ವಿಂಡೀಸ್ ಮಣಿಸಿ ಟೀಂ ಇಂಡಿಯಾ, ಕೊಹ್ಲಿ ಸಾಧಿಸಿದ ದಾಖಲೆಗಳು ಹಲವು

IND vs WI 2019 : ಗಂಗೂಲಿಯನ್ನ ಮೀರಿಸಿದ ಕೊಹ್ಲಿ | Oneindia Kannada
India vs West Indies: Virat Kohli surpasses Ganguly, equals Dhoni; Bumrah sets Asian record

ಬೆಂಗಳೂರು, ಆಗಸ್ಟ್ 26: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 318ರನ್ ಗಳ ಭರ್ಜರಿ ಜಯ ದಾಖಲಿಸಿದ ವಿರಾಟ್ ಕೊಹ್ಲಿ ಪಡೆ ಸಂಭ್ರಮದಲ್ಲಿ ತೇಲಾಡುತ್ತಿದೆ. ಆಂಟಿಗಾ ಟೆಸ್ಟ್ ನ ಗೆಲುವಿನಿಂದ ಎರಡು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ನಾಯಕನಾಗಿ ಕೊಹ್ಲಿ ಸಾಧನೆ ಮಾಡಿದರೂ, ಬ್ಯಾಟ್ಸ್ ಮನ್ ಆಗಿ ಅರ್ಧಶತಕ ಮಾತ್ರ ಗಳಿಸಲು ಸಾಧ್ಯವಾಯಿತು.

1
46250

ನಾರ್ಥ್ ಸೌಂಡ್ ನ ಸರ್ ವಿವಿಯನ್ ರಿಚರ್ಡ್ಸ್ ಅಂಗಳದಲ್ಲಿ ಟೀಂ ಇಂಡಿಯಾದ ವೇಗಿ ಜಸ್​ಪ್ರೀತ್​ ಬುಮ್ರಾ 7 ರನ್ನಿತ್ತು 5 ವಿಕೆಟ್ ಹಾಗೂ ಇಶಾಂತ್​ ಶರ್ಮಾ 31ರನ್ನಿತ್ತು 3 ವಿಕೆಟ್ ಮಾರಕ ಬೌಲಿಂಗ್​ ದಾಳಿಯಿಂದಾಗಿ ವೆಸ್ಟ್ ಇಂಡೀಸ್ ತಂಡ ಎರಡನೇ ಇನ್ನಿಂಗ್ಸ್ ನಲ್ಲಿ 100 ರನ್ನಿಗೆ ಸರ್ವಪತನ ಕಂಡಿತು.

ಬೆತ್ತಲಾಗಿ ಫೋಸ್ ಕೊಟ್ಟ ಇಂಗ್ಲೆಂಡ್ ವಿಕೆಟ್ ಕೀಪರ್ ಸಾರಾ

ಈ ಗೆಲುವಿನ ಮೂಲಕ ಟೀಮ್​ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಅವರು ಮಾಜಿ ನಾಯಕ, ವಿಕೆಟ್ ಕೀಪರ್​ ಮಹೇಂದ್ರ ಸಿಂಗ್​ ಧೋನಿಯ ದಾಖಲೆ ಸಮಕ್ಕೆ ನಿಂತಿದ್ದಾರೆ. ಜೊತೆಗೆ ಮಾಜಿ ನಾಯಕ ಸೌರವ್ ಗಂಗೂಲಿ ದಾಖಲೆಯನ್ನು ಮುರಿದಿದ್ದಾರೆ.

ಗಂಗೂಲಿ ಹಿಂದಿಕ್ಕಿದ ವಿರಾಟ್ ಕೊಹ್ಲಿ

ಗಂಗೂಲಿ ಹಿಂದಿಕ್ಕಿದ ವಿರಾಟ್ ಕೊಹ್ಲಿ

ವೆಸ್ಟ್​ ಇಂಡೀಸ್​ ವಿರುದ್ಧದ ಭಾರತ ತಂಡ ಜಯ ಸಾಧಿಸಿದ ಬಳಿಕ ನಾಯಕರಾಗಿ ವಿರಾಟ್​ ಕೊಹ್ಲಿ ಮಾಜಿ ನಾಯಕ ಸೌರವ್​ ಗಂಗೂಲಿಯ ದಾಖಲೆಯೊಂದನ್ನು ಮುರಿದಿದ್ದಾರೆ. ವಿದೇಶದಲ್ಲಿ ಆಡಿರುವ ಟೆಸ್ಟ್ ಸರಣಿ ಪೈಕಿ ಅತಿ ಹೆಚ್ಚು ಜಯ ತಂದುಕೊಟ್ಟ ಟೀಂ ಇಂಡಿಯಾ ನಾಯಕರ ಪಟ್ಟಿಯಲ್ಲಿ ಇಲ್ಲಿ ತನಕ ಸೌರವ್ ಗಂಗೂಲಿ ಅಗ್ರಸ್ಥಾನದಲ್ಲಿದ್ದರು. ಗಂಗೂಲಿ 28 ಟೆಸ್ಟ್ ಪಂದ್ಯಗಳ ಪೈಕಿ 11ರಲ್ಲಿ ಜಯ ಸಾಧಿಸಿದ್ದರು. ಕೊಹ್ಲಿ ಅವರು 12ನೇ ಜಯ ದಾಖಲಿಸಿದ್ದಾರೆ. ಜಮೈಕಾದ ಸಬೀನಾ ಪಾರ್ಕಿನಲ್ಲಿ ಎರಡನೇ ಟೆಸ್ಟ್ ಪಂದ್ಯದಲ್ಲಿ ಗೆಲುವು ದಾಖಲಿಸುವ ಉತ್ಸಾಹದಲ್ಲಿದ್ದಾರೆ.

ಪಂದ್ಯದ ಸ್ಕೋರ್ ಕಾರ್ಡ್ ನೋಡಿ

ಧೋನಿ ಸಮಕ್ಕೆ ನಿಂತ ವಿರಾಟ್ ಕೊಹ್ಲಿ

ಧೋನಿ ಸಮಕ್ಕೆ ನಿಂತ ವಿರಾಟ್ ಕೊಹ್ಲಿ

ನಾರ್ಥ್ ಸೌಂಡ್ ಮೈದಾನದಲ್ಲಿ ವಿಂಡೀಸ್ ವಿರುದ್ಧ ಗೆಲುವು ಸಾಧಿಸಿದ ನಾಯಕ ವಿರಾಟ್ ಕೊಹ್ಲಿ ಅವರು ನಾಯಕರಾಗಿ 47 ಪಂದ್ಯಗಳಲ್ಲಿ 27ನೇ ಜಯ ದಾಖಲಿಸಿದ್ದಾರೆ. ಮಿಕ್ಕಂತೆ 10 ಪಂದ್ಯಗಳಲ್ಲಿ ಸೋಲು ಹಾಗೂ 10 ಪಂದ್ಯಗಳ ಡ್ರಾ ಆಗಿವೆ.

ಮಾಜಿ ನಾಯಕ ಎಂಎಸ್ ಧೋನಿ 60 ಪಂದ್ಯಗಳಲ್ಲಿ 27 ಗೆಲುವು ಸಾಧಿಸಿದ್ದರು. ಅತ್ಯಂತ ಯಶಸ್ವಿ ನಾಯಕರ ಪಟ್ಟಿಯಲ್ಲಿ ಗಂಗೂಲಿ ಮೂರನೆ ಸ್ಥಾನದಲ್ಲಿದ್ದು 47 ಪಂದ್ಯಗಳಿಂದ 21 ಗೆಲುವು ಸಾಧಿಸಿದ್ದರು.

ಭಾರತದ ದೊಡ್ಡ ಅಂತರದ ಜಯ

ಭಾರತದ ದೊಡ್ಡ ಅಂತರದ ಜಯ

ಟೀಮ್​ ಇಂಡಿಯಾ ಪ್ರಥಮ ಟೆಸ್ಟ್​ನಲ್ಲಿ ಅತಿಥೇಯ ವೆಸ್ಟ್ ಇಂಡೀಸ್ ತಂಡವನ್ನು 318 ರನ್​ಗಳಿಂದ ಸೋಲಿಸಿದೆ. ಈ ಮೂಲಕ ವಿದೇಶಿ ನೆಲದಲ್ಲಿ ಭಾರಿ ಅಂತರದಿಂದ ಜಯಗಳಿಸಿದ ಸಾಧನೆ ಮಾಡಿದೆ. ಇದಕ್ಕೂ ಮುನ್ನ 2017 ರಲ್ಲಿ ಗಾಲೆಯಲ್ಲಿ ಶ್ರೀಲಂಕಾ ವಿರುದ್ಧ ನಡೆದಿದ್ದ ಪಂದ್ಯದಲ್ಲಿ 307 ರನ್​ ಅಂತರದಿಂದ ಭಾರತ ಜಯ ಸಾಧಿಸಿತ್ತು

ವಿಂಡೀಸ್ ವಿರುದ್ಧವೂ ಭಾರಿ ಅಂತರ ಗೆಲುವು

ವಿಂಡೀಸ್ ವಿರುದ್ಧವೂ ಭಾರಿ ಅಂತರ ಗೆಲುವು

ಟೀಮ್​ ಇಂಡಿಯಾ ಪ್ರಥಮ ಟೆಸ್ಟ್​ನಲ್ಲಿ ಅತಿಥೇಯ ವೆಸ್ಟ್ ಇಂಡೀಸ್ ತಂಡವನ್ನು 318 ರನ್​ಗಳಿಂದ ಸೋಲಿಸಿದೆ.ವಿದೇಶದಲ್ಲಿ ಭಾರಿ ಅಂತರದ ಜಯ ಅಷ್ಟೇ ಅಲ್ಲದೆ, ವೆಸ್ಟ್ ಇಂಡೀಸ್ ವಿರುದ್ಧ ದ್ವಿಪಕ್ಷೀಯ ಸರಣಿಯಲ್ಲೂ ಇದು ಭಾರಿ ಅಂತರ ಜಯ ಎನಿಸಿದೆ. ಇದಕ್ಕೂ ಮುನ್ನ 2016ರಲ್ಲಿ ಗ್ರಾಸ್ ಐಸ್ಲ್ ನಲ್ಲಿ 237 ಅಂತರದಲ್ಲಿ ಟೀಂ ಇಂಡಿಯಾ ಜಯ ದಾಖಲಿಸಿತ್ತು.

ಬೂಮ್ರಾ ಹೊಸ ಏಷ್ಯನ್ ದಾಖಲೆ

ಬೂಮ್ರಾ ಹೊಸ ಏಷ್ಯನ್ ದಾಖಲೆ

ಎರಡನೇ ಇನ್ನಿಂಗ್ಸ್ ನಲ್ಲಿ 7 ರನ್ನಿತ್ತು 5 ವಿಕೆಟ್ ಕಿತ್ತ ಭಾರತದ ವೇಗಿ ಜಸ್ ಪ್ರೀತ್ ಬೂಮ್ರಾ ಹೊಸ ಏಷ್ಯನ್ ದಾಖಲೆ ಬರೆದಿದ್ದಾರೆ. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಚೊಚ್ಚಲ ಸರಣಿಯಲ್ಲೇ 5 ವಿಕೆಟ್ ಗಳಿಸಿದ ಸಾಧನೆ ಮಾಡಿದ್ದಾರೆ. ಈ ಸಾಧನೆ ಮಾಡಿದ ಮೊದಲ ಏಷ್ಯನ್ ಆಟಗಾರ ಎನಿಸಿಕೊಂಡಿದ್ದಾರೆ.

ಜೋಹಾನ್ಸ್ ಬರ್ಗ್ ನಲ್ಲಿ 5/54, ನ್ಯಾಟಿಂಗ್ ಹ್ಯಾಮ್ ನಲ್ಲಿ 5/85, ಮೆಲ್ಬೋರ್ನ್ ನಲ್ಲಿ 6/33 ಗಳಿಸಿದ್ದರು. ಈಗ ನಾರ್ಥ್ ಸೌಂಡ್ ನಲ್ಲಿ 5/7 ಗಳಿಸಿದ್ದಾರೆ. ಉತ್ತಮ ಬೌಲಿಂಗ್ ಪ್ರದರ್ಶನಅ ಪೈಕಿ ಎರ್ನಿ ಟೋಶಾಕ್ 5/2, ಜೆರ್ಮೈನ್ ಲಾಸನ್ 6/3 ಹಾಗೂ ಬರ್ಟ್ ಐರೊನ್ ಮಾಂಗರ್ 5/6 ಮೊದಲ ಮೂರು ಸ್ಥಾನದಲ್ಲಿದ್ದಾರೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Monday, August 26, 2019, 21:59 [IST]
Other articles published on Aug 26, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Mykhel sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Mykhel website. However, you can change your cookie settings at any time. Learn more