ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಶ್ರೀಲಂಕಾ ಮಹಿಳಾ ಟಿ20 ಸರಣಿ: ಟಿವಿಯಲ್ಲಿಲ್ಲ ನೇರಪ್ರಸಾರ, ಬಿಸಿಸಿಐ ವಿರುದ್ಧ ನೆಟ್ಟಿಗರು ಕಿಡಿ

India women

ದಂಬುಲ್ಲಾದಲ್ಲಿ ನಡೆಯುತ್ತಿರುವ ಭಾರತ ಮಹಿಳಾ ತಂಡ ವರ್ಸಸ್ ಶ್ರೀಲಂಕಾ ಮಹಿಳಾ ತಂಡದ ಮೊದಲ ಟಿ20 ಪಂದ್ಯವು ಟಿವಿಯಲ್ಲಿ ನೇರಪ್ರಸಾರ ಮಾಡದಿದ್ದಕ್ಕೆ ಬಿಸಿಸಿಐ ವಿರುದ್ಧ ಅಭಿಮಾನಿಗಳು, ನೆಟ್ಟಿಗರು ಕಿಡಿಕಾರಿದ್ದಾರೆ. ಯೂಟ್ಯೂಬ್‌ ಫ್ಲಾಟ್ ಫಾರ್ಮ್ ಫ್ಯಾನ್‌ಕೋಡ್‌ ಆ್ಯಪ್‌ನಲ್ಲಿ ನೇರಪ್ರಸಾರ ನೀಡಲಾಗಿದೆ.

ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ಕ್ರಿಕೆಟ್ ತಂಡ ಇಂದಿನಿಂದ ಶ್ರೀಲಂಕಾ ವಿರುದ್ಧ ಸೀಮಿತ ಓವರ್‌ಗಳ ಸರಣಿಯನ್ನು ಆಡುತ್ತಿದೆ. ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಭಾರತ ಯುವ ತಂಡ ಕ್ರಮವಾಗಿ ಮೂರು ಟಿ20 ಮತ್ತು ಮೂರು ಏಕದಿನ ಪಂದ್ಯಗಳನ್ನು ಆಡಲಿದೆ. ಇತ್ತೀಚೆಗೆ ನಿವೃತ್ತಿ ಘೋಷಿಸಿದ ಮಾಜಿ ನಾಯಕಿ ಮಿಥಾಲಿ ರಾಜ್ ಮತ್ತು ಅನುಭವಿ ವೇಗಿ ಜೂಲನ್ ಗೋಸ್ವಾಮಿ ಇಲ್ಲದೆ ಟೀಂ ಇಂಡಿಯಾ ಶ್ರೀಲಂಕಾ ಪ್ರವಾಸಕ್ಕೆ ತೆರಳಿದೆ.

ಮಿಥಾಲಿ ರಾಜ್ ನಿವೃತ್ತಿಯ ನಂತರ, ಹರ್ಮನ್ ಪ್ರೀತ್ ಕೌರ್ ಅವರನ್ನು ಏಕದಿನ ಸ್ವರೂಪಕ್ಕೆ ನಾಯಕಿಯಾಗಿ ಆಯ್ಕೆ ಮಾಡಲಾಯಿತು. ಉಪನಾಯಕಿಯಾಗಿ ಸ್ಮೃತಿ ಮಂಧಾನ ಆಯ್ಕೆಯಾದರು.

ನೇರಪ್ರಸಾರದ ಹಕ್ಕು ಪಡೆದಿರುವ ಫ್ಯಾನ್ ಕೋಡ್

ಟಿ20 ಸರಣಿ ಇಂದಿನಿಂದ ಆರಂಭಗೊಂಡಿದ್ದು, ಜೂನ್ 23, 25 ಮತ್ತು 27 ರಂದು ಮೂರು ಟಿ20 ಪಂದ್ಯಗಳು ನಡೆಯಲಿದೆ. ಇದಲ್ಲದೆ ಏಕದಿನ ಸರಣಿಯ ಭಾಗವಾಗಿ ಜುಲೈ 1, 4 ಮತ್ತು 7 ರಂದು ಏಕದಿನ ಪಂದ್ಯಗಳು ನಡೆಯಲಿವೆ. ಎಲ್ಲಾ ಟಿ20 ಪಂದ್ಯಗಳು ದಂಬುಲ್ಲಾದಲ್ಲಿ ನಡೆದ್ರೆ, ಮೂರು ಏಕದಿನ ಪಂದ್ಯಗಳು ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ನಡೆಯಲಿವೆ.

ಭಾರತ ವರ್ಸಸ್ ಶ್ರೀಲಂಕಾದ ಸರಣಿಗಳ ದೂರದರ್ಶನದ ನೇರ ಪ್ರಸಾರದ ಹಕ್ಕುಗಳನ್ನು ಪಡೆಯಲು ಒಬ್ಬನೇ ಒಬ್ಬ ಪ್ರಸಾರಕರು ಮುಂದೆ ಬಂದಿಲ್ಲ. ಈ ನಿಟ್ಟಿನಲ್ಲಿ ಬಿಸಿಸಿಐ ಮುತುವರ್ಜಿ ವಹಿಸಿಲ್ಲ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಶ್ವಕಪ್ ಬಳಿಕ ಮಹಿಳಾ ತಂಡ ಮೊದಲ ಬಾರಿಗೆ ದ್ವಿಪಕ್ಷೀಯ ಸರಣಿ ಆಡುತ್ತಿದ್ದು, ವ್ಯಾಪಕ ಕುತೂಹಲ ಕೆರಳಿಸಿದೆ.

ಶ್ರೀಲಂಕಾದ ಅನೇಕ ವೇದಿಕೆಯಲ್ಲಿ ನೇರಪ್ರಸಾರ

ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಇದೀಗ ತನ್ನ ರಾಷ್ಟ್ರೀಯ ಪ್ರೇಕ್ಷಕರಿಗೆ ಪಂದ್ಯವನ್ನು ನೇರಪ್ರಸಾರ ವೀಕ್ಷಿಸಲು ಹಲವಾರು ಸ್ಥಳಗಳನ್ನು ಸ್ಥಾಪಿಸಿದೆ. ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಡೈಲಾಗ್ ಟೆಲಿವಿಷನ್, ಚಾನೆಲ್ 1NE, ಶ್ರೀಲಂಕಾ ಕ್ರಿಕೆಟ್ ಯೂಟ್ಯೂಬ್ ಚಾನೆಲ್, ThePapare.com ನಲ್ಲಿ ನೇರ ಪ್ರಸಾರ ಮಾಡುತ್ತದೆ. ಇದು ಡೈಲಾಗ್ ಮತ್ತು ಚಾನೆಲ್ 1NE ದೂರದರ್ಶನ ಪ್ರಸಾರಗಳನ್ನು ಒಳಗೊಂಡಿದೆ.

ಇನ್ನು ಉಳಿದವು ಡಿಜಿಟಲ್ ಪ್ರಸಾರಗಳಾಗಿವೆ. ಭಾರತದ ಪರವಾಗಿ ಸೋನಿ, ಸ್ಟಾರ್ ಸ್ಪೋರ್ಟ್ ಮತ್ತು ವಯಾಕಾಮ್‌ನಂತಹ ಯಾವುದೇ ಐಕಾನಿಕ್ ಪ್ರಸಾರಕರು ಪಂದ್ಯವನ್ನು ಪ್ರಸಾರ ಮಾಡಲು ಮುಂದೆ ಬಂದಿಲ್ಲ. ನಿನ್ನೆ ಸಂಜೆಯವರೆಗೂ ಈ ಪಂದ್ಯಗಳು ಭಾರತದಲ್ಲಿ ಪ್ರಸಾರವಾಗುತ್ತದೋ ಇಲ್ಲವೋ ಎಂಬ ಸಂದಿಗ್ಧತೆ ಇತ್ತು. ಆದ್ರೆ ಒಂದು ದಿನ ಮುಂಚೆಯಷ್ಟೇ ಫ್ಯಾನ್ ಕೋಡ್ ನೇರ ಪ್ರಸಾರದ ಹಕ್ಕು ಪಡೆಯಿತು.

ಬಿಸಿಸಿಐ ವಿರುದ್ಧ ಕಿಡಿಕಾರಿದ ಅಭಿಮಾನಿಗಳು

ಭಾರತ ವರ್ಸಸ್ ಶ್ರೀಲಂಕಾ ಮಹಿಳಾ ಕ್ರಿಕೆಟ್ ಸರಣಿಯನ್ನು ವೆಬ್ ಮತ್ತು ಅಪ್ಲಿಕೇಶನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಉಚಿತವಾಗಿ ಘೋಷಿಸಲಾಗಿದೆ. ಇದರಿಂದ ಆನ್‌ಲೈನ್‌ನಲ್ಲಾದರೂ ಪಂದ್ಯ ವೀಕ್ಷಿಸಲು ಸಾಧ್ಯವಾಯಿತು. ಇಲ್ಲದಿದ್ದರೆ ಶ್ರೀಲಂಕಾ ಕ್ರಿಕೆಟ್ ಯೂಟ್ಯೂಬ್ ಚಾನೆಲ್ ಗೆ ಅಡ್ಡಿಯಾಗುತ್ತಿತ್ತು. ಆದ್ರೆ ನೇರಪ್ರಸಾರವನ್ನು ಟಿವಿಯಲ್ಲಿ ನೀಡದಿದ್ದಕ್ಕೆ ಅಭಿಮಾನಿಗಳು ಛೀಮಾರಿ ಹಾಕಿದ್ದಾರೆ.

Kapil Dev ನಿರೀಕ್ಷೆಯನ್ನು ಹುಸಿ ಮಾಡಿದ Virat Kohli:ನೋವಿನಲ್ಲಿ ಕಪಿಲ್ ಹೇಳಿದ್ದೇನು? | *Cricket | OneIndia
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿರುವ ಭಾರತ ಮಹಿಳಾ ತಂಡ

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿರುವ ಭಾರತ ಮಹಿಳಾ ತಂಡ

ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗೆದ್ದಿರುವ ಭಾರತ ಮಹಿಳಾ ತಂಡವು ಬ್ಯಾಟಿಂಗ್ ಆಯ್ದುಕೊಂಡಿದ್ದು, 80ರನ್‌ಗಳಿಸುವಷ್ಟರಲ್ಲಿ ಐದು ವಿಕೆಟ್ ಕಳೆದುಕೊಂಡಿತು. ಶಫಾಲಿ ವರ್ಮಾ 31, ಹರ್ಮನ್‌ಪ್ರೀತ್ ಕೌರ್ 22ರನ್‌ಗಳಿಸಿ ಗರಿಷ್ಠ ಸ್ಕೋರರ್ ಆಗಿದ್ದಾರೆ.

ಭಾರತ ಮಹಿಳಾ ತಂಡದ ಪ್ಲೇಯಿಂಗ್ ಇಲೆವೆನ್
ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಸಬ್ಬಿನೇನಿ ಮೇಘನಾ, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ರೇಣುಕಾ ಸಿಂಗ್, ರಾಧಾ ಯಾದವ್, ರಾಜೇಶ್ವರಿ ಗಾಯಕ್ವಾಡ್

ಶ್ರೀಲಂಕಾ ಮಹಿಳಾ ತಂಡದ ಪ್ಲೇಯಿಂಗ್ ಇಲೆವೆನ್
ಚಾಮರಿ ಅಥಾಪತ್ತು (ನಾಯಕಿ), ವಿಶ್ಮಿ ಗುಣರತ್ನೆ, ಹರ್ಷಿತಾ ಮಾದವಿ, ಕವಿಶಾ ದಿಲ್ಹಾರಿ, ನೀಲಾಕ್ಷಿ ಡಿ ಸಿಲ್ವಾ, ಅನುಷ್ಕಾ ಸಂಜೀವನಿ (ವಿಕೆಟ್ ಕೀಪರ್), ಇನೋಕಾ ರಣವೀರ, ಅಮಾ ಕಾಂಚನಾ, ಓಷದಿ ರಣಸಿಂಗ್, ಸುಗಂದಿಕಾ ಕುಮಾರಿ, ಉದೇಶಿಕಾ ಪ್ರಬೋಧನಿ

Story first published: Thursday, June 23, 2022, 17:22 [IST]
Other articles published on Jun 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X