ಭಾರತ vs ದ.ಆಫ್ರಿಕಾ: ಮಕ್ಕಳ ರೀತಿ ಆಡುವುದನ್ನು ಬಿಡಬೇಕು ಎಂದು ಕೊಹ್ಲಿಗೆ ಚಾಟಿ ಬೀಸಿದ ಮಾಜಿ ಕ್ರಿಕೆಟಿಗ

ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡಿರುವ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಸದ್ಯ ಹರಿಣಗಳ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗವಹಿಸುತ್ತಿದೆ. ಇತ್ತಂಡಗಳ ನಡುವೆ ಈಗಾಗಲೇ ಮೊದಲೆರಡು ಟೆಸ್ಟ್ ಪಂದ್ಯಗಳು ಮುಗಿದಿದ್ದು ಈ ಎರಡೂ ತಂಡಗಳು ಕೂಡ ತಲಾ ಒಂದೊಂದು ಪಂದ್ಯದಲ್ಲಿ ಜಯ ಸಾಧಿಸಿರುವುದರಿಂದ ಇದೀಗ ಪ್ರಸ್ತುತ ನಡೆಯುತ್ತಿರುವ ತೃತೀಯ ಟೆಸ್ಟ್ ಪಂದ್ಯ ಕುತೂಹಲವನ್ನು ಮೂಡಿಸಿದೆ.

ಭಾರತದ ಈ ‌ಅಟಗಾರನಿಗೆ ಮರ್ಯಾದೆ ಕೊಡಿ ಎಂದು ಬಿಸಿಸಿಐಗೆ ಬುದ್ಧಿ ಹೇಳಿದ ದ.ಆಫ್ರಿಕಾದ ಪೊಲಾಕ್!ಭಾರತದ ಈ ‌ಅಟಗಾರನಿಗೆ ಮರ್ಯಾದೆ ಕೊಡಿ ಎಂದು ಬಿಸಿಸಿಐಗೆ ಬುದ್ಧಿ ಹೇಳಿದ ದ.ಆಫ್ರಿಕಾದ ಪೊಲಾಕ್!

ಹೌದು, ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಕೇಪ್ ಟೌನ್ ನ್ಯೂಲ್ಯಾಂಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಫಲಿತಾಂಶವು ಸರಣಿಯಲ್ಲಿ ಯಾವ ತಂಡ ವಿಜೇತರಾಗಿ ಹೊರಹೊಮ್ಮಲಿದೆ ಎಂಬ ಸ್ಪಷ್ಟತೆಯನ್ನು ನೀಡಲಿದ್ದು ಭಾರಿ ನಿರೀಕ್ಷೆಗಳನ್ನು ಹೊಂದಿದೆ. ಇನ್ನು ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ತೃತೀಯ ಟೆಸ್ಟ್ ಪಂದ್ಯ ಇದೀಗ ಅಂತಿಮ ಘಟ್ಟಕ್ಕೆ ಬಂದು ತಲುಪಿದ್ದು ಮೂರನೇ ದಿನದಾಟದಂದು ತನ್ನ ಎರಡನೇ ಇನ್ನಿಂಗ್ಸ್ ಮುಗಿಸಿದ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾಕ್ಕೆ ಗೆಲ್ಲಲು 212 ರನ್‌ಗಳ ಗುರಿಯನ್ನು ನೀಡಿದೆ. ಹೀಗೆ ಭಾರತ ಗುರಿಯನ್ನು ನೀಡಿದ ನಂತರ ತನ್ನ ಎರಡನೇ ಇನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ದಕ್ಷಿಣ ಆಫ್ರಿಕಾ ಪರ ನಾಯಕ ಡೀನ್ ಎಲ್ಗರ್ ಮತ್ತು ಏಡನ್ ಮರ್ಕ್ರಮ್ ಆರಂಭಿಕ ಆಟಗಾರರಾಗಿ ಕಣಕ್ಕಿಳಿದರು.

ಐಪಿಎಲ್ 2022 ಮೆಗಾ ಹರಾಜು: ಆಟಗಾರರ ನೋಂದಣಿಗೆ ಅಂತಿಮ ದಿನಾಂಕ ಪ್ರಕಟಿಸಿದ ಬಿಸಿಸಿಐಐಪಿಎಲ್ 2022 ಮೆಗಾ ಹರಾಜು: ಆಟಗಾರರ ನೋಂದಣಿಗೆ ಅಂತಿಮ ದಿನಾಂಕ ಪ್ರಕಟಿಸಿದ ಬಿಸಿಸಿಐ

ಹೀಗೆ ಮೂರನೇ ದಿನದಾಟದಂದು ಡೀನ್ ಎಲ್ಗರ್ ರವಿಚಂದ್ರನ್ ಅಶ್ವಿನ್ ಎಸೆದ ಎಸೆತದಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದಿದ್ದರು. ಟೀಮ್ ಇಂಡಿಯಾ ಆಟಗಾರರು ಈ ಎಸೆತದಲ್ಲಿ ಎಲ್‌ಬಿಡಬ್ಲ್ಯು ಔಟ್ ಮನವಿ ಮಾಡಿದ ಕೂಡಲೇ ಕಣದಲ್ಲಿದ್ದ ಅಂಪೈರ್ ಮರೈಸ್ ಎರಾಸ್ಮಸ್ ಔಟ್ ಎಂದು ತೀರ್ಪು ನೀಡಿದರು. ಆದರೆ ಈ ತೀರ್ಪನ್ನು ಒಪ್ಪದ ಡೀನ್ ಎಲ್ಗರ್ ಡಿಆರ್‌ಎಸ್ ರಿವ್ಯೂ ಮೊರೆ ಹೋದರು. ನಂತರ ಈ ಎಸೆತವನ್ನು ಪರಿಶೀಲಿಸಿದಾಗ ಪಂದ್ಯವನ್ನು ಪ್ರಸಾರ ಮಾಡುತ್ತಿರುವ ಸೂಪರ್ ಸ್ಪೋರ್ಟ್ ಚಾನೆಲ್ ಚೆಂಡು ಗೆರೆಯ ಮೇಲೆ ಬಿದ್ದರೂ ಸಹ ವಿಕೆಟ್ ಮೇಲೆ ಹಾದು ಹೋಗುವ ರೀತಿಯ ಚಿತ್ರಣವನ್ನು ತೋರಿಸಿ ನಾಟ್ ಔಟ್ ಎಂದು ತೀರ್ಪನ್ನು ನೀಡಿತ್ತು.

ಅಲ್ಲು ಅರ್ಜುನ್ 'ಪುಷ್ಪ' ಅವತಾರದಲ್ಲಿ ಸಂದೇಶ ನೀಡಿದ ರವೀಂದ್ರ ಜಡೇಜಾಅಲ್ಲು ಅರ್ಜುನ್ 'ಪುಷ್ಪ' ಅವತಾರದಲ್ಲಿ ಸಂದೇಶ ನೀಡಿದ ರವೀಂದ್ರ ಜಡೇಜಾ

ಹೀಗೆ ಗೆರೆ ಮೇಲೆ ಬಿದ್ದ ಚೆಂಡು ವಿಕೆಟ್ ಮೇಲೆ ಹಾದು ಹೋಗುವ ರೀತಿ ತೋರಿಸಿದ ಸೂಪರ್ ಸ್ಪೋರ್ಟ್ ವಿರುದ್ಧ ಇದೀಗ ಸಾಮಾಜಿಕ ಜಾಲತಾಣದ ತುಂಬಾ ಟೀಕೆಗಳು ವ್ಯಕ್ತವಾಗುತ್ತಿದ್ದು ಆ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಕೂಡಾ ಮೈದಾನದಲ್ಲಿಯೇ ಅಸಮಾಧಾನವನ್ನು ಹೊರಹಾಕಿದ್ದರು. ವಿರಾಟ್ ಕೊಹ್ಲಿಯ ಈ ನಡೆಯ ಕುರಿತಾಗಿ ಇದೀಗ ಪ್ರತಿಕ್ರಿಯಿಸಿರುವ ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಈ ಕೆಳಕಂಡಂತೆ ಕಿಡಿಕಾರಿದ್ದಾರೆ.

ವಿರಾಟ್ ಕೊಹ್ಲಿ ನಡೆಯನ್ನು ಅಪ್ರಬುದ್ಧ ಎಂದ ಗಂಭೀರ್

ವಿರಾಟ್ ಕೊಹ್ಲಿ ನಡೆಯನ್ನು ಅಪ್ರಬುದ್ಧ ಎಂದ ಗಂಭೀರ್

ಡೀನ್ ಎಲ್ಗರ್ ಎಲ್‌ಬಿಡಬ್ಲ್ಯು ಡಿ ಆರ್ ಎಸ್ ತೀರ್ಪಿನ ಕುರಿತಾಗಿ ಮೈದಾನದಲ್ಲಿಯೇ ಅಸಮಾಧಾನವನ್ನು ವ್ಯಕ್ತಪಡಿಸಿದ ವಿರಾಟ್ ಕೊಹ್ಲಿ ನಡೆಯ ಕುರಿತು ಪ್ರತಿಕ್ರಿಯಿಸಿರುವ ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಕೊಹ್ಲಿಯನ್ನು ಅಪ್ರಬುದ್ಧ ಎಂದು ಕರೆದಿದ್ದಾರೆ. ಈ ಮೂಲಕ ಮೈದಾನದಲ್ಲಿ ಚಿಕ್ಕಮಕ್ಕಳ ರೀತಿ ವರ್ತಿಸುವುದನ್ನು ಬಿಡಬೇಕು ಎಂದು ಗೌತಮ್ ಗಂಭೀರ್ ಕೊಹ್ಲಿ ನಡೆಗೆ ಚಾಟಿ ಬೀಸಿದ್ದಾರೆ.

ಡಿಆರ್‌ಎಸ್ ತೀರ್ಪಿನ ಕುರಿತು ಮೈದಾನದಲ್ಲಿ ಅಸಮಾಧಾನ ಹೊರಹಾಕಿದ್ದ ಕೊಹ್ಲಿ

ಡಿಆರ್‌ಎಸ್ ತೀರ್ಪಿನ ಕುರಿತು ಮೈದಾನದಲ್ಲಿ ಅಸಮಾಧಾನ ಹೊರಹಾಕಿದ್ದ ಕೊಹ್ಲಿ

ಡೀನ್ ಎಲ್ಗರ್ ಎಲ್‌ಬಿಡಬ್ಲ್ಯು ಡಿ ಆರ್ ಎಸ್ ತೀರ್ಪು ಹೊರಬೀಳುತ್ತಿದ್ದಂತೆಯೇ ಮೈದಾನದಲ್ಲಿ ಅಚ್ಚರಿಯನ್ನು ವ್ಯಕ್ತಪಡಿಸಿದ ವಿರಾಟ್ ಕೊಹ್ಲಿ ಸ್ಟಂಪ್ ಬಳಿ ತೆರಳಿ ಅಳವಡಿಸಲಾಗಿದ್ದ ಮೈಕ್ ಮೂಲಕ ಅಸಮಾಧಾನವನ್ನು ಹೊರಹಾಕಿದರು. ಮೈಕ್ ಬಳಿ ತೆರಳಿದ ಕೊಹ್ಲಿ ಕೇವಲ ಎದುರಾಳಿ ತಂಡವನ್ನು ಗಮನಿಸದೇ ನಿಮ್ಮ ತಂಡದ ಕಡೆಗೂ ಗಮನವನ್ನು ಹರಿಸಿ ಎಂದು ಕೋಪದಿಂದ ಹೇಳಿದ್ದರು. ಕೊಹ್ಲಿಯ ಈ ನಡೆಯ ಕುರಿತಾಗಿಯೇ ಗಂಭೀರ್ ಇದೀಗ ಅಸಮಾಧಾನವನ್ನು ಹೊರಹಾಕಿದ್ದಾರೆ. ಓರ್ವ ಅಂತರರಾಷ್ಟ್ರೀಯ ಕ್ರಿಕೆಟ್ ತಂಡದ ನಾಯಕನಾಗಿ ಈ ರೀತಿ ಮೈದಾನದಲ್ಲಿ ವರ್ತಿಸುವುದು ಸರಿಯಲ್ಲ ಎಂದು ಗಂಭೀರ್ ಬೇಸರ ವ್ಯಕ್ತಪಡಿಸಿದ್ದಾರೆ.

ಡಿಆರ್‌ಎಸ್ ಮೇಲೆ ನಂಬಿಕೆಯೇ ಹೋಯ್ತು ಎನ್ನುತ್ತಿರುವ ಕ್ರಿಕೆಟ್ ಅಭಿಮಾನಿಗಳು

ಡಿಆರ್‌ಎಸ್ ಮೇಲೆ ನಂಬಿಕೆಯೇ ಹೋಯ್ತು ಎನ್ನುತ್ತಿರುವ ಕ್ರಿಕೆಟ್ ಅಭಿಮಾನಿಗಳು

ಇನ್ನು ಡೀನ್ ಎಲ್ಗರ್ ಔಟ್ ಕುರಿತಾಗಿ ನೀಡಲಾದ ವಿವಾದಾತ್ಮಕ ತೀರ್ಪಿನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ದೊಡ್ಡ ಮಟ್ಟದ ಚರ್ಚೆಗಳು ನಡೆದಿದ್ದು, ನೆಟ್ಟಿಗರು ಡಿಆರ್‌ಎಸ್ ಮೇಲೆ ಇದ್ದ ನಂಬಿಕೆಯೇ ಹೋಯ್ತು ಎಂದು ಬೇಸರವನ್ನು ವ್ಯಕ್ತಪಡಿಸಿದ್ದಾರೆ. ನ್ಯಾಯಯುತ ಆಟಕ್ಕೆ ಸಹಾಯವಾಗಲಿ ಎಂದು ತಂತ್ರಜ್ಞಾನವನ್ನು ಬಳಸಿದರೆ, ಅದೇ ತಂತ್ರಜ್ಞಾನದ ಮೂಲಕ ಇದೀಗ ತಪ್ಪು ತೀರ್ಪನ್ನು ನೀಡುತ್ತಿರುವುದರ ಕುರಿತಾಗಿ ಕ್ರಿಕೆಟ್ ಅಭಿಮಾನಿಗಳು ಕಿಡಿಕಾರಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, January 14, 2022, 15:08 [IST]
Other articles published on Jan 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X