ಮುಂಬೈ ಇಂಡಿಯನ್ಸ್‌ನ ತ್ರಿವಳಿ ವೇಗಿಗಳನ್ನು ಎದುರಿಸಲು ಸಮರ್ಥನಾಗಿದ್ದೇನೆ: ಶಿಖರ್ ಧವನ್

ಡೆಲ್ಲಿ ಕ್ಯಾಪಿಟಲ್ಸ್ ತಂಡ ಗುರುವಾರ ನಡೆಯುವ ಪ್ಲೇಆಫ್ ಹಂತದ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಫೈನಲ್‌ಗೆ ನೇರವಾಗಿ ಟಿಕೆಟ್ ಗಿಟ್ಟಿಸುವ ಕಾರಣ ಈ ಪಂದ್ಯದ ಮೇಲೆ ಸಾಕಷ್ಟು ಕುತೂಹಲ ಮೂಡಿದೆ. ಈ ಕುತೂಹಲಕಾರಿ ಕದನಕ್ಕೂ ಮುನ್ನ ಡೆಲ್ಲಿ ಅನುಭವಿ ಆಟಗಾರ ಶಿಖರ್ ಧವನ್ ಉತ್ತಮ ಪ್ರದರ್ಶನದ ಭರವಸೆಯನ್ನು ನೀಡಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ವಿಭಾಗ ಸಾಕಷ್ಟು ಬಲಿಷ್ಠವಾಗಿದೆ. ಆದರೆ ಶಿಖರ ದವನ್ ಮುಂಬೈ ಇಂಡಿಯನ್ಸ್ ತಂಡದ ಪ್ರಭಲ ತ್ರಿವಳಿ ವೇಗಿಗಳ ಬಗ್ಗೆ ನಾನು ಆತಂಕವನ್ನು ಹೊಂದಿಲ್ಲ ಎಂಬ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ಮುಂಬೈ ಇಂಡಿಯನ್ಸ್ ವೇಗವನ್ನು ಸಮರ್ಥವಾಗಿ ಎದುರಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಐಪಿಎಲ್ ಪ್ಲೇಆಫ್‌: ಮುಂಬೈ vs ಡೆಲ್ಲಿ, ಗೆಲ್ಲುವ ಅವಕಾಶ ಹೆಚ್ಚಿರುವ ತಂಡವನ್ನು ಹೆಸರಿಸಿದ ಓಝಾ

"ನಾನು ಜಸ್ಪ್ರೀತ್ ಬೂಮ್ರಾ, ಟ್ರೆಂಟ್ ಬೋಲ್ಟ್ ಮತ್ತು ಜೇಮ್ಸ್ ಪ್ಯಾಟಿನ್ಸ್‌ನ್ ಅವರ ಬೌಲಿಂಗ್‌ಅನ್ನು ಸಾಕಷ್ಟು ಸಮಯಗಳಿಂದ ಕಂಡಿದ್ದೇನೆ ಹಾಗೂ ಎದುರಿಸಿದ್ದೇನೆ. ಅವರನ್ನು ಎದುರಿಸಲು ಇದು ಸಾಕಾಗಲಿದೆ" ಎಂದು ಆತ್ಮವಿಶ್ವಾಸದ ಮಾತುಗಳನ್ನು ಆಡಿದ್ದಾರೆ. ಮುಂಬೈ ತಂಡದ ಈ ವೇಗಿಗಳು ತಂಡದ ಯಶಸ್ಸಿನಲ್ಲಿ ಬಹಳ ನಿರ್ಣಾಯಕ ಪಾತ್ರವನ್ನು ವಹಿಸಿದ್ದಾರೆ.

"ನಾನು ಸಾಕಷ್ಟು ಬಾರಿ ಅವರನ್ನು ಎದುರಿಸಿದ್ದೇನೆ. ನಾನೀಗ ನಿರಾಳನಾಗಿದ್ದೇನೆ, ಯಾಕೆಂದರೆ ಮುಂದಿನ ಪಂದ್ಯಕ್ಕಾಗಿ ನಾನು ಹೊಸತನವನ್ನು ಹೊಂದಿರಲು ಬಯಸುತ್ತೇನೆ. ನಾನು ಅವರ ವಿಡಿಯೋಗಳನ್ನು ಮತ್ತೆ ನೋಡುತ್ತೇನೆ. ನಾನು ಈಗಾಗಲೇ ರಣತಂತ್ರವನ್ನು ರೂಪಿಸಿದ್ದೇನೆ" ಎಂದಿ ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಶಿಖರ್ ಧವನ್ ಪ್ರತಿಕ್ರಿಯಿಸಿದ್ದಾರೆ.

ಐಪಿಎಲ್, ಕ್ವಾಲಿಫೈಯರ್ 1: ಮುಂಬೈ vs ಡೆಲ್ಲಿ, ಸಂಭಾವ್ಯ ತಂಡಗಳು

ಮುಂಬೈ ಇಂಡಿಯನ್ಸ್ ತಂಡದ ವೇಗಿಗಳಾದ ಟ್ರೆಂಟ್ ಬೋಲ್ಟ್ ಹಾಗೂ ಜಸ್ಪ್ರೀತ್ ಬೂಮ್ರಾ ತಲಾ 13 ಪಂದ್ಯಗಳನ್ನು ಈ ಬಾರಿಯ ಆವೃತ್ತಿಯಲ್ಲಿ ಆಡಿದ್ದಾರೆ. ಈ ಇಬ್ಬರು ಸೇರಿ ಎದುರಾಳಿ ತಂಡಗಳ 43 ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿರುವುದು ಮುಂಬೈ ಇಂಡಿಯನ್ಸ್ ತಂಡಕ್ಕೆ ದೊಡ್ಡ ಶಕ್ತಿ ನೀಡಿದೆ.

For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Thursday, November 5, 2020, 16:06 [IST]
Other articles published on Nov 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X