ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ನಲ್ಲಿ ದಾಖಲೆಗಳ ದಾಖಲೆ ಬರೆದ ಬೇರ್ಸ್ಟೊವ್-ವಾರ್ನರ್ ಜೋಡಿ!

IPL 2019: Jonny Bairstow and David Warner script records

ಹೈದರಾಬಾದ್, ಏಪ್ರಿಲ್ 1: ಸನ್ ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕ ಆಟಗಾರರಾದ ಜಾನಿ ಬೇರ್ಸ್ಟೊವ್ ಮತ್ತು ಡೇವಿಡ್ ವಾರ್ನರ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ದಾಖಲೆಗಳ ದಾಖಲೆ ಬರೆದಿದ್ದಾರೆ. ಐಪಿಎಲ್ ನಲ್ಲಿ ಅತ್ಯಧಿಕ ಜೊತೆಯಾಟಕ್ಕಾಗಿಯೂ ಬೇರ್ಸ್ಟೊವ್-ವಾರ್ನರ್ ಜೋಡಿ ಇತಿಹಾಸ ನಿರ್ಮಿಸಿದೆ.

ಐಪಿಎಲ್: ರಿಷಬ್ ಪಂತ್ ಮ್ಯಾಚ್ ಫಿಕ್ಸ್‌ ಮಾಡಿದ್ರಾ? ಏನಿದು ಗುಸುಗುಸು?!ಐಪಿಎಲ್: ರಿಷಬ್ ಪಂತ್ ಮ್ಯಾಚ್ ಫಿಕ್ಸ್‌ ಮಾಡಿದ್ರಾ? ಏನಿದು ಗುಸುಗುಸು?!

ಭಾನುವಾರ (ಮಾರ್ಚ್ 31) ನಡೆದ ಸನ್ ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್‌ಗಾಗಿ ಬೇರ್ಸ್ಟೊವ್, ವಾರ್ನರ್ ಗಮನ ಸೆಳೆದರು. ಪಂದ್ಯದಲ್ಲಿ ಇಬ್ಬರೂ ಶತಕ ಬಾರಿಸಿ ಅಪರೂಪದ ಸಾಧನೆಯೂ ಮೆರೆದರು.

ಸಿಕ್ಸ್‌ಗಾಗಿ ಐಪಿಎಲ್‌ನಲ್ಲಿ ಇತಿಹಾಸ ಬರೆದ ಯುನಿವರ್ಸ್ ಬಾಸ್ ಕ್ರಿಸ್‌ಗೇಲ್ಸಿಕ್ಸ್‌ಗಾಗಿ ಐಪಿಎಲ್‌ನಲ್ಲಿ ಇತಿಹಾಸ ಬರೆದ ಯುನಿವರ್ಸ್ ಬಾಸ್ ಕ್ರಿಸ್‌ಗೇಲ್

ವಾರ್ನರ್-ಬೇರ್ಸ್ಟೊವ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಹೈದರಾಬಾದ್ ತಂಡ ಬೆಂಗಳೂರಿಗೆ 118 ರನ್ ಸೋಲುಣಿಸಿತು. ಇದು ಆರ್‌ಸಿಬಿಗೆ ಟೂರ್ನಿಯಲ್ಲಿ ಲಭಿಸಿದ ಸತತ ಮೂರನೇ ಸೋಲು.

ಐಪಿಎಲ್ 2ನೇ, 3ನೇ ಶತಕ

ಐಪಿಎಲ್ 2ನೇ, 3ನೇ ಶತಕ

ಪಂದ್ಯದಲ್ಲಿ ಕೇವಲ 56 ಎಸೆತಗಳಿಗೆ 114 ರನ್ ಸಿಡಿಸಿದ ಜಾನಿ ಬೇರ್ಸ್ಟೊವ್ ಮತ್ತು 55 ಎಸೆತಗಳಿಗೆ ಭರ್ತಿ 100 ರನ್ ಗಳಿಸಿದ ಡೇವಿಡ್ ವಾರ್ನರ್ 2019ರ ಐಪಿಎಲ್‌ನಲ್ಲಿ ಕ್ರಮವಾಗಿ 2ನೇ ಮತ್ತು 3ನೇ ಶತಕ ದಾಖಲೆಗೆ ಕಾರಣರಾದರು. 12ನೇ ಸೀಸನ್‌ನಲ್ಲಿ ಮೊದಲ ಶತಕ ಬಾರಿಸಿದ್ದು ರಾಜಸ್ಥಾನ್ ರಾಯಲ್ಸ್‌ನ ಸಂಜು ಸ್ಯಾಮ್ಸನ್.

ಅತ್ಯಧಿಕ ಜೊತೆಯಾಟ

ಅತ್ಯಧಿಕ ಜೊತೆಯಾಟ

ಐಪಿಎಲ್‌ನಲ್ಲಿ ಅತ್ಯಧಿಕ ಜೊತೆಯಾಟಕ್ಕಾಗಿ ಬೇರ್ಸ್ಟೊವ್-ವಾರ್ನರ್ ಜೋಡಿ ದಾಖಲೆ ಬರೆದಿದೆ. ಇಬ್ಬರೂ 16.2 ಓವರ್‌ ವರೆಗೆ ವಿಕೆಟ್ ಕಾವಲು ಕಾದರಲ್ಲದೆ ಒಟ್ಟು 185 ರನ್‌ಗಳನ್ನು ಜೊತೆಯಾಟದ ಮೂಲಕ ತಂಡಕ್ಕೆ ನೀಡಿದರು. ಅಲ್ಲದೆ ಒಂದೇ ಐಪಿಎಲ್ ಇನ್ನಿಂಗ್ಸ್‌ನಲ್ಲಿ ತಲಾ ಎರಡು ಶತಕಗಳನ್ನು ಬಾರಿಸಿದ ಮೊದಲ ಆಟಗಾರರಾಗಿ ಬೇರ್ಸ್ಟೊವ್, ವಾರ್ನರ್ ಗುರುತಿಸಿಕೊಂಡರು.

ಬೇರ್ಸ್ಟೊವ್ ಚೊಚ್ಚಲ ಐಪಿಎಲ್ ಶತಕ

ಬೇರ್ಸ್ಟೊವ್ ಚೊಚ್ಚಲ ಐಪಿಎಲ್ ಶತಕ

ಐಪಿಎಲ್‌ನಲ್ಲಿ ಜಾನಿ ಬೇರ್ಸ್ಟೊವ್ ಬಾರಿಸಿದ ಮೊದಲ ಶತಕವಿದು. ಒಟ್ಟಾರೆ ಟಿ20 ಮಾದರಿಯಲ್ಲಿ ಬೇರ್ಸ್ಟೊವ್ ಬಾರಿಸಿದ ಎರಡನೇ ಸೆಂಚುರಿಯಿದು. ಇದಕ್ಕೂ ಮುನ್ನ ಬೇರ್ಸ್ಟೊವ್ 2014ರಲ್ಲಿ ಯಾರ್ಕ್ ಶೈರ್ ಪ್ರತಿನಿಧಿಸಿದ್ದಾಗ ಶತಕ ಬಾರಿಸಿದ್ದರು.

ಬೌಂಡರಿ ದಾಖಲೆ

ಬೌಂಡರಿ ದಾಖಲೆ

ಜಾನಿ ಬಾರಿಸಿದ 114 ರನ್‌ಗಳಲ್ಲಿ 90 ರನ್‌ಗಳು ಬರೀ ಬೌಂಡರಿಗಳಿಂದಲೇ ಬಂದವು. 12 ಫೋರ್, 7 ಸಿಕ್ಸರ್‌ಗಳು ಬೇರ್ಸ್ಟೊವ್ ಬ್ಯಾಟ್‌ನಿಂದ ಸಿಡಿದಿದ್ದವು. ಅಂದರೆ ಗಳಿಸಿದ ರನ್‌ನಲ್ಲಿ ಶೇ. 78.95 ರನ್‌ಗಳು ಬೌಂಡರಿಂದಲೇ ಬಂದಿದ್ದವು. ಬೌಂಡರಿ ಮೂಲಕ ಅತ್ಯಧಿಕ ರನ್ ಪೇರಿಸಿದ ದಾಖಲೆ ಹಿಂದೆ ವಾರ್ನರ್ ಹೆಸರಿನಲ್ಲಿತ್ತು. 2017ರಲ್ಲಿ ಹೈದರಾಬಾದ್ ಪ್ರತಿನಿಧಿಸಿದ್ದ ವಾರ್ನರ್ ಕೆಕೆಆರ್ ವಿರುದ್ಧ 88 ರನ್‌ಗಳನ್ನು ಬರೀ ಬೌಂಡರಿಗಳಿಂದಲೇ ಗಳಿಸಿ ದಾಖಲೆ ಬರೆದಿದ್ದರು.

ಅತ್ಯಧಿಕತ ತಂಡದ ಮೊತ್ತ

ಅತ್ಯಧಿಕತ ತಂಡದ ಮೊತ್ತ

2019ರ ಐಪಿಎಲ್‌ನಲ್ಲಿ ತಂಡವೊಂದು ಗಳಿಸಿದ ಅತ್ಯಧಿಕ ರನ್‌ ಆಗಿ ಸದ್ಯಕ್ಕೆ ಹೈದರಾಬಾದ್ ಗಳಿಸಿದ 231 ರನ್ ಗುರುತಿಸಿಕೊಂಡಿದೆ. ಅಲ್ಲದೆ ಡೇವಿಡ್ ವಾರ್ನರ್ ಈ ಪಂದ್ಯದಲ್ಲಿ ಐಪಿಎಲ್ 4ನೇ ಶತಕ ಪೂರೈಸಿಕೊಂಡರು. ಐಪಿಎಲ್ ಹೆಚ್ಚಿನ ಶತಕ ದಾಖಲೆಗಾಗಿ ವಾರ್ನರ್ ವಿರಾಟ್ ಕೊಹ್ಲಿ, ಶೇನ್ ವ್ಯಾಟ್ಸನ್ ಜೊತೆ ಸ್ಥಾನ ಹಂಚಿಕೊಂಡಿದ್ದಾರೆ. ಐಪಿಎಲ್ ಹೆಚ್ಚಿನ ಶತಕಕ್ಕಾಗಿ ಮೊದಲ ಸ್ಥಾನದಲ್ಲಿರುವ ಕ್ರಿಸ್‌ಗೇಲ್ 6 ಸೆಂಚುರಿಗಳನ್ನು ಬಾರಿಸಿದ್ದಾರೆ.

Story first published: Monday, April 1, 2019, 10:11 [IST]
Other articles published on Apr 1, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X