ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ ವನಿತೆಯರ ವಿರುದ್ಧ ಹ್ಯಾಟ್ರಿಕ್ ಜಯ ಸಾಧಿಸಿ ಸರಣಿ ವಶಪಡಿಸಿಕೊಂಡ ನ್ಯೂಜಿಲೆಂಡ್ ವನಿತೆಯರು

India vs New Zealand: New Zealand Women beat India women by 3 wickets in the 3rd ODI

ಒಂದೆಡೆ ಭಾರತ ಪ್ರವಾಸವನ್ನು ಕೈಗೊಂಡಿರುವ ವೆಸ್ಟ್ ಇಂಡೀಸ್ ಪುರುಷರ ಅಂತರರಾಷ್ಟ್ರೀಯ ಕ್ರಿಕೆಟ್ ತಂಡದ ವಿರುದ್ಧ ಭಾರತ ಪುರುಷರ ಅಂತರರಾಷ್ಟ್ರೀಯ ಕ್ರಿಕೆಟ್ ತಂಡ ಸೀಮಿತ ಓವರ್ ಸರಣಿಗಳಲ್ಲಿ ಸೆಣಸಾಟವನ್ನು ನಡೆಸುತ್ತಿದ್ದರೆ, ಮತ್ತೊಂದೆಡೆ ಭಾರತ ವನಿತೆಯರ ತಂಡ ನ್ಯೂಜಿಲೆಂಡ್ ಪ್ರವಾಸವನ್ನು ಕೈಗೊಂಡಿದ್ದು ಸೀಮಿತ ಓವರ್ ಸರಣಿಗಳಲ್ಲಿ ಕಿವೀಸ್ ವನಿತೆಯರ ತಂಡದ ವಿರುದ್ಧ ಹೋರಾಟ ನಡೆಸುತ್ತಿದೆ.

ಈ ಕಾರಣದಿಂದಲೇ ನಾನು ನನ್ನ ಮಗನ ಪಂದ್ಯಗಳನ್ನು ವೀಕ್ಷಿಸುವುದಿಲ್ಲ ಎಂದ ಸಚಿನ್!ಈ ಕಾರಣದಿಂದಲೇ ನಾನು ನನ್ನ ಮಗನ ಪಂದ್ಯಗಳನ್ನು ವೀಕ್ಷಿಸುವುದಿಲ್ಲ ಎಂದ ಸಚಿನ್!

ಹೌದು, ನ್ಯೂಜಿಲೆಂಡ್ ಪ್ರವಾಸವನ್ನು ಕೈಗೊಂಡಿರುವ ಭಾರತ ಮಹಿಳಾ ಕ್ರಿಕೆಟ್ ಅಂತರರಾಷ್ಟ್ರೀಯ ತಂಡ ಕಿವೀಸ್ ವಿರುದ್ಧದ ಏಕೈಕ ಟಿ ಟ್ವೆಂಟಿ ಹಾಗೂ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಸೆಣಸಾಟವನ್ನು ನಡೆಸುತ್ತಿದೆ. ಇತ್ತಂಡಗಳ ನಡುವೆ ಮೊದಲು ಆಯೋಜನೆಯಾಗಿದ್ದ ಏಕೈಕ ಟಿ ಟ್ವೆಂಟಿ ಪಂದ್ಯ ನಡೆಯಿತು. ಆ ಪಂದ್ಯದಲ್ಲಿ 18 ರನ್‌ಗಳ ಭರ್ಜರಿ ಜಯವನ್ನು ಸಾಧಿಸಿದ ನ್ಯೂಜಿಲೆಂಡ್ ವನಿತೆಯರು ನಂತರ ಆರಂಭವಾಗಿರುವ ಏಕದಿನ ಸರಣಿಯಲ್ಲಿಯೂ ಕೂಡ ತಮ್ಮ ಅಬ್ಬರವನ್ನು ಮುಂದುವರೆಸಿದ್ದಾರೆ. 5 ಪಂದ್ಯಗಳ ಏಕದಿನ ಸರಣಿಯ ಪ್ರಥಮ ಪಂದ್ಯದಲ್ಲಿ 62 ರನ್‌ಗಳ ಭರ್ಜರಿ ಜಯವನ್ನು ಸಾಧಿಸಿದ ನ್ಯೂಜಿಲೆಂಡ್ ವನಿತೆಯರ ತಂಡ ನಂತರ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ 3 ವಿಕೆಟ್‍ಗಳ ಜಯವನ್ನು ಸಾಧಿಸಿತ್ತು. ಹೀಗೆ ಮೊದಲೆರಡು ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸುವುದರ ಮೂಲಕ ಸರಣಿಯಲ್ಲಿ ಮುನ್ನಡೆಯನ್ನು ಸಾಧಿಸಿದ್ದ ನ್ಯೂಜಿಲೆಂಡ್ ವನಿತೆಯರು ಇಂದು ( ಫೆಬ್ರವರಿ 18 ) ನಡೆದ ಮೂರನೇ ಏಕದಿನ ಪಂದ್ಯದಲ್ಲಿಯೂ ಕೂಡ ಭಾರತೀಯ ವನಿತೆಯರಿಗೆ 3 ವಿಕೆಟ್‍ಗಳ ಸೋಲುಣಿಸುವುದರ ಮೂಲಕ 5 ಪಂದ್ಯಗಳ ಏಕದಿನ ಸರಣಿಯಲ್ಲಿ 3-0 ಅಂತರದ ಮುನ್ನಡೆಯೊಂದಿಗೆ ಸರಣಿಯನ್ನು ಕೈವಶ ಮಾಡಿಕೊಂಡಿದ್ದಾರೆ.

ನ್ಯೂಜಿಲೆಂಡ್‌ನ ಕ್ವೀನ್ಸ್‌ಟೌನ್ ನಗರದಲ್ಲಿರುವ ಜಾನ್ ಡೇವಿಸ್ ಓವಲ್ ಕ್ರೀಡಾಂಗಣದಲ್ಲಿ ಭಾರತೀಯ ಕಾಲಮಾನದ ಪ್ರಕಾರ 3.30AMಗೆ ಆರಂಭವಾದ ಮೂರನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ವನಿತೆಯರು ಬೌಲಿಂಗ್ ಆಯ್ದುಕೊಂಡು ಭಾರತೀಯ ವನಿತೆಯರನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಭಾರತೀಯ ವನಿತೆಯರ ತಂಡದ ಪರ ಆರಂಭಿಕ ಆಟಗಾರ್ತಿಯರಾಗಿ ಕಣಕ್ಕಿಳಿದ ಸಭಿನೆನಿ ಮೇಘನಾ ಮತ್ತು ಶೆಫಾಲಿ ವರ್ಮಾ 100 ರನ್‌ಗಳ ಜತೆಯಾಟವಾಡಿದರು. ಶೆಫಾಲಿ ವರ್ಮಾ 51 ರನ್ ಗಳಿಸಿ ಔಟ್ ಆದರೆ, ಸಭಿನೆನಿ ಮೇಘನಾ 61 ರನ್ ಗಳಿಸಿ ಪೆವಿಲಿಯನ್ ಸೇರಿದರು. ಇನ್ನುಳಿದಂತೆ ಯಸ್ತಿಕಾ ಭಾಟಿಯಾ 19, ನಾಯಕಿ ಮಿಥಾಲಿ ರಾಜ್ 23, ಹರ್ಮನ್ ಪ್ರೀತ್ ಕೌರ್ 13, ಸ್ನೇಹ್ ರಾಣಾ 11, ತಾನಿಯಾ ಭಾಟಿಯಾ 8, ಜೂಲನ್ ಗೋಸ್ವಾಮಿ 8, ಏಕ್ತಾ ಭಿಸ್ತ್ 3, ರೇಣುಕಾ ಸಿಂಗ್ ಶೂನ್ಯ ರನ್ ಗಳಿಸಿದರು. ಇನ್ನು ಟೀಮ್ ಇಂಡಿಯಾ ಪರ ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ದೀಪ್ತಿ ಶರ್ಮಾ 69 ಎಸೆತಗಳಲ್ಲಿ 69 ರನ್ ಗಳಿಸಿ ಉತ್ತಮ ಪ್ರದರ್ಶನ ನೀಡಿದರು. ಹೀಗೆ ಸಭಿನೆನಿ ಮೇಘನಾ, ಶೆಫಾಲಿ ವರ್ಮಾ ಮತ್ತು ದೀಪ್ತಿ ಶರ್ಮಾ ಅವರ ಅರ್ಧಶತಕಗಳ ನೆರವಿನಿಂದ ಭಾರತೀಯ ವನಿತೆಯರ ತಂಡ 49.3 ಓವರ್‌ಗಳಲ್ಲಿ 279 ರನ್‌ಗಳಿಗೆ ಆಲ್ ಔಟ್ ಆಯಿತು.

ಡೇವಿಡ್ ವಾರ್ನರ್ ನಂತರ ಆಸ್ಟ್ರೇಲಿಯಾದ ಮತ್ತೋರ್ವನ ಜೊತೆ ಸನ್ ರೈಸರ್ಸ್ ಕಿರಿಕ್!ಡೇವಿಡ್ ವಾರ್ನರ್ ನಂತರ ಆಸ್ಟ್ರೇಲಿಯಾದ ಮತ್ತೋರ್ವನ ಜೊತೆ ಸನ್ ರೈಸರ್ಸ್ ಕಿರಿಕ್!

ಶ್ರೇಯಸ್ ವರ್ಷದ ದುಡಿಮೆ ಎಷ್ಟು?? ಹೇಗಿದೆ ಲೈಫ್ ಸ್ಟೈಲ್?? | Oneindia Kannada

ಅತ್ತ ಭಾರತೀಯ ವನಿತೆಯರ ತಂಡ ನೀಡಿದ 280 ರನ್‌ಗಳ ಗುರಿಯನ್ನು ಅಂತಿಮ ಓವರ್‌ನಲ್ಲಿ ಮುಟ್ಟಿದ ನ್ಯೂಜಿಲೆಂಡ್ ವನಿತೆಯರ ತಂಡ 49.1 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 280 ರನ್ ಕಲೆಹಾಕಿ 3 ವಿಕೆಟ್‍ಗಳ ಗೆಲುವನ್ನು ಸಾಧಿಸಿತು. ನ್ಯೂಜಿಲೆಂಡ್ ಪರ ಆರಂಭಿಕ ಆಟಗಾರ್ತಿಯರಾಗಿ ಕಣಕ್ಕಿಳಿದ ಸೋಫಿ ಡಿವೈನ್ ಶೂನ್ಯಕ್ಕೆ ಪೆವಿಲಿಯನ್ ಸೇರಿದರೆ, ಸೂಸಿ ಬೇಟ್ಸ್ ಕೇವಲ 5 ರನ್ ಗಳಿಸಿ ನೆಲಕಚ್ಚಿದರು. ಹೀಗೆ 14 ರನ್‌ಗಳಿಗೆ ತನ್ನ ಮೊದಲೆರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ನ್ಯೂಜಿಲೆಂಡ್ ತಂಡಕ್ಕೆ ಮೂರನೇ ಮತ್ತು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅಮೇಲಿಯಾ ಕೆರ್ ಮತ್ತು ಆಮಿ ಸತರ್ಥ್ ವೇಟ್ ತಲಾ ಅರ್ಧ ಶತಕ ಸಿಡಿಸಿ ಆಸರೆಯಾದರು. ಅಮೇಲಿಯಾ ಕೆರ್ 67 ರನ್ ಗಳಿಸಿದರೆ, ಆ್ಯಮಿ ಸತರ್ಥ್ ವೇಟ್ 59 ರನ್ ಗಳಿಸಿದರು. ಇನ್ನುಳಿದಂತೆ ಮ್ಯಾಡಿ ಗ್ರೀನ್ 24, ಲಿಯಾ ತಹುಹು 1, ಕೆಟ್ಟೆ ಮಾರ್ಟಿನ್ 35 ರನ್ ಕಲೆಹಾಕಿದರೆ, ಅಂತಿಮವಾಗಿ ಲೌರೆನ್ ಡೌನ್ ಅಜೇಯ 64 ಮತ್ತು ಫ್ರಾನ್ಸೆಸ್ ಮ್ಯಾಕ್ ಅಜೇಯ 17 ರನ್ ಕಲೆ ಹಾಕಿದರು. 52 ಎಸೆತಗಳಲ್ಲಿ 64 ರನ್ ಬಾರಿಸುವುದರ ಮೂಲಕ ನ್ಯೂಜಿಲೆಂಡ್ ತಂಡವನ್ನು ಗೆಲುವಿನ ದಡ ಸೇರಿಸಿದ ಲೌರೆನ್ ಡೌನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Story first published: Friday, February 18, 2022, 13:25 [IST]
Other articles published on Feb 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X