ಡೆಲ್ಲಿ ಡೇರ್ ಡೆವಿಲ್ಸ್ ತಂಡಕ್ಕೆ ಜಹೀರ್ ಖಾನ್ ಕ್ಯಾಪ್ಟನ್

Posted By:

ನವದೆಹಲಿ, ಮಾರ್ಚ್ 28: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್ 9)ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡಕ್ಕೆ ಹಿರಿಯ ವೇಗಿ ಜಹೀರ್ ಖಾನ್ ಅವರನ್ನು ನಾಯಕರಾಗಿ ಸೋಮವಾರ(ಮಾರ್ಚ್ 28) ಆಯ್ಕೆ ಮಾಡಲಾಗಿದೆ. ಏಪ್ರಿಲ್ 09 ರಿಂದ ಐಪಿಎಲ್ 2016 ಆರಂಭಗೊಳ್ಳಲಿದೆ.

ಐಪಿಎಲ್ 09ರಲ್ಲಿ ಡೆಲ್ಲಿ ತಂಡವನ್ನು ಜಹೀರ್ ಖಾನ್ ಅವರು ನಾಯಕರಾಗಿ ಮುನ್ನಡೆಸಲಿದ್ದಾರೆ ಎಂದು ಇದೇ ಮೊದಲ ಬಾರಿಗೆ ಡೆಲ್ಲಿ ತಂಡದ ಸಲಹೆಗಾರರಾಗಿ ಆಯ್ಕೆಗೊಂಡಿರುವ ಭಾರತ ತಂಡದ ಮಾಜಿ ನಾಯಕ ಕರ್ನಾಟಕದ ರಾಹುಲ್ ದ್ರಾವಿಡ್ ಪ್ರಕಟಿಸಿದ್ದಾರೆ. ಜಹೀರ್ ಅವರ ಹೊಸ ಇನ್ನಿಂಗ್ಸ್ ಗೆ ಒಳ್ಳೆಯದಾಗಲಿ ಎಂದು ಅಭಿನಂದಿಸಿದ್ದಾರೆ.

Zaheer Khan

ಕಳೆದ ಐಪಿಎಲ್ ನಲ್ಲಿ ದಕ್ಷಿಣ ಆಫ್ರಿಕಾದ ಆಲ್ ರೌಂಡರ್ ಜೆಪಿ ಡುಮಿನಿ ಅವರು ಡೆಲ್ಲಿ ತಂಡದ ನಾಯಕತ್ವವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿದ್ದರು.

ಈ ಬಾರಿಯ ಐಪಿಎಲ್ ಗೆ ಡೆಲ್ಲಿ ನಾಯಕತ್ವವನ್ನು ಜಹೀರ್ ಖಾನ್ ಅವರಿಗೆ ವಹಿಸಬೇಕೆಂದು ಡೆಲ್ಲಿ ಟೀಂ ಮ್ಯಾನೇಜ್ಮೆಂಟ್ ಒಮ್ಮತದ ನಿರ್ಧಾರದಿಂದ ಆಯ್ಕೆ ಮಾಡಲಾಗಿದೆ ಎಂದು ದ್ರಾವಿಡ್ ಹೇಳಿದ್ದಾರೆ.

ಜಹೀರ್ ಅವರು ಈ ವರೆಗೆ ಭಾರತ ತಂಡ ಪರ 92 ಟೆಸ್ಟ್ , 200 ಏಕದಿನ, 17 ಟಿ-20 ಪಂದ್ಯಗಳನ್ನು ಆಡಿ 2015ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದರು.(ಒನ್ಇಂಡಿಯಾ ಸುದ್ದಿ)

Story first published: Monday, March 28, 2016, 19:01 [IST]
Other articles published on Mar 28, 2016
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ