Ind vs SL 3rd T20I: ಬೆಂಕಿ ನೀನು! ಸೂರ್ಯಕುಮಾರ್ ಆಟಕ್ಕೆ ಕಿಂಗ್ ಕೊಹ್ಲಿ ಪ್ರತಿಕ್ರಿಯೆ ವೈರಲ್

2022ರಲ್ಲಿ ಟಿ20 ಮಾದರಿಯಲ್ಲಿ ರನ್ ಹೊಳೆಯನ್ನೇ ಹರಿಸಿದ್ದ ಸೂರ್ಯಕುಮಾರ್ ಯಾದವ್, 2023ರಲ್ಲಿ ಕೂಡ ಅಬ್ಬರವನ್ನು ಮುಂದುವರೆಸುವ ಸೂಚನೆ ನೀಡಿದ್ದಾರೆ. ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಅಬ್ಬರಿಸಿದ ಅವರು ಶತಕ ಗಳಿಸಿದರು.

ರಾಜ್‌ಕೋಟ್ ಅಂಗಳದ ಮೂಲೆ ಮೂಲೆಗೂ ಚೆಂಡುಗಳನ್ನು ಕಳಿಸಿದ ಸೂರ್ಯ 3ನೇ ಟಿ20 ಶತಕವನ್ನು ದಾಖಲಿಸಿದರು. ಕೇವಲ 51 ಎಸೆತಗಳನ್ನು ಎದುರಿಸಿದ ಸೂರ್ಯ ಅಜೇಯ 112 ರನ್ ಗಳಿಸಿದರು. ಅವರ ಈ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ 9 ಸಿಕ್ಸರ್ ಸೇರಿದ್ದವು. ಈ ಅಮೋಘ ಇನ್ನಿಂಗ್ಸ್‌ಗಾಗಿ ಅವರು ಪಂದ್ಯದ ಆಟಗಾರ ಪ್ರಶಸ್ತಿ ಪಡೆದರು.

ಸೂರ್ಯಕುಮಾರ್ ಯಾದವ್ ಶತಕದ ನೆರವಿನಿಂದ ಟೀಂ ಇಂಡಿಯಾ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 20 ಓವರ್ ಗಳಲ್ಲಿ 228 ರನ್ ಕಲೆ ಹಾಕಿತು. ಈ ಬೃಹತ್ ಮೊತ್ತವನ್ನು ಶ್ರೀಲಂಕಾ 137 ರನ್‌ಗಳಿಗೆ ಆಲೌಟ್ ಆಗುವ ಮೂಲಕ 91 ರನ್‌ಗಳ ಸೋಲನುಭವಿಸಿತು. ಈ ಜಯದ ಮೂಲಕ ಭಾರತ 2023ರಲ್ಲಿ ಆಡಿದ ಮೊದಲನೇ ಟಿ20 ಸರಣಿಯನ್ನು ಗೆದ್ದುಕೊಂಡಿತು.

ಸೂರ್ಯ ಆರ್ಭಟಕ್ಕೆ ಲಂಕಾ ನಿರುತ್ತರ: ಬೃಹತ್ ಗೆಲುವಿನೊಂದಿಗೆ ಟಿ20 ಸರಣಿ ಭಾರತದ ವಶಕ್ಕೆಸೂರ್ಯ ಆರ್ಭಟಕ್ಕೆ ಲಂಕಾ ನಿರುತ್ತರ: ಬೃಹತ್ ಗೆಲುವಿನೊಂದಿಗೆ ಟಿ20 ಸರಣಿ ಭಾರತದ ವಶಕ್ಕೆ

ಇಡೀ ಪಂದ್ಯದಲ್ಲಿ ಅಬ್ಬರಿಸಿದ್ದು ಸೂರ್ಯಕುಮಾರ್ ಯಾದವ್, ತಾನ್ಯಾಕೆ ಟಿ20 ಮಾದರಿಯಲ್ಲಿ ನಂಬರ್ 1 ಬ್ಯಾಟರ್ ಎಂದು ಮತ್ತೆ ಸಾಬೀತು ಮಾಡಿದರು. ಅವರ ಈ ಆಟಕ್ಕೆ ವಿಶ್ವದ ಹಲವು ಮಾಜಿ ಮತ್ತು ಹಾಲಿ ಕ್ರಿಕೆಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿರಾಟ್ ಕೊಹ್ಲಿ ಕೂಡ ಸೂರ್ಯ ಆಟಕ್ಕೆ ಮನಸೋತಿದ್ದು, ಇನ್‌ಸ್ಟಾಗ್ರಾಂನಲ್ಲಿ ನೀಡಿರುವ ಪ್ರತಿಕ್ರಿಯೆ ವೈರಲ್ ಆಗಿದೆ.

ಸೂರ್ಯ ಫೋಟೋ ಬೆಂಕಿಯ ಇಮೋಜಿ

ಸೂರ್ಯಕುಮಾರ್ ಯಾದವ್‌ರನ್ನು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಅಭಿನಂದಿಸಿರುವ ವಿರಾಟ್ ಕೊಹ್ಲಿ ಸೂರ್ಯ ಫೋಟೊ ಜೊತೆ ಬೆಂಕಿ ಮತ್ತು ಬ್ಯಾಟ್‌ನ ಇಮೋಜಿ ಹಾಕುವ ಮೂಲಕ ಇದು ಬೆಂಕಿ ಬ್ಯಾಟಿಂಗ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಬಗ್ಗೆ ಕೊಹ್ಲಿ ಮೆಚ್ಚುಗೆ ವ್ಯಕ್ತಪಡಿಸಿರುವುದು ಇದೇ ಮೊದಲ ಬಾರಿಯೇನಲ್ಲ. ನ್ಯೂಜಿಲೆಂಡ್ ವಿರುದ್ಧ ಅವರು ಅದ್ಭುತ ಶತಕ ಬಾರಿಸಿದಾಗ ಕೂಡ ಕೊಹ್ಲಿ ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆತನ ಬ್ಯಾಟಿಂಗ್ ವಿಡಿಯೋ ಗೇಮ್‌ ರೀತಿ ಇರುತ್ತದೆ ಎಂದು ಶ್ಲಾಘಿಸಿದ್ದರು.

ಸೂರ್ಯಕುಮಾರ್ ಯಾದವ್ ಭಾರತದ ಸಹ ಆಟಗಾರರ ಜೊತೆ ಅತ್ಯುತ್ತಮ ಸಂಬಂಧ ಹೊಂದಿದ್ದಾರೆ. ಕೊಹ್ಲಿ, ರೋಹಿತ್ ಶರ್ಮಾ, ಸೂರ್ಯಕುಮಾರ್ ನಡುವಿನ ಬಾಂಧವ್ಯ ಅತ್ಯುತ್ತಮವಾಗಿದೆ.

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಕೊಹ್ಲಿ-ಸೂರ್ಯ ಜೊತೆಯಾಟ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಏಕದಿನ ಸರಣಿಯ ಮೊದಲನೇ ಪಂದ್ಯ ಜನವರಿ 10 ರಂದು ನಡೆಯಲಿದೆ.

For Quick Alerts
ALLOW NOTIFICATIONS
For Daily Alerts
Story first published: Sunday, January 8, 2023, 6:31 [IST]
Other articles published on Jan 8, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X