ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ನಲ್ಲಿ ರೋಚಕ ಪಂದ್ಯ: ಮಯಾಂಕ್ ಏಕಾಂಗಿಹೋರಾಟ, ಟೈ ಮಾಡಿಕೊಂಡ ಪಂಜಾಬ್: ಸೂಪರ್ ಓವರ್‌ಗೆದ್ದ ಡೆಲ್ಲಿ

Ipl 2020: Kxip vs Dc Match 2 Highlights In Kannada

ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕಿಂಗ್ಸ್ ಇಲವೆನ್ ಪಂಜಾಬ್ ವಿರುದ್ಧ ನಡೆದ ಐಪಿಎಲ್ ಟೂರ್ನಿಯ ಎರಡನೇ ಪಂದ್ಯ ರೋಚಕವಾಗಿ ಅಂತ್ಯಕಂಡಿದೆ. ಎರಡೂ ತಂಡಗಳು 158 ರನ್‌ಗಳಿಸುವ ಮೂಲಕ ಈ ಪಂದ್ಯ ಟೈ ಕಂಡಿತು. ಬಳಿಕ ನಡೆದ ಸೂಪರ್ ಓವರ್‌ನಲ್ಲಿ ಡೆಲ್ಲಿ ತಂಡ ಭರ್ಜರಿ ಗೆಲುವನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಪಂದ್ಯ ಆರಂಭದಿಂದಲೂ ಈ ಪಂದ್ಯ ಸಾಕಷ್ಟು ಏರಿಳಿತಕ್ಕೆ ಸಾಕ್ಷಿಯಾಗಿತ್ತು. ಕಳೆದೇ ಹೋಗಿದ್ದ ಪಂದ್ಯವನ್ನು ಗೆಲ್ಲಿಸಲು ಕಿಂಗ್ಸ್ ತಂಡದ ಮಯಾಂಕ್ ಅಗರ್ವಾಲ್ ಅದ್ಭುತ ಹೋರಾಟವನ್ನು ನಡೆಸಿದರು. ಆದರೆ ಈ ಹೋರಾಟದಿಂದ ಪಂಜಾಬ್ ತಂಡಕ್ಕೆ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಪಂಜಾಬ್ ತಂಡದ ಗೆಲುವಿಗೆ ಒಂದು ರನ್ ಅಗತ್ಯವಿದ್ದಾಗ ಅಗರ್ವಾಗ್ ವಿಕೆಟ್ ಕಳೆದುಕೊಂಡರು.

ಐಪಿಎಲ್ ಇತಿಹಾಸದಲ್ಲಿ ವಿಶಿಷ್ಠ ದಾಖಲೆ ಬರೆದ ಕನ್ನಡಿಗ ಕೆಎಲ್ ರಾಹುಲ್ಐಪಿಎಲ್ ಇತಿಹಾಸದಲ್ಲಿ ವಿಶಿಷ್ಠ ದಾಖಲೆ ಬರೆದ ಕನ್ನಡಿಗ ಕೆಎಲ್ ರಾಹುಲ್

ಕೊನೆಯ ಎಸೆತದಲ್ಲಿ ಪಂಜಾಬ್ ತಂಡಕ್ಕೆ ಒಂದು ರನ್ ಅಗತ್ಯವಿತ್ತು. ಕ್ರೀಸ್‌ನಲ್ಲಿದ್ದ ಜೋರ್ಡನ್ ಸ್ಟೋನಿಸ್ ಎಸೆದ ಫುಲ್‌ಟಾಸ್ ಚೆಂಡನ್ನು ನೆರವಾಗಿ ಫೀಲ್ಡರ್ ಕೈಗೆ ಒಪ್ಪಿಸಿದರು. ಈ ಮೂಲಕ ಪಂಜಾಬ್ ತಂಡ ಗೆಲುವಿನ ಸನಿಹಕ್ಕೆ ತೆರಳಿಯೂ ಗೆಲುವನ್ನು ಸಾಧಿಸಲು ಸಾಧ್ಯವಾಗಲಿಲ್ಲ. ಪಂದ್ಯ ರೋಚಕ ಟೈನಲ್ಲಿ ಅಂತ್ಯ ಕಂಡಿತು. ಬಳಿಕ ನಡೆದ ಸೂಪರ್ ಓವರ್‌ನಲ್ಲಿ ಡೆಲ್ಲಿ ಸುಲಭವಾಗಿ ಗೆದ್ದು ಬೀಗಿದೆ.

ಮಯಾಂಕ್ ಸಾಹಸ

ಮಯಾಂಕ್ ಸಾಹಸ

ಡೆಲ್ಲಿ ಕ್ಯಾಪಿಟಲ್ಸ್ ನೀಡಿದ 158 ರನ್‌ಗಳ ಟಾರ್ಗೆಟ್ ಬೆನ್ನತ್ತಿದ ಕಿಂಗ್ಸ್ ಇಲವೆನ್ ಪಂಜಾಬ್ ತಂಡ ಇದ್ದಕ್ಕಿದ್ದಂತೆಯೇ ಕುಸಿತ ಕಾಣಲು ಆರಂಭಿಸಿತು. ಒಂದೆಡೆ ವಿಕೆಟ್‌ಗಳು ಉರುಳುತ್ತಿದ್ದರೂ ಮಯಾಂಕ್ ಕ್ರೀಸ್‌ಗೆ ಕಚ್ಚಿ ನಿಂತಿದ್ದರು. ಕೃಷ್ಣಪ್ಪ ಗೌತಮ್ ಜೊತೆ ಸೇರಿಕೊಂಡು ನಿಧಾನಕ್ಕೆ ತಂಡವನ್ನು ಮೇಲೆತ್ತಲು ಆರಂಭಿಸಿದರು. ಗೌತಮ್ ವಿಕೆಟ್ ಕಳೆದುಕೊಂಡ ಬಳಿಕ ಜೋರ್ಡನ್ ಕ್ರೀಸ್‌ಗೆ ಆಗಮಿಸಿದರು. ಬಳಿಕ ತಾನೇ ಸಂಪೂರ್ಣವಾಗಿ ಜವಾಬ್ಧಾರಿ ವಹಿಸಿಕೊಂಡ ಮಯಾಂಕ್ ಅದ್ಭುತ ಇನ್ನಿಂಗ್ಸ್ ಆಡಿದರು. ಐಪಿಎಲ್ ಇತಿಹಾಸದಲ್ಲಿ ತನ್ನ ಅತ್ಯಧಿಕ ಮೊತ್ತವನ್ನು ದಾಖಲಿಸಿದರು. ಆದರೆ ಅಂತಿಮ ಹಂತದಲ್ಲಿ ಮಾಡಿದ ಸಣ್ಣ ಎಡವಟ್ಟಿಗೆ ವಿಕೆಟ್ ಕಳೆದುಕೊಂಡಿದ್ದು ಮಾತ್ರವಲ್ಲ ಫಲಿತಾಂಶವೇ ಬದಲಾಯಿತು.

ಪಂಜಾಬ್ ಹಠಾತ್ ಕುಸಿತ

ಪಂಜಾಬ್ ಹಠಾತ್ ಕುಸಿತ

ಡೆಲ್ಲಿ ನೀಡಿದ ಗುರಿ ಬೆನ್ನಟ್ಟಿದ ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ಆರಂಭಿಕ ಆಟಗಾರರಾದ ಮಯಾಂಕ್ ಅಗರ್ವಾಲ್ ಹಾಗೂ ಕೆಎಲ್ ರಾಹುಲ್ ಮೊದಲ ವಿಕೆಟ್‌ಗೆ 30 ರನ್ ಪೇರಿಸಿದರು. ನಾಯಕ ಕೆಎಲ್ ರಾಹುಲ್ 21 ರನ್‌ಗಳಿಸಿ ಮೋಹಿತ್ ಶರ್ಮಾಗೆ ವಿಕೆಟ್ ಒಪ್ಪಸಿದರು. ಅದಾದ ಬಳಿಕ ನಾಟಕೀಯ ಕುಸಿತವನ್ನು ಕಂಡಿತು ಪಂಜಾಬ್. ನಿಕೋಲಸ್ ಪೂರನ್, ಕರುಣ್ ನಾಯರ್ ಹಾಗೂ ಮ್ಯಾಕ್ಸ್‌ವಲ್ ಕೇವಲ ಐದು ರನ್‌ಗಳ ಅಂತರದಲ್ಲಿ ವಿಕೆಟ್ ಕಳೆದುಕೊಂಡರು. ಅಲ್ಲಿಗೆ ಪಂಜಾಬ್ 35/4 ವಿಕೆಟ್ ಕಳೆದುಕೊಂಡು ಸಂಕಷ್ಟದ ಹಾದಿ ಹಿಡಿಯಿತು. ಸರ್ಫರಾಜ್ ಖಾನ್ ಕೂಡ ಹೆಚ್ಚು ಹೊತ್ತು ನಿಲ್ಲದೆ ಫೆವಿಲಿಯನ್ ಸೇರಿಕೊಂಡರು.

ಮಯಾಂಕ್ ಏಕಾಂಗಿ ಹೋರಾಟ

ಮಯಾಂಕ್ ಏಕಾಂಗಿ ಹೋರಾಟ

ಕೆ ಗೌತಮ್ ವಿಕೆಟ್ ಕಳೆದುಕೊಂಡಾಕ್ಷಣ ಪಂಜಾಬ್ ಸೋಲು ಖಚಿತವೆಂದೇ ಭಾವಿಸಲಾಗಿತ್ತು. ಆದರೆ ಮಯಾಂಕ್ ಅಗರ್ವಾಲ್ ಲೆಕ್ಕಾಚಾರವೇ ಬೇರೆಯಾಗಿತ್ತು. ಇನ್ನೊಂದು ತುದಿಯಲ್ಲಿದ್ದ ಕ್ರಿಸ್ ಜೋರ್ಡನ್‌ಗೆ ಹೆಚ್ಚು ಎಸೆತ ಸಿಗದಂತೆ ನೋಡಿಕೊಂಡಿದ್ದು ಮಾತ್ರವಲ್ಲದೆ ಸಿಕ್ಸರ್ ಬೌಂಡರಿ ಬಾರಿಸಿ ಪಂದ್ಯವನ್ನು ಟೈ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು. ಎರಡೂ ತಂಡಗಳ ರನ್ ಸಮವಾದಾಗ ಮೂರು ಎಸೆತಗಳು ಬಾಕಿಯಿದ್ದರೂ ಬಳಿಕ ಮಯಾಂಕ್ ಅಗರ್ವಾಲ್ ಅಷ್ಟರಲ್ಲಿ ತಮ್ಮ ವಿಕೆಟ್ ಕಳೆದುಕೊಂಡರು. ಅಂತಿಮ ಎಸೆತದಲ್ಲಿ ಒಂದು ರನ್ ಅಗತ್ಯವಿತ್ತು. ಆದರೆ ಜೋರ್ಡನ್ ಕ್ಯಾಚಿತ್ತು ನಿರ್ಗಮಿಸಿದರು.

ಡೆಲ್ಲಿಗೆ 'ಶಮಿ' ಕಾಟ

ಡೆಲ್ಲಿಗೆ 'ಶಮಿ' ಕಾಟ

ಇನ್ನು ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡಕ್ಕೆ ಮೊಹಮದ್ ಶಮಿ ಕಾಡಿದರು. ಅಗ್ರ ಕ್ರಮಾಂಕದ ಮೂವರಿ ಆಟಗಾರರ ವಿಕೆಟ್ ಪಡೆದ ಶಮಿ ಡೆಲ್ಲಿ ತಂಡಕ್ಕೆ ಮೊದಲು ಆಘಾತ ನೀಡಿದರು. ನಾಲ್ಕು ಓವರ್‌ ಎಸೆದ ಶಮಿ ಕೇವಲ 15 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರು. ಈ ಮೂಲಕ ಐಪಿಎಲ್‌ನಲ್ಲಿ ತಮ್ಮ ವೈಯಕ್ತಿಕ ದಾಖಲೆ ಬರೆದರು.

ಹೀರೋ ಆದ ಸ್ಟೋನಿಸ್

ಹೀರೋ ಆದ ಸ್ಟೋನಿಸ್

ಆಸ್ಟ್ರೇಲಿಯಾದ ಆಟಗಾರ ಮಾರ್ಕಸ್ ಸ್ಟೋನಿಸ್ ಈ ಪಂದ್ಯದ ಹೀರೋ ಎನಿಸಿಕೊಂಡರು. ಮೊದಲು ಬ್ಯಾಟಿಂಗ್‌ನಲ್ಲಿ ಮಿಂಚಿನ ಆಟವಾಡಿ 21 ಎಸೆತಗಳಲ್ಲಿ 53 ರನ್ ಸಿಡಿಸಿದ ಸ್ಟೋನಿಸ್ ಡೆಲ್ಲಿ ಗೌರವಯುತ ಗುರಿ ನೀಡಲು ಕಾರಣರಾದರು. ಬಳಿಕ ಬೌಲಿಂಗ್‌ನಲ್ಲೂ ಮಿಂಚಿದ ಅವರು ಅಂತಿಮ ಓವರ್‌ನ ಮೂರು ಎಸೆತಗಳನ್ನು ನಿಯಂತ್ರಿಸಿದ್ದು ಮಾತ್ರವಲ್ಲದೆ ಎರಡು ವಿಕೆಟ್ ಕಿತ್ತು ಫಲಿತಾಂಶ ಟೈ ಆಗಲು ಕಾರಣರಾದರು.

ಸೂಪರ್ ಓವರ್‌ನಲ್ಲಿ ರಬಡಾ ಮ್ಯಾಜಿಕ್

ಸೂಪರ್ ಓವರ್‌ನಲ್ಲಿ ರಬಡಾ ಮ್ಯಾಜಿಕ್

ಇನ್ನು ಸೂಪರ್ ಓಬರ್‌ನಲ್ಲಿ ಡೆಲ್ಲಿ ತಂಡದ ಬೌಲರ್ ಕಗಿಸೋ ರಬಡಾ ಪಂಜಾಬ್ ತಂಡಕ್ಕೆ ಶಾಕ್ ನೀಡಿದರು. ಕೆಎಲ್ ರಾಹುಲ್ ವಿಕೆಟನ್ನು ಎರಡನೇ ಎಸೆತದಲ್ಲಿ ಪಡೆಯಲು ಯಶಸ್ವಿಯಾದ ರಬಡ ಬಳಿಕ ಮುಂದಿನ ಎಸೆತದಲ್ಲಿ ನಿಕೋಲಸ್ ಪೂರನ್ ಅವರನ್ನು ಔಟ್ ಬೌಲ್ಡ್ ಮಾಡಿದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಕನಿಷ್ಠ ಸೂಪರ್ ಓವರ್‌ ಗುರಿ ನಿಗದಿಗೆ ಕಾರಣರಾದರು. ಇದನ್ನು ಬೆನ್ನಟ್ಟಿದ ಡೆಲ್ಲಿ ಎರಡನೇ ಎಸೆತದಲ್ಲಿ ಗೆಲುವು ಸಾಧಿಸಿತು.

Story first published: Monday, September 21, 2020, 11:17 [IST]
Other articles published on Sep 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X