ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಮೊದಲ ಪಂದ್ಯಗಳಲ್ಲಿ ಗೇಲ್ ಗಳಿಸಿದ ರನ್ ಗಳೆಷ್ಟು?

IPL 2020:Chris Gayle scores in his first match of each IPL

ಐಪಿಎಲ್ 2020ರಲ್ಲಿ ಎಂಟು ಪಂದ್ಯಗಳ ನಂತರ ಮೈದಾನಕ್ಕಿಳಿದ ಯೂನಿವರ್ಸಲ್ ಬಾಸ್ ಕ್ರಿಸ್ಟೋಫರ್ ಹೆನ್ರಿ ಗೇಲ್ ಆಟಕ್ಕೆ ಮನಸೋಲದವರಿಲ್ಲ. ಜನವರಿ ನಂತರ ಕ್ರಿಕೆಟ್ ಮೈದಾನಕ್ಕಿಳಿಯುತ್ತಿದ್ದೀರಾ ನಿಮಗೆ ಅಳುಕು, ಭಯ ಇರಲಿಲ್ಲವೇ ಎಂದು ಪಂದ್ಯ ನಂತರ ಕಾಮೆಂಟೆಟರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೇಲ್, ಯೂನಿವರ್ಸಲ್ ಬಾಸ್ ಭಯಪಡೋದು ಅಂದರೇನು? ನನಗೆ ಯಾವುದೇ ಅಳುಕಿರಲಿಲ್ಲ ಎಂದಿದ್ದಾರೆ. ನಿಜ. ಗೇಲ್ ಮೈದಾನಕ್ಕಿಳಿದರೆ ಎದುರಾಳಿಗೆ ಭಯವಾಗಬೇಕೇ ಹೊರತು ಗೇಲ್ ಸಿಕ್ಸ್, ಬೌಂಡರಿ ಚೆಚ್ಚಲು ಹಿಂದೇಟು ಹಾಕಿದ ಉದಾಹರಣೆ ಕಡಿಮೆ.

ಐಪಿಎಲ್ 2020ರಲ್ಲಿ 8ನೇ ಪಂದ್ಯದಲ್ಲಿ ಭರ್ಜರಿಯಾಗಿ ಎಂಟ್ರಿಯನ್ನು ಘೋಷಿಸಿದ ಗೇಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಅರ್ಧಶತಕ ಸಿಡಿಸಿದರು.

 ಐಪಿಎಲ್ 4500ರನ್ ಕ್ಲಬ್ ಸೇರಿದ ಯೂನಿವರ್ಸಲ್ ಬಾಸ್ ಗೇಲ್ ಐಪಿಎಲ್ 4500ರನ್ ಕ್ಲಬ್ ಸೇರಿದ ಯೂನಿವರ್ಸಲ್ ಬಾಸ್ ಗೇಲ್

ಮೂರನೇ ಕ್ರಮಾಂಕದಲ್ಲಿ ಗೇಲ್ ಆಡಿದ್ದರ ಬಗ್ಗೆ ಮಾತನಾಡಿ, ಮಯಾಂಕ್, ಕೆಎಲ್ ರಾಹುಲ್ ಉತ್ತಮ ಜೊತೆಯಾಟ ಪ್ರದರ್ಶಿಸಿದ್ದಾರೆ ಅವರ ಸಮತೋಲನ ಹಾಳು ಮಾಡದಿರಲು ನಿರ್ಧರಿಸಲಾಯಿತು ಎಂದರು.

2009ರಿಂದ ಇಲ್ಲಿ ತನಕ ಗೇಲ್ ಮೊದಲ ಪಂದ್ಯಗಳ ಸ್ಕೋರ್

2009ರಿಂದ ಇಲ್ಲಿ ತನಕ ಗೇಲ್ ಮೊದಲ ಪಂದ್ಯಗಳ ಸ್ಕೋರ್

ಐಪಿಎಲ್ ಇತಿಹಾಸದಲ್ಲಿ 2009ರಿಂದ ಇಲ್ಲಿ ತನಕ ಗೇಲ್ ತಮ್ಮ ಮೊದಲ ಪಂದ್ಯದಲ್ಲಿ ಎಷ್ಟು ರನ್ ಗಳಿಸಿದ್ದರು ಎಂಬ ಪಟ್ಟಿ ಇಲ್ಲಿದೆ. 2012 ಹಾಗೂ 2016ರಲ್ಲಿ ಮಾತ್ರ ಡಬ್ಬಲ್ ಅಂಕಿ ದಾಟಿರಲಿಲ್ಲ. 2011ರಲ್ಲಿ ಅಜೇಯ 102 ಗಳಿಸಿದ್ದು ಮೊದಲ ಪಂದ್ಯದ ಅಧಿಕ ರನ್ ಗಳಿಕೆ ಎನಿಸಿಕೊಂಡಿದೆ.

2009: 10 ರನ್ (12 ಎಸೆತ)
2010: 75 (60)
2011: 102* (55)
2012: 2 (8)
2013: 92* (58)
2014: 20 (7)
2015: 96 (56)
2016: 1 (4)
2017: 32 (21)
2018: 63 (33)
2019: 79 (43)
2020: 53 (45)

ಒಟ್ಟಾರೆ 12 ಇನ್ನಿಂಗ್ಸ್ ಗಳಲ್ಲಿ 625 ರನ್, 62.50 ರನ್ ಸರಾಸರಿ, 155. 46 ಸ್ಟ್ರೈಕ್ ರೇಟ್. 7 ಬಾರಿ 50 ಪ್ಲಸ್ ರನ್ ಗಳಿಸಿದ್ದಾರೆ. ಹೀಗಾಗಿ, ಗೇಲ್ ಮೊದಲ ಪಂದ್ಯ ಯಾವಾಗಲೂ ಭರ್ಜರಿ ಎಂಟ್ರಿ ಮೂಲಕವೇ ಆಗಿದೆ.

ಇನ್ನುಳಿದ ದಾಖಲೆಗಳು

ಇನ್ನುಳಿದ ದಾಖಲೆಗಳು

ಈ ಪಂದ್ಯದಲ್ಲಿ 16ರನ್ ಗಳಿಸುತ್ತಿದ್ದಂತೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ 4500ರನ್ ಗಳಿಸಿದ ಆಟಗಾರರ ಪಟ್ಟಿ ಸೇರಿದರು. ಈ ಸಾಧನೆ ಮಾಡಿದ 8ನೇ ಆಟಗಾರ ಎನಿಸಿಕೊಂಡಿದರು. ಎಬಿ ಡಿ ವಿಲಿಯರ್ಸ್ ಹಾಗೂ ಡೇವಿಡ್ ವಾರ್ನರ್ ನಂತರ ಈ ಗಡಿ ದಾಟಿದ ಮೂರನೇ ವಿದೇಶಿ ಆಟಗಾರ ಎನಿಸಿಕೊಂಡರು. 2018ರ ಹರಾಜಿನಲ್ಲಿ 2 ಕೋಟಿ ಮೂಲ ಬೆಲೆಗೆ ಕಿಂಗ್ಸ್ ಎಲೆವನ್ ಪಂಜಾಬ್ ಖರೀದಿಸಿದ್ದನ್ನು ಮರೆಯುವಂತಿಲ್ಲ.

ಬೌಂಡರಿ, ಸಿಕ್ಸರ್‌ನಿಂದಲೇ 10,000 ಟಿ20 ರನ್ ಪೂರೈಸಿದ ಯೂನಿವರ್ಸಲ್ ಬಾಸ್

ಕ್ರಿಸ್ ಗೇಲ್ ಐಪಿಎಲ್ ಅಂಕಿ ಅಂಶ:

ಕ್ರಿಸ್ ಗೇಲ್ ಐಪಿಎಲ್ ಅಂಕಿ ಅಂಶ:

ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮೂಲಕ ಐಪಿಎಲ್ ಆಡಲು ಆರಂಭಿಸಿದ ಕ್ರಿಸ್ ಗೇಲ್ ಕ್ಲಿಕ್ ಆಗಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿದ ಮೇಲೆ ಎಂದರೆ ತಪ್ಪಾಗಲಾರದು. 2012ರಲ್ಲಿ 160 ಸ್ಟ್ರೈಕ್ ರೇಟ್ ನಂತೆ 733ರನ್ ಚೆಚ್ಚಿದರು.

125 ಪಂದ್ಯಗಳಲ್ಲಿ 41.13ರನ್ ಸರಾಸರಿಯಂತೆ 151.02 ಸ್ಟ್ರೈಕ್ ರೇಟ್ ನಂತೆ 4484 ಪ್ಲಸ್ ರನ್ ಗಳಿಸಿದ್ದಾರೆ. 6 ಶತಕ, 28 ಅರ್ಧಶತಕ ಗಳಿಸಿದ್ದು, 175 ವೈಯಕ್ತಿಕ ಗರಿಷ್ಠ ಮೊತ್ತ.

ಗೇಲ್ ಐಪಿಎಲ್ ದಾಖಲೆ

ಗೇಲ್ ಐಪಿಎಲ್ ದಾಖಲೆ

* 2013ರಲ್ಲಿ ಪುಣೆ ವಿರುದ್ಧ ಬಾರಿಸಿದ 175ರನ್ ಇಲ್ಲಿತನಕ ವಯಕ್ತಿಕ ಗರಿಷ್ಠ ಮೊತ್ತ.
* ಇನ್ನಿಂಗ್ಸ್ ನಲ್ಲಿ ಅತಿ ಹೆಚ್ಚು(17) ಸಿಕ್ಸರ್ ಬಾರಿಸಿದ ದಾಖಲೆ.
* ಐಪಿಎಲ್ ಇತಿಹಾದಲ್ಲಿ ಅತಿ ಹೆಚ್ಚು ಸಿಕ್ಸರ್ (329) ಗಳಿಕೆ.
* 22 ಟಿ20 ಶತಕ ಗಳಿಸಿದ್ದು, ಬೇರೆ ಯಾವ ಆಟಗಾರ ಕೂಡಾ ಸಮೀಪವಿಲ್ಲ
* ಅತ್ಯಧಿಕ ರನ್ ಗಳಿಸಿ ಆರೇಂಜ್ ಕ್ಯಾಪ್ ಸತತವಾಗಿ ಎರಡು ವರ್ಷ ಗಳಿಸಿದ ಏಕೈಕ ಕ್ರಿಕೆಟರ್
* ಆರಂಭಿಕನಾಗಿ 4480ರನ್ ಗಳಿಸಿದ್ದು, 6 ಶತಕಗಳನ್ನು ಗಳಿಸಿದ್ದಾರೆ. 41. 87 ರನ್ ಸರಾಸರಿ, 151.40 ಸ್ಟ್ರೈಕ್ ರೇಟ್
* ಬೌಂಡರಿ, ಸಿಕ್ಸರ್ ಮೂಲಕವೆ 100 ರನ್ ಗಳಿಸಿದ ಏಕೈಕ ಆಟಗಾರ 2012ರಲ್ಲಿ ಡೆಲ್ಲಿ ವಿರುದ್ಧ 62 ಎಸೆತದಲ್ಲಿ 128 *(15 ಬೌಂಡರಿ, 7 ಸಿಕ್ಸರ್)
* ಒಂದು ಪಂದ್ಯದಲ್ಲಿ ಶತಕ ಹಾಗೂ 3 ವಿಕೆಟ್ ಗಳಿಸಿರುವ ಏಕೈಕ ಕ್ರಿಕೆಟರ್

Story first published: Friday, October 16, 2020, 15:27 [IST]
Other articles published on Oct 16, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X