ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತದಲ್ಲಿ ಪಾಕಿಸ್ತಾನ ತಂಡ ಕ್ರಿಕೆಟ್ ಆಡುವುದನ್ನು ಭಾರತೀಯರೇ ಬಯಸುತ್ತಿದ್ದಾರೆ; ಶಾಹಿದ್ ಅಫ್ರಿದಿ

Indians Want Pakistan Team To Play Cricket In India Says Shahid Afridi

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಲ್‌ರೌಂಡರ್ ಶಾಹಿದ್ ಅಫ್ರಿದಿ ಅವರು ಏಷ್ಯಾ ಕಪ್ ಮತ್ತು ವಿಶ್ವಕಪ್ ಟೂರ್ನಿಗಳಲ್ಲಿ ಭಾಗವಹಿಸುವ ಕುರಿತು ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯುತ್ತಿರುವ ವಾಕ್ಸಮರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

2023ರ ಏಷ್ಯಾ ಕಪ್‌ಗಾಗಿ ಭಾರತ ತಂಡವು ತಮ್ಮ ನೆರೆಯ ರಾಷ್ಟ್ರಕ್ಕೆ ಪ್ರವಾಸ ಕೈಗೊಳ್ಳುವ ಬಗ್ಗೆ ಕಳವಳ ವ್ಯಕ್ತಪಡಿಸಿದ ನಂತರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಪರಿಸ್ಥಿತಿಯು ಮತ್ತಷ್ಟು ಉಲ್ಬಣಗೊಂಡಿದೆ.

IND vs BAN: ODI ಕ್ರಿಕೆಟ್‌ನಲ್ಲಿ ತಂಡ ತನಗೆ ಈ ಪಾತ್ರ ನೀಡಿದೆ ಎಂದ ಕೆಎಲ್ ರಾಹುಲ್IND vs BAN: ODI ಕ್ರಿಕೆಟ್‌ನಲ್ಲಿ ತಂಡ ತನಗೆ ಈ ಪಾತ್ರ ನೀಡಿದೆ ಎಂದ ಕೆಎಲ್ ರಾಹುಲ್

ರೋಜರ್ ಬಿನ್ನಿ ಅವರನ್ನು ಹೊಸ ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆ ಮಾಡಿದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (ಎಜಿಎಂ) ಏಷ್ಯಾ ಕಪ್‌ ಟೂರ್ನಿಯನ್ನು ತಟಸ್ಥ ಸ್ಥಳವನ್ನು ಆಡಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು.

ಬಿಸಿಸಿಐ ಮತ್ತು ಪಿಸಿಬಿ ನಡುವೆ ವಾಕ್ಸಮರ

ಬಿಸಿಸಿಐ ಮತ್ತು ಪಿಸಿಬಿ ನಡುವೆ ವಾಕ್ಸಮರ

ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಖ್ಯಸ್ಥ ರಮೀಜ್ ರಾಜಾ ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿ, ಭಾರತ ತಂಡವು ಏಷ್ಯಾ ಕಪ್‌ಗಾಗಿ ಪಾಕಿಸ್ತಾನಕ್ಕೆ ಬರದಿದ್ದರೆ ಅಥವಾ ಪಂದ್ಯಾವಳಿಯನ್ನು ತಟಸ್ಥ ಸ್ಥಳದಲ್ಲಿ ಆಡಿಸಿದರೆ ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡ 2023ರ ಏಕದಿನ ವಿಶ್ವಕಪ್‌ನಿಂದ ಹಿಂದೆ ಸರಿಯಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಭಾರತ ತಂಡ ಕೊನೆಯದಾಗಿ 2008ರ ಏಷ್ಯಾ ಕಪ್ ರೂಪದಲ್ಲಿ ಅಂತಾರಾಷ್ಟ್ರೀಯ ಪಂದ್ಯಾವಳಿಯನ್ನು ಆಯೋಜಿಸಿತ್ತು. ಬಿಸಿಸಿಐ ಮತ್ತು ಪಿಸಿಬಿ ನಡುವೆ ನಡೆಯುತ್ತಿರುವ ಅಸ್ಥಿರ ಪರಿಸ್ಥಿತಿಯ ಬಗ್ಗೆ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಮಾಧ್ಯಮಗಳಿಗೆ ಮಾತನಾಡಿದ್ದಾರೆ.

ಕ್ರಿಕೆಟ್ ಆಡುವುದನ್ನು ನೋಡಲು ಭಾರತೀಯರೇ ಬಯಸುತ್ತಿದ್ದಾರೆ

ಕ್ರಿಕೆಟ್ ಆಡುವುದನ್ನು ನೋಡಲು ಭಾರತೀಯರೇ ಬಯಸುತ್ತಿದ್ದಾರೆ

"ಕ್ರಿಕೆಟ್‌ನಿಂದಾಗಿ ಪಾಕಿಸ್ತಾನ ಮತ್ತು ಭಾರತದ ನಡುವಿನ ಸಂಬಂಧವು ಯಾವಾಗಲೂ ಸುಧಾರಿಸಿದೆ. ಪಾಕಿಸ್ತಾನ ತಂಡವು ಭಾರತದಲ್ಲಿ ಕ್ರಿಕೆಟ್ ಆಡುವುದನ್ನು ನೋಡಲು ಭಾರತೀಯರೇ ಬಯಸುತ್ತಿದ್ದಾರೆ," ಎಂದು ಮಾಜಿ ಆಲ್‌ರೌಂಡರ್ ಶಾಹಿದ್ ಅಫ್ರಿದಿ ತಿಳಿಸಿದ್ದಾರೆ.

ಪಿಸಿಬಿ ಅಧ್ಯಕ್ಷ ರಮೀಜ್ ರಾಜಾ ಇತ್ತೀಚೆಗಿನ ತಮ್ಮ ಆರಂಭಿಕ ಹೇಳಿಕೆಗೆ ಮತ್ತೊಂದು ಹೇಳಿಕೆಯನ್ನು ಸೇರಿಸಿದ್ದಾರೆ. ಏಷ್ಯಾಕಪ್ ಟೂರ್ನಿಯನ್ನು ಪಾಕಿಸ್ತಾನದಲ್ಲಿ ನಡೆಸದಿದ್ದರೆ, ನಮ್ಮ ತಂಡವು ವಿಶ್ವಕಪ್‌ನಿಂದ ಹಿಂದೆ ಸರಿಯುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ ಎಂದರು.

2023ರ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಹಿಂದೆ ಸರಿಯಲಿದೆ

2023ರ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಹಿಂದೆ ಸರಿಯಲಿದೆ

"ನಾವು ಆತಿಥ್ಯದ ಹಕ್ಕುಗಳನ್ನು ನ್ಯಾಯಯುತವಾಗಿ ಗೆದ್ದಿದ್ದೇವೆ. ಭಾರತ ತಂಡ ಏಷ್ಯಾಕಪ್‌ನಲ್ಲಿ ಪಾಲ್ಗೊಳ್ಳದಿದ್ದರೆ, ಭಾರತದಲ್ಲಿ ನಡೆಯುವ 2023ರ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಹಿಂದೆ ಸರಿಯಲಿದೆ ಎಂಬ ಮಾತಿಗೆ ನಮ್ಮ ಬೆಂಬಲವಿದೆ," ಎಂದು ಹೇಳಿದರು.

2025ರ ಚಾಂಪಿಯನ್ಸ್ ಟ್ರೋಫಿಯ ಆತಿಥ್ಯದ ಹಕ್ಕುಗಳನ್ನು ಪಾಕಿಸ್ತಾನ ದೇಶ ಹೊಂದಿದೆ ಎಂಬುದನ್ನು ಸಹ ಗಮನಿಸಬೇಕಿದೆ. 2005-06ರಲ್ಲಿ ದ್ವಿಪಕ್ಷೀಯ ಸರಣಿಗಾಗಿ ಭಾರತ ತಂಡ ಕೊನೆಯ ಬಾರಿಗೆ ಪಾಕಿಸ್ತಾನ ಪ್ರವಾಸ ಕೈಗೊಂಡಿತ್ತು.

ದ್ವಿಪಕ್ಷೀಯ ಸರಣಿಗಾಗಿ ಭಾರತ ಕ್ರಿಕೆಟ್ ತಂಡದ ಕೊನೆಯ ಪ್ರವಾಸವು ಸುಮಾರು 16 ವರ್ಷಗಳ ಹಿಂದೆ ಕೈಗೊಂಡಿತ್ತು. ಇನ್ನು ಭಾರತವು 2008ರ ಏಷ್ಯಾ ಕಪ್‌ಗಾಗಿ ಪಾಕಿಸ್ತಾನ ಆತಿಥ್ಯ ವಹಿಸಿದಾಗ ನೆರೆಯ ದೇಶಕ್ಕೆ ಕೊನೆಯ ಬಾರಿ ಪ್ರವಾಸ ಕೈಗೊಂಡಿತ್ತು.

2012ರಲ್ಲಿ ಏಕದಿನ ಸರಣಿಗಾಗಿ ಭಾರತದ ಪ್ರವಾಸ

2012ರಲ್ಲಿ ಏಕದಿನ ಸರಣಿಗಾಗಿ ಭಾರತದ ಪ್ರವಾಸ

ಪಾಕಿಸ್ತಾನ ಕ್ರಿಕೆಟ್ ತಂಡ 2012ರಲ್ಲಿ ಏಕದಿನ ಸರಣಿಗಾಗಿ ಭಾರತದ ಪ್ರವಾಸ ಕೈಗೊಂಡಿದ್ದರು ಮತ್ತು 2016ರ ಟಿ20 ವಿಶ್ವಕಪ್ ಟೂರ್ನಿಯನ್ನು ಆಡಲು ಭಾರತಕ್ಕೆ ಬಂದಿದ್ದರು.

ಐಸಿಸಿ ಟೂರ್ನಿಗಳು ಮತ್ತು ಏಷ್ಯಾ ಕಪ್‌ನಂತಹ ಬಹುರಾಷ್ಟ್ರಗಳ ಪಂದ್ಯಾವಳಿಗಳಲ್ಲಿ ಸಾಂಪ್ರದಾಯಿಕ ಎದುರಾಳಿಗಳ ನಡುವೆ ಪಂದ್ಯಗಳು ನಡೆಯುತ್ತಲಿವೆ. ಆದರೆ ಟೆಸ್ಟ್ ಕ್ರಿಕೆಟ್ ಮಾತ್ರ ಇದರಿಂದ ಹೊರಗಿದೆ. 2007ರಲ್ಲಿ ಎರಡು ದೇಶಗಳ ನಡುವೆ ನಡೆದ ಕೊನೆಯ ಟೆಸ್ಟ್ ಪಂದ್ಯವಾಗಿದೆ.

ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಂತಹ ದೇಶಗಳು ಎಲ್ಲಾ ಕ್ರಿಕೆಟ್ ಸ್ವರೂಪಗಳಲ್ಲಿ ಎರಡು ದೇಶಗಳಿಗಾಗಿ ದ್ವಿಪಕ್ಷೀಯ ಸರಣಿಯನ್ನು ಆಯೋಜಿಸಲು ಆಹ್ವಾನ ನೀಡಿವೆ. ಆದರೆ ಎರಡು ದೇಶಗಳ ಕ್ರಿಕೆಟ್ ಮಂಡಳಿಗಳು ಬಹುರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಪರಸ್ಪರರ ವಿರುದ್ಧ ಮಾತ್ರ ಮುಖಾಮುಖಿಯಾಗುವ ತಮ್ಮ ನಿಲುವಿನ ಬಗ್ಗೆ ದೃಢವಾಗಿ ನಿಂತಿವೆ.

Story first published: Tuesday, December 6, 2022, 17:36 [IST]
Other articles published on Dec 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X