ರಿಷಭ್ ಪಂತ್‌, ಧೋನಿ ತರಹ ಎಂದುಕೊಂಡಿದ್ದೆ, ನಿರೀಕ್ಷೆಗಳೆಲ್ಲಾ ಹುಸಿಯಾಯಿತು: ಇಂಜಮಾಮ್ ಉಲ್ ಹಕ್

ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಆರಂಭಿಕ ಪಂದ್ಯವನ್ನು ಟೀಂ ಇಂಡಿಯಾ ಐದು ವಿಕೆಟ್‌ಗಳಿಂದ ಗೆದ್ದು, ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. 165 ಗುರಿ ಬೆನ್ನತ್ತಿದ ಟೀಮ್ ಇಂಡಿಯಾ ಪರ ಮುಂಬೈ ಇಂಡಿಯನ್ಸ್ ಜೋಡಿ ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಅದ್ಭುತ ಪ್ರದರ್ಶನ ನೀಡುವ ಮೂಲಕ ಭಾರತದ ಚೇಸ್ ಅನ್ನು ಸುಲಭವಾಗಿಸಿದ್ರು. ಆದರೆ, ಏಕಾಏಕಿ ವಿಕೆಟ್‌ಗಳ ಪತನವು ಪಂದ್ಯವನ್ನು ಕೊನೆಯ ಓವರ್‌ಗೆ ಕೊಂಡೊಯ್ಯಿತು. ಆತಿಥೇಯ ತಂಡ ಕೇವಲ ಒಂದೆರಡು ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ಗೆರೆ ದಾಟಿತು.

ಆರಂಭದಿಂದಲೂ ಉತ್ತಮ ಸ್ಥಿತಿಯಲ್ಲಿದ್ದ ಟೀಂ ಇಂಡಿಯಾ ಒಂದು ಸಣ್ಣ ಕುಸಿತದಿಂದಾಗಿ ಸ್ವಲ್ಪ ಒತ್ತಡಕ್ಕೆ ಒಳಗಾಗಿತು. ಇದರ ನಡುವೆ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್‌ರ ನಿಧಾನಗತಿಯ ಆಟವೂ ಸಹ ಪರಿಶೀಲನೆಗೆ ಒಳಪಟ್ಟಿದೆ.

ನಾಲ್ಕನೇ ಕ್ರಮಾಂದಲ್ಲಿ ಬ್ಯಾಟಿಂಗ್‌ಗೆ ಇಳಿದ ರಿಷಭ್ ಪಂತ್‌ 38 ನಿಮಿಷಗಳ ಕಾಲ ಕ್ರೀಸ್‌ನಲ್ಲಿದ್ರು. ಇವರು ಎದುರಿಸಿದ 17 ಎಸೆತಗಳಲ್ಲಿ ಗಳಿಸಿದ್ದು ಮಾತ್ರ 17ರನ್‌ಗಳು. ಇದು ರಿಷಭ್‌ ಪಂತ್‌ರ ನಿಧಾನಗತಿಯ ಬ್ಯಾಟಿಂಗ್‌ಗೆ ಸಾಕ್ಷಿಯಾಯ್ತು. ಹೀಗಾಗಿಯೇ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಇಂಜಮಾಮ್-ಉಲ್-ಹಕ್ ಪಂತ್‌ ಅವರನ್ನು ಟೀಕಿಸಿದ್ದಾರೆ.

ಪಂತ್‌ರನ್ನು ಆರಂಭದಲ್ಲಿ ಎಂ.ಎಸ್‌. ಧೋನಿಯಂತೆ 5 ಅಥವಾ 6 ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದರೆ ಅದ್ಭುತಗಳನ್ನು ಮಾಡಬಲ್ಲರು ಎಂದು ಭಾವಿಸಿದ್ರಂತೆ. ಆದರೆ ಯುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ತಡವಾಗಿ ಬ್ಯಾಟ್‌ ಬೀಸುತ್ತಿದ್ದು, ಟಿ20 ವಿಶ್ವಕಪ್‌ನಲ್ಲೂ ನಿರೀಕ್ಷೆಗಳನ್ನು ಹುಸಿ ಮಾಡಿದರು ಎಂದು ಹೇಳಿದ್ದಾರೆ.

"ರಿಷಬ್ ಪಂತ್ ಅವರಿಂದ ನಾನು ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದೆ. ಕಳೆದ ಎರಡು ವರ್ಷಗಳಲ್ಲಿ ಅವರು ನಿರ್ವಹಿಸಿದ ರೀತಿ, ನಾನು ಅವರನ್ನು ಹೆಚ್ಚು ರೇಟ್ ಮಾಡಿದೆ. ಅವರು ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾದಲ್ಲಿ, ನಂತರ ಇಂಗ್ಲೆಂಡ್ ವಿರುದ್ಧ ಆಡುವುದನ್ನು ನಾನು ನೋಡಿದೆ. ಅವರು ಆಡಿದ ಪರಿಸ್ಥಿತಿಗಳು ಧೋನಿಯಂತೆ ಅಗ್ರ ಕ್ರಮಾಂಕವು ವಿಫಲವಾದಾಗ, ಅವರು ಅದನ್ನು ಕೆಳಮಟ್ಟದಲ್ಲಿ ಸರಿದೂಗಿಸುತ್ತಾರೆ ಎಂದು ನಾನು ಭಾವಿಸಿದೆ. ಪಂತ್ ಅಂತಹ ಆಟಗಾರ ಎಂದು ನಾನು ಭಾವಿಸಿದೆ. ಆದರೆ ವಿಶ್ವಕಪ್ ಸಮಯದಲ್ಲಿ, ಅವರು ನನ್ನ ನಿರೀಕ್ಷೆಗೆ ತಕ್ಕಂತೆ ಆಟವಾಡಲಿಲ್ಲ "ಎಂದು ಇಂಜಮಾಮ್ ತಮ್ಮ ಯೂಟ್ಯೂಬ್ ಚಾನೆಲ್ ಇಂಜಮಾಮ್-ಉಲ್-ಹಕ್ ದಿ ಮ್ಯಾಚ್ ವಿನ್ನರ್‌ನಲ್ಲಿ ಹೇಳಿದರು.

ಭಾರತ-ನ್ಯೂಜಿಲೆಂಡ್ 2ನೇ ಟಿ20 ಪಂದ್ಯ ಮುಂದೂಡುವಂತೆ ಹೈಕೋರ್ಟ್‌ನಲ್ಲಿ PILಭಾರತ-ನ್ಯೂಜಿಲೆಂಡ್ 2ನೇ ಟಿ20 ಪಂದ್ಯ ಮುಂದೂಡುವಂತೆ ಹೈಕೋರ್ಟ್‌ನಲ್ಲಿ PIL

Guptill ಔಟ್ ಆದಾಗ Chahar ಹೀಗೆ ಮಾಡಿದ್ದೇಕೆ | Oneindia Kannada

ಪಂತ್ ಅವರು ಇಲ್ಲಿಯವರೆಗೆ ಹೊಂದಿರುವ ಸೀಮಿತ ವೃತ್ತಿಜೀವನದಲ್ಲಿ ಹಲವಾರು ಒತ್ತಡದ ಹೊಡೆತಗಳ ಕಾರಣದಿಂದಾಗಿ ಯಾವಾಗಲೂ ಹೆಚ್ಚು ರೇಟ್ ಮಾಡುತ್ತಿದ್ದರು ಎಂದು ಹೇಳಿದ್ದಾರೆ. ಆದರೆ, ಇತ್ತೀಚೆಗೆ ಅವರು ಉತ್ತಮ ಪ್ರದರ್ಶನ ನೀಡುತ್ತಿಲ್ಲ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಬೇಸರ ವ್ಯಕ್ತಪಡಿಸಿದರು. ಮುಂಬರುವ ದಿನಗಳಲ್ಲಿ ಯುವ ವಿಕೆಟ್‌ಕೀಪಿಂಗ್-ಬ್ಯಾಟರ್ ಖಂಡಿತವಾಗಿಯೂ ತಮ್ಮ ಆಟವನ್ನು ಸುಧಾರಿಸುತ್ತಾರೆ ಎಂದು ಅವರು ಆಶಿಸಿದರು. ಭಾರತವು ನವೆಂಬರ್ 19, 2021 ರಂದು ನ್ಯೂಜಿಲೆಂಡ್ ವಿರುದ್ಧ ಮುಂದಿನ ಟಿ20 ಪಂದ್ಯವನ್ನಾಡಲಿದೆ.

For Quick Alerts
ALLOW NOTIFICATIONS
For Daily Alerts
Story first published: Thursday, November 18, 2021, 23:17 [IST]
Other articles published on Nov 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X