ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾ ಹೆಸರಿಗೆ ಮತ್ತೊಂದು ವಿಶ್ವದಾಖಲೆ ಸೇರ್ಪಡೆ!

India vs Sri Lanka: List of Team Indias Most wins against an opponent in ODIs

ಕೊಲಂಬೋ: ಶ್ರೀಲಂಕಾ ಪ್ರವಾಸದಲ್ಲಿರುವ ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ಮುಂದಾಳತ್ವದ ಭಾರತೀಯ ತಂಡ ಶ್ರೀಲಂಕಾ ವಿರುದ್ಧ ದ್ವಿತೀಯ ಏಕದಿನ ಪಂದ್ಯದಲ್ಲೂ ಗೆದ್ದು ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-0ಯಿಂದ ವಶ ಪಡಿಸಿಕೊಂಡಿದೆ. ಮಂಗಳವಾರ (ಜುಲೈ 20) ಆರ್‌ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ ಭಾರತ ರೋಚಕ 3 ವಿಕೆಟ್‌ ಜಯ ಗಳಿಸಿತ್ತು.

ಅವಕಾಶಕ್ಕಾಗಿ ಕಾಯುತ್ತಿರುವ ಪಡಿಕ್ಕಲ್: 3ನೇ ಪಂದ್ಯದಲ್ಲೂ ಸ್ಥಾನ ಉಳಿಸಿಕೊಳ್ತಾರಾ ಮನೀಶ್!ಅವಕಾಶಕ್ಕಾಗಿ ಕಾಯುತ್ತಿರುವ ಪಡಿಕ್ಕಲ್: 3ನೇ ಪಂದ್ಯದಲ್ಲೂ ಸ್ಥಾನ ಉಳಿಸಿಕೊಳ್ತಾರಾ ಮನೀಶ್!

ಸೋಲಿನಂಚಿನಲ್ಲಿದ್ದ ಭಾರತೀಯ ತಂಡ ಗೆಲ್ಲಲು ಮುಖ್ಯ ಕಾರಣ ಬೌಲರ್‌ಗಳಾದ ದೀಪಕ್ ಚಾಹರ್ (69) ಮತ್ತು ಭುವನೇಶ್ವರ್ ಕುಮಾರ್ (19) ಅವರ 84 ರನ್ ಜೊತೆಯಾಟ. ಬೌಲಿಂಗ್‌ನಲ್ಲೂ ಇಬ್ಬರೂ ಕ್ರಮವಾಗಿ 3, 2 ವಿಕೆಟ್‌ ಕೊಡುಗೆ ನೀಡಿದ್ದರು. ಈ ಪಂದ್ಯದ ಗೆಲುವಿನೊಂದಿಗೆ ಭಾರತ ವಿಶೇಷ ದಾಖಲೆಯನ್ನೂ ನಿರ್ಮಿಸಿದೆ.

ಪಂದ್ಯದ ಸಂಕ್ಷಿಪ್ತ ಸ್ಕೋರ್‌

ಪಂದ್ಯದ ಸಂಕ್ಷಿಪ್ತ ಸ್ಕೋರ್‌

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ ತಂಡ, ಅವಿಷ್ಕ ಫೆರ್ನಾಂಡೋ 50, ಮಿನೋದ್ ಭಾನುಕಾ 36 ರನ್‌ನೊಂದಿಗೆ 50 ಓವರ್‌ಗೆ 9 ವಿಕೆಟ್ ಕಳೆದು 275 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಭಾರತ ಸೂರ್ಯಕುಮಾರ್ ಯಾದವ್ 53 (44), ಕೃನಾಲ್ ಪಾಂಡ್ಯ 35, ದೀಪಕ್ ಚಾಹರ್ ಅಜೇಯ 69 (82), ಭುವನೇಶ್ವರ್ ಕುಮಾರ್ ಅಜೇಯ 19 ರನ್‌ನೊಂದಿಗೆ 49.1 ಓವರ್‌ಗೆ 7 ವಿಕೆಟ್ ನಷ್ಟದಲ್ಲಿ 277 ರನ್ ಗಳಿಸಿ ಗೆಲುವನ್ನಾಚರಿಸಿತು.

ಭಾರತದ ಹೆಸರಿಗೆ ದಾಖಲೆ

ಭಾರತದ ಹೆಸರಿಗೆ ದಾಖಲೆ

(ಏಕದಿನ ಕ್ರಿಕೆಟ್‌ನಲ್ಲಿ ಒಬ್ಬ ಎದುರಾಳಿ ತಂಡದ ವಿರುದ್ಧ ಅತೀ ಹೆಚ್ಚು ಪಂದ್ಯಗಳನ್ನು ಗೆದ್ದಿರುವ ವಿಶ್ವ ದಾಖಲೆ ಪಟ್ಟಿಯಲ್ಲಿ ಭಾರತವೀಗ ಮೊದಲ ಸ್ಥಾನಕ್ಕೇರಿದೆ)
* ಭಾರತಕ್ಕೆ ಶ್ರೀಲಂಕಾ ವಿರುದ್ಧ 93 ಪಂದ್ಯಗಳಲ್ಲಿ ಜಯ
* ಆಸ್ಟ್ರೇಲಿಯಾಕ್ಕೆ ನ್ಯೂಜಿಲೆಂಡ್ ವಿರುದ್ಧ 92 ಪಂದ್ಯಗಳಲ್ಲಿ ಜಯ
* ಪಾಕಿಸ್ತಾನಕ್ಕೆ ಶ್ರೀಲಂಕಾ ವಿರುದ್ಧ 92 ಪಂದ್ಯಗಳಲ್ಲಿ ಜಯ
* ಆಸ್ಟ್ರೇಲಿಯಾಕ್ಕೆ ಇಂಗ್ಲೆಂಡ್ ವಿರುದ್ಧ 84 ಪಂದ್ಯಗಳಲ್ಲಿ ಜಯ

Rishab Pant , ಕೋವಿಡ್ ಗೆದ್ದು ಬಂದು ತಂಡ ಸೇರಿಕೊಂಡರು | Oneindia Kannada
ಚಾಹರ್ ಹೆಸರಿಗೆ ಹೊಸ ಮೈಲಿಗಲ್ಲು

ಚಾಹರ್ ಹೆಸರಿಗೆ ಹೊಸ ಮೈಲಿಗಲ್ಲು

(8ನೇ ಕ್ರಮಾಂಕಕ್ಕಿಂತ ಕೆಳ ಕ್ರಮಾಂಕದಲ್ಲಿ ಬಂದು ಅತೀ ಹೆಚ್ಚು ರನ್ ಬಾರಿಸಿರುವ ಭಾರತೀಯರ ಪಟ್ಟಿಯಲ್ಲಿ ದೀಪಕ್ ಚಾಹರ್ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ)
# 77 ರನ್, ರವೀಂದ್ರ ಜಡೇಜಾ, vs ನ್ಯೂಜಿಲೆಂಡ್, ಮ್ಯಾನ್ಚೆಸ್ಟರ್, 2019
# 69* ರನ್, ದೀಪಕ್ ಚಾಹರ್, vs ಶ್ರೀಲಂಕಾ, ಕೊಲಂಬೋ, 2021
# 69 ರನ್, ಜಯ್‌ಪ್ರಕಾಶ್ ಯಾದವ್, vs ನ್ಯೂಜಿಲೆಂಡ್, 2005
# 67* ರನ್, ಅಜಿತ್ ಅಗರ್ಕರ್, vs ಜಿಂಬಾಬ್ವೆ, ರಾಜ್‌ಕೋಟ್, 2000

Story first published: Thursday, July 22, 2021, 0:06 [IST]
Other articles published on Jul 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X