ಹೈದರಾಬಾದ್ ಮಣಿಸಲು ಸಜ್ಜಾಗಿರುವ ಪಂಜಾಬಿ ಸಿಂಹಗಳ್ಯಾರು?

ಮೊಹಾಲಿ, ಏಪ್ರಿಲ್ 08: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ ) 2019ರ ಮೂರನೇ ವಾರದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಇಂದು ಕಿಂಗ್ಸ್ ಎಲೆವನ್ ಪಂಜಾಬ್ ಸೆಣಸಲಿದೆ. ಉಭಯ ತಂಡಗಳು ಕಳೆದ ಪಂದ್ಯವನ್ನು ಸೋತಿದ್ದು, ಗೆಲುವಿನ ರುಚಿ ಕಾಣಲು ಹಂಬಲಿಸಿವೆ.

ಮೊಹಲಿಯಲ್ಲಿ ನಡೆಯಲಿರುವ ಪಂದ್ಯದಲ್ಲಿ ಮೇಲ್ನೋಟಕ್ಕೆ ಪಂಜಾಬ್ ಗೆಲ್ಲುವ ನೆಚ್ಚಿನ ತಂಡವೆನಿಸಿದೆ. ಆದರೆ, ಚೆನ್ನೈ ವಿರುದ್ಧ ಗೆಲ್ಲಬಲ್ಲ ಪಂದ್ಯ ಕೈಬಿಟ್ಟಿದ್ದು ನೋಡಿದರೆ ಹಾಗೂ ಮುಂಬೈ ವಿರುದ್ಧ ಹೈದರಾಬಾದ್ ಆಡಿದ್ದು ಕಂಡರೆ, ಗೆಲುವು ಯಾರಿಗೆ ಬೇಕಾದರೂ ಲಭಿಸಬಹುದು.

ಐಪಿಎಲ್: ಅಲ್ಝಾರಿ ಭರ್ಜರಿ ಬೌಲಿಂಗ್, ಮುಂಬೈಗೆ ತಲೆ ಬಾಗಿದ ಹೈದರಾಬಾದ್‌

ಇಲ್ಲಿ ತನಕ ಐಪಿಎಲ್ ನಲ್ಲಿ ಉಭಯ ತಂಡಗಳು 12 ಬಾರಿ ಮುಖಾಮುಖಿಯಾಗಿದ್ದು, ಪಂಜಾಬ್ 9 ಬಾರಿ, ಹೈದರಾಬಾದ್ 3 ಬಾರಿ ಗೆಲುವು ಸಾಧಿಸಿವೆ. ಆದರೆ, ಮೊಹಾಲಿಯಲ್ಲಿ ಐದು ಪಂದ್ಯಗಳಲ್ಲಿ ಹೈದರಾಬಾದ್ 4, ಪಂಜಾಬ್ 1 ಪಂದ್ಯ ಗೆದ್ದಿದೆ.

ಉಭಯ ತಂಡಗಳಲ್ಲಿ ಹೆಚ್ಚಿನ ಬದಲಾವಣೆ ಸಾಧ್ಯತೆ ಕಡಿಮೆ. ಹೈದರಾಬಾದಿನ ಆರೆಂಜ್ ಆರ್ಮಿ ಮುನ್ನಡೆಸಲು ಕೇನ್ ವಿಲಿಯಮ್ಸನ್ ಬರಬಹುದು. ಯೂಸುಫ್ ಪಠಾಣ್ ಅಥವಾ ದೀಪಕ್ ಹೂಡಾ ಬದಲಿಗೆ ವೃದ್ಧಿಮಾನ್ ಸಹಾ ಆಡುವ ಸಾಧ್ಯತೆ ಹೆಚ್ಚಿದೆ.

ಸ್ಯಾಮ್ ಗೆ ಹ್ಯಾಟ್ರಿಕ್, ಡೆಲ್ಲಿ ವಿರುದ್ಧ ಪಂಜಾಬಿಗೆ ಭರ್ಜರಿ ಜಯ

ಕಿಂಗ್ಸ್ ಎಲೆವನ್ ಪಂಜಾಬ್

ಲೋಕೇಶ್ ರಾಹುಲ್ (ವಿಕೆಟ್ ಕೀಪರ್), ಕ್ರಿಸ್ ಗೇಲ್, ಮಾಯಾಂಕ್ ಅಗರವಾಲ್, ಸರ್ಫರಾಜ್ ಖಾನ್, ಡೇವಿಡ್ ಮಿಲ್ಲರ್, ಮಂದೀಪ್ ಸಿಂಗ್, ಸ್ಯಾಮ್ ಕರನ್, ರವಿಚಂದ್ರನ್ ಅಶ್ವಿನ್ (ನಾಯಕ), ಅಂಡ್ರೆ ಟೈ, ಮುರುಗನ್ ಅಶ್ವಿನ್, ಮೊಹಮ್ಮದ್ ಶಮಿ.

1
45898

ಸನ್ ರೈಸರ್ಸ್ ಹೈದರಾಬಾದ್

ಡೇವಿಡ್ ವಾರ್ನರ್, ಜಾನಿ ಬೈರ್ಸ್ಟೋ(ವಿಕೆಟ್ ಕೀಪರ್), ವಿಜಯ್ ಶಂಕರ್, ಮನೀಶ್ ಪಾಂಡೆ, ವೃದ್ಧಿಮಾನ್ ಸಹಾ, ಯೂಸುಫ್ ಪಠಾಣ್, ಮೊಹಮ್ಮದ್ ನಬಿ, ರಶೀದ್ ಖಾನ್/ಕೇನ್ ವಿಲಿಯಮ್ಸನ್, ಭುವನೇಶ್ವರ್ ಕುಮಾರ್, ಸಂದೀಪ್ ಶರ್ಮ, ಸಿದ್ದಾರ್ಥ್ ಕೌಲ್.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Monday, April 8, 2019, 15:00 [IST]
Other articles published on Apr 8, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X