಟೀಮ್ ಇಂಡಿಯಾಭಾರತ vs ನ್ಯೂಜಿಲೆಂಡ್: ಕಿವೀಸ್ ವಿರುದ್ಧ 372 ರನ್‌ಗಳ ಭಾರೀ ಅಂತರದಿಂದ ಗೆದ್ದು ಸರಣಿ ವಶಕ್ಕೆ ಪಡೆದ ಟೀಮ್ ಇಂಡಿಯಾ

ಹಾಗಿದ್ದರೂ ನ್ಯೂಜಿಲೆಮಡ್ ತಂಡಕ್ಕೆ ಸೋಲಿನಿಂದ ಪಾರಾಗಲು ಸಾಧ್ಯವಾಗಲೇ ಇಲ್ಲ. ಅಜಾಜ್ ಪಟೇಲ್ ಅವರ ಅದ್ಭುತ ಬೌಲಿಂಗ್ ದಾಳಿಯ ಹೊರತಾಗಿಯೂ ನ್ಯೂಜಿಲೆಂಡ್ ತಂಡ ಭಾರತಕ್ಕೆ ಭಾರೀ ಅಂತರದಿಂದ ಶರಣಾಗಿದೆ. ಮೊದಲ ದಿನದಿಂದಲೂ ಪಂದ್ಯದಲ್ಲಿ ಭಾರತವೇ ಹಿಡಿತ ಸಾಧಿಸುತ್ತಾ ಸಾಗಿದ್ದು ನಾಲ್ಕನೇ ದಿನ ಭಾರತ ಗೆಲ್ಲುವಲ್ಲಿಯವರೆಗೂ ಎಲ್ಲಿಯೂ ಭಾರತ ಪಟ್ಟು ಸಡಿಲಿಸಲಿಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ. ಹಾಗಾದರೆ ಅಜಾಜ್ ಪಟೇಲ್ ಈ ಸಾಧನೆಯ ಹೊರತಾಗಿಯೂ ಭಾರತ ಸುಲಭ ಗೆಲುವು ಸಾಧಿಸಲು ಕಾರಣವಾದ ಅಂಶಗಳು ಯಾವುದು? ಮುಂದೆ ಓದಿ..

ಮೊದಲ ಇನ್ನಿಂಗ್ಸ್‌ನ ಮುನ್ನಡೆ

ಮೊದಲ ಇನ್ನಿಂಗ್ಸ್‌ನ ಮುನ್ನಡೆ

ಟೀಮ್ ಇಂಡಿಯಾ ಮುಂಬೈ ಟೆಸ್ಟ್‌ನಲ್ಲಿ ಸುಲಭ ಗೆಲುವಿಗೆ ಪ್ರಮುಖ ಕಾರಣವಾದ ಸಂಗತಿಯೆಂದರೆ ಪ್ರಥಮ ಇನ್ನಿಂಗ್ಸ್‌ನಲ್ಲಿ ಸಾಧಿಸಿದ ಭಾರೀ ಮುನ್ನಡೆ. ಮಯಾಂಕ್ ಅಗರ್ವಾಲ್ ಸಿಡಿಸಿದ ಭರ್ಜರಿ 150 ರನ್‌ಗಳ ಕೊಡುಗೆ ಹಾಗೂ ಅಕ್ಷರ್ ಪಟೇಲ್ 52 ರನ್ ಹಾಗೂ ಶುಬ್ಮನ್ ಗಿಲ್ ಅವರ 44 ರನ್‌ಗಳ ಪ್ರದರ್ಶನದಿಂದಾಗಿ ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 325 ರನ್‌ಗಳ ಉತ್ತಮ ಮೊತ್ತವನ್ನು ಪೇರಿಸಿತ್ತು. ಆದರೆ ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ನಡೆಸಿದ ಕಿವೀಸ್ ಪಡೆ ಕೇವಲ 62 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ 263 ರನ್‌ಗಳ ಅಂತರದ ಭಾರೀ ಮುನ್ನಡೆ ಸಾಧಿಸಿತು. ಈ ಬೃಹತ್ ಹಿನ್ನಡೆ ಅನುಭವಿಸಿದ ಬಳಿಕ ಮತ್ತೆ ಪಂದ್ಯಕ್ಕೆ ಮರಳುವುದು ಯಾವ ತಂಡಕ್ಕಾದರೂ ಸುಲಭವಲ್ಲ.

ಈ ಶತಕ ಯಾವಾಗಲೂ ನೆನಪಿನಲ್ಲಿರುತ್ತದೆ: ಮುಂಬೈ ಟೆಸ್ಟ್ ಶತಕದ ಬಗ್ಗೆ ಮಯಾಂಕ್ ಅಗರ್ವಾಲ್ ಮಾತು

ಮಯಾಂಕ್ ಅಗರ್ವಾಲ್ ಪ್ರದರ್ಶನ

ಮಯಾಂಕ್ ಅಗರ್ವಾಲ್ ಪ್ರದರ್ಶನ

ಟೀಮ್ ಇಂಡಿಯಾ ಪರವಾಗಿ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ನೀಡಿದ ಅದ್ಭುತ ಪ್ರದರ್ಶನವೂ ಭಾರತದ ಗೆಲವಿನಲ್ಲಿ ಪ್ರಮುಖ ಪಾತ್ರವಹಿಸಿತು. ಒಂದು ತುದಿಯಲ್ಲಿ ಟೀಮ್ ಇಂಡಿಯಾ ದಾಂಡಿಗರು ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ್ದರೂ ಮಯಾಂಕ್ ಅಗರ್ವಾಲ್ ಗಟ್ಟಿಯಾಗಿ ಕ್ರೀಸ್‌ನಲ್ಲಿ ತಳವೂರಲು ಯಶಸ್ವಿಯಾಗಿದ್ದರು. ಈ ಮೂಲಕ ಭರ್ಜರಿ 150 ರನ್‌ಗಳ ಕೊಡುಗೆ ನೀಡಿದ್ದರು ಮಯಾಂಕ್. ಇನ್ನು ಎರಡನೇ ಇನ್ನಿಂಗ್ಸ್‌ನಲ್ಲಿಯೂ ಮಯಾಂಕ್ ಅಗರ್ವಾಲ್ ತಮ್ಮ ಉತ್ತಮ ಫಾರ್ಮ್ ಮುಂದುವರಿಸಿದರು. 62 ರನ್‌ಗಳ ಕೊಡುಗೆ ನೀಡುವ ಮೂಲಕ ಮತ್ತೊಮ್ಮೆ ಭಾರತದ ಪರ ಹೆಚ್ಚು ರನ್‌ಗಳ ಕೊಡುಗೆ ನೀಡಿದರು.

ಭಾರತೀಯ ಬೌಲರ್‌ಗಳ ಸಾಂಘಿಕ ಹೋರಾಟ

ಭಾರತೀಯ ಬೌಲರ್‌ಗಳ ಸಾಂಘಿಕ ಹೋರಾಟ

ಇನ್ನು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾದ ಬೌಲರ್‌ಗಳು ನೀಡಿದ ಸಾಂಘಿಕ ಪ್ರದರ್ಶನವೂ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದೆ. ಸ್ಪಿನ್ನರ್‌ಗಳಿಗೆ ನೆರವು ನೀಡುವ ಪಿಚ್‌ನಲ್ಲಿಯೂ ಟೀಮ್ ಇಂಡಿಯಾದ ವೇಗಿ ಮೊಹಮ್ಮದ್ ಸಿರಾಜ್ ಮೊದಲ ಇನ್ನಿಂಗ್ಸ್‌ನಲ್ಲಿ ಆರಂಭಿಕ ಆಘಾತ ನೀಡಿದರು. ಆರಂಭಿಕ ಮೂರು ವಿಕೆಟ್‌ಗಳು ಸಿರಾಜ್ ಪಾಲಾದವು. ನಂತರ ಆರ್ ಅಶ್ವಿನ್ ನಾಲ್ಕು ವಿಕೆಟ್ ಕಬಳಿಸಿದರೆ ಅಕ್ಷರ್ ಪಟೇಲ್ 2 ಹಾಗೂ ಜಯಂತ್ ಯಾದವ್ ಒಮದು ವಿಕೆಟ್ ಕಿತ್ತರು. ಇನ್ನು ಎರಡನೇ ಇನ್ನಿಂಗ್ಸ್‌ನಲ್ಲಿಯೂ ಆರ್ ಅಶ್ವಿನ್ ಮತ್ತೊಮ್ಮೆ ಕಿವೀಸ್ ಪಡೆಗೆ ಆಘಾತ ನೀಡಿದರು. ನಾಲ್ಕು ವಿಕೆಟ್‌ಗಳು ಅಶ್ವಿನ್ ಪಾಲಾದವು. ಇನ್ನು ನಾಲ್ಕನೇ ದಿನ ನ್ಯೂಜಿಲೆಂಡ್ ತಂಡ ಕೊನೆಯ ಐದು ವಿಕೆಟ್‌ಗಳನ್ನು ಕೇವಲ 28 ರನ್‌ಗಳ ಅಂತರದಲ್ಲಿ ಕಳೆದುಕೊಂಡಿತು. ಇದರಲ್ಲಿ ಜಯಂತ್ ಯಾದವ್ ನಾಲ್ಕು ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಸಿಕ್ಕ ಅವಕಾಶದಲ್ಲಿ ಜಯಂತ್ ಗಮನಾರ್ಹ ಪ್ರದರ್ಶನ ನೀಡಿದ್ದಾರೆ.

ಮುಂಬೈ ಟೆಸ್ಟ್ ನಂತರ ದ. ಆಪ್ರಿಕಾ ಪ್ರವಾಸಕ್ಕೆ ಭಾರತ ತಂಡ ಪ್ರಕಟ: ಅನುಭವಿ ಸ್ಥಾನ ಕಳೆದುಕೊಳ್ಳುವುದು ಬಹುತೇಕ ಖಚಿತ

ಅಜಾಜ್ ಪಟೇಲ್‌ಗೆ ದೊರೆಯದ ಸಾಥ್

ಅಜಾಜ್ ಪಟೇಲ್‌ಗೆ ದೊರೆಯದ ಸಾಥ್

ಇನ್ನು ಮುಂಬೈನ ವಾಂಖೆಡೆ ಕ್ರೀಡಾಂಗಣದ ಪಿಚ್‌ನಲ್ಲಿ ನ್ಯೂಜಿಲೆಂಡ್ ತಂಡದ ಸ್ಪಿನ್ನರ್ ಅಜಾಜ್ ಪಟೇಲ್ ಸ್ಮರಣೀಯ ಸಾಧನೆ ಮಾಡಿದ್ದಾರೆ. ಮೊದಲ ಇನ್ನಿಂಗ್ಸ್‌ನ್ಲಲಿ ಎಲ್ಲಾ ವಿಕೆಟ್‌ಗಳು ಕೂಡ ಅಜಾಜ್ ಪಾಲಾಯಿತು. ಆದರೆ ಅಜಾಜ್ ಪಟೇಲ್‌ಗೆ ಮತ್ತೊಂದು ತುದಿಯಿಂದ ಯಾವುದೇ ಬೌಲರ್‌ಗಳಿಂದಲೂ ಸಾಥ್ ದೊರೆಯಲಿಲ್ಲ. ಮೂವರು ಸ್ಪಿನ್ನರ್‌ಗಳೊಂದಿಗೆ ನ್ಯೂಜಿಲೆಂಡ್ ಕಣಕ್ಕಿಳಿದಿತ್ತಾದರೂ ಉಳಿದ ಆಟಗಾರರು ಪಿಚ್‌ನ ಮರ್ಮ ಅರಿಯುವಲ್ಲಿ ವಿಫಲವಾದರು. ಹೀಗಾಗಿ ಕಿವೀಸ್ ಪಡೆ ಭಾರೀ ಸೋಲಿಗೆ ಕಾರಣವಾಯಿತು. ಎರಡನೇ ಇನ್ನಿಂಗ್ಸ್‌ನಲ್ಲಿ ರಚಿನ್ ರವೀಂದ್ರ 3 ವಿಕೆಟ್ ಪಡೆದಿದ್ದರು.

ನ್ಯೂಜಿಲ್ಯಾಂಡ್ ವಿರುದ್ಧ ಗೆದ್ದ ನಂತರ ವೈರಲ್ ಆದ ವಿಶೇಷ ಫೋಟೋ | Oneindia Kannada

Story first published: Monday, December 6, 2021, 16:22 [IST]
Other articles published on Dec 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X