ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ದ.ಆಫ್ರಿಕಾ: ಸ್ಮಿತ್ ದಾಖಲೆ ಮುರಿದ ಮಯಾಂಕ್ ಅಗರ್ವಾಲ್

Mayank Agarwal Double Ton Crushes Steve Smith | Oneindia Kannada
India vs South Africa: Mayank Agarwal overtakes Steve Smith with record knock

ವಿಶಾಖಪಟ್ಟಣ, ಅಕ್ಟೋಬರ್ 3: ಟೆಸ್ಟ್‌ ಕ್ರಿಕೆಟ್‌ ಮಟ್ಟಿಗೆ 2019ರ ವರ್ಷ ಸ್ಫೂರ್ತಿದಾಯವೆನಿಸಿದೆ. ಈ ವರ್ಷ ಆ್ಯಷಸ್ ಸರಣಿ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ್ದ ಸ್ಟೀವ್ ಸ್ಮಿತ್ ಅಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಸ್ಮಿತ್ ಪ್ರದರ್ಶನದಿಂದಾಗಿ ಆ್ಯಷಸ್ ಸರಣಿಯಲ್ಲಿ ಆಸೀಸ್ 2-2ರ ಸಮಬಲ ಸಾಧಿಸಿತ್ತು.

ಭಾರತ vs ದಕ್ಷಿಣ ಆಫ್ರಿಕಾ: ಹೊಸ ಇತಿಹಾಸ ಬರೆದ ಹಿಟ್‌ಮ್ಯಾನ್ ರೋಹಿತ್!ಭಾರತ vs ದಕ್ಷಿಣ ಆಫ್ರಿಕಾ: ಹೊಸ ಇತಿಹಾಸ ಬರೆದ ಹಿಟ್‌ಮ್ಯಾನ್ ರೋಹಿತ್!

ಆ್ಯಷಸ್ ಸರಣಿಯ ಆಟದಿಂದಾಗಿ 2019ರಲ್ಲಿ ಟೆಸ್ಟ್‌ ಕ್ರಿಕೆಟ್‌ ಇನ್ನಿಂಗ್ಸ್‌ ಒಂದರಲ್ಲಿ ಅತ್ಯಧಿಕ ರನ್ ದಾಖಲೆ ಪಟ್ಟಿಯಲ್ಲಿ ಸ್ಮಿತ್ ಮೊದಲ ಸ್ಥಾನದಲ್ಲಿದ್ದರು. ಆದರೆ ಭಾರತದ ಮಯಾಂಕ್ ಅಗರ್ವಾಲ್, ಸ್ಮಿತ್‌ ಅವರನ್ನು ಈ ಪಟ್ಟಿಯಿಂದ ಕೆಳಗಿಳಿಸಿದ್ದಾರೆ.

ಭಾರತ vs ದ.ಆಫ್ರಿಕಾ: 47 ವರ್ಷಗಳ ದಾಖಲೆ ಮುರಿದ ರೋಹಿತ್-ಮಯಾಂಕ್!ಭಾರತ vs ದ.ಆಫ್ರಿಕಾ: 47 ವರ್ಷಗಳ ದಾಖಲೆ ಮುರಿದ ರೋಹಿತ್-ಮಯಾಂಕ್!

ವಿಶಾಖಪಟ್ಟಣದಲ್ಲಿ ಗುರುವಾರ (ಅಕ್ಟೋಬರ್ 3) ನಡೆದ ಭಾರತ-ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ದ್ವಿಶತಕ ಬಾರಿಸಿದ ಮಯಾಂಕ್, ಸ್ಮಿತ್ ದಾಖಲೆ ಮುರಿದಿದ್ದಾರೆ.

ಸ್ಮಿತ್ ಭರ್ಜರಿ ಬ್ಯಾಟಿಂಗ್‌

ಸ್ಮಿತ್ ಭರ್ಜರಿ ಬ್ಯಾಟಿಂಗ್‌

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ನಲ್ಲಿ ಚೆಂಡು ವಿರೂಪದಲ್ಲಿ ಪಾಲ್ಗೊಂಡು ಒಂದು ವರ್ಷದ ನಿಷೇಧ ಶಿಕ್ಷೆಗೀಡಾಗಿದ್ದ ಸ್ಮಿತ್, 16 ತಿಂಗಳ ಬಳಿಕ ಆ್ಯಷಸ್ ಟೆಸ್ಟ್‌ ಸರಣಿಗೆ ಮರಳಿದ್ದರು. 4ನೇ ಆ್ಯಷಸ್ ಟೆಸ್ಟ್‌ನ ಮೊದಲನೇ ಇನ್ನಿಂಗ್ಸ್‌ನಲ್ಲಿ 211 ರನ್ ಬಾರಿಸಿದ್ದರು. ಇದು ಈ ವರ್ಷದಲ್ಲಿ ಟೆಸ್ಟ್‌ ಇನ್ನಿಂಗ್ಸ್‌ನಲ್ಲಿ ದಾಖಲಾದ ಅತ್ಯಧಿಕ ರನ್‌ ಆಗಿ ಗುರುತಿಸಿಕೊಂಡಿತ್ತು.

ಮಯಾಂಕ್ ಅಬ್ಬರದಾಟ

ಮಯಾಂಕ್ ಅಬ್ಬರದಾಟ

ವಿಶಾಖಪಟ್ಟಣದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ 2ನೇ ದಿನದಾಟದ ವೇಳೆ ಆರಂಭಿಕ ಬ್ಯಾಟ್ಸ್‌ಮನ್ ಮಯಾಂಕ್ ಅಗರ್ವಾಲ್, 215 ರನ್ ಬಾರಿಸಿದ್ದರು. ಇದರಲ್ಲಿ 6 ಸಿಕ್ಸರ್, 23 ಫೋರ್‌ಗಳು ಸೇರಿದ್ದವು. ಮಯಾಂಕ್ ಈ ಸಾಧನೆ ಈ ವರ್ಷದ ಟೆಸ್ಟ್‌ ಇನ್ನಿಂಗ್ಸ್‌ನ ಅತ್ಯಧಿಕ ರನ್‌ ಆಗಿದೆ. ಸ್ಮಿತ್ ರನ್‌ ಸಾಧನೆ ಈಗ 2ನೇ ಸ್ಥಾನದಲ್ಲಿದೆ.

ದ್ವಿಶತಕ ಸಾಧಕರು

ದ್ವಿಶತಕ ಸಾಧಕರು

2019ರ ಟೆಸ್ಟ್ ಇನ್ನಿಂಗ್ಸ್‌ ಒಂದರಲ್ಲಿ ಅತ್ಯಧಿಕ ರನ್‌ಗಾಗಿ ಮಯಾಂಕ್, ಸ್ಮಿತ್ ಮೊದಲೆರಡು ಸ್ಥಾನದಲ್ಲಿ ಗುರುತಿಸಿಕೊಂಡರೆ ವೆಸ್ಟ್ ಇಂಡೀಸ್‌ನ ಜೇಸನ್ ಹೋಲ್ಡರ್ ಅವರ ಇಂಗ್ಲೆಂಡ್‌ ವಿರುದ್ಧದ ದ್ವಿಶತಕ (202* ರನ್), ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ ಅವರ ಬಾಂಗ್ಲಾ ವಿರುದ್ಧದ ದ್ವಿಶತಕ (200*), ನ್ಯೂಜಿಲೆಂಡ್‌ನ ರಾಸ್‌ ಟೇಲರ್ ಅವರ ಬಾಂಗ್ಲಾದೇಶದ ವಿರುದ್ಧದ ದ್ವಿಶತಕ (200) ಸಾಧನೆ ಅನಂತರದ ಸ್ಥಾನಗಳಲ್ಲಿವೆ.

ರೋಹಿತ್-ಮಯಾಂಕ್

ರೋಹಿತ್-ಮಯಾಂಕ್

ಭಾರತದ ನೆಲದಲ್ಲಿ ಚೊಚ್ಚಲ ಬಾರಿಗೆ ಟೆಸ್ಟ್‌ ಆರಂಭಿಕರಾಗಿ ಆಡಿದ್ದ ರೋಹಿತ್ ಶರ್ಮಾ-ಮಯಾಂಕ್ ಅಗರ್ವಾಲ್ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 317 ಜೊತೆಯಾಟ ನೀಡಿತ್ತು. ಇದು ಭಾರತದ ಟೆಸ್ಟ್ ಆರಂಭಿಕ ಜೋಡಿ ನೀಡಿದ 3ನೇ ಅತ್ಯುತ್ತಮ ಜೊತೆಯಾಟ ದಾಖಲೆಗೆ ಕಾರಣವಾಗಿದೆ. ವಿನೋದ್ ಮಂಕದ್-ಪಂಕಜ್ ರಾಯ್ (413 ರನ್), ರಾಹುಲ್ ದ್ರಾವಿಡ್-ವೀರೇಂದ್ರ ಸೆಹ್ವಾಗ್ (410 ರನ್) ಮೊದಲ ಎರಡು ಸ್ಥಾನಗಳಲ್ಲಿದ್ದಾರೆ.

Story first published: Thursday, October 3, 2019, 19:30 [IST]
Other articles published on Oct 3, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X