ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪರ್ಪಲ್ ಕ್ಯಾಪ್ ಸಾಧನೆ ಅಜ್ಜಿಗೆ ಅರ್ಪಿಸಿದ ಆಂಡ್ರ್ಯೂ ಟೈ!

By Mahesh
IPL 2018: KXIPs Andrew Tye Dedicates Four Wicket Haul to Late Grandmother

ಬೆಂಗಳೂರು, ಮೇ 09: ರಾಜಸ್ಥಾನ್ ರಾಯಲ್ಸ್ ವಿರುದ್ಧದ ಕಿಂಗ್ಸ್ XI ಪಂಜಾಬ್ ತಂಡ ವೀರೋಚಿತ ಸೋಲು ಕಂಡಿದೆ. ಈ ಪಂದ್ಯದಲ್ಲಿ ಪಂಜಾಬ್ ಪರ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಆಂಡ್ರ್ಯೂ ಟೈ ಸಾಧನೆ ಬಗ್ಗೆ ಎಲ್ಲರಿಂದ ಮೆಚ್ಚುಗೆ ಬಂದಿದೆ.

ಈ ಬಾರಿಯ ಐಪಿಎಲ್ ಹಲವು ಅಪರೂಪದ ಕ್ಷಣಗಳಿಗೆ ಸಾಕ್ಷಿಯಾಗಿದೆ. ಹರಾಜಿನ ವೇಳೆ ತಮ್ಮ ಹಿಂದಿನ ತಂಡದಿಂದ ನಿರ್ಲಕ್ಷಿಸಲ್ಪಟ್ಟಿದ್ದ ಕೆಲ ಕ್ರಿಕೆಟಿಗರು ಈ ಬಾರಿ ಅದ್ಬುತ ಪ್ರದರ್ಶನ ನೀಡುತ್ತಿದ್ದು, ಅವರುಗಳನ್ನು ಖರೀದಿಸದೆ ಕೈ ಬಿಟ್ಟಿದ್ದಕ್ಕೆ ಪ್ರಾಂಚೈಸಿಗಳು ಕೈ ಕೈ ಹಿಸುಕಿಕೊಳ್ಳುವಂತಾಗಿದೆ.

ಸ್ಕೋರ್ ಕಾರ್ಡ್

ಜೈಪುರದ ಸವಾಯಿ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ಪಂಜಾಬ್ ತಂಡದ ಆಟಗಾರ ಆಸ್ಟ್ರೇಲಿಯಾದ ಆಂಡ್ರ್ಯೂ ಟೈ ಕೇವಲ 34 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದರು.

ಆಂಡ್ರ್ಯೂ ಪ್ರತಿ ವಿಕೆಟ್ ಪಡೆದಾಗಲು ತಮ್ಮ ತೋಳಿನಲ್ಲಿ ಧರಿಸಿದ್ದ ಕಪ್ಪು ಪಟ್ಟಿಯನ್ನು ಚುಂಬಿಸುತ್ತಿದ್ದರು. ಆಂಡ್ರ್ಯೂ ತಮ್ಮ ಈ ಪಂದ್ಯದ ಸಾಧನೆಯಿಂದ ಪರ್ಪಲ್ ಕ್ಯಾಪ್ ಗಳಿಸಿದ್ದಾರೆ.

ರಾಹುಲ್ ಹೋರಾಟ ವ್ಯರ್ಥ: ಪಂಜಾಬ್ ವಿರುದ್ಧ ರಾಜಸ್ಥಾನ್ ಗೆಲುವುರಾಹುಲ್ ಹೋರಾಟ ವ್ಯರ್ಥ: ಪಂಜಾಬ್ ವಿರುದ್ಧ ರಾಜಸ್ಥಾನ್ ಗೆಲುವು

ರಾಜಸ್ಥಾನ್ ರಾಯಲ್ಸ್ ತಂಡದ ಬ್ಯಾಟಿಂಗ್ ಬಳಿಕ ತಮ್ಮ ಸಾಧನೆ ಬಗ್ಗೆ ಮಾತನಾಡುತ್ತಾ, ತಮ್ಮ ತೋಳಿಗೆ ಬ್ಯಾಂಡ್ ಧರಿಸಿದ್ದ ಕಾರಣವನ್ನು ತಿಳಿಸಿದರು, ನನ್ನ ಅಜ್ಜಿ ಇಂದು ಸಾವಿಗೀಡಾಗಿದರು. ಅವರ ಗೌರವಾರ್ಥ ಪಟ್ಟಿ ಧರಿಸಿದ್ದೆ. ನನ್ನ ಇಂದಿನ ಸಾಧನೆಯನ್ನು ಅವರಿಗೆ ಅರ್ಪಿಸುತ್ತಿದೇನೆ ಎಂದು ಹೇಳಿ ಭಾವುಕರಾದರು.

ರಾಯಲ್ಸ್ ನಾಯಕ ಅಜಿಂಕ್ಯಾ ರಹಾನೆ, ಬೆನ್ ಸ್ಟೋಕ್ಸ್, ಜೋಫ್ರಾ ಆರ್ಚರ್ ಹಾಗೂ ಜಯದೇವ್ ಉನದ್ಕತ್ ಅವರ ವಿಕೆಟ್ ಪಡೆದರು.

Story first published: Wednesday, May 9, 2018, 15:16 [IST]
Other articles published on May 9, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X