ಪಾಕ್ ಪ್ರವಾಸಕ್ಕೆ ಗೈರು, ಐಪಿಎಲ್‌ಗೆ ಹಾಜರು: ಐಸಿಸಿ ವಿರುದ್ಧ ಇನ್ಜಮಾಮ್ ಗರಂ

ಬೆಂಗಳೂರು, ಆಗಸ್ಟ್ 11: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಇನ್ಜಮಾಮ್ ಉಲ್ ಹಕ್ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಇದಕ್ಕೆ ಕಾರಣ ಪಾಕಿಸ್ತಾನ ಪ್ರವಾಸದಿಂದ ಹೊರಗುಳಿದ ನ್ಯೂಜಿಲೆಂಡ್‌ನ ಕೆಲ ಪ್ರಮುಖ ಆಟಗಾರರ ನಿರ್ಧಾರ. ಐಪಿಎಲ್‌ನಲ್ಲಿ ಭಾಗವಹಿಸುವ ಕಾರಣದಿಂದಾಗಿ ನ್ಯೂಜಿಲೆಂಡ್ ತಮಡದ ಕೆಲ ಪ್ರಮುಖ ಆಟಗಾರರು ಪಾಕ್ ಪ್ರವಾಸಕ್ಕೆ ತೆರಳುತ್ತಿಲ್ಲ. ಇದು ಪಾಕಿಸ್ತಾನ ಮಾಜಿ ನಾಯಕನ ಕಣ್ಣು ಕೆಂಪಗಾಗಿಸಿದೆ.

ಕೊರಿನಾವೈರಸ್‌ನ ಕಾರಣದಿಂದಾಗಿ ಮುಂದೂಡಿದ್ದ ಐಪಿಎಲ್ 2021 ಆವೃತ್ತಿಯ ಉಳಿದ ಪಂದ್ಯಗಳನ್ನು ಯುಎಇನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಸೆಪ್ಟೆಂಬರ್ 19ರಿಂದ ಈ ಮುಂದುವರಿದ ಭಾಗದ ದಿನಾಂಕಗಳನ್ನು ಕೂಡ ನಿರ್ಧಾರಿಸಲಾಗಿದೆ. ಈ ಅವಧಿಯಲ್ಲಿಯೇ ಪಾಕಿಸ್ತಾನಕ್ಕೆ ನ್ಯೂಜಿಲೆಂಡ್ ತಂಡದ ಪ್ರವಾಸವನ್ನು ನಿಗದಿ ಮಾಡಲಾಗಿತ್ತು. ಈ ಸರಣಿಯಲ್ಲಿ ಯಾವಿದೇ ಬದಲಾವಣೆ ಮಾಡಿಕೊಳ್ಳದಿದ್ದರೂ ನ್ಯೂಜಿಲೆಂಡ್ ತಂಡದ ಪ್ರಮುಖ ಆಟಗಾರರು ಈ ಸರಣಿಯಿಂದ ಹೊರಗುಳಿಯಲಿದ್ದಾರೆ. ಈ ಮೂಲಕ ಪ್ರಮುಖ ಆಟಗಾರರಿಲ್ಲದೆ ನ್ಯೂಜಿಲೆಂಡ್ ತಂಡ ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿದೆ.

ಎನ್‌ಸಿಎ ಮುಖ್ಯಸ್ಥರ ಸ್ಥಾನಕ್ಕೆ ಅರ್ಜಿ ಕರೆದ ಬಿಸಿಸಿಐ, ದ್ರಾವಿಡ್ ಮರು ಅರ್ಜಿ ಸಲ್ಲಿಕೆ ನಿರೀಕ್ಷೆಎನ್‌ಸಿಎ ಮುಖ್ಯಸ್ಥರ ಸ್ಥಾನಕ್ಕೆ ಅರ್ಜಿ ಕರೆದ ಬಿಸಿಸಿಐ, ದ್ರಾವಿಡ್ ಮರು ಅರ್ಜಿ ಸಲ್ಲಿಕೆ ನಿರೀಕ್ಷೆ

ಇನ್ನು ಈ ಸಂದರ್ಭದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಇನ್ಜಮಾಮ್ ಉಲ್ ಹಕ್ ಐಸಿಸಿಯ ನಡೆಯ ಬಗ್ಗೆ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಆಧುನಿಕ ಕಾಲದ ಆಟಗಾರರು ಫ್ರಾಂಚೈಸಿ ಕ್ರಿಕೆಟ್‌ಗಳಿಗೆ ಹೆಚ್ಚಿನ ಒತ್ತನ್ನು ನೀಡುತ್ತಿದ್ದಾರೆ. ಅದರ ಪರಿಣಾಮವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಗುಣಮಟ್ಟ ಕಡಿಮೆಯಾಗುತ್ತಿದೆ ಎಂದು ಇನ್ಜಮಾಮ್ ಉಲ್ ಹಕ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಪ್ರಮುಖ ಆಟಗಾರ ವಿರುದ್ಧ ಆಡಲು ಅವಕಾಶವಿಲ್ಲ

ಪ್ರಮುಖ ಆಟಗಾರ ವಿರುದ್ಧ ಆಡಲು ಅವಕಾಶವಿಲ್ಲ

ಇನ್ನು ಪಾಕಿಸ್ತಾನ ಕ್ರಿಕೆಟ್ ತಂಡ ಪಾಲ್ಗೊಳ್ಳುತ್ತಿರುವ ಸರಣಿಗಳಲ್ಲಿ ಎದುರಾಳಿ ತಂಡದ ಪೂರ್ಣ ಸಾಮರ್ಥ್ಯದ ಆಟಗಾಋರೊಂದಿಗೆ ಆಡುವ ಅವಕಾಶವೇ ದೊರೆಯುತ್ತಿಲ್ಲ ಎಂದು ಇನ್ಜಮಾಮ್ ತಮ್ಮ ಬೇಸರವನ್ನು ಹೊರಹಾಕಿದ್ದಾರೆ. "ಪಾಕಿಸ್ತಾನ ಯಾವಾಗೆಲ್ಲಾ ಸರಣಿಯನ್ನಾಡಲು ಅವಕಾಶ ಪಡೆಯುತ್ತದೆಯೇ ಆಗ ಎದುರಾಳಿ ತಂಡದ ಪ್ರಮುಖ ಆಟಗಾರರ ವಿರುದ್ಧ ಆಡುವ ಅವಕಾಶವನ್ನು ಹೊಂದಿರುವುದಿಲ್ಲ. ಕಳೆದ ಏಪ್ರಿಲ್‌ನಲ್ಲಿ ದಕ್ಷಿಣ ಆಫ್ರಿಕಾಗೆ ಪ್ರವಾಸ ಕೈಗೊಂಡಿದ್ದ ವೇಳೆ ಅವರ ಆಟಗಾರರನ್ನು ಐಪಿಎಲ್‌ಗಾಗಿ ಕಳುಹಿಸಲಾಗಿತ್ತು. ಈಗ ನ್ಯೂಜಿಲೆಂಡ್ ತಂಡದ ವಿರುದ್ಧ ಸರಣಿಯನ್ನು ಆಯೋಜಿಸಲಾಗಿದೆ. ಆದರೆ ಐಪಿಎಲ್‌ನಲ್ಲಿ ಭಾಗಿಯಾಗುವ ಹಿನ್ನೆಲೆಯಲ್ಲಿ 8 ಆಟಗಾರರು ಸರಣಿಯಿಂದ ಹೊರಗುಳಿದಿದ್ದಾರೆ. ಇನ್ನು ಇತ್ತೀಚೆಗೆ ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡಿತ್ತು. ಆಗ ಇಡೀ ಇಂಗ್ಲೆಂಡ್ ತಂಡ ಕೊರೊನಾವೈರಸ್‌ನ ಕಾರಣದಿಂದಾಗಿ ಬದಲಾವಣೆಯಾಗಿತ್ತು" ಎಂದು ಇನ್ಜಮಾಮ್ ಹೇಳಿದ್ದಾರೆ.

ಐಸಿಸಿ ಏನು ಮಾಡುತ್ತಿದೆ!

ಐಸಿಸಿ ಏನು ಮಾಡುತ್ತಿದೆ!

ಇನ್ನು ಮುಂದುವರಿದು ಮಾತನಾಡಿದ ಇನ್ಜಮಾಮ್ ಉಲ್ ಹಕ್ ಪಾಕಿಸ್ತಾನದ ಆಟಗಾರರು ಪ್ರಮುಖ ಎದುರಾಳಿ ಆಟಗಾರರನ್ನು ಎದುರಿಸುತ್ತಿಲ್ಲವಾದ್ದರಿಂದ ಸೂಕ್ತ ಅಭ್ಯಾಸ ಪಾಕ್ ಆಟಗಾರರಿಗೆ ದೊರೆಯುತ್ತಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. " ಇಂತಾ ಸಂದರ್ಭದಲ್ಲಿ ಐಸಿಸಿ ಏನು ಮಾಡುತ್ತಿದೆ? ಯಾವ ರೀತಿಯ ಸಂದೇಶವನ್ನು ಅವರು ನೀಡುತ್ತಿದ್ದಾರೆ? ಆಟಗಾರರು ಖಾಸಗೀ ಲೀಗ್‌ಗಳಿಗೆ ಪ್ರಾಮುಖ್ಯತೆಯನ್ನು ನೀಡುತ್ತಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗಳಿಗೆ ನೀಡುತ್ತಿಲ್ಲ. ಇದು ಅಂತಾರಾಷ್ಟ್ರೀಯ ಕ್ರಿಕೆಟ್‌ಅನ್ನು ಅಗೌರವ ಗೊಳಿಸಿದಂತೆ. ನೀವು ಇಡೀ ಚಿತ್ರಣವನ್ನು ಗಮನಿಸಿದರೆ ಇದು ಪಾಕಿಸ್ತಾನ ತಂಡದ ವಿರುದ್ಧ ಮಾತ್ರವೇ ನಡೆಯುತ್ತಿದೆ" ಎಂದು ಇನ್ಜಮಾಮ್ ಉಲ್ ಹಕ್ ಕಿಡಿಕಾರಿದ್ದಾರೆ.

ಪಾಕ್ ಪ್ರವಾಸದಿಂದ 7 ಕಿವೀಸ್ ಆಟಗಾರರು ಬಿಡುಗಡೆ

ಪಾಕ್ ಪ್ರವಾಸದಿಂದ 7 ಕಿವೀಸ್ ಆಟಗಾರರು ಬಿಡುಗಡೆ

ಈ ಬಾರಿಯ ಐಪಿಎಲ್‌ನ ಉಳಿದ ಪಂದ್ಯಗಳಲ್ಲಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ನ್ಯೂಜಿಲೆಂಡ್ ತಂಡದ 7 ಆಟಗಾರರನ್ನು ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಬಿಡುಗಡೆಗೊಳಿಸಿದೆ. ಸ್ವತಃ ನಾಯಕ ಕೇನ್ ವಿಲಿಯಮ್ಸನ್ ಜೊತೆಗೆ ಟ್ರೆಂಟ್ ಬೋಲ್ಟ್, ಕೈಲ್ ಜೇಮಿಸನ್, ಲಾಕಿ ಫರ್ಗುಸನ್, ಜಿಮ್ಮಿ ನೀಶಮ್, ಮಿಚೆಲ್ ಸ್ಯಾಂಟ್ನರ್ ಮತ್ತು ಟಿಮ್ ಸೀಫರ್ಟ್ ಪಾಕಿಸ್ತಾನ ವಿರುದ್ಧದ ಸರಣಿಯಿಂದ ಹೊರಗುಳಿಯಲಿದ್ದಾರೆ. ಅನುಭವಿ ಟಾಮ್ ಲಾಥಮ್ ನ್ಯೂಜಿಲೆಂಡ್ ತಂಡವನ್ನು ಪಾಕಿಸ್ತಾನ ವಿರುದ್ಧದ ಸರಣಿಯಲ್ಲಿ ಮುನ್ನಡೆಸಲಿದ್ದಾರೆ. ಈ ಪ್ರವಾಸದಲ್ಲಿ ನ್ಯೂಜಿಲೆಂಡ್ ತಂಡ ಪಾಕಿಸ್ತಾನದ ವಿರುದ್ಧ ಮೂರು ಏಕದಿನ ಹಾಗೂ ಎರಡು ಐದು ಟಿ20 ಪಂದ್ಯಗಳಲ್ಲಿ ಭಾಗಿಯಾಗಲಿದೆ.

ಪಾಕಿಸ್ತಾನ ವಿರುದ್ಧದ ಏಕದಿನ ಸರಣಿಗೆ ನ್ಯೂಜಿಲೆಂಡ್ ತಂಡ

ಪಾಕಿಸ್ತಾನ ವಿರುದ್ಧದ ಏಕದಿನ ಸರಣಿಗೆ ನ್ಯೂಜಿಲೆಂಡ್ ತಂಡ

ಟಾಮ್ ಲಾಥಮ್ (ನಾಯಕ/ವಿಕೆಟ್ ಕೀಪರ್), ಫಿನ್ ಅಲೆನ್, ಹಮೀಶ್ ಬೆನೆಟ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಡೌಗ್ ಬ್ರೇಸ್‌ವೆಲ್, ಕಾಲಿನ್ ಡಿ ಗ್ರಾಂಡ್‌ಹೋಮ್, ಜಾಕೋಬ್ ಡಫಿ, ಮ್ಯಾಟ್ ಹೆನ್ರಿ, ಸ್ಕಾಟ್ ಕುಗೆಲಿಜ್ನ್, ಕೋಲ್ ಮೆಕ್ಕಾಂಚಿ, ಹೆನ್ರಿ ನಿಕೊಲ್ಸ್, ಅಜಾಜ್ ಪಟೇಲ್, ರಚಿನ್ ರವೀಂದ್ರ, ಬ್ಲೇರ್ ಟಿಕ್ನರ್, ವಿಲ್ ಯಂಗ್

ಪಾಕಿಸ್ತಾನ ವಿರುದ್ಧದ ಟಿ20 ಸರಣಿಗೆ ನ್ಯೂಜಿಲೆಂಡ್ ತಂಡ

ಟಾಮ್ ಲಾಥಮ್ (ನಾಯಕ ಹಾಗೂ ವಿಕೆಟ್ ಕೀಪರ್), ಫಿನ್ ಅಲೆನ್, ಟಾಡ್ ಆಸ್ಟಲ್, ಹಮೀಶ್ ಬೆನೆಟ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಮಾರ್ಕ್ ಚಾಪ್ಮನ್, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಮಾರ್ಟಿನ್ ಗಪ್ಟಿಲ್, ಮ್ಯಾಟ್ ಹೆನ್ರಿ, ಡಾರಿಲ್ ಮಿಚೆಲ್, ಅಜಾಜ್ ಪಟೇಲ್, ಇಶ್ ಸೋಧಿ, ಬೆನ್ ಸಿಯರ್ಸ್, ಬ್ಲೇರ್ ಟಿಕ್ನರ್, ವಿಲ್ ಯಂಗ್

Shardul Thakur ಎರಡನೇ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ | oneindia kannada
ಪಾಕಿಸ್ತಾನ vs ನ್ಯೂಜಿಲೆಂಡ್ ಸೀಮಿತ ಓವರ್‌ಗಳ ಸರಣಿ

ಪಾಕಿಸ್ತಾನ vs ನ್ಯೂಜಿಲೆಂಡ್ ಸೀಮಿತ ಓವರ್‌ಗಳ ಸರಣಿ

ಏಕದಿನ ಸರಣಿ: ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಸೀಮಿತ ಓವರ್‌ಗಳ ಸರಣಿ ಸೆಪ್ಟೆಂಬರ್ 17ರಿಂದ ಆರಂಭವಾಗಲಿದೆ. ಮೊದಲಿಗೆ ಮೂರು ಪಂದ್ಯಗಳ ಏಕದಿನ ಸರಣಿ ಆಯೋಜನೆಯಾಗಲಿದೆ. ಈ ಮೂರು ಪಂದ್ಯಗಳು ಕೂಡ ರಾವಲ್ಪಿಂಡಿಯಲ್ಲಿರುವ ಪಿಂಡಿ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆಯಲಿದೆ. ಸೆಪ್ಟೆಂಬರ್ 17ಕ್ಕೆ ಮೊದಲ ಏಕದಿನ ಪಂದ್ಯ ನಡೆಯಲಿದ್ದು ಎರಡನೇ ಪಂದ್ಯ ಸೆಪ್ಟೆಂಬರ್ 19ಕ್ಕೆ ನಡೆಯಲಿದೆ. ಸೆಪ್ಟೆಂಬರ್ 21ರಂದು ಮೂರನೇ ಹಾಗೂ ಏಕದಿನ ಸರಣಿಯ ಅಂತಿಮ ಪಂದ್ಯ ನಡೆಯಲಿದೆ.

ಟಿ20 ಸರಣಿ: ಚುಟಕು ಸರಣಿಯಲ್ಲಿ ಐದು ಪಂದ್ಯಗಳಿದ್ದು ಎಲ್ಲಾ ಪಂದ್ಯಗಳು ಕೂಡ ಲಾಹೋರ್‌ನ ಗಡ್ಡಾಫಿ ಸ್ಟೇಡಿಯಂನಲ್ಲಿ ನಡೆಯಲಿದೆ. ಸೆಪ್ಟೆಂಬರ್ 25 ರಂದು ಮೊದಲ ಪಂದ್ಯ ಡೆದರೆ, ಎರಡನೇ ಪಂದ್ಯ 26ಕ್ಕೆ, ಮೂರನೇ ಪಂದ್ಯ 29 ನಾಲ್ಕನೇ ಪಂದ್ಯ ಅಕ್ಟೋಬರ್ 1 ಹಾಗೂ ಅಂತಿಮ ಪಂದ್ಯ ಅಕ್ಟೋಬರ್ 3ರಂದು ನಡೆಯಲಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Wednesday, August 11, 2021, 11:56 [IST]
Other articles published on Aug 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X