ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs SL: ಶ್ರೀಲಂಕಾ ವಿರುದ್ಧದ ತವರಿನ ಸರಣಿಗೆ ರೋಹಿತ್- ರಾಹುಲ್ ಅಲಭ್ಯ?; ಇಲ್ಲಿದೆ ಕಾರಣ

India vs Sri Lanka Series: Team India Captain Rohit Sharma And KL Rahul Likely To Miss

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಆರಂಭಿಕ ಆಟಗಾರ ಹಾಗೂ ಉಪನಾಯಕ ಕೆಎಲ್ ರಾಹುಲ್ ಮುಂಬರುವ ಜನವರಿಯಲ್ಲಿ ಶ್ರೀಲಂಕಾ ವಿರುದ್ಧದ ತವರಿನಲ್ಲಿ ನಡೆಯಲಿರುವ ವೈಟ್-ಬಾಲ್ ಸರಣಿಗೆ ಅಲಭ್ಯರಾಗುವ ಸಾಧ್ಯತೆಯಿದೆ ಎಂದು ವರದಿಯೊಂದು ತಿಳಿಸಿದೆ.

ಬಿಸಿಸಿಐನ ಮೂಲಗಳ ಪ್ರಕಾರ, ಇತ್ತೀಚಿಗೆ ಬಾಂಗ್ಲಾದೇಶ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಉಂಟಾದ ಹೆಬ್ಬೆರಳಿನ ಗಾಯದಿಂದ ರೋಹಿತ್ ಶರ್ಮಾ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ ಎಂದು ಎಎನ್ಐ ವರದಿ ಹೇಳಿದೆ.

IPL 2023: ಆರ್ಚರ್, ಗ್ರೀನ್ ಉಪಸ್ಥಿತಿ; ಮುಂಬೈ ಇಂಡಿಯನ್ಸ್ ತಂಡದ ಬಲಿಷ್ಠ ಆಡುವ 11ರ ಬಳಗ ಹೀಗಿರಲಿದೆIPL 2023: ಆರ್ಚರ್, ಗ್ರೀನ್ ಉಪಸ್ಥಿತಿ; ಮುಂಬೈ ಇಂಡಿಯನ್ಸ್ ತಂಡದ ಬಲಿಷ್ಠ ಆಡುವ 11ರ ಬಳಗ ಹೀಗಿರಲಿದೆ

ಇನ್ನೂ ಶ್ರೀಲಂಕಾ ವಿರುದ್ಧದ ಸರಣಿಯ ಸಂದರ್ಭದಲ್ಲಿ ಕೆಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ಮದುವೆಯಾಗಲಿದ್ದಾರೆ. ಹೀಗಾಗಿ ಕ್ರಿಕೆಟ್‌ನಿಂದ ರಜೆ ತೆಗೆದುಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜನವರಿ 3ರಿಂದ ಜನವರಿ 15ರವರೆಗೆ ಮೂರು ಟಿ20, ಮೂರು ಏಕದಿನ

ಜನವರಿ 3ರಿಂದ ಜನವರಿ 15ರವರೆಗೆ ಮೂರು ಟಿ20, ಮೂರು ಏಕದಿನ

ಶ್ರೀಲಂಕಾ ತಂಡವು ಜನವರಿ 3ರಿಂದ ಜನವರಿ 15ರವರೆಗೆ ಮೂರು ಟಿ20 ಮತ್ತು ಮೂರು ಏಕದಿನ ಪಂದ್ಯಗಳಿಗಾಗಿ ಭಾರತದ ಪ್ರವಾಸ ಕೈಗೊಳ್ಳಲಿದೆ. ಗಮನಾರ್ಹ ಅಂಶವೆಂದರೆ, ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಬ್ಯಾಟ್‌ನೊಂದಿಗೆ 2022ರಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲ.

ರೋಹಿತ್ ಶರ್ಮಾ 2022ರಲ್ಲಿ ತಮ್ಮ 'ಹಿಟ್‌ಮ್ಯಾನ್' ಟ್ಯಾಗ್‌ಗೆ ತಕ್ಕಂತೆ ಆಡಲು ವಿಫಲರಾಗಿದ್ದಾರೆ. ಈ ವರ್ಷ ಆಡಿದ ಎರಡು ಟೆಸ್ಟ್‌ ಪಂದ್ಯಗಳಲ್ಲಿ ರೋಹಿತ್ ಶರ್ಮಾ 30ರ ಸರಾಸರಿಯಲ್ಲಿ 90 ರನ್ ಗಳಿಸಿದರು, ಅದರಲ್ಲಿ 46 ಅತ್ಯುತ್ತಮ ಸ್ಕೋರ್ ಆಗಿದೆ.

ಈ ವರ್ಷ 40 ಇನ್ನಿಂಗ್ಸ್‌ಗಳಲ್ಲಿ ರೋಹಿತ್ 995 ರನ್

ಈ ವರ್ಷ 40 ಇನ್ನಿಂಗ್ಸ್‌ಗಳಲ್ಲಿ ರೋಹಿತ್ 995 ರನ್

ಎಂಟು ಏಕದಿನ ಪಂದ್ಯಗಳಲ್ಲಿ ರೋಹಿತ್ ಶರ್ಮಾ 41.50ರ ಸರಾಸರಿಯಲ್ಲಿ 249 ರನ್‌ಗಳನ್ನು ಗಳಿಸಿದರು. ಇದರಲ್ಲಿ ಮೂರು ಅರ್ಧ ಶತಕಗಳು ಮತ್ತು ಅಜೇಯ 76 ರನ್ ಅತ್ಯುತ್ತಮವಾಗಿದೆ.

ರೋಹಿತ್ ಶರ್ಮಾ ಈ ವರ್ಷ 29 ಟಿ20 ಇನ್ನಿಂಗ್ಸ್‌ಗಳಲ್ಲಿ 24.29ರ ಸರಾಸರಿ ಮತ್ತು 134.42 ಸ್ಟ್ರೈಕ್‌ರೇಟ್‌ನಲ್ಲಿ 656 ರನ್ ಗಳಿಸಿದ್ದು, ಮೂರು ಅರ್ಧ ಶತಕಗಳು ಮತ್ತು 72 ಅತ್ಯುತ್ತಮ ಸ್ಕೋರ್ ಆಗಿದೆ.

ಒಟ್ಟಾರೆ ಈ ವರ್ಷ 40 ಇನ್ನಿಂಗ್ಸ್‌ಗಳಲ್ಲಿ ರೋಹಿತ್ 995 ರನ್ ಗಳಿಸಿದ್ದು, 1000 ರನ್ ಗಡಿ ದಾಟಲು ವಿಫಲರಾಗಿದ್ದಾರೆ. ಈ ರನ್‌ಗಳು ಆರು ಅರ್ಧಶತಕಗಳೊಂದಿಗೆ 27.63ರ ಸರಾಸರಿಯಲ್ಲಿ ಬಂದಿವೆ. 2012ರಿಂದ ಇದೇ ಮೊದಲ ಬಾರಿಗೆ ರೋಹಿತ್ ಶರ್ಮಾ ಇಡೀ ವರ್ಷ ಅಂತಾರಾಷ್ಟ್ರೀಯ ಶತಕವನ್ನು ಗಳಿಸಲಿಲ್ಲ.

ಹೆಚ್ಚು-ಕಡಿಮೆ ಗಾಯದಲ್ಲೇ ಈ ವರ್ಷ ಕಳೆದ ಕೆಎಲ್ ರಾಹುಲ್

ಹೆಚ್ಚು-ಕಡಿಮೆ ಗಾಯದಲ್ಲೇ ಈ ವರ್ಷ ಕಳೆದ ಕೆಎಲ್ ರಾಹುಲ್

ಮತ್ತೊಂದೆಡೆ ಉಪನಾಯಕ ಕೆಎಲ್ ರಾಹುಲ್ ಈ ವರ್ಷ ಹೆಚ್ಚು-ಕಡಿಮೆ ಗಾಯದಲ್ಲೇ ಕಳೆದಿದ್ದಾರೆ. ಈ ವರ್ಷ ನಾಲ್ಕು ಟೆಸ್ಟ್‌ಗಳನ್ನು ಆಡಿದ್ದು, ಇದರಲ್ಲಿ ಅವರು 17.12ರ ಸರಾಸರಿಯಲ್ಲಿ 137 ರನ್ ಗಳಿಸಿದರು. ಕೇವಲ ಒಂದು ಅರ್ಧಶತಕ ದಾಖಲಾಗಿದೆ. ಅವರು ಈ ವರ್ಷದ ಟೆಸ್ಟ್‌ ಪಂದ್ಯಗಳಲ್ಲಿ 50 ರನ್‌ ಅತ್ಯುತ್ತಮ ಸ್ಕೋರ್ ಹೊಂದಿದ್ದಾರೆ.

ಈ ವರ್ಷ ಆಡಿದ 10 ಏಕದಿನ ಪಂದ್ಯಗಳಲ್ಲಿ ಕೆಎಲ್ ರಾಹುಲ್ 27.88ರ ಸರಾಸರಿಯಲ್ಲಿ 251 ರನ್ ಗಳಿಸಿದರು. ಎರಡು ಅರ್ಧ ಶತಕಗಳು ಮತ್ತು ಇದರಲ್ಲಿ 73 ರನ್ ಅತ್ಯುತ್ತಮ ಸ್ಕೋರ್ ಆಗಿದೆ.

ಈ ವರ್ಷ ಒಟ್ಟು 30 ಪಂದ್ಯಗಳಲ್ಲಿ 822 ರನ್

ಈ ವರ್ಷ ಒಟ್ಟು 30 ಪಂದ್ಯಗಳಲ್ಲಿ 822 ರನ್

ಈ ವರ್ಷ ಆಡಿದ 16 ಟಿ20 ಪಂದ್ಯಗಳಲ್ಲಿ ಕೆಎಲ್ ರಾಹುಲ್ 28.93ರ ಸರಾಸರಿಯಲ್ಲಿ 434 ರನ್ ಗಳಿಸಿದ್ದು, ಇದರಲ್ಲಿ ಆರು ಅರ್ಧ ಶತಕಗಳಿದ್ದರೆ, 62 ರನ್ ಅತ್ಯುತ್ತಮ ಸ್ಕೋರ್ ಆಗಿದೆ.

ಒಟ್ಟಾರೆ ಈ ವರ್ಷ ಒಟ್ಟು 30 ಪಂದ್ಯಗಳಲ್ಲಿ ಕೆಎಲ್ ರಾಹುಲ್ ಒಂಬತ್ತು ಅರ್ಧಶತಕಗಳೊಂದಿಗೆ 25.68ರ ಸರಾಸರಿಯಲ್ಲಿ 822 ರನ್ ಬಾರಿಸಿದ್ದಾರೆ.

Story first published: Monday, December 26, 2022, 17:47 [IST]
Other articles published on Dec 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X