ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ವೇಗಿ ಪಂಕಜ್ ಸಿಂಗ್

Indian pacer Pankaj Singh announces retirement from all forms of the game

ನವದೆಹಲಿ: ಭಾರತದ ವೇಗಿ ಪಂಕಜ್ ಸಿಂಗ್‌ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 36ರ ಹರೆಯದ ಪಂಕಜ್ 2014ಕ್ಕೆ ಕೊನೇ ಸಾರಿ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಪಾಲ್ಗೊಂಡಿದ್ದರು. ಈಚಿನ ದಿನಗಳಲ್ಲಿ ಕ್ರಿಕೆಟ್‌ನಿಂತ ದೂರವೇ ಇದ್ದ ಪಂಕಜ್, ಕ್ರಿಕೆಟ್‌ ವೃತ್ತಿಗೆ ತೆರೆಯೆಳೆಯುವ ನಿರ್ಧಾರ ಶನಿವಾರ (ಜುಲೈ 10) ಪ್ರಕಟಿಸಿದ್ದಾರೆ.

ರಸೆಲ್, ಮೆಕಾಯ್ ಆರ್ಭಟ: ಆಸ್ಟ್ರೇಲಿಯಾ ವಿರುದ್ಧ ವೆಸ್ಟ್‌ ಇಂಡೀಸ್‌ಗೆ ಜಯ!ರಸೆಲ್, ಮೆಕಾಯ್ ಆರ್ಭಟ: ಆಸ್ಟ್ರೇಲಿಯಾ ವಿರುದ್ಧ ವೆಸ್ಟ್‌ ಇಂಡೀಸ್‌ಗೆ ಜಯ!

ಮೂಲತಃ ಉತ್ತರ ಪ್ರದೇಶದವರಾದ ಪಂಕಜ್ ಸಿಂಗ್ ಭಾರತದ ಪರ 2 ಟೆಸ್ಟ್‌, 1 ಏಕದಿನ ಪಂದ್ಯ, 17 ಐಪಿಎಲ್ ಪಂದ್ಯಗಳಲ್ಲಿ ಆಡಿದ್ದರು. ಮಧ್ಯಮ ವೇಗಿಯಾದ ಪಂಕಜ್ 2 ಟೆಸ್ಟ್ ಪಂದ್ಯಗಳಲ್ಲಿ 2 ವಿಕೆಟ್, ಐಪಿಎಲ್‌ನಲ್ಲಿ 11 ವಿಕೆಟ್‌ ದಾಖಲೆ ಹೊಂದಿದ್ದಾರೆ.

2010ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಪಂಕಜ್‌ ಪಾದಾರ್ಪಣೆ ಮಾಡಿದ್ದರು. 2014ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ಕಡೇಯಸಾರಿ ಆಡಿದ್ದರು. ಅದಾಗಿ ಪಂಕಜ್ ಅಂತಾರಾಷ್ಟ್ರೀಯ ಪಂದ್ಯ ಆಡಿಲ್ಲ. ಐಪಿಎಲ್‌ನಲ್ಲಿ ಪಂಕಜ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದಾರೆ.

ಭಾರತ vs ಶ್ರೀಲಂಕಾ: ಬದಲಾಗಿರುವ ವೇಳಾಪಟ್ಟಿಯ ಸಂಪೂರ್ಣ ಮಾಹಿತಿಭಾರತ vs ಶ್ರೀಲಂಕಾ: ಬದಲಾಗಿರುವ ವೇಳಾಪಟ್ಟಿಯ ಸಂಪೂರ್ಣ ಮಾಹಿತಿ

'ನಿವೃತ್ತಿಯ ನಿರ್ಧಾರ ಪ್ರಕಟಿಸೋದು ಸುಲಭವಲ್ಲ. ಆದರೆ ಏಲ್ಲಾ ಕ್ರೀಡಾಪಟುಗಳ ಬದುಕಿನಲ್ಲೂ ಆ ಒಂದು ಕ್ಷಣ ಬಂದೇ ಬರುತ್ತದೆ. ಭಾರ ಮನಸ್ಸು ಮತ್ತು ಮಿಶ್ರ ಭಾವಗಳೊಂದಿಗೆ ನಾನು ಎಲ್ಲಾ ಕ್ರಿಕೆಟ್ ಮಾದರಿಗಳಿಗೆ ನಿವೃತ್ತಿ ಘೋಷಿಸುತ್ತಿದ್ದೇನೆ," ಎಂದು ನಿವೃತ್ತಿ ವೇಳೆ ಪಂಕಜ್ ಹೇಳಿದ್ದಾರೆ.

Story first published: Saturday, July 10, 2021, 15:19 [IST]
Other articles published on Jul 10, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X