14/04/1995 : ಭಾರತೀಯ ಕ್ರಿಕೆಟ್‌ನ ಅವಿಸ್ಮರಣೀಯ ಗೆಲುವಿನ ದಿನ

ಇಂದು ಭಾರತೀಯ ಕ್ರಿಕೆಟ್‌ಗೆ ವಿಶೇಷವಾದ ದಿನ. 1995ರಲ್ಲಿ ಇದೇ ದಿನ(ಏಪ್ರಿಲ್ 14) ಏಷ್ಯಾಕಪ್‌ನಲ್ಲಿ ಶ್ರೀಲಂಕಾ ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿತ್ತು. ಜೊತೆಗೆ ಈ ಭರ್ಜರಿ ಗೆಲುವಿನ ಮೂಲಕ ಭಾರತ ಏಷ್ಯಾಕಪ್‌ನಲ್ಲಿ ಸತತ ನಾಲ್ಕನೇ ಬಾರಿಗೆ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು.

ಅಂದು ಟೀಮ್ ಇಂಡಿಯಾದ ನಾಯಕರಾಗಿದ್ದವರು ಮೊಹಮ್ಮದ್ ಅಜರುದ್ಧೀನ್. ಟೀಮ್ ಇಂಡಿಯಾ ಪರವಾಗಿ ಸಚಿನ್ ತೆಂಡೂಲ್ಕರ್, ನವಜೋತ್ ಸಿಂಗ್ ಸಿದ್ಧು ಜೊತೆಗೆ ನಾಯಕ ಮೊಹಮ್ಮದ್ ಅಜರುದ್ಧೀನ್ ಅದ್ಭುತ ಪ್ರದರ್ಶನವನ್ನು ನೀಡಿ ಈ ಸ್ಮರಣೀಯ ಗೆಲುವನ್ನು ಪಡೆಯಲು ಕಾರಣರಾದರು.

ಭಾರತ ಕ್ರಿಕೆಟ್ ಇತಿಹಾಸದ ಸ್ಮರಣೀಯ ಕ್ಷಣಗಳಲ್ಲಿ ಒಂದಾದ ಆ ಏಷ್ಯಾ ಕಪ್ ಫೈನಲ್ ಪಂದ್ಯ ಹೇಗಿತ್ತು ಮುಂದೆ ಓದಿ..

ಫೇವರೀಟ್ ತಂಡವಾಗಿತ್ತು ಭಾರತ

ಫೇವರೀಟ್ ತಂಡವಾಗಿತ್ತು ಭಾರತ

ಈ ಟೂರ್ನಿಯಲ್ಲಿ ಭಾರತ ತನ್ನ ಬದ್ಧ ಎದುರಾಳಿ ಪಾಕಿಸ್ತಾನವನ್ನು ಮತ್ತು ಫೈನಲಿಸ್ಟ್ ಶ್ರೀಲಂಕಾ ತಂಡವನ್ನು ಮಣಿಸಿ ಫೈನಲ್‌ಗೇರಿದ್ದರೆ ಶ್ರೀಲಂಕಾ ಬಾಂಗ್ಲಾದೇಶವನ್ನು ಮತ್ತು ಪಾಕಿಸ್ತಾನ ತಂಡವನ್ನು ಸೋಲಿಸಿ ಫೈನಲ್ ಹಂತವನ್ನು ತಲುಪಿತ್ತು. ಹೀಗಾಗಿ ಈ ಟೂರ್ನಿಯ ನೆಚ್ಚಿನ ತಂಡ ಭಾರತವೇ ಆಗಿತ್ತು.

ಬೌಲಿಂಗ್‌ನಲ್ಲಿ ಕನ್ನಡಿಗರ ಕರಾಮತ್ತು

ಬೌಲಿಂಗ್‌ನಲ್ಲಿ ಕನ್ನಡಿಗರ ಕರಾಮತ್ತು

ಫೈನಲ್ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಎದುರಾಳಿ ಶ್ರೀಲಂಕಾ ತಂಡವನ್ನು ಬ್ಯಾಟಿಂಗ್‌ಗೆ ಇಳಿಸಿತ್ತು. ಐವತ್ತು ಓವರ್‌ಗಳಲ್ಲಿ ಶ್ರೀಲಂಕಾ 7 ವಿಕೆಟ್ ಕಳೆದುಕೊಂಡು 230 ರನ್‌ಗಳಿಸಿತು. ಶ್ರೀಲಂಕಾ ತಂಡದ ಪರವಾಗಿ ಅಸಂಕ ಗುರುಸಿನ್ಹ 122 ಎಸೆತಗಳಲ್ಲಿ 88 ರನ್ ಬಾರಿಸಿ ಅಧಿಕ ಸ್ಕೋರರ್ ಎನಿಸಿದರು. ಟೀಮ್ ಇಂಡಿಯಾ ಪರವಾಗಿ ಕನ್ನಡಿಗರಾದ ಅನಿಲ್ ಕುಂಬ್ಳೆ ಮತ್ತು ವೆಂಕಟೇಶ ಪ್ರಸಾದ್ ತಲಾ ಎರಡು ವಿಕೆಟ್ ಕಿತ್ತು ಮಿಂಚಿದ್ದರು.

ಆರಂಭಿಕ ಆಘಾತ ನೀಡಿದ ಲಂಕಾ

ಆರಂಭಿಕ ಆಘಾತ ನೀಡಿದ ಲಂಕಾ

ಶ್ರೀಲಂಕಾ ನೀಡಿದ ಗುರಿಯನ್ನು ಬೆನ್ನತ್ತಿದ ಭಾರತದ ಆರಂಭ ಉತ್ತಮವಾಗಿರಲಿಲ್ಲ. ಮನೋಜ್ ಪ್ರಭಾಕರ್ 9 ರನ್‌ಗಳಿಸುವಷ್ಟರಲ್ಲಿ ವಿಕೆಟ್ ಒಪ್ಪಿಸಿದರು. ಸಚಿನ್ ತೆಂಡೂಲ್ಕರ್ ಜೊತೆಗೂಡಿದ ನವ್‌ಜೋತ್ ಸಿಂಗ್ ಸಿದ್ಧು ಈ ಗುರಿಯನ್ನು ಬೆನ್ನತ್ತಲು ಆರಂಭಿಸಿದರು. ಈ ವೇಳೆ ಸಚಿನ್ 41 ರನ್‌ಗಳಿಸಿ ವಿಕೆಟ್ ಒಪ್ಪಿಸಿದರು.

ಸಿದ್ಧು, ಅಜರುದ್ಧೀನ್ ಭರ್ಜರಿ ಪ್ರದರ್ಶನ

ಸಿದ್ಧು, ಅಜರುದ್ಧೀನ್ ಭರ್ಜರಿ ಪ್ರದರ್ಶನ

ಸಚಿನ್ ವಿಕೆಟ್ ಕಳೆದುಕೊಂಡ ಬಳಿಕ ಸಿದ್ಧುಗೆ ಭಾರತ ತಂಡದ ನಾಯಕ ಅಜರುದ್ಧೀನ್ ಜೊತೆಯಾದರು. ಇಬ್ಬರೂ ಭರ್ಜರಿ ಜೊತೆಯಾಟವನ್ನು ನಡೆಸಿದರು. ಬಳಿಕ ಯಾವುದೇ ವಿಕೆಟ್ ಕಳೆದುಕೊಳ್ಳದಂತೆ ಎಚ್ಚರವಿಸಿದ ಇಬ್ಬರೂ ದಾಂಡಿಗರು ಭರ್ಜರಿಯಾಗಿ ಗೆಲ್ಲಿಸಿದರು. ಈ ಪಂದ್ಯದಲ್ಲಿ ಸಿದ್ಧು ಅಜೇಯ 41 ರನ್‌ ಗಳಿಸಿದರೆ, ನಾಯಕ ಅಜರುದ್ಧೀನ್ 90 ರನ್‌ಗಳಿಸಿ ಔಟಾಗದೆ ಉಳಿದುಕೊಂಡಿದ್ದರು. ಭಾರತ ಇನ್ನೂ 8.1 ಓವರ್ ಇರುವಂತೆಯೇ 8 ವಿಕೆಟ್‌ಗಳಿಂದ ಅಭೂತಪೂರ್ವ ವಿಜಯವನ್ನು ಸಾಧಿಸಿತ್ತು. ಈ ಮೂಲಕ ಸತತ ನಾಲ್ಕನೇ ಭಾರತ ಏಷ್ಯಾಕಪ್‌ಗೆ ಮುತ್ತಿಕ್ಕಿದ ಸಾಧನೆ ಮಾಡಿತು.

For Quick Alerts
ALLOW NOTIFICATIONS
For Daily Alerts
Story first published: Tuesday, April 14, 2020, 18:21 [IST]
Other articles published on Apr 14, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X