ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ಕುಲದೀಪ್ ಕಳಪೆ ಫಾರ್ಮ್ ಬಗ್ಗೆ ಪ್ರತಿಕ್ರಿಯಿಸಿದ ಹರ್ಭಜನ್ ಸಿಂಗ್

IPL 2019: Harbhajan Singh reacts to on Kuldeep Yadav’s poor form

ನವದೆಹಲಿ, ಏಪ್ರಿಲ್ 24: ಕುಲದೀಪ್ ಯಾದವ್ ಹಠಾತ್ ಫಾರ್ಮ್ ಕಳೆದುಕೊಂಡಿದ್ದು ಮುಂಬರಲಿರುವ ವಿಶ್ವಕಪ್‌ನಲ್ಲಿ ಪರಿಣಾಮ ಬೀರಲಾರದು. ಆ ವೇಳೆ ಅವರು ಫಾರ್ಮ್‌ಗೆ ಮರಳಲಿದ್ದಾರೆ ಎಂದು ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್ ಅಭಿಪ್ರಾಯಿಸಿದ್ದಾರೆ.

ಕೊಹ್ಲಿ, ಎಬಿಡಿಯ ಹಾಗೆ ನಾನೂ ರನ್ ಗಳಿಸಬಲ್ಲೆ: ಆರ್‌ಸಿಬಿ ಆಲ್ ರೌಂಡರ್ಕೊಹ್ಲಿ, ಎಬಿಡಿಯ ಹಾಗೆ ನಾನೂ ರನ್ ಗಳಿಸಬಲ್ಲೆ: ಆರ್‌ಸಿಬಿ ಆಲ್ ರೌಂಡರ್

ಸದ್ಯದ ಫಾರ್ಮ್ ಗಮನಿಸಿದರೆ, ಮುಂಬರಲಿರುವ ವಿಶ್ವಕಪ್‌ನಲ್ಲಿ ಭಾರತ ತಂಡದಲ್ಲಿರುವ ಚೈನಾಮನ್ ಕುಲದೀಪ್ ಯಾದವ್ ಕಗ್ಗಂಟಾಗುವ ಸಾಧ್ಯತೆಯಿದೆ ಎಂದು ಕ್ರಿಕೆಟ್ ವಲಯ ಮಾತನಾಡಿಕೊಳ್ಳುತ್ತಿದೆ. ಇದಕ್ಕೆ ಪುರಾವೆಯೆಂಬಂತೆ ಈಗ ನಡೆಯುತ್ತಿರುವ ಐಪಿಎಲ್‌ನಲ್ಲಿ ಕುಲದೀಪ್ ಗಮನಾರ್ಹ ಪ್ರದರ್ಶನವನ್ನೂ ನೀಡಿಲ್ಲ.

ಐಪಿಎಲ್ ನಲ್ಲಿ ಕೋಲ್ಕತ್ತಾ ಪರ ಒಟ್ಟು 9 ಪಂದ್ಯಗಳಲ್ಲಿ ಕೇವಲ 4 ವಿಕೆಟ್‌ಗಳನ್ನಷ್ಟೇ ಕುಲದೀಪ್ ಗಳಿಸಿದ್ದಾರೆ. ಹೀಗಾಗಿ ಕಳಪೆ ಫಾರ್ಮ್ ಕಾರಣ ನೀಡಿ ಕೆಕೆಆರ್, ಏಪ್ರಿಲ್ 21ರಂದು ನಡೆದಿದ್ದ ಹೈದರಾಬಾದ್ vs ಕೋಲ್ಕತ್ತಾ ಪಂದ್ಯದಲ್ಲಿ ಎಡಗೈ ರಿಸ್ಟ್ ಸ್ಪಿನ್ನರ್ ಕುಲದೀಪ್ ಅವರನ್ನು ತಂಡದಿಂದ ಕೈಬಿಟ್ಟಿತ್ತು.

ಚೆನ್ನೈ-ಹೈದರಾಬಾದ್‌ ಪಂದ್ಯಕ್ಕೆ ಬೆಟ್ಟಿಂಗ್‌, ನಾಲ್ವರ ಬಂಧನಚೆನ್ನೈ-ಹೈದರಾಬಾದ್‌ ಪಂದ್ಯಕ್ಕೆ ಬೆಟ್ಟಿಂಗ್‌, ನಾಲ್ವರ ಬಂಧನ

'ಐಪಿಎಲ್‌ನಲ್ಲಿ ಕುಲದೀಪ್ ಫಾರ್ಮ್ ಚರ್ಚೆಗೀಡಾಗುತ್ತಿರುವುದರಲ್ಲಿ ಅನುಮಾನವಿಲ್ಲ. ಟಿ20 ಮಾದರಿ, ಬೌಲರ್‌ಗಳ ವಿಶ್ವಾಸವನ್ನೇ ಹಾಳುಮಾಡಬಲ್ಲದು. ಹಾಗಾಗಿ ಕ್ರಿಕೆಟ್‌ ಮಾದರಿಗಳಿಗನುಗುಣವಾಗಿ ಆಟಗಾರರ ಫಾರ್ಮ್ ಅಳೆಯಲಾಗದು. ಏಕದಿನ ದಿನ ಪಂದ್ಯ ವಿಭಿನ್ನವಾದುದು. ಅಲ್ಲಿ ನೀವು ಬೇರೆಯೇ ಕುಲದೀಪ್‌ನನ್ನು ನೋಡಲಿದ್ದೀರಿ' ಎಂದು ಭಜ್ಜಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Story first published: Wednesday, April 24, 2019, 19:30 [IST]
Other articles published on Apr 24, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X