ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ ಬ್ಯಾಟಿಂಗ್ ವೇಳೆ ಆನ್‌ಲೈನ್ ಶಾಪಿಂಗ್ ಮರೆತ ಜನ, ಯುಪಿಐ ವಹಿವಾಟು ಕೂಡ ಕುಸಿತ

India Vs Pakistan: Online Shopping And UPI Transactions Down While Virat Kohli Batting

ಭಾರತ-ಪಾಕಿಸ್ತಾನ ಪಂದ್ಯವೆಂದರೆ ಹಾಗೆ, ಕೋಟ್ಯಂತರ ಮಂದಿ ಈ ಪಂದ್ಯ ಕಣ್ತುಂಬಿಕೊಳ್ಳಲು ಕಾಯುತ್ತಿರುತ್ತಾರೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಭಾರತ-ಪಾಕಿಸ್ತಾನ ಪಂದ್ಯ ನಡೆಯಿತು. ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅತ್ಯದ್ಭುತ ಇನ್ನಿಂಗ್ಸ್ ಆಡಿದರು.

ಅಚ್ಚರಿಯ ಸಂಗತಿ ಎಂದರೆ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮೂಲಕ ಭಾರತದಲ್ಲಿ ದೀಪಾವಳಿ ಶಾಪಿಂಗ್ ಅನ್ನೇ ಕಡಿಮೆ ಮಾಡಿದ್ದರು. ಹೌದು, ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುವಾಗ ಭಾರತದಲ್ಲಿ ಆನ್‌ಲೈನ್ ಶಾಪಿಂಗ್ ಪ್ರಮಾಣ ಶೇಕಡ 20ಕ್ಕೆ ಇಳಿಕೆ ಕಂಡಿತ್ತು. ಯುಪಿಐ ವಹಿವಾಟು ಕೂಡ ಶೇಕಡ 7-20 ಕ್ಕೆ ಕಡಿಮೆಯಾಯಿತು. ಕೊಹ್ಲಿ 53 ಎಸೆತಗಳಲ್ಲಿ 82 ರನ್ ಗಳಿಸಿದರು, ಗ್ರೂಪ್ 2, ಸೂಪರ್ 12 ಪಂದ್ಯದಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ 4 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿತು.

T20 World Cup: ಭಾರತ-ಪಾಕಿಸ್ತಾನ ಪಂದ್ಯ ನೋಡಿ ಆಸ್ಟ್ರೇಲಿಯಾ ಆಟಗಾರ ಹೇಳಿದ್ದೇನು ಗೊತ್ತಾ?T20 World Cup: ಭಾರತ-ಪಾಕಿಸ್ತಾನ ಪಂದ್ಯ ನೋಡಿ ಆಸ್ಟ್ರೇಲಿಯಾ ಆಟಗಾರ ಹೇಳಿದ್ದೇನು ಗೊತ್ತಾ?

ಭಾರತ್‌ಪೇ ಡೇಟಾ ಪ್ರಕಾರ, ಭಾರತ ಮತ್ತು ಪಾಕಿಸ್ತಾನ ಪಂದ್ಯ ಪ್ರಾರಂಭವಾಗುವ ಮೊದಲು ದೀಪಾವಳಿ ಶಾಪಿಂಗ್ ಉತ್ತುಂಗದಲ್ಲಿತ್ತು. ಯುಪಿಐ ವಹಿವಾಟುಗಳಲ್ಲಿ 7% ಕುಸಿತದ ನಂತರ, ವಿರಾಟ್ ಕೊಹ್ಲಿ ಬ್ಯಾಟಿಂಗ್ ಆರಂಭಿಸಿದಾಗ ಭಾರಿ ಕುಸಿತ ಕಂಡಿತು. ಪಂದ್ಯ ಮುಗಿದಾಗ ಯುಪಿಐ ವಹಿವಾಟುಗಳು ಸಹಜ ಸ್ಥಿತಿಗೆ ಮರಳಿದವು. ಭಾರತ ಪಾಕಿಸ್ತಾನ ಪಂದ್ಯದ ವೇಳೆ ಅಂದರೆ ಮಧ್ಯಾಹ್ನ 1:30 ರಿಂದ ಸಂಜೆ 5:45 ರವರೆಗೆ ಶಾಪಿಂಗ್ ಪ್ರಮಾಣ ಕಡಿಮೆಯಾಯಿತು.

ಯುಪಿಐ ವಹಿವಾಟುಗಳ ಸಂಖ್ಯೆ ಕುಸಿತ

ಯುಪಿಐ ವಹಿವಾಟುಗಳ ಸಂಖ್ಯೆ ಕುಸಿತ

ಭಾರತ ಮತ್ತು ಪಾಕಿಸ್ತಾನ ಪಂದ್ಯಗಳನ್ನು ಕ್ರಿಕೆಟ್ ಅಭಿಮಾನಿಗಳಲ್ಲದವರೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ನೋಡುತ್ತಾರೆ. ವಾಸ್ತವವಾಗಿ, ಪಂದ್ಯ ಪ್ರಾರಂಭವಾದ ತಕ್ಷಣ, ಯುಪಿಐ ವಹಿವಾಟುಗಳ ಸಂಖ್ಯೆಯಲ್ಲಿ ತೀವ್ರ ಕುಸಿತ ಕಂಡುಬಂದಿದೆ, ಇದು ಶಾಪಿಂಗ್‌ನಿಂದ ಪಂದ್ಯವನ್ನು ವೀಕ್ಷಿಸುವತ್ತ ಬದಲಾವಣೆಯನ್ನು ಸೂಚಿಸುತ್ತದೆ. ಪಾಕಿಸ್ತಾನವು ಬ್ಯಾಟಿಂಗ್ ಮಾಡುವಾಗ, ಹಬ್ಬದ ಶಾಪಿಂಗ್ ಸಮಯದಲ್ಲಿ ಯುಪಿಐ ವಹಿವಾಟಿನ ಸರಾಸರಿ ಸಾಮಾನ್ಯಕ್ಕಿಂತ ಕೆಳಗಿತ್ತು.

ಕೊಹ್ಲಿ ಬ್ಯಾಟಿಂಗ್‌ ಮಾಡುವ ಸಂದರ್ಭದಲ್ಲಿ ಆನ್‌ಲೈನ್ ಶಾಪಿಂಗ್‌ನಲ್ಲಿ ಭಾರಿ ಕುಸಿತ ಕಂಡುಬಂದಿತು. ಸಂಜೆ 6 ಗಂಟೆಯ ವೇಳೆಗೆ, ಯುಪಿಐ ವಹಿವಾಟುಗಳು ಮತ್ತೆ ಸರಾಸರಿಗಿಂತ ಹೆಚ್ಚಿನ ಮಿತಿಯನ್ನು ಮುಟ್ಟುತ್ತವೆ.

ಕೊಹ್ಲಿ ರನ್‌ಗಳಿಸದಿದ್ದಾಗ ಜನರು ಹೀಯಾಳಿಸಿದ್ರು, ಒಮ್ಮೆ ಆತನ ರೆಕಾರ್ಡ್‌ ನೋಡಬಾರದಿತ್ತೇ? ಎಂದ ಬ್ರೆಟ್‌ ಲೀ

ಪಂದ್ಯದ ನಂತರ ಶಾಪಿಂಗ್ ಸಹಜ ಸ್ಥಿತಿಗೆ

ಪಂದ್ಯದ ನಂತರ ಶಾಪಿಂಗ್ ಸಹಜ ಸ್ಥಿತಿಗೆ

"ಭಾನುವಾರ ಬೆಳಿಗ್ಗೆ 9 ಗಂಟೆಯಿಂದ ಸಂಜೆಯವರೆಗೆ ಯುಪಿಐ ವಹಿವಾಟುಗಳು - ಪಂದ್ಯವು ಆಸಕ್ತಿದಾಯಕವಾಗುತ್ತಿದ್ದಂತೆ, ಆನ್‌ಲೈನ್ ಶಾಪಿಂಗ್ ನಿಲ್ಲಿಸಲಾಯಿತು - ಮತ್ತು ಪಂದ್ಯ ಮುಗಿದ ನಂತರ ಆನ್‌ಲೈನ್ ಶಾಪಿಂಗ್‌ನಲ್ಲಿ ಭಾರಿ ಏರಿಕೆ ಕಂಡು ಬಂದಿತು!" ಮ್ಯಾಕ್ಸ್ ಲೈಫ್ ಮುಖ್ಯ ಹೂಡಿಕೆ ಅಧಿಕಾರಿ ಮಿಹಿರ್ ವೋರಾ ಟ್ವೀಟ್ ಮಾಡಿದ್ದಾರೆ.

ಜನ ದೀಪಾವಳಿ ಸಂದರ್ಭದಲ್ಲಿ ಸಾಮಾನ್ಯ ದಿನಕ್ಕಿಂತ ಹೆಚ್ಚಿನ ಶಾಪಿಂಗ್ ಮಾಡುತ್ತಾರೆ. ದೀಪಾವಳಿಗಾಗಿ ಹಲವು ಆನ್‌ಲೈನ್ ಮಾರಾಟಗಾರರು ರಿಯಾಯಿತಿಯನ್ನು ಘೋಷಿಸಿದ್ದರು.

ಪಂದ್ಯವನ್ನು ವೀಕ್ಷಿಸಿದ 1.6 ಕೋಟಿ ವೀಕ್ಷಕರು

ಪಂದ್ಯವನ್ನು ವೀಕ್ಷಿಸಿದ 1.6 ಕೋಟಿ ವೀಕ್ಷಕರು

ಭಾರತ-ಪಾಕಿಸ್ತಾನ ಪಂದ್ಯವನ್ನು ದಾಖಲೆಯ ಪ್ರಮಾಣದ ಜನ ವೀಕ್ಷಣೆ ಮಾಡಿದರು. ಪಂದ್ಯದ ಕೊನೆಯ ನಾಲ್ಕು ಓವರ್‌ಗಳಲ್ಲಿ, ಡಿಸ್ನಿ+ಹಾಟ್‌ಸ್ಟಾರ್ ಏಕಕಾಲದಲ್ಲಿ 1.6 ಕೋಟಿಗೂ ಹೆಚ್ಚು ವೀಕ್ಷಕರನ್ನು ಹೊಂದಿತ್ತು. ಸ್ಟಾರ್ ಸ್ಪೋರ್ಟ್ಸ್ ಇನ್ನೂ ಡೇಟಾವನ್ನು ಬಿಡುಗಡೆ ಮಾಡದಿದ್ದರೂ, ಇದುವರೆಗೆ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಕ್ರಿಕೆಟ್ ಪಂದ್ಯವಾಗಿದೆ ಎನ್ನಲಾಗುತ್ತಿದೆ.

ವಿರಾಟ್ 53 ಎಸೆತಗಳಲ್ಲಿ ಆರು ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ 82 ರನ್ ಗಳಿಸಿ ತಮ್ಮ ತಂಡವನ್ನು ನಾಲ್ಕು ವಿಕೆಟ್‌ಗಳ ಗೆಲುವಿಗೆ ಕಾರಣರಾದರು. ವಿರಾಟ್ ಅವರ ಹೊಡೆತಕ್ಕೆ 'ಮ್ಯಾನ್ ಆಫ್ ದಿ ಮ್ಯಾಚ್' ಪಡೆದರು.

Story first published: Monday, October 24, 2022, 21:12 [IST]
Other articles published on Oct 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X