ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ತಂಡದ ಆಟಗಾರರಿಗೆ ಹೆಚ್ಚು ಅವಕಾಶ ಸಿಕ್ಕಿತು: ಅಲ್ಪ ಮೊತ್ತಕ್ಕೆ ಔಟಾದ ನಾಯಕ ರಾಹುಲ್ ಮಾತು

India vs Zimbabwe: KL Rahul reaction after won 1st ODI series as Team India skipper

ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿ ಎರಡನೇ ಪಂದ್ಯದಲ್ಲಿಯೂ ಭಾರತ ಭರ್ಜರಿ ಪ್ರದರ್ಶನ ನೀಡಿದ್ದು ವಿಕೆಟ್‌ಗಳ ಅಂತರದಿಂದ ಪಂದ್ಯವನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಗೆಲುವಿನೊಂದಿಗೆ ಭಾರತ ತಂಡ ಏಕದಿನ ಸರಣಿಯನ್ನು ತನ್ನ ವಶಕ್ಕೆ ಪಡೆದುಕೊಂಡಿದೆ. ಈ ಗೆಲುವಿನ ಬಳಿಕ ಭಾರತ ತಂಡದ ನಾಯಕ ಕೆಎಲ್ ರಾಹುಲ್ ಪ್ರತಿಕ್ರಿಯಿಸಿದ್ದು ಗೆಲುವಿನಲ್ಲಿನ ಸಾಕಾರಾತ್ಮಕ ಸಂಗತಿಗಳನ್ನು ಸ್ವೀಕರಿಸುವುದಾಗಿ ಹೇಳಿದ್ದಾರೆ.

ಜಿಂಬಾಬ್ವೆ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಜಿಂಬಾಬ್ವೆ ತಂಡ ನೀಡಿದ 161 ರನ್‌ಗಳ ಸುಲಭ ಸವಾಲನ್ನು ಬೆನ್ನಟ್ಟುವ ಸಂದರ್ಭದಲ್ಲಿ 100 ರನ್‌ಗಳಿಸುವ ಮುನ್ನವೇ 4 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಸ್ವತಃ ನಾಯಕ ಕೆಎಲ್ ರಾಹುಲ್ ಕೇವಲ ಒಂದು ರನ್‌ಗಳಿಸಿ ಫೆವಿಲಿಯನ್‌ಗೆ ಸೇರಿಕೊಂಡಿದ್ದರು. ಇನ್ನು ಇಶಾನ್ ಕಿಶನ್ ಕೂಡ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದಾರೆ.

Maharaja Trophy: ಪ್ಲೇಆಫ್ ಆರಂಭಕ್ಕೆ 6 ಪಂದ್ಯಗಳಷ್ಟೇ ಬಾಕಿ; ಅಂಕಪಟ್ಟಿಯಲ್ಲಿ ಬೆಂಗಳೂರು ಟಾಪ್!Maharaja Trophy: ಪ್ಲೇಆಫ್ ಆರಂಭಕ್ಕೆ 6 ಪಂದ್ಯಗಳಷ್ಟೇ ಬಾಕಿ; ಅಂಕಪಟ್ಟಿಯಲ್ಲಿ ಬೆಂಗಳೂರು ಟಾಪ್!

ಕಳೆದ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದು ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಶುಬ್ಮನ್ ಗಿಲ್ ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ಕೆಎಲ್ ರಾಹುಲ್ ಆರಂಭಿಕನಾಗಿ ಶಿಖರ್ ಧವನ್ ಜೊತೆಗೆ ಕಣಕ್ಕಿಳಿದರು. ಆದರೆ ರಾಹುಲ್ ಈ ಪಂದ್ಯದಲ್ಲಿ ಕೇವಲ ಒಂದು ರನ್‌ಗಳಿಸಲಷ್ಟೇ ಶಕ್ತವಾಗುವ ಮೂಲಕ ನಿರಾಸೆ ಅನುಭವಿಸಿದರು. ಆದರೆ ಕೆಎಲ್ ರಾಹುಲ್ ಈ ಬಗ್ಗೆ ಸಕಾರಾತ್ಮಕವಾಗಿ ಮಾತನಾಡಿದ್ದು ತಮ್ಮ ತಂಡದ ಬ್ಯಾಟಿಂಗ್ ಲೈನ್‌ಅಪ್‌ನಲ್ಲಿ ಇತರ ಆಟಗಾರರೊಗೂ ಆಡುವ ಅವಕಾಶ ದೊರೆತಿಯಿತು. ಅವರು ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿರಲು ಸಾಧ್ಯವಾಯಿತು ಎಂದಿದ್ದಾರೆ ಕೆಎಲ್ ರಾಹುಲ್.

"ಮದ್ಯಮ ಕ್ರಮಾಂಕದ ಆಟಗಾರರಿಗೂ ಆಡುವ ಅವಕಾಶ ದೊರೆಯಿತು. ಇದು ಉತ್ತಮವಾದ ಸಂಗತಿ. ನಾವು ಆತಂಕಕ್ಕೆ ಒಳಗಾಗಲಿಲ್ಲ" ಎಂದಿದ್ದಾರೆ ಕೆಎಲ್ ರಾಹುಲ್. ಇನ್ನು ಆರಂಭಿಕನಾಗಿ ಕಣಕ್ಕಿಳಿದ ವಿಚಾರವಾಗಿ ಮಾತನಾಡಿದ ರಾಹುಲ್ "ಆರಂಭಿಕನಾಗಿ ಇಂದು ಕಣಕ್ಕಿಳಿದದ್ದು ಕೆಲಸಕ್ಕೆ ಬಾರಲಿಲ್ಲ. ಹೆಚ್ಚು ರನ್‌ಗಳನ್ನು ಗಳಿಸಲು ಬಯಸಿದ್ದೆ ಆದರೆ ಅದು ಸಾಧ್ಯವಾಗಿರಲಿಲ್ಲ. ಮುಂದಿನ ಪಂದ್ಯದಲ್ಲಿ ಆಡು ಸಾಧ್ಯವಾಗುತ್ತದೆ ಎಂದು ಭಾವಿಸುತ್ತೇನೆ"

ಅವರಲ್ಲಿ ಗುಣಮಟ್ಟದ ಬೌಲರ್‌ಗಳು ಇದ್ದಾರೆ. ಬಾಂಗ್ಲಾದೇಶದ ವಿರುದ್ಧ ಅದ್ಭುತವಾದ ದಾಳಿ ನಡೆಸಿದ್ದರು, ಅದನ್ನು ನಾನು ಟಿವಿನಲ್ಲಿ ನೋಡಿದ್ದೆ. ಎತ್ತರ ಹಾಗೂ ಬಲಿಷ್ಠವಾದ ಬೌಲರ್‌ಗಳನ್ನು ಹೊಂದಿದ್ದು ಅವರು ಸಾಕಷ್ಟು ಪರಿಶ್ರಮಪಡುತ್ತಿದ್ದಾರೆ. ಬ್ಯಾಟರ್‌ಗಳಾಗಿ ನಮಗೆ ಇದು ನಿಜಕ್ಕೂ ಉತ್ತಮ ಸವಾಲಾಗಿದೆ" ಎಂದಿದ್ದಾರೆ ಕೆಎಲ್ ರಾಹುಲ್.

Ind vs Zim:ಕಂಬ್ಯಾಕ್ ಮಾಡಿದ ಒಂದೇ ಪಂದ್ಯಕ್ಕೆ ಟೀಂ ಇಂಡಿಯಾದಿಂದ ದೀಪಕ್ ಚಹಾರ್ ಔಟ್‌!Ind vs Zim:ಕಂಬ್ಯಾಕ್ ಮಾಡಿದ ಒಂದೇ ಪಂದ್ಯಕ್ಕೆ ಟೀಂ ಇಂಡಿಯಾದಿಂದ ದೀಪಕ್ ಚಹಾರ್ ಔಟ್‌!

"ನಾವು ಇಲ್ಲಿ ಉತ್ತಮ ಕ್ರಿಕೆಟ್ ಆಡಲು ಹಾಗೂ ಗೆಲ್ಲಲು ಬಂದಿದ್ದೇವೆ. ಇದು ವಾರಾಂತ್ಯವಾಗಿದ್ದು ಉತ್ತಮವಾದ ಬೆಂಬಲ ನಮಗೆ ದೊರೆತಿದೆ. ವಿಶ್ವದ ಯಾವುದೇ ಭಾಗಕ್ಕೆ ನಾವು ತೆರಳಿದರೂ ನಮಗೆ ಭಾರತದ ಅಭಿಮಾನಿಗಳಿಂದ ಉತ್ತಮವಾದ ಬೆಂಬಲ ದೊರೆಯುತ್ತದೆ. ಅವರಿಗೆ ನಾವು ಧನ್ಯವಾದ ಸಲ್ಲಿಸುತ್ತೇವೆ" ಎಂದಿದ್ದಾರೆ ಟೀಮ್ ಇಂಡಿಯಾದ ಹಂಗಾಮಿ ನಾಯಕ ಕೆಎಲ್ ರಾಹುಲ್.

ಆಡುವ ಬಳಗ ಹೀಗಿದೆ
ಜಿಂಬಾಬ್ವೆ: ಇನೋಸೆಂಟ್ ಕೈಯಾ, ತಕುದ್ಜ್ವಾನಾಶೆ ಕೈಟಾನೊ, ವೆಸ್ಲಿ ಮಾಧೆವೆರೆ, ಸೀನ್ ವಿಲಿಯಮ್ಸ್, ಸಿಕಂದರ್ ರಜಾ, ರೆಗಿಸ್ ಚಕಬ್ವಾ (ನಾಯಕ & ವಿಕೆಟ್ ಕೀಪರ್), ರಿಯಾನ್ ಬರ್ಲ್, ಲ್ಯೂಕ್ ಜೊಂಗ್ವೆ, ಬ್ರಾಡ್ ಇವಾನ್ಸ್, ವಿಕ್ಟರ್ ನ್ಯಾಯುಚಿ, ತನಕಾ ಚಿವಂಗಾ
ಬೆಂಚ್: ಡೊನಾಲ್ಡ್ ತಿರಿಪಾನೊ, ಮಿಲ್ಟನ್ ಶುಂಬಾ, ಟೋನಿ ಮುನ್ಯೊಂಗಾ, ಕ್ಲೈವ್ ಮದಂಡೆ, ಜಾನ್ ಮಸಾರ, ತಡಿವಾನಾಶೆ ಮರುಮನಿ, ರಿಚರ್ಡ್ ನಾಗರವ

ಭಾರತ ತಂಡ: ಶಿಖರ್ ಧವನ್, ಶುಭಮನ್ ಗಿಲ್, ಇಶಾನ್ ಕಿಶನ್, ಕೆಎಲ್ ರಾಹುಲ್ (ನಾಯಕ), ದೀಪಕ್ ಹೂಡಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲ್‌ದೀಪ್ ಯಾದವ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್
ಬೆಂಚ್: ಶಹಬಾಜ್ ಅಹಮದ್, ಆವೇಶ್ ಖಾನ್, ಋತುರಾಜ್ ಗಾಯಕ್ವಾಡ್, ರಾಹುಲ್ ತ್ರಿಪಾಠಿ, ದೀಪಕ್ ಚಹಾರ್

Story first published: Saturday, August 20, 2022, 21:33 [IST]
Other articles published on Aug 20, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X