ಸ್ಮೃತಿ, ಮಿಥಾಲಿ ಅರ್ಧಶತಕ, ಭಾರತ ವನಿತೆಯರಿಗೆ ಭರ್ಜರಿ ವಿಜಯ

Posted By:
India women cricket team beats South Africa by 9 wickets

ಈಸ್ಟ್ ಲಂಡನ್‌, ಫೆಬ್ರವರಿ 16: ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿರುದ್ಧ 5 ಪಂದ್ಯದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ 9 ವಿಕೆಟ್‌ಗಳ ಅಧಿಕಾರಯುತ ಗೆಲುವು ಸಾಧಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ದಕ್ಷಿಣಾ ಆಫ್ರಿಕಾ ಮಹಿಳೆಯರು ಭಾರತದ ಬಿಗಿ ಬೌಲಿಂಗ್ ಎದರು ರನ್ ಗಳಿಸಿ ಪರದಾಡಿ 142 ರನ್‌ಗಳ ಸಾಧಾರಣ ಗುರಿ ನೀಡಿದರು.

ದ.ಆಫ್ರಿಕಾ ನೀಡಿದ ಗುರಿ ಬೆನ್ನತ್ತಿದ ಭಾರತ ವನಿತೆಯರು ಅತ್ಯುತ್ತಮ ಬ್ಯಾಟಿಂಗ್ ನಡೆಸಿ ಇನ್ನೂ 5 ಬಾಲ್ ಉಳಿದಿದ್ದಂತೆ 9 ವಿಕೆಟ್ ಇದ್ದಂತೆ ಜಯಗಳಿಸಿದರು.

India women cricket team beats South Africa by 9 wickets

ಭಾರತದ ಪರ ಆರಂಭಿಕ ಬ್ಯಾಟ್ಸ್‌ವುಮನ್‌ಗಳಾದ ಮಿಥಾಲಿ ರಾಜ್ ಮತ್ತು ಸ್ಮೃತಿ ಮಂದಾನಾ ಇಬ್ಬರೂ ಅರ್ಧ ಶತಕಗಳಿಸಿ ಮಿಂಚಿದರು. ಬಿರುಸಿನ ಬ್ಯಾಟಿಂಗ್ ಮಾಡಿದ ಸ್ಮೃತಿ ಮಂದಾನಾ ಕೇವಲ 42 ರನ್ ಬಾಲ್ ಎದುರಿಸಿ 57 ರನ್ ಗಳಿಸಿದರು. ಅವರು ಮೂರು ಸಿಕ್ಸರ್ ಮತ್ತು ನಾಲ್ಕು ಬೌಂಡರಿ ಭಾರಿಸಿದರು.

ನಾಯಕಿ ಮಿಥಾಲಿ ರಾಜ್ ಅವರು 61 ಎಸೆತಗಳನ್ನು ಎದುರಿಸಿ 76 ರನ್ ಗಳಿಸಿದರು ಅವರ 8 ಬೌಂಡರಿ ಭಾರಿಸಿ ಅಜೇಯರಾಗುಳಿದರು. ಆರು ಪಂದ್ಯಗಳ ಟಿ20 ಸರಣಿಯ ಮೊದಲೆರಡು ಪಂದ್ಯದಲ್ಲಿ ಭಾರತದ ವನಿತೆಯರು ಜಯ ಗಳಿಸಿದ್ದಾರೆ. ಇದಕ್ಕೂ ಮುಂಚೆ ನಡೆದಿದ್ದ ಏಕದಿನ ಸರಣಿಯನ್ನೂ ಭಾರತ ವನಿತೆಯರು ಗೆದ್ದಿರಿದ್ದರು.

Story first published: Friday, February 16, 2018, 19:51 [IST]
Other articles published on Feb 16, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ