ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ದಕ್ಷಿಣ ಆಫ್ರಿಕಾ: ಭಾರತ ಟೆಸ್ಟ್ ತಂಡದಲ್ಲಿ ಈ ಮೂವರಿಗೆ ಮತ್ತೆ ಅವಕಾಶ ಸಿಕ್ಕಿದ್ದಾದ್ರೂ ಹೇಗೆ?

Rahane

ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಟೀಂ ಇಂಡಿಯಾ ಟೆಸ್ಟ್ ಸ್ಕ್ವಾಡ್ ಪ್ರಕಟಿಸಿದೆ. ಡಿಸೆಂಬರ್ 26ರಿಂದ ಆರಂಭಗೊಳ್ಳಲಿರುವ ಮೂರು ಪಂದ್ಯಗಳ ಟೆಸ್ಟ್‌ ಸರಣಿಗೆ, ಬಿಸಿಸಿಐ ಹಿರಿಯ ಆಟಗಾರರ ಆಯ್ಕೆ ಸಮಿತಿ 18 ಸದಸ್ಯರನ್ನೊಳಗೊಂಡ ತಂಡವನ್ನ ಪ್ರಕಟಿಸಿದೆ. ಈ ತಂಡದಲ್ಲಿ ಕೆಲವು ಆಶ್ಚರ್ಯಕರ ಸೆಲೆಕ್ಷನ್ ಆಗಿದ್ರೆ, ಮತ್ತೆ ಕೆಲವು ಆಟಗಾರರ ಹೆಸರು ಕೈ ಬಿಟ್ಟಿರುವುದು ಚರ್ಚೆಗೂ ಕಾರಣವಾಗಿದೆ.

ಕೆಲವು ಆಟಗಾರರು ಕಳಪೆ ಫಾರ್ಮ್‌ನಿಂದ ರನ್ ಕಲೆಹಾಕದಿದ್ರೂ ಅವರಿಗೆ ಅವಕಾಶ ಸಿಕ್ಕಿದಾದ್ರು ಹೇಗೆ ಎಂಬ ಸಾಕಷ್ಟು ಮಾತುಕತೆಗಳು ನಡೆಯುತ್ತಿವೆ. ಇನ್ನೊಂದೆಡೆ ಅರ್ಹರಾದ ಆಟಗಾರರಿಗೆ ಅವಕಾಶ ಸಿಗಲಿಲ್ಲವಲ್ಲ ಎಂಬ ಚರ್ಚೆಯು ನಡೆದಿದೆ. ಹಾಗಿದ್ರೆ ಯಾರಿಗೆ ಅವಕಾಶ ಸಿಗಬಾರದಿತ್ತು ಎಂಬ ಮಾತು ಕೇಳಿಬಂದಿದೆ ಎಂಬುದನ್ನ ಈ ಕೆಳಗೆ ಕಾಣಬಹುದು.

ಅಜಿಂಕ್ಯ ರಹಾನೆ

ಅಜಿಂಕ್ಯ ರಹಾನೆ

ಅತ್ಯಂತ ಕಳಪೆ ಫಾರ್ಮ್‌ನಿಂದ ಟೀಕೆಗೊಳಗಾಗಿರುವ ಟೀಂ ಇಂಡಿಯಾ ಟೆಸ್ಟ ತಂಡದ ಉಪನಾಯಕ ಅಜಿಂಕ್ಯ ರಹಾನೆ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ನಿಂದ ಹೊರಗುಳಿದಿದ್ದರು. ಹ್ಯಾಮ್‌ಸ್ಟ್ರಿಂಗ್‌ನಿಂದ ಆತ ಹೊರಗಿದ್ದಾನೆ ಎಂದು ಭಾರತೀಯ ಮಂಡಳಿ ತಿಳಿಸಿತ್ತು. ಆದ್ರೆ ಮುಂದಿನ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಈತನನ್ನ ಆಯ್ಕೆ ಮಾಡುವುದು ಅನುಮಾನ ಎನ್ನಲಾಗಿತ್ತು. ಆದ್ರೆ ವಿರಾಟ್ ಕೊಹ್ಲಿ ಇವರ ಪರ ಬ್ಯಾಟ್‌ ಬೀಸಿ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎನ್ನಲಾಗಿದೆ.

ರಹಾನೆ ತನ್ನ ಕೊನೆಯ 15 ಟೆಸ್ಟ್‌ಗಳಲ್ಲಿ ಕೇವಲ ಒಂದು ಶತಕವನ್ನು ಗಳಿಸಿದ್ದಾರೆ. ಬಾರ್ಡರ್-ಗವಾಸ್ಕರ್ ಟ್ರೋಫಿ 2020-21 ರ ಎರಡನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅವರ 112 ರನ್ ಕೊನೆಯ ಶತಕ ಆಗಿದೆ. ಅವರು ಅಲ್ಪ ಮೊತ್ತಕ್ಕೆ ಹೆಚ್ಚು ಔಟ್ ಆಗುತ್ತಿದ್ದು, ದೊಡ್ಡ ಸ್ಕೋರ್‌ಗಳಾಗಿ ಪರಿವರ್ತಿಸಲು ವಿಫಲರಾಗಿದ್ದಾರೆ.

ಮುಂದಿನ ದಿನಗಳಲ್ಲಿ ರಹಾನೆ ಟೆಸ್ಟ್ ಕ್ರಿಕೆಟ್‌ನಲ್ಲಿ ಉಪನಾಯಕತ್ವದ ಪಾತ್ರವನ್ನು ಉಳಿಸಿಕೊಳ್ಳದಿರಬಹುದು ಎಂದು ಬಿಸಿಸಿಐ ಅಧಿಕಾರಿ ಭಾವಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲೂ ಅವರು 35 ಮತ್ತು 4 ರನ್ ಗಳಿಸಿದರು. ಇಷ್ಟಾದ್ರೂ ಅವರನ್ನ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಸೆಲೆಕ್ಟ್‌ ಮಾಡಿರುವುದು ಆಶ್ಚರ್ಯ ಮೂಡಿಸಿದೆ.

ಇಶಾಂತ್ ಶರ್ಮಾ

ಇಶಾಂತ್ ಶರ್ಮಾ

ಟೀಂ ಇಂಡಿಯಾ ಟೆಸ್ಟ್ ಸ್ಕ್ವಾಡ್‌ನಲ್ಲಿ ಇಶಾಂತ್ ಶರ್ಮಾ ಭಾರತ ತಂಡದ ನಿಷ್ಠಾವಂತ ಬೌಲರ್ ಆಗಿದ್ದಾರೆ. ಕಳೆದ ಹಲವು ವರ್ಷಗಳಿಂದ ಅವರು ಟೆಸ್ಟ್ ತಂಡದ ಭಾಗವಾಗಿದ್ದಾರೆ. ಆದಾಗ್ಯೂ, ಹಲವಾರು ಯುವ ಮತ್ತು ಪ್ರತಿಭಾವಂತ ವೇಗಿಗಳ ಸ್ಪರ್ಧೆಯ ನಡುವೆ, ತಂಡದಲ್ಲಿ ಅವರ ಸ್ಥಾನವು ಪ್ರಶ್ನಾರ್ಹವಾಗಿದೆ. ಅಲ್ಲದೆ, ಅವರ ಪ್ರಸ್ತುತ ಫಾರ್ಮ್ ಕೂಡ ಉತ್ತಮವಾಗಿಲ್ಲ.

ಕಿವೀಸ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ವಿಕೆಟ್ ಪಡೆಯದ ಏಕೈಕ ಭಾರತೀಯ ಬೌಲರ್ ಇವರಾಗಿದ್ದಾರೆ. ಇದಲ್ಲದೆ, ಅವರು ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನ ಕಟ್ಟಿಹಾಕುವಲ್ಲಿ ವಿಫಲರಾದರು. ಕಳೆದ ಇಂಗ್ಲೆಂಡ್ ಪ್ರವಾಸದ ಸಮಯದಲ್ಲಿ ಅವರು ಸಾಧಾರಣ ಬೌಲಿಂಗ್ ಪ್ರದರ್ಶಿಸಿದರು. 33 ವರ್ಷ ವಯಸ್ಸಿನ ಇಶಾಂತ್ ಎರಡು ಪಂದ್ಯಗಳಲ್ಲಿ ಕೇವಲ ಐದು ವಿಕೆಟ್ಗಳನ್ನು ತೆಗೆದುಕೊಳ್ಳಲಷ್ಟೇ ಸಾಧ್ಯವಾಯಿತು.

ಇವರ ಪದೇ ಪದೇ ಗಾಯದ ನಡುವೆ, ಐವರು ವೇಗಿಗಳು ಅದಾಗಲೇ ಇರುವುದರಿಂದ ಅವರನ್ನು ಸೇರಿಸಿಕೊಳ್ಳುವುದು ಅನಿವಾರ್ಯವಲ್ಲ ಎಂದು ಹೇಳುವುದು ಅತಿಶಯೋಕ್ತಿಯಾಗುವುದಿಲ್ಲ.

ಭಾರತ-ದಕ್ಷಿಣ ಆಫ್ರಿಕಾ ಸರಣಿ: ಟೆಸ್ಟ್ ತಂಡದಿಂದ ಈ ಮೂವರನ್ನ ಹೊರಗಿಟ್ಟಿದ್ದೇ ಆಶ್ಚರ್ಯ!

ಜಯಂತ್ ಯಾದವ್

ಜಯಂತ್ ಯಾದವ್

ಭಾರತದ ಅನೇಕ ಕ್ರಿಕೆಟ್ ಪ್ರೇಮಿಗಳು ಜಯಂತ್ ಯಾದವ್‌, ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟೆಸ್ಟ್‌ ಸ್ಕ್ವಾಡ್‌ನಲ್ಲಿ ಸ್ಥಾನ ಪಡೆಯುತ್ತಾರೆ ಎಂಬುದನ್ನ ಕನಸಲ್ಲೂ ಯೋಚಿಸಿರ್ಲಿಲ್ಲ. ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಗಾಯದ ಕಾರಣದಿಂದ ಹೊರಗುಳಿದಿದ್ದರೂ, ಸೆಲೆಕ್ಷನ್ ಕಮಿಟಿ ಮುಂದೆ ಮುಂದೆ ಪರಿಗಣಿಸಬಹುದಾದ ಕೆಲವು ಸ್ಪಿನ್ನರ್‌ಗಳಿದ್ದರು. ಅವುಗಳಲ್ಲಿ ಒಂದು ವಾಷಿಂಗ್ಟನ್ ಸುಂದರ್ ಕೂಡ ಒಬ್ಬರು.

ತಮಿಳುನಾಡಿನ ಆಲ್‌ರೌಂಡರ್ ಇದುವರೆಗಿನ ಟೆಸ್ಟ್ ಕ್ರಿಕೆಟ್ ಆಟದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಗಮನಿಸಬೇಕಾದ ಇನ್ನೊಂದು ಪ್ರಮುಖ ಅಂಶವೆಂದರೆ ಅವರು ಇತ್ತೀಚೆಗೆ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದರು ಮತ್ತು ವಿಜಯ್ ಹಜಾರೆ ಟ್ರೋಫಿಯಲ್ಲಿ ಭಾಗವಹಿಸಿದ್ದರು. ಇದಲ್ಲದೆ, ಆತನನ್ನ 31 ವರ್ಷದ ಜಯಂತ್ ಯಾದವ್ ಆಫ್-ಸ್ಪಿನ್ನರ್‌ಗೆ ಹೋಲಿಸಿದರೆ ಬ್ಯಾಟ್‌ನೊಂದಿಗೆ ಇನ್ನೂ ಹೆಚ್ಚಿನ ಕೊಡುಗೆ ನೀಡಬಲ್ಲರು.

ಇದಲ್ಲದೆ, ದಕ್ಷಿಣ ಆಫ್ರಿಕಾದ ಪಿಚ್‌ಗಳು ಸ್ಪಿನ್‌ಗೆ ಅನುಕೂಲಕರವಾಗಿಲ್ಲದ ಕಾರಣ, ಬದಲಿಗೆ ಹೆಚ್ಚುವರಿ ಬ್ಯಾಟರ್ ಅನ್ನು ಆಯ್ಕೆ ಮಾಡಬಹುದಿತ್ತು. ಯಾವುದೇ ಬ್ಯಾಟರ್‌ಗಳು ಲೀನ್ ಪ್ಯಾಚ್ ಮೂಲಕ ಹೋದರೆ, ಇದು ತಂಡದ ನಿರ್ವಹಣೆಗೆ ಬ್ಯಾಕ್‌ಅಪ್ ಆಯ್ಕೆಯನ್ನು ಹೊಂದುವ ಅವಕಾಶ ಹೆಚ್ಚಿಸುತ್ತದೆ.

ICC ಟ್ರೋಫಿ ಗೆಲ್ಲದಿದ್ದಕ್ಕೆ ವಿರಾಟ್ ಕೊಹ್ಲಿ ನಾಯಕತ್ವ ಕಳೆದುಕೊಂಡ: ಸಾಬಾ ಕರೀಂ

ವಿರಾಟ್ ಕೊಹ್ಲಿಯಂತಹ ಆಟಗಾರ ತಂಡದಲ್ಲಿ ಇರಲೇಬೇಕು | Oneindia Kannada
ದಕ್ಷಿಣ ಆಫ್ರಿಕಾಗೆ ಆಯ್ಕೆ ಟೀಂ ಇಂಡಿಯಾ ಟೆಸ್ಟ್‌ ಸ್ಕ್ವಾಡ್ ಹೀಗಿದೆ

ದಕ್ಷಿಣ ಆಫ್ರಿಕಾಗೆ ಆಯ್ಕೆ ಟೀಂ ಇಂಡಿಯಾ ಟೆಸ್ಟ್‌ ಸ್ಕ್ವಾಡ್ ಹೀಗಿದೆ

ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ರಿಷಬ್ ಪಂತ್ (ವಿಕೆಟ್ ಕೀಪರ್), ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಆರ್ ಅಶ್ವಿನ್, ಜಯಂತ್ ಯಾದವ್, ಇಶಾಂತ್ ಶರ್ಮಾ, ಮೊ. ಶಮಿ, ಉಮೇಶ್ ಯಾದವ್, ಜಸ್ಪ್ರೀತ್ ಬುಮ್ರಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್.

ಸ್ಟ್ಯಾಂಡ್ ಬೈ ಆಟಗಾರರು: ನವದೀಪ್ ಸೈನಿ, ಸೌರಭ್ ಕುಮಾರ್, ದೀಪಕ್ ಚಾಹರ್, ಅರ್ಜಾನ್ ನಾಗ್ವಾಸ್ವಾಲ್ಲಾ

Story first published: Friday, December 10, 2021, 9:50 [IST]
Other articles published on Dec 10, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X