ಡೆಲ್ಲಿ ಡೇರ್ ಡೆವಿಲ್ಸ್ ನಾಯಕರಾಗಿ ಗೌತಮ್ ಗಂಭೀರ್

Posted By:
IPL 2018: Gautam Gambhir appointed Delhi Daredevils skipper

ಬೆಂಗಳೂರು, ಮಾರ್ಚ್ 07: ಹಿರಿಯ ಕ್ರಿಕೆಟರ್ ಗೌತಮ್ ಗಂಭೀರ್ ಅವರು ಈ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಪರ ಆಡುತ್ತಿರುವುದು ಕ್ರಿಕೆಟ್ ಅಭಿಮಾನಿಗಳಿಗೆ ಗೊತ್ತೆ ಇದೆ. ಕೆಕೆಆರ್ ನಿಂದ ಡೆಲ್ಲಿಗೆ ಬಂದಿರುವ ಗೌತಮ್ ಅವರನ್ನು ತಂಡದ ನಾಯಕ ಎಂದು ಘೋಷಿಸಲಾಗಿದೆ.

ಡೇರ್ ಡೆವಿಲ್ಸ್ ತಂಡ ನವದೆಹಲಿಯಲ್ಲಿಂದು ಅಧಿಕೃತವಾಗಿ ಈ ಬಗ್ಗೆ ಪ್ರಕಟಣೆ ಹೊರಡಿಸಿದೆ. 2011ರಲ್ಲಿ ಫ್ರಾಂಚೈಸಿ ತೊರೆದಿದ್ದ ಗೌತಮ್ ಅವರು ಮತ್ತೆ ತವರು ತಂಡಕ್ಕೆ ಮರಳಿದ್ದು, ನಾಯಕರಾಗಿ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಡೆಲ್ಲಿ ಡೇರ್ ಡೆವಿಲ್ ಸಿಇಒ, ಹೇಮಂತ್ ದುವಾ ಅವರು ಘೋಷಿಸಿದರು.

36ವರ್ಷ ವಯಸ್ಸಿನ ಕ್ರಿಕೆಟರ್ ಗಂಭೀರ್ ಅವರು ಕೋಲ್ಕತಾ ನೈಟ್ ರೈಡರ್ ತಂಡವನ್ನು ಎರಡು ಬಾರಿ ಚಾಂಪಿಯನ್ ಪಟ್ಟಕೇರಿಸಿದರು.

ಐಪಿಎಲ್ ನಲ್ಲಿ 131 ಪಂದ್ಯಗಳನ್ನಾಡಿರುವ ಗಂಭೀರ್ ಅವರು 3634ರನ್ ಚೆಚ್ಚಿದ್ದು, 124.15 ಸ್ಟ್ರೈಕ್ ರೇಟ್ ಹೊಂದಿದ್ದಾರೆ. 31 ಅರ್ಧಶತಕ ಗಳಿಸಿದ್ದು, 93 ರನ್ ಗರಿಷ್ಟ ಮೊತ್ತವಾಗಿದೆ.

2018ರ ಡೆಲ್ಲಿ ತಂಡದಲ್ಲಿ ಶ್ರೇಯಸ್ ಅಯ್ಯರ್, ರಿಷಬ್ ಪಂತ್, ಕ್ರಿಸ್ ಮೊರಿಸ್ ಮಾತ್ರ ರೀಟೇನ್ ಮಾಡಿಕೊಳ್ಳಲಾಗಿತ್ತು. ಆಸ್ಟ್ರೇಲಿಯಾ ಕ್ರಿಕೆಟ್ ದಿಗ್ಗಜ ರಿಕಿ ಪಾಂಟಿಂಗ್ ಅವರು ಡೆಲ್ಲಿ ತಂಡದ ಬ್ಯಾಟಿಂಗ್ ಕೋಚ್ ಆಗಿದ್ದಾರೆ.

Story first published: Wednesday, March 7, 2018, 18:28 [IST]
Other articles published on Mar 7, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ