ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2019: ದಾಖಲೆ ನಿರ್ಮಿಸಲು ಎಂಎಸ್ ಧೋನಿಗಿನ್ನು 2 ರನ್‌ ಬೇಕು

IPL 2019, MI vs CSK: MS Dhoni 2 runs away from personal landmark

ಮುಂಬೈ, ಏಪ್ರಿಲ್ 3: ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಅವರು ಟೀಮ್ ಇಂಡಿಯಾ ಮತ್ತು ಐಪಿಎಲ್ ಎರಡರಲ್ಲೂ ಗಮನ ಸೆಳೆಯುವ ಪ್ರಮುಖ ಆಟಗಾರ. 2 ಬಾರಿ ವಿಶ್ವಕಪ್ ಗೆದ್ದ ಭಾರತ ತಂಡವನ್ನು ಮುನ್ನಡೆಸಿದ ಹಿರಿಮೆ ಮಾಹಿ ಹೆಸರಿನಲ್ಲಿದೆ. ಧೋನಿ ಐಪಿಎಲ್‌ನಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸುವುದರಲ್ಲಿದ್ದಾರೆ.

ಮೈಖೇಲ್ ಕನ್ನಡ - ಐಪಿಎಲ್ 2019 'ವಿಶೇಷ ಮುಖಪುಟ'

2007ರಲ್ಲಿ ಧೋನಿ ನಾಯಕತ್ವದಲ್ಲಿ ಭಾರತ ತಂಡ ಟಿ20 ವಿಶ್ವಕಪ್ ಗೆದ್ದಿತ್ತು. 2011ರಲ್ಲೂ ಧೋನಿ ಮುಂದಾಳತ್ವದಲ್ಲಿ ಟೀಮ್ ಇಂಡಿಯಾ 50 ಓವರ್‌ಗಳ ವಿಶ್ವಕಪ್‌ ನಲ್ಲಿ ಚಾಂಪಿಯನ್‌ ಆಗಿತ್ತು. ಐಪಿಎಲ್‌ನಲ್ಲಿ ಅತೀ ಹೆಚ್ಚು ಸಾರಿ ಪ್ರಶಸ್ತಿ ಗೆದ್ದಿರುವ ಚೆನ್ನೈ ಸೂಪರ್ ಕಿಂಗ್ಸ್‌ ಕ್ಯಾಪ್ಟನ್ ಈ ಬಾರಿಯ ಐಪಿಎಲ್‌ನಲ್ಲಿ ವೈಯಕ್ತಿಯ ಅತ್ಯಧಿಕ ರನ್ ದಾಖಲೆ ಬರೆಯಲಿದ್ದಾರೆ.

ಐಪಿಎಲ್‌ನಲ್ಲಿ ಒಟ್ಟು 3,998 ರನ್ ದಾಖಲೆಯನ್ನು ಧೋನಿ ಹೊಂದಿದ್ದಾರೆ. ಬುಧವಾರ (ಏಪ್ರಿಲ್ 3) ಮುಂಬೈಯ ವಾಂಖೇಡೆ ಸ್ಟೇಡಿಯಂನಲ್ಲಿ ನಡೆಯುವ ಐಪಿಎಲ್ 15ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಧೋನಿ ಕೇವಲ 2 ರನ್ ಗಳಿಸಿದರೂ ಚೆನ್ನೈ ಪರ 4,000 ರನ್ ಪೂರೈಸಿದ 2ನೇ ಆಟಗಾರ ಖ್ಯಾತಿಗೆ ಪಾತ್ರರಾಗಲಿದ್ದಾರೆ.

ಐಪಿಎಲ್ 2019: ಬೆಂಗಳೂರು ತಂಡವನ್ನು ಕನ್ನಡಿಗನೇ ಹೆಡೆಮುರಿ ಕಟ್ಟಿದ!ಐಪಿಎಲ್ 2019: ಬೆಂಗಳೂರು ತಂಡವನ್ನು ಕನ್ನಡಿಗನೇ ಹೆಡೆಮುರಿ ಕಟ್ಟಿದ!

ಚೆನ್ನೈ ತಂಡದ ಪರ 4,000+ ರನ್ ಮೊದಲು ಬಾರಿಸಿದ ಕೀರ್ತಿ ಸುರೇಶ್ ರೈನಾ ಅವರದ್ದಾಗಿದೆ. ರೈನಾ ಒಟ್ಟು 174 ಪಂದ್ಯಗಳಲ್ಲಿ 5071 ರನ್ ಮೂಲಕ ಈ ಯಾದಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಧೋನಿ ಒಟ್ಟು 172 ಪಂದ್ಯಗಳಲ್ಲಿ 140.52 ಸ್ಟ್ರೈಕ್ ರೇಟ್, 41.21 ಸರಾಸರಿಯಲ್ಲಿ 3998 ಕಲೆ ಹಾಕಿದ್ದಾರೆ.

Story first published: Wednesday, April 3, 2019, 17:55 [IST]
Other articles published on Apr 3, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X