ಟಿ20 ವಿಶ್ವಕಪ್‌ನಿಂದ ಜಸ್ಪ್ರಿತ್ ಬೂಮ್ರಾ ಔಟ್: ಅಧಿಕೃತವಾಗಿ ಘೋಷಿಸಿದ ಬಿಸಿಸಿಐ

ಟೀಮ್ ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಟಿ20 ವಿಶ್ವಕಪ್‌ನಿಂದ ಹೊರ ಬಿದ್ದಿರುವುದು ಈಗ ಅಧಿಕೃತವಾಗಿದೆ. ಬೆನ್ನುನೋವಿನ ಬೂಮ್ರಾ ಹೊರಬೀಳಲಿದ್ದಾರೆ ಎಂದು ಈ ಮೊದಲೇ ವರದಿಯಾಗಿದ್ದರೂ ಬಿಸಿಸಿಐ ಅದನ್ನು ಅಧಿಕೃತವಾಗಿ ಘೋಷಣೆ ಮಾಡಿರಲಿಲ್ಲ. ಹೀಗಾಗಿ ಬೂಮ್ರಾ ಚೇತರಿಸಿಕೊಂಡು ತಂಡಕ್ಕೆ ಮರಳುವ ಸಾಧ್ಯತೆಗಳ ಬಗ್ಗೆಯೂ ವರದಿಗಳಾಗಿತ್ತು. ಆದರೆ ಈಗ ಬಿಸಿಸಿಐ ಈ ಬಗ್ಗೆ ಅಧಿಕೃತವಾಗಿ ಮಾಹಿತಿಯನ್ನು ನೀಡಿದ್ದು ಬೂಮ್ರಾ ಮುಂಬರುವ ಟಿ20 ವಿಶ್ವಕಪ್‌ನಿಂದ ಹೊರಬಿದ್ದಿರುವುದು ಅಧಿಕೃತವಾಗಿದೆ.

"ಜಸ್ಪ್ರೀತ್ ಬೂಮ್ರಾ ಟಿ20 ವಿಶ್ವಕಪ್‌ ತಂಡದಿಂದ ಹೊರಬಿದ್ದಿದ್ದಾರೆ. ತಜ್ಞರು ಸಂಪೂರ್ಣ ಪರಾಮರ್ಶೆ ನಡೆಸಿದ ಬಳಿಕ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇದಕ್ಕೂ ಮುನ್ನ ಬೂಮ್ರಾ ಬೆನ್ನು ನೋವಿನ ಕಾರಣದಿಂದಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಿಂದ ಹೊರಬಿದ್ದಿದ್ದರು. ಬಿಸಿಸಿಐ ಈ ಪ್ರತಿಷ್ಠಿತ ಟೂರ್ನಿಗೆ ಜಸ್ಪ್ರಿತ್ ಬೂಮ್ರಾಗೆ ಬದಲಿ ಆಟಗಾರನನ್ನು ಶೀಘ್ರದಲ್ಲೇ ಹೆಸರಿಸಲಿದೆ" ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ICC T20 Ranking: ನಂಬರ್ 1 ಸ್ಥಾನಕ್ಕೇರಲು ಸಿದ್ಧವಾದ ಸೂರ್ಯಕುಮಾರ್ ಯಾದವ್ICC T20 Ranking: ನಂಬರ್ 1 ಸ್ಥಾನಕ್ಕೇರಲು ಸಿದ್ಧವಾದ ಸೂರ್ಯಕುಮಾರ್ ಯಾದವ್

ದೊಡ್ಡ ಹಿನ್ನಡೆ

ದೊಡ್ಡ ಹಿನ್ನಡೆ

ಜಸ್ಪ್ರೀತ್ ಬೂಮ್ರಾ ಟಿ20 ವಿಶ್ವಕಪ್‌ಗೆ ಅಲಭ್ಯವಾಗುತ್ತಿರುವುದು ಭಾರತ ತಂಡಕ್ಕೆ ದೊಡ್ಡ ಹಿನ್ನಡೆ ಎಂಬುದರಲ್ಲಿ ಅನುಮಾನವೇ ಇಲ್ಲ. ಅದರಲ್ಲೂ ಬೂಮ್ರಾ ಅಲಭ್ಯತೆಯಲ್ಲಿ ಏಷ್ಯಾಕಪ್‌ನಲ್ಲಿ ಭಾರತದ ವೇಗಿಗಳ ಪ್ರದರ್ಶನದಿಂದ ತಂಡ ಆಘಾತಕಾರಿಯಾಗಿ ಹೊರಬಿದ್ದಿತ್ತು. ಇದೀಗ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಚುಟುಕು ವಿಶ್ವಕಪ್‌ಗೂ ಅಲಭ್ಯವಾಗುತ್ತಿರುವ ಕಾರಣ ತಂಡಕ್ಕೆ ದೊಡ್ಡ ಸವಾಲಾಗಲಿದೆಈ ಅನುಭವಿ ವೇಗಿಯ ಅನುಪಸ್ಥಿತಿಯನ್ನು ಭಾರತ ತಂಡ ಹೇಗೆ ಭರಿಸಲಿದೆ ಎಂಬುದು ಕೂಡ ಟೂರ್ನಿಯಲ್ಲಿ ಮಹತ್ವ ಪಡೆದುಕೊಳ್ಳಲಿದೆ.

ದೀಪಕ್ ಚಹಾರ್, ಮೊಹಮ್ಮದ್ ಶಮಿ ಪೈಕಿ ಯಾರಿಗೆ ಅವಕಾಶ

ದೀಪಕ್ ಚಹಾರ್, ಮೊಹಮ್ಮದ್ ಶಮಿ ಪೈಕಿ ಯಾರಿಗೆ ಅವಕಾಶ

ಇನ್ನು ಜಸ್ಪ್ರೀತ್ ಬೂಮ್ರಾ ವಿಶ್ವಕಪ್ ಟೂರ್ನಿಗೆ ಅಲಭ್ಯವಾಗುತ್ತಿರುವ ಕಾರಣದಿಂದಾಗಿ ಮೀಸಲು ಆಟಗಾರರಾಗಿರುವ ಮೊಹಮ್ಮದ್ ಶಮಿ ಮತ್ತು ದೀಪಕ್ ಚಾಹರ್ ಮಧ್ಯೆ ಒಬ್ಬರು ಆಯ್ಕೆಯಾಗಲಿದ್ದಾರೆ. ಅನುಭವದ ಹಿನ್ನೆಲೆಯಲ್ಲಿ ಶಮಿ ಭಾರತ ತಂಡದಲ್ಲಿ ಸ್ಥಾನವನ್ನು ಗಿಟ್ಟಿಸಿಕೊಳ್ಳುವ ಸಾಧ್ಯತೆ ಹೆಚ್ಚಿದ್ದರೂ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿಯೂ ದೀಪಕ್ ಚಾಹರ್ ನಿಡಿರುವ ಪ್ರದರ್ಶನದಿಂದಾಗಿ ಆಯ್ಕೆ ಮಂಡಳಿ ಚಾಹರ್‌ಗೆ ಅವಕಾಶ ನೀಡುವ ಸಾಧ್ಯತೆಯೂ ಇದೆ. ದೀಪಕ್ ಚಹಾರ್ ಸೇರ್ಪಡೆಯಾದರೆ ಬ್ಯಾಟಿಂಗ್ ವಿಭಾಗದಲ್ಲಿಯೂ ಕೊಡುಗೆ ನೀಡುವ ಕಾರಣ ತಂಡದ ಸಮತೋಲನದಲ್ಲಿ ಮಹತ್ವದ ಪಾತ್ರವಹಿಸಲಿದ್ದಾರೆ.

ಭಾರತದ ವಿಶ್ವಕಪ್ ಸ್ಕ್ವಾಡ್ ಹೀಗಿದೆ

ಭಾರತದ ವಿಶ್ವಕಪ್ ಸ್ಕ್ವಾಡ್ ಹೀಗಿದೆ

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಸರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಶ್‌ದೀಪ್ ಸಿಂಗ್
ಸ್ಟ್ಯಾಂಡ್‌ಬೈ ಆಟಗಾರರು: ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹಾರ್

For Quick Alerts
ALLOW NOTIFICATIONS
For Daily Alerts
Story first published: Monday, October 3, 2022, 21:28 [IST]
Other articles published on Oct 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X