ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್‌ ಜಯಭೇರಿ

Bravo and Dhoni

ನವದೆಹಲಿ, ಮಾರ್ಚ್ 26: ದೆಹಲಿಯ ಫಿರೋಜ್ ಷಾ ಕೋಟ್ಲಾ ಸ್ಟೇಡಿಯನಲ್ಲಿ ಮಂಗಳವಾರ (ಮಾರ್ಚ್ 26) ನಡೆದ ಐಪಿಎಲ್ 5ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್‌ 6 ವಿಕೆಟ್ ಜಯ ಸಾಧಿಸಿದೆ. ಟೂರ್ನಿಯಲ್ಲಿ ಚೆನ್ನೈಗೆ ಲಭಿಸಿದ ಎರಡನೇ ಗೆಲುವಿದು. ಉದ್ಘಾಟನಾ ಪಂದ್ಯದಲ್ಲಿ ಎಂಎಸ್ ಧೋನಿ ಪಡೆ ರಾಯಲ್ ಚಾಲೆಂಜರ್ಸ್ ವಿರುದ್ಧ ಶುಭಾರಂಭ ಕಂಡಿತ್ತು.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ಸಮರ, ಸಂಭಾವ್ಯ XI ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ಸಮರ, ಸಂಭಾವ್ಯ XI

ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಆರಂಭಿಕ ಆಟಗಾರ ಪೃಥ್ವಿ ಶಾ 24, ಶಿಖರ್ ಧವನ್ 51, ನಾಯಕ ಶ್ರೇಯಸ್ ಐಯ್ಯರ್ 18, ರಿಷಬ್ ಪಂತ್ 25 ರನ್‌ನೊಂದಿಗೆ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದು 147 ರನ್ ಪೇರಿಸಿತ್ತು. ಡೆಲ್ಲಿ ಇನ್ನಿಂಗ್ಸ್‌ ವೇಳೆ ಎದುರಾಳಿ ತಂಡದ ಡ್ವೇನ್ ಬ್ರಾವೋ 33 ರನ್ನಿಗೆ 3 ವಿಕೆಟ್ ಕಿತ್ತು ತಂಡವನ್ನು ಕಾಡಿದರು.

ಐಪಿಎಲ್ ಟೂರ್ನಿಯಲ್ಲಿ ಆಟವಾಡಿ, ಆಕರ್ಷಕ ಬಹುಮಾನ ಗೆಲ್ಲಿರಿ

ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್‌ ಕಿಂಗ್ಸ್‌ನಿಂದ ಆರಂಭಿಕ ಆಟಗಾರ ಶೇನ್ ವಾಟ್ಸನ್ 44, ಸುರೇಶ್ ರೈನಾ 30, ಕೇದಾರ್ ಜಾಧವ್ 27, ಧೋನಿ 32 ರನ್ ಸೇರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಸಿಎಸ್‌ಕೆ 19.4 ಓವರ್‌ಗೆ 4 ವಿಕೆಟ್ ಕಳೆದು 150 ರನ್ ಗಳಿಸಿತು. ಚೆನ್ನೈಯ ವಾಟ್ಸನ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

Dhawan

ಐಪಿಎಲ್ ಪಂದ್ಯ ವೀಕ್ಷಣೆಗಾಗಿ ಬಿಎಸ್ಎನ್ಎಲ್, ಜಿಯೋ ಆಫರ್ ಐಪಿಎಲ್ ಪಂದ್ಯ ವೀಕ್ಷಣೆಗಾಗಿ ಬಿಎಸ್ಎನ್ಎಲ್, ಜಿಯೋ ಆಫರ್

ಆರಂಭಿಕ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 37 ರನ್ ಗಳ ಭರ್ಜರಿ ಜಯ ದಾಖಲಿಸಿತ್ತು. ರಿಷಬ್ ಪಂತ್ 27 ಎಸೆತಗಳಲ್ಲಿ 78ರನ್ ಚೆಚ್ಚಿ ಗಮನ ಸೆಳೆದಿದ್ದರು. ಆದರೆ ಈ ಪಂದ್ಯದಲ್ಲಿ ಡೆಲ್ಲಿಗೆ ಜಯ ಒಲ್ಲೆಯೆಂದಿತು.

Mar 26, 2019, 11:57 pm IST

26 ಎಸೆತಗಳಲ್ಲಿ 44ರನ್ ಸಿಡಿಸಿದ ಶೇನ್ ವಾಟ್ಸನ್ ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿದೆ

Mar 26, 2019, 11:37 pm IST

19.3ಓವರ್ ಗಳಲ್ಲಿ 148ರನ್ ಗಳನ್ನು ಮುಟ್ಟಿ 6 ವಿಕೆಟ್ ಗಳ ಜಯ ದಾಖಲಿಸಿದ ಚೆನ್ನೈ ಸೂಪರ್ ಕಿಂಗ್ಸ್

Mar 26, 2019, 11:35 pm IST

ಬೌಂಡರಿ ಬಾರಿಸಿ ಗೆಲುವು ತಂಡ ಡ್ವಾಯ್ನೆ ಬ್ರಾವೋ

Mar 26, 2019, 11:27 pm IST

ವಾಟ್ಸನ್ 44, ರೈನಾ 30, ಜಾಧವ್ ಹಾಗೂ ಧೋನಿ ಉತ್ತಮ ಜೊತೆಯಾಟದಿಂದ ಗೆಲುವಿನ ಗುರಿಯತ್ತ ಚೆನ್ನೈ ತಂಡ. 18 ಓವರ್ ನಂತರ 137/3

Mar 26, 2019, 11:13 pm IST

15 ಓವರ್ ಗಳ ನಂತರ ಚೆನ್ನೈ ಸೂಪರ್ ಕಿಂಗ್ಸ್ 120/3

Mar 26, 2019, 10:51 pm IST

ಸುರೇಶ್ ರೈನಾ ಪಂತ್ ಗೆ ಕ್ಯಾಚಿತ್ತು ಔಟ್! ಮಿಶ್ರಾಗೆ ಎರಡನೇ ವಿಕೆಟ್ 10.2 ಓವರ್ ಗಳಲ್ಲಿ ಚೆನೈ ಸ್ಕೋರ್ 98/3,

Mar 26, 2019, 10:47 pm IST

10 ಓವರ್ ಗಳ ನಂತರ ಚೆನ್ನೈ ಸೂಪರ್ ಕಿಂಗ್ಸ್ ಸ್ಕೋರ್ 97/2. ಗೆಲ್ಲಲು 148ರನ್ ಗುರಿ

Mar 26, 2019, 10:33 pm IST

6.4ಓವರ್ ಗಳಲ್ಲಿ ಚೆನ್ನೈ ಸ್ಕೋರ್ 73/2, ವಾಟ್ಸನ್ 26 ಎಸೆತಗಳಲ್ಲಿ 46ರನ್ (4 ಬೌಂಡರಿ, 3ಸಿಕ್ಸರ್) ಗಳಿಸಿ ಔಟ್.

Mar 26, 2019, 10:32 pm IST

ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಬೌಲಿಂಗ್ ನಲ್ಲಿ ಎರಡು ಸಿಕ್ಸರ್ ಸಿಡಿಸಿದ ಬಳಿಕ ಶೇನ್ ವಾಟ್ಸನ್ ಔಟ್, ಸ್ಟಂಪ್ ಮಾಡಿದ ರಿಷಬ್ ಪಂತ್

Mar 26, 2019, 10:21 pm IST

5 ಓವರ್ ಗಳ ನಂತರ ಚೆನ್ನೈ ಸೂಪರ್ ಕಿಂಗ್ಸ್ 51/1

Mar 26, 2019, 10:07 pm IST

ಅಂಬಟಿ ರಾಯುಡು ಔಟ್, ಇಶಾಂತ್ ಶರ್ಮ ಬೌಲಿಂಗ್ ನಲ್ಲಿ ಸುಲಭ ಕ್ಯಾಚಿತ್ತು ವಿಕೆಟ್ ಒಪ್ಪಿಸಿದ ರಾಯುಡು, ಚೆನ್ನೈ 2.4 ಓವರ್ ಗಳಲ್ಲಿ 21/1

Mar 26, 2019, 10:03 pm IST

2 ಓವರ್ ಗಳ ನಂತರ 16/0, ವಾಟ್ಸನ್ ಬೌಂಡರಿ ಮೂಲಕ ರನ್ ಗತಿ ಹೆಚ್ಚಿಸಿದ್ದಾರೆ

Mar 26, 2019, 9:59 pm IST

ಚೆನ್ನೈ ಚೇಸಿಂಗ್ : ಮೊದಲ ಓವರ್ ನಂತರ 7/0

Mar 26, 2019, 9:59 pm IST

ಚೆನ್ನೈ ಇನ್ನಿಂಗ್ಸ್ ಆರಂಭಿಸಿದ ಶೇನ್ ವಾಟ್ಸನ್ ಹಾಗೂ ಅಂಬಟಿ ರಾಯುಡು, ಡೆಲ್ಲಿ ಪರ ಇಶಾಂತ್ ಮೊದಲ ಓವರ್ ಬೌಲಿಂಗ್

Mar 26, 2019, 9:43 pm IST

ಇಮ್ರಾನ್ ತಾಹೀರ್ ಗೆ ಪರ್ಪಲ್ ಕ್ಯಾಪ್, ರಿಷಬ್ ಪಂತ್ ಗೆ ಕಿತ್ತಳೆ ಟೋಪಿ

Mar 26, 2019, 9:40 pm IST

20 ಓವರ್ ಗಳ ನಂತರ ಡೆಲ್ಲಿ ಕ್ಯಾಪಿಟಲ್ಸ್ 147/6, ಚೆನ್ನೈ ತಂಡಕ್ಕೆ ಗೆಲ್ಲಲು 148ರನ್ ಗುರಿ

Mar 26, 2019, 9:39 pm IST

ಬ್ರಾವೋ ಎಸೆದ ಕೊನೆ ಓವರ್ ನಲ್ಲಿ ಡೆಲ್ಲಿ ಸ್ಕೋರ್ 2,4,1,1,0,1

Mar 26, 2019, 9:36 pm IST

19 ಓವರ್ ಗಳ ನಂತರ ಡೆಲ್ಲಿ ಕ್ಯಾಪಿಟಲ್ಸ್ 138/6

Mar 26, 2019, 9:28 pm IST

ಅರ್ಧಶತಕ ಗಳಿಸಿದ ಬಳಿಕ ಔಟ್! ಬ್ರಾವೋ ಸ್ಲೋ ಎಸೆತಕ್ಕೆ ಬಲಿಯಾದ ಶಿಖರ್ ಧವನ್

Mar 26, 2019, 9:27 pm IST

50ರನ್ ! 45ಎಸೆತಗಳಲ್ಲಿ 50ರನ್ ಪೂರೈಸಿದ ಆರಂಭಿಕ ಶಿಖರ್ ಧವನ್, 17 ಓವರ್ ಗಳ ನಂತರ ಡೆಲ್ಲಿ ಕ್ಯಾಪಿಟಲ್ಸ್ 127/6

Mar 26, 2019, 9:23 pm IST

ರವೀಂದ್ರ ಜಡೇಜ ಎಸೆತದಲ್ಲಿ ಪಾಲ್ ಕ್ಲೀನ್ ಬೋಲ್ಡ್ ! ಸತತ ಮೂರು ವಿಕೆಟ್ ಕಳೆದುಕೊಂಡ ಡೆಲ್ಲಿ ಕ್ಯಾಪಿಟಲ್ಸ್

Mar 26, 2019, 9:21 pm IST

ಬ್ರಾವೋಗೆ ಮತ್ತೊಂದು ವಿಕೆಟ್! ಸುಲಭ ಕ್ಯಾಚಿತ್ತು ನಿರ್ಗಮಿಸಿದ ಕಾಲಿನ್ ಇನ್ ಗ್ರಾಮ್, ಡೆಲ್ಲಿ ಕ್ಯಾಪಿಟಲ್ ಸ್ಕೋರ್ 15.4 ಓವರ್ ಗಳಲ್ಲಿ ಸ್ಕೊರ್ 122/4

Mar 26, 2019, 9:15 pm IST

ಡ್ವಾಯ್ನೆ ಬ್ರಾವೊ ಎಸೆತದಲ್ಲಿ 23ರನ್(13 ಎಸೆತ)ಗಳಿಸಿದ್ದ ರಿಷಬ್ ಪಂತ್ ಔಟ್!, ಶಾರ್ದೂಲ್ ಠಾಕೂರ್ ರಿಂದ ಉತ್ತಮ ಕ್ಯಾಚ್, 15.2 ಓವರ್ ಗಳ ನಂತರ ಡೆಲ್ಲಿ ಸ್ಕೋರ್ 120/3

Mar 26, 2019, 9:12 pm IST

15 ಓವರ್ ಗಳ ನಂತರ ಡೆಲ್ಲಿ ಕ್ಯಾಪಿಟಲ್ಸ್ ಸ್ಕೋರ್ 118/2

Mar 26, 2019, 8:59 pm IST

ಕ್ರೀಸ್ ಗೆ ಬಂದ ರಿಷಬ್ ಪಂತ್, ಜಡೇಜ ಎಸೆತವನ್ನು ಬೌಂಡರಿ ಮೂಲಕ ತಮ್ಮ ಲಯ ಮುಂದುವರೆಸಿದ್ದಾರೆ.

Mar 26, 2019, 8:54 pm IST

79/2, ಗೂಗ್ಲಿ ಎಸೆದು ಡೆಲ್ಲಿ ಕ್ಯಾಪಿಟಲ್ ನಾಯಕ ಶ್ರೇಯಸ್ ರನ್ನು ಎಲ್ ಬಿ ಬಲೆಗೆ ಕೆಡವಿಕೊಂಡ ಇಮ್ರಾನ್ ತಾಹೀರ್

Mar 26, 2019, 8:52 pm IST

11 ಓವರ್ ಗಳ ನಂತರ ಡೆಲ್ಲಿ 70/1

Mar 26, 2019, 8:47 pm IST

ಪಂದ್ಯದ ಮೊದಲ ಸಿಕ್ಸರ್ ಸಿಡಿಸಿದ ಡೆಲ್ಲಿ ನಾಯಕ ಶ್ರೇಯಸ್ ಅಯ್ಯರ್, 9.3 ಓವರ್ ನಲ್ಲಿ ಇಮ್ರಾನ್ ತಾಹೀರ್ ಎಸೆತವನ್ನು ಪೆವಿಲಿಯನ್ ಗೆ ಅಟ್ಟಿದ ಅಯ್ಯರ್

Mar 26, 2019, 8:32 pm IST

7 ಓವರ್ ಗಳ ನಂತರ ಡೆಲ್ಲಿ ಕ್ಯಾಪಿಟಲ್ ಮೊತ್ತ 48/1

Mar 26, 2019, 8:32 pm IST

ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಐಪಿಎಲ್ ಚುಟುಕು ಸಮರ

Mar 26, 2019, 8:28 pm IST

6 ಓವರ್ ಗಳ ನಂತರ ಡೆಲ್ಲಿ ಕ್ಯಾಪಿಟಸ್ ಸ್ಕೋರ್ 43/1

Mar 26, 2019, 8:25 pm IST

ಫಿರೋಜ್ ಶಾ ಕೋಟ್ಲಾ ಮೈದಾನದಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಬಂದಿದ್ದು ಹೀಗೆ

Mar 26, 2019, 8:22 pm IST

ಪೃಥ್ವಿ ಶಾ ಔಟ್!, ದೀಪಕ್ ಚಾಹರ್ ಬೌಲಿಂಗ್ ನಲ್ಲಿ ಲೆಗ್ ಸೈಡ್ ನಲ್ಲಿ ಪುಲ್ ಮಾಡಲು ಹೋಗಿ ಶೇನ್ ವಾಟ್ಸನ್ ಗೆ ಕ್ಯಾಚಿತ್ತಿದ್ದಾರೆ. ಡೆಲ್ಲಿ ಸ್ಕೋರ್ 36/1

Mar 26, 2019, 8:20 pm IST

ಸ್ಪಿನ್ನರ್ ಹರ್ಭಜನ್ ಸಿಂಗ್ ಗೂ ಚೌಂಡರಿ ಬಾರಿಸಿದ ಡೆಲ್ಲಿ ಓಪನರ್ ಶಿಖರ್ ಧವನ್, 5 ಓವರ್ ನಂತರ 35ರನ್

Mar 26, 2019, 8:10 pm IST

ಎರಡನೇ ಓವರ್ ನಲ್ಲಿ 3 ಬೌಂಡರಿ ಚೆಚ್ಚಿದ ಪೃಥ್ವಿಶಾ, ತಂಡದ ಮೊತ್ತ 2ನೇ ಓವರ್ ನಂತರ ವಿಕೆಟ್ ನಷ್ಟವಿಲ್ಲದೆ 20ರನ್

Mar 26, 2019, 8:06 pm IST

ಟಾಸ್ ವರದಿ : ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಶ್ರೇಯಸ್

Mar 26, 2019, 8:05 pm IST

ಮೊದಲ ಬೌಂಡರಿ : ಮೊದಲ ಓವರ್ ನಲ್ಲಿ ದೀಪಕ್ ಚಾಹರ್ ಅವರ ಮೂರನೇ ಎಸೆತವನ್ನು ಪುಲ್ ಶಾಟ್ ಮೂಲಕ ಬೌಂಡರಿ ಗೆರೆ ಆಚೆಗೆ ಅಟ್ಟಿದ ಪೃಥ್ವಿಶಾ

Mar 26, 2019, 7:54 pm IST

ಡೆಲ್ಲಿ ಕ್ಯಾಪಿಟಲ್ಸ್: ಆರಂಭಿಕರು: ಶಿಖರ್ ಧವನ್, ಪೃಥ್ವಿ ಶಾ ಮಧ್ಯಮ ಕ್ರಮಾಂಕ: ಶ್ರೇಯಸ್ ಅಯ್ಯರ್ (ನಾಯಕ), ಕಾಲಿನ್ ಇನ್ ಗ್ರಮ್, ರಿಷನ್ ಪಂತ್ (ವಿಕೆಟ್ ಕೀಪರ್) ಆಲ್ ರೌಂಡರ್ಸ್ : ಕೀಮೋ ಪಾಲ್, ಅಕ್ಷರ್ ಪಟೇಲ್, ರಾಹುಲ್ ತೆವಾಟಿಯಾ ಬೌಲರ್ಸ್ : ಅಮಿತ್ ಮಿಶ್ರಾ, ಕಾಗಿಸೋ ರಬಾಡಾ, ಇಶಾಂತ್ ಶರ್ಮ

Mar 26, 2019, 7:54 pm IST

ಚೆನ್ನೈ ಸೂಪರ್ ಕಿಂಗ್ಸ್ ತಂಡ: ಆರಂಭಿಕರು : ಶೇನ್ ವಾಟ್ಸನ್, ಅಂಬಟಿ ರಾಯುಡು ಮಧ್ಯಮ ಕ್ರಮಾಂಕ : ಸುರೇಶ್ ರೈನಾ, ಕೇದಾರ್ ಜಾಧವ್, ಎಂಎಸ್ ಧೋನಿ ಆಲ್ ರೌಂಡರ್ಸ್ : ರವೀಂದ್ರ ಜಡೇಜ, ಡ್ವಾಯ್ನೆ ಬ್ರಾವೋ, ದೀಪಕ್ ಚಾಹರ್ ಬೌಲರ್ಸ್ : ಹರ್ಭಜನ್ ಸಿಂಗ್, ಇಮ್ರಾನ್ ತಾಹೀರ್, ಶಾರ್ದೂಲ್ ಠಾಕೂರ್

Story first published: Wednesday, March 27, 2019, 7:08 [IST]
Other articles published on Mar 27, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X