ಮಹಿಳಾ ಕ್ರಿಕೆಟ್: ಸ್ಮೃತಿ ಮಂದಾನ ಆಕರ್ಷಕ ಶತಕ

Posted By:
Indian women and South Africa women one day cricket match

ಕಿಂಬರ್ಲಿ, ಫೆಬ್ರವರಿ 07: ಇಲ್ಲಿ ನಡೆಯುತ್ತಿರುವ ಭಾರತ ಮಹಿಳಾ ಮತ್ತು ದಕ್ಷಿಣ ಆಫ್ರಿಕಾ ಮಹಿಳಾ ಏಕದಿನ ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲಿ ಭಾರತದ ಪರ ಆಟಗಾರ್ತಿ ಸ್ಮೃತಿ ಮಂದಾನ ಅವರು ಆಕರ್ಷಕ ಶತಕದ ನೆರವಿನಿಂದ ಭಾರತ 302/3 ಬೃಹತ್ ಮೊತ್ತ ದಾಖಲಿಸಿತು.

ಮಹಿಳಾ ಕೊಹ್ಲಿ ಎಂದೇ ಕರೆಸಿಕೊಳ್ಳುವ ಸುಂದರ ನಗುವಿನ ಒಡತಿ ಸ್ಮೃತಿ ಮಂದಾನ ಅವರು 129 ಬಾಲ್‌ನಲ್ಲಿ ಆಕರ್ಷಕ 135 ರನ್ ಬಾರಿಸಿದ್ದಾರೆ. 14 ಬಾರಿ ಬಾಲನ್ನು ಬೌಡರಿ ಗೆರೆ ದಾಟಿಸಿದ್ದರೆ ಒಂದು ಸಿಕ್ಸರ್‌ ಕೂಡಾ ಸಿಡಿಸಿದ್ದಾರೆ.

ಮೊದಲ ಏಕದಿನ ಪಂದ್ಯದಲ್ಲೂ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ಸ್ಮೃತಿ ಅವರು 84 ರನ್ ಗಳಿಸಿ ಔಟಾಗಿದ್ದರು. ಆ ಮ್ಯಾಚಿನಲ್ಲಿ ಮಾಡಲಾಗದಿದ್ದ ಶತಕವನ್ನು ಎರಡನೇ ಪಂದ್ಯದಲ್ಲಿ ಮಾಡಿ ತೋರಿಸಿದ್ದಾರೆ.

ಭಾರತದ ಮಹಿಳಾ ಕ್ರಿಕೆಟ್‌ ತಂಡದಲ್ಲಿ ಅತ್ಯುತ್ತಮ ಬ್ಯಾಟಿಂಗ್‌ ಸರಾಸರಿ ಹೊಂದಿರುವ ಸ್ಮೃತಿ ಅವರು ಭಾರತ ಮಹಿಳಾ ತಂಡ ವಿಶ್ವಕಪ್ ಫೈನಲ್ ತಲುಪುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು. ವಿಶ್ವಕಪ್‌ ಟೂರ್ನಿಯಲ್ಲಿಯೂ ಅವರು ಶತಕ ಮತ್ತು ಅರ್ಧಶತಕ ಗಳಿಸಿ ಮಿಂಚಿದ್ದರು.

ಸ್ಮೃತಿ ಅವರ ಅತ್ಯುತ್ತಮ ಆಟದಿಂದಾಗಿ ಭಾರತ ಮಹಿಳಾ ತಂಡ 302 ರನ್‌ಗಳ ಸವಾಲಿನ ಮೊತ್ತ ಕಲೆ ಹಾಕಿದ್ದು, ದಕ್ಷಿಣ ಆಫ್ರಿಕಾ ಮಹಿಳಾ ತಂಡಕ್ಕೆ ಗೆಲ್ಲಲು 289 ರನ್ ಗಳಿಸಬೇಕಿದೆ.

ಸ್ಮೃತಿ ಮಂದಾನ ಅವರೊಂದಿಗೆ ಅತ್ಯುತ್ತಮ ಜತೆಯಾಟ ಆಡಿದ ಮತ್ತೊಬ್ಬ ಪ್ರತಿಭಾನ್ವಿತ ಆಟಗಾರ್ತಿ ಹರ್ಮನ್ ಪ್ರೀತ್ ಕೌರ್ 69 ಚೆಂಡು ಎದುರಿಸಿ 55 ರನ್ ಬಾರಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 2 ಬೌಂಡರಿ ಮತ್ತು ಒಂದು ಸಿಕ್ಸರ್‌ ಇವೆ.

ಮತ್ತೊಬ್ಬ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಅವರು ಮಿಂಚಿನ ಬ್ಯಾಟಿಂಗ್ ನಡೆಸಿ 33 ಬಾಲ್‌ಗೆ 51 ರನ್ ಸಿಡಿಸಿದ್ದಾರೆ. ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಭಾರತದ ಮಹಿಳೆಯರ ತಂಡ ಕಳೆದು ಕೊಂಡಿದ್ದು ಕೇವಲ ಮೂರೇ ವಿಕೆಟ್.

ಈ ಪಂದ್ಯ ಗೆದ್ದರೆ ಭಾರತಕ್ಕೆ ಸರಣಿ ಗೆಲುವು ಪ್ರಾಪ್ತಿಯಾಗುವ ಜೊತೆಗೆ, 2021ರ ವಿಶ್ವಕಪ್‌ಗೆ ನೇರ ಅರ್ಹತೆ ದೊರಕುತ್ತದೆ. ಭಾರತ ಬೃಹತ್‌ ಮೊತ್ತ ಪೇರಿಸಿರುವ ಕಾರಣ ಭಾರತದ ವನಿತೆಯರು ಗೆಲ್ಲುವ ಸಾಧ್ಯತೆ ದಟ್ಟವಾಗಿದೆ.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Wednesday, February 7, 2018, 13:55 [IST]
Other articles published on Feb 7, 2018
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ